ಉಡುಪಿ: ಬನ್ನಂಜೆ ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏ.16ರಿಂದ 20ರವರೆಗೆ ಬ್ರಹ್ಮಕಲಶೋತ್ಸವ ವೈಭವ 2026 ಅದ್ಧೂರಿ ಯಾಗಿ ನಡೆಯಲಿದ್ದು, ದೇವತಾ ಕಾರ್ಯ ದ ಪೂರ್ವಭಾವಿಯಾಗಿ ಮನೆಮನೆಗೆ ಕಾಣಿಕೆ ಡಬ್ಬಿ, ಆಮಂತ್ರಣ ಪತ್ರಿಕೆ ಹಾಗೂ ಪ್ರಚಾರದ ಸ್ಟಿಕ್ಕನ್ನು ಸೋಮವಾರ ಬಿಡುಗಡೆಗೊಳಿಸಲಾಯಿತು.
ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ನ ಪ್ರವರ್ತಕ ನಾಡೋಜ ಡಾ.ಜಿ. ಶಂಕರ್ ಭಕ್ತರಿಗೆ ಮನೆ ಮನೆಗೆ ಕಾಣಿಕೆ ಡಬ್ಬಿಯನ್ನು ಹಸ್ತಾಂತರಿಸಿ ಮಾತನಾಡಿ, ನಮ್ಮ ಜೀವಿತಾ ವಧಿಯಲ್ಲಿ ನಡೆಯುವ ಗ್ರಾಮ, ಊರಿನ ದೇವಳದ ಜೀರ್ಣೋದ್ಧಾರ, ಬ್ರಹ್ಮಕಲ ಶೋತ್ಸವದಂತಹ ಪುಣ್ಯ ಕಾರ್ಯದಲ್ಲಿ ಕೈ ಜೋಡಿಸಿದರೆ ಪುಣ್ಯ ಫಲ ನಮಗೆ ಪ್ರಾಪ್ತಿ ಯಾಗುತ್ತದೆ ಎಂದರು.
ಬ್ರಹ್ಮಕಲಶೋತ್ಸವದ ಪೂರ್ವಭಾವಿ ಯಾಗಿ 200ಕ್ಕೂ ಅಧಿಕ ವಾಹನಗಳಲ್ಲಿ ಅದ್ಧೂರಿಯ ಹೊರೆಕಾಣಿಕೆ ಸಮರ್ಪಣೆ ಯಾಗಲಿದೆ. ಬ್ರಹ್ಮಕಲಶೋತ್ಸವದಂದು 20 ಸಾವಿರಕ್ಕೂ ಅಧಿಕ ಮಂದಿಗೆ ಅನ್ನ ಸಂತರ್ಪಣೆ ನಡೆಯುತ್ತದೆ ಎಂದರು.
ಇದನ್ನೂ ಓದಿ :
ಬನ್ನಂಜೆ ಶಾಸಕ ಯಶಪಾಲ್ ಎ. ಸುವರ್ಣ ಮಾತನಾಡಿ, ಶ್ರೀಮಹಾಲಿಂಗೇಶ್ವರ ದೇವಳ ಮಾಗಣೆಗೆ ಸಂಬಂಧಿಸಿದ್ದು, ಪ್ರಾಚೀನ, ಪುರಾಣ ಪ್ರಸಿದ್ಧವಾ ಗಿರುವ ದೇವಸ್ಥಾನವಾಗಿದೆ ಎಂದರು.
ಉದ್ಯಮಿ, ಸಾಮಾಜಿಕ ಕಾರ್ಯಕರ್ತ ಕೆ. ಕೃಷ್ಣಮೂರ್ತಿ ಆಚಾರ್ಯ ಮಾತನಾಡಿ, ಸಂಸ್ಕಾರ, ಸಂಸ್ಕೃತಿಯ ಪ್ರತೀಕವಾಗಿರುವ ದೇಗುಲದಲ್ಲಿ ನಡೆಯುವ ದೇವತಾ ಕಾರ್ಯದಲ್ಲಿ ಭಾಗಿಯಾಗುವುದು ನಮ್ಮೆಲ್ಲರ ಪೂರ್ವಜನ್ಮದ ಪುಣ್ಯ ಫಲಕನ್ನರ್ಪಾಡಿ ದೇವಳದಿಂದ ಊರಿನ ಸಮಸ್ತರ ಸಹಕಾರದೊಂದಿಗೆ ಅದ್ದೂರಿಯ ಹೊರೆಕಾಣಿಕೆಯನ್ನು ಸಮರ್ಪಣೆ ಮಾಡಲಾಗುವುದೆಂದರು.
ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವ ಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಸಂಚಾಲಕ ರಮೇಶ್ ಕಾಂಚನ್, ಹೋಟೆಲ್ ಉದ್ಯಮಿ ಪ್ರಭಾಕರ್ ಪೂಜಾರಿ, ನಗರಸಭೆ ಮಾಜಿ ಸದಸ್ಯ ಟಿ.ಜಿ. ಹೆಗ್ಡೆ ಉಪಸ್ಥಿತರಿದ್ದರು. ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮಾಧವ ಬನ್ನಂಜೆ ಸ್ವಾಗತಿಸಿದರು. ಕೃತಿ ಮೂಡುಬೆಟ್ಟು ನಿರೂಪಿಸಿ, ವಂದಿಸಿದರು.
ಇದನ್ನೂ ಓದಿ :
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…