ಉಡುಪಿ: ಸಂತೆಕಟ್ಟೆಯಿ0ದ ಉಡುಪಿಗೆ ಬರುವ ಸಿಟಿ ಬಸ್ಸುಗಳ ಬಸ್ಸಿನ ಪರವಾನಿಗೆಯಲ್ಲಿ ನಿಟ್ಟೂರು–ಎನ್.ಎಚ್ 17 ಎಂದು ನಮೂದಿಸಿರುವ ಬಸ್ಸುಗಳು ಅಂಬಾಗಿಲು–ಕರಾವಳಿ ಬೈಪಾಸ್–ಅಂಬಲಪಾಡಿ ಬೈಪಾಸ್– ಬ್ರಹ್ಮಗಿರಿ–ಅಜ್ಜರಕಾಡು–ಹಳೇ ತಾಲೂಕು ಕಚೇರಿ ಮೂಲಕ ಸಿಟಿ ಬಸ್ಸು ನಿಲ್ದಾಣ ತಲುಪಲು, ಸಂತೆಕಟ್ಟೆಯಿ0ದ ಉಡುಪಿಗೆ ಬರುವ ಉಳಿದ ಸಿಟಿ ಬಸ್ಸುಗಳು ಅಂಬಾಗಿಲು–ತಾ0ಗದಗಡಿ–ಗು0ಡಿಬೈಲು– ಕಲ್ಸಂಕ ಮಾರ್ಗವಾಗಿ ಸಂಚರಿಸಿ ಸಿಟಿ ಬಸ್ಸು ನಿಲ್ದಾಣ ತಲುಪಲು ಮತ್ತು ಬಾರ್ಕೂರು ಬ್ರಹ್ಮಾವರ– ಹೊನ್ನಾಳ–ಹೆಬ್ರಿ–ಪೆರ್ಡೂರು–ಕುಕ್ಕೆಹಳ್ಳಿ ಕಡೆಯಿಂದ ಬರುವ ಷಟಲ್ ಸರ್ವೀಸ್ ಬಸ್ಸುಗಳು ಅಂಬಾಗಿಲು ಗುಂಡಿಬೈಲು ಮೂಲಕ ಕಲ್ಸಂಕ ಬಂದು ಉಡುಪಿ ಬಸ್ ನಿಲ್ದಾಣ ತಲುಪುವಂತೆ ಅಧಿಸೂಚನೆ ಹೊರಡಿಸಲಾಗಿರುತ್ತದೆ.
ಆದರೆ ಈಗಾಗಲೇ ಹಲವು ಬಾರಿ ಈ ಕುರಿತು ನೋಟೀಸ್ ನೀಡಿ ಪ್ರಕರಣ ದಾಖಲಿಸಿದ್ದರೂ ಕೂಡ ಅಂಬಾಗಿಲು–ಕಲ್ಪ0ಕ ಮಾರ್ಗದಲ್ಲಿ ಬಸ್ಸುಗಳು ಸಂಚರಿಸದಿರುವ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿದ್ದು, ಇದು ಅಂತಿಮ ಸೂಚನೆ ಎಂದು ಪರಿಗಣಿಸಿ ಸಂತೆಕಟ್ಟೆಯಿ0ದ ಉಡುಪಿಗೆ ಬರುವ ಸಿಟಿ ಬಸ್ಸುಗಳ ಬಸ್ಸಿನ ಪರವಾನಿಗೆಯಲ್ಲಿ ನಿಟ್ಟೂರು–ಎನ್.ಎಚ್ 17 ಎಂದು ನಮೂದಿಸದೇ ಇರುವ ಸಿಟಿ ಬಸ್ಸುಗಳು ಮತ್ತು ಬಾರ್ಕೂರು ಬ್ರಹ್ಮಾವರ–ಹೊನ್ನಾಳ–ಹೆಬ್ರಿ– ಪೆರ್ಡೂರು–ಕುಕ್ಕೆಹಳ್ಳಿ ಕಡೆಯಿಂದ ಬರುವ ಷಟಲ್ ಸರ್ವೀಸ್ ಬಸ್ಸುಗಳು ಅಂಬಾಗಿಲು–ತಾ0ಗದಗಡಿ– ಗುಂಡಿಬೈಲು–ಕಲ್ಸ0ಕ ಮಾರ್ಗವಾಗಿ ಕಡ್ಡಾಯವಾಗಿ ಸಂಚರಿಸುವ0ತೆ ಸಂಬ0ದಪಟ್ಟ ಎಲ್ಲಾ ಬಸ್ಸು ಮಾಲೀಕರಿಗೆ ಆದೇಶಿಸಲಾಗಿದೆ. ತಪ್ಪಿದಲ್ಲಿ ಪರವಾನಿಗೆ ರದ್ದು ಪಡಿಸಲು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಗ್ಯಾರಂಟಿ ಯೋಜನೆಗಳಿಂದ ಮಹಿಳಾ ಸಬಲೀಕರಣ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಗಳೂರು: ಮಹಿಳೆಯರನ್ನು ಸಬಲೀಕರಣ ಮಾಡುವ ಕೆಲಸವನ್ನು ನಮ್ಮ ಸರಕಾರ ಪ್ರಾಮಾಣಿಕವಾಗಿ…
ಒಣಗಿದ ದಾಸವಾಳ ನುಂಗಿ ಆರೂವರೆ ತಿಂಗಳ ಮಗು ಉಸಿರುಗಟ್ಟಿ ಸಾವು ಮೈಸೂರು: ಒಣಗಿದ ದಾಸವಾಳ ಹೂನುಂಗಿ ಮಗು ಉಸಿರುಗಟ್ಟಿ ಸಾವನ್ನಪ್ಪಿದ…
ಏ. 2ರಂದು ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಉಡುಪಿ : ಜಿಲ್ಲಾಡಳಿತ, ಜಿಪಂ, ಕೌಶಲ್ಯಾಭಿವೃದ್ಧಿ, ಉದ್ಯಮ…
ಅಡುಗೆ ಅನಿಲದ ಅಭಾವ - ತಾತ್ಕಾಲಿಕವಾಗಿ ಸೌದೆ ಒಲೆ ಬಳಸುವಂತೆ ಸಚಿವ ಕೆ.ಹೆಚ್. ಮುನಿಯಪ್ಪ ಮನವಿ ಬೆಂಗಳೂರು : ಗಲ್ಫ್…
ತೊಕ್ಕೊಟ್ಟು : ಆರಿಫ್ ಕೊಲೆ ಪ್ರಕರಣ ; ಆರು ಆರೋಪಿಗಳು ಭಾಗಿ - ಸಿಸಿಬಿ ಎಸಿಪಿ ತಂಡದಿಂದ ಮುಂದಿನ ತನಿಖೆ…
ಕಾಪು : ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ ಕಾಪು: ಉಳಿಯಾರಗೋಳಿ ಗ್ರಾಮದ ನೀಲಾಧರ ಬಂಗೇರ (58) ಇಲಿ ಪಾಷಾಣ…