ಉಡುಪಿ: ಸಿಟಿ ಬಸ್ ನಲ್ಲಿ ಕಳೆದುಕೊಂಡಿದ್ದ ಚಿನ್ನದ ಸರವನ್ನು ಬಸ್ ಚಾಲಕ ಮತ್ತು ಕಂಡೆಕ್ಟರ್ ಸರದ ಮಾಲೀಕರಿಗೆ ಹಿಂತಿರುಗಿಸಿದ ಅಪರೂಪದ ಘಟನೆಯೊಂದು ಉಡುಪಿಯಲ್ಲಿ ನಡೆದಿದೆ. ಮಾನವೀಯತೆ ಕೂಡ ಇದೆ ಎಂಬುದಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ.
ಜೂನ್ 20ರಂದು ಬ್ರಹ್ಮಾವರದಿಂದ ಕುಂದಾಪುರಕ್ಕೆ ಪ್ರಯಾಣಿಸುತ್ತಿದ್ದ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಬಾಲಕಿಯೊಬ್ಬಳ ಚಿನ್ನದ ಸರ ಕಳೆದುಹೋಗಿದೆ. ಆ ಸರವನ್ನು ನೋಡಿದ ಪ್ರಯಾಣಿಕರೊಬ್ಬರು ಅದನ್ನು ಬಸ್ ಕಂಡೆಕ್ಟರ್ ಮತ್ತು ಚಾಲಕ ಬಳಿ ನೀಡಿದ್ದಾರೆ. ಬಳಿಕ ಬಸ್ ಚಾಲಕ ಅದನ್ನು ಆ ಬಾಲಕಿಗೆ ಹಿಂತಿರುಗಿಸಿದ್ದಾರೆ.
ಸರ ಕಳೆದುಕೊಂಡ ಬಾಲಕಿ ಆತಂಕಗೊಂಡಿದ್ದಾಗ ಬಸ್ ಏಜೆಂಟ್ ಆಕೆಯ ಬಳಿ ಸಮಸ್ಯೆಯನ್ನು ಕೇಳಿದರು. ಬಾಲಕಿ ತನ್ನ ಚಿನ್ನದ ಸರ ಕಳೆದುಕೊಂಡಿರುವ ಬಗ್ಗೆ ತಿಳಿಸಿದ್ದಾಳೆ. ಆಗ ಆಕೆಯ ಬಳಿ ಇದ್ದ ಟಿಕೆಟ್ ತೆಗೆದುಕೊಂಡ ಏಜೆಂಟರ್ ಎಪಿಎಂ ಬಸ್ ಚಾಲಕನನ್ನು ಸಂಪರ್ಕಿಸಿ ಬಾಲಕಿಗೆ ಚಿನ್ನದ ಸರ ಸಿಗುವಂತೆ ಮಾಡಿದ್ದಾರೆ.
ಚಿನ್ನದ ಮೇಲೆ ಗಗನಕ್ಕೇರುತ್ತಿದೆ. ಹಾಗಾಗಿ ಚಿನ್ನದ ಸರಗಳ ಕಳ್ಳತನದ ಪ್ರಕರಣವೂ ಎಲ್ಲಾ ಕಡೆ ಹೆಚ್ಚಾಗುತ್ತಿದೆ. ಅದರ ಮಧ್ಯೆ ಬೇರೆಯವರು ಕಳೆದುಕೊಂಡ ಚಿನ್ನದ ಸರ ಅನಾಯಾಸವಾಗಿ ಸಿಕ್ಕರೆ ಯಾರಿಗೆ ತಾನೇ ಕೊಡುವುದಕ್ಕೆ ಮನಸ್ಸು ಬರುತ್ತದೆ. ಕಷ್ಟಕಾಲದಲ್ಲಿ ನೆರವಾಗುತ್ತದೆ ಎಂದು ಹಾಗೇ ಜೇಬಿನೊಳಗೆ ಹಾಕಿಕೊಳ್ಳುವವರೇ ಹೆಚ್ಚು. ಆದರೂ ಇಂತಹ ಜನರ ಮಧ್ಯೆ ತಮಗೆ ಸಿಕ್ಕ ಚಿನ್ನದ ಸರವನ್ನು ಅದರ ಮಾಲೀಕರಿಗೆ ಹಿಂತಿರುಗಿಸಿದ ಬಸ್ ಚಾಲಕ ಮತ್ತು ಕಂಡೆಕ್ಟರ್ ಗುಣವನ್ನು ಎಲ್ಲರೂ ಮೆಚ್ಚಲೇಬೇಕು.
ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…