Featured

ಉಡುಪಿ: ಬಹುಕೋಟಿ ವಂಚನೆ ಪ್ರಕರಣ : ಸೊಸೈಟಿ ಅಧ್ಯಕ್ಷ ಬಿ.ವಿ ಲಕ್ಷ್ಮೀ ನಾರಾಯಣಗೆ ಜಾಮೀನು – Vishwanews24

ಉಡುಪಿ: ಬಹುಕೋಟಿ ವಂಚನೆ ಪ್ರಕರಣ : ಸೊಸೈಟಿ ಅಧ್ಯಕ್ಷ ಬಿ.ವಿ ಲಕ್ಷ್ಮೀ ನಾರಾಯಣಗೆ ಜಾಮೀನು

ಕಮಲಾಕ್ಷಿ ವಿವಿದ್ದೋದ್ದೇಶ ಸೊಸೈಟಿ ಗೆ ಇಡಿ ನೋಟೀಸ್

ಉಡುಪಿ : ನಗರದ ಕಮಲಾಕ್ಷಿ ವಿವಿದ್ದೋದ್ದೇಶ ಸೊಸೈಟಿ ಹೆಸರಲ್ಲಿ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿರುವ ಸೊಸೈಟಿ ಅಧ್ಯಕ್ಷ ಬಿ.ವಿ ಲಕ್ಷ್ಮೀನಾರಾಯಣನಿಗೆ ಉಡುಪಿ ಜಿಲ್ಲಾ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿದೆ.

ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರಿಗೆ, ಆರೋಪಿ ಬಿ.ವಿ ಲಕ್ಷ್ಮೀ ನಾರಾಯಣ ಫೈನಾನ್ಸ್ ನಲ್ಲಿ ಠೇವಣಿದಾರರಿಂದ ಪಡೆದ ಹಣದಿಂದ 40 ಕ್ಕೂ ಹೆಚ್ಚು ಕಡೆಗಳಲ್ಲಿ ಜಮೀನು ಖರೀದಿಸಿದ್ದ ವಿಚಾರ ತಿಳಿದು ಬಂದಿದೆ. ಬಿ.ವಿ ಲಕ್ಷ್ಮೀ ನಾರಾಯಣ ಕಡೆಕಾರುವಿನ ಕಿದಿಯೂರು, ಗುಂಡಿಬೈಲು , ಹಿರಿಯಡ್ಕ , ಬ್ರಹ್ಮಾವರ ಸಹಿತ 40 ಕ್ಕೂ ಹೆಚ್ಚು ಕಡೆ ಜಮೀನು ಖರೀದಿಸಿದ್ದರು. ಆದರೆ ಕೋವಿಡ್ ಬಳಿಕ ವ್ಯವಹಾರ ಸಂಪೂರ್ಣ ಸ್ಥಗಿತಗೊಂಡ ಕಾರಣ ಠೇವಣಿದಾರರಿಗೆ ಹಣ ಹಿಂದಿರುಗಿ ಸಾಧ್ಯವಾಗಿರಲಿಲ್ಲ. ಅಲ್ಲದೆ ಠೇವಣಿದಾರರ ಹಣದಿಂದ ಭೂಮಿ ಖರೀದಿಸಲು ಮತ್ತು ಮಾರಾಟ ಮಾಡಲು ಕೋಪರೇಟಿವ್ ಬ್ಯಾಂಕ್‍ವೊಂದರ ಅಧ್ಯಕ್ಷರು ಸಹಕಾರ ನೀಡಿದ್ದರು ಎಂದು ತಿಳಿದು ಬಂದಿದೆ. ಇವರು ಕಮಿಷನ್ ಆಧಾರದಲ್ಲಿ ವ್ಯವಹಾರದವನ್ನು ಕುದುರಿಸುತ್ತಿದ್ದರು ಎಂಬ ಮಾಹಿತಿ ವಿಚಾರಣೆ ವೇಳೆ ಲಭ್ಯವಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ 7 ಮಂದಿ ಠೇವಣಿದಾರರು ಪೊಲೀಸರಿಗೆ ದೂರು ನೀಡಿದ್ದಾರೆ. ಕೋಟ್ಯಾಂತರ ರೂ. ವ್ಯವಹಾರ ನಡೆಸಿದ ಬಿವಿ ಲಕ್ಷ್ಮೀ ನಾರಾಯಣ ಅವರ ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಇಡಿ (ಜಾರಿ ನಿರ್ದೇಶನಾಲಯ)ಯು ಪ್ರಕರಣದ ಮಾಹಿತಿ ಕಲೆ ಹಾಕಿದೆ. ಅಲ್ಲದೆ ಬಿವಿ ಲಕ್ಷ್ಮೀ ನಾರಾಯಣ ಈ ಹಿಂದೆ ಪ್ರಧಾನ ವ್ಯವಸ್ಥಾಪಕರಾಗಿದ್ದ ಉಡುಪಿ ಟೌನ್ ಕೋಪರೇಟಿವ್ ಬ್ಯಾಂಕ್‍ನ ವ್ಯವಹಾರದ ಬಗ್ಗೆ ಮಾಹಿತಿ ನೀಡುವಂತೆ ಬ್ಯಾಂಕ್ ಗೆ ನೋಟಿಸ್ ನೀಡಿದೆ ಎಂದು ತಿಳಿದು ಬಂದಿದೆ

ಪ್ರಕರಣದ ವಿಚಾರವಾಗಿ 2022 ರ ಡಿ.28 ರಂದು ಆರೋಪಿ ಲಕ್ಷ್ಮೀನಾರಾಯಣನನ್ನು ಬ್ರಹ್ಮಾವರದ ಮಟಪಾಡಿ ಬಳಿ ಬಂಧಿಸಿ, ಡಿ.29 ರಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಈ ವೇಳೆ ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಬಳಿಕ ಜ.2 ರಂದು ಸೆನ್ ಠಾಣಾ ಪೊಲಿಸರು ಲಕ್ಷ್ಮೀನಾರಾಯಣನನ್ನು ಹೆಚ್ಚಿನ ತನಿಖೆಗೆ ನ್ಯಾಯಾಲಯದ ಮುಖಾಂತರ ಐದು ದಿನಗಳ ಅವಧಿಗೆ ಪೋಲಿಸ್ ಕಸ್ಟಡಿಗೆ ಪಡೆದಿದ್ದರು.

Join our Whatsapp group by clicking the below link 👇👇

https://chat.whatsapp.com/KfUmhXQKZb114i4QHNvqEK 

Vishwa News 24

Recent Posts

ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಬಿಜೆಪಿ ಹೆಚ್.ಕೆ ಸುರೇಶ್ ಆಣೆ ಪ್ರಮಾಣ -vishwanews24

ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಬಿಜೆಪಿ ಹೆಚ್.ಕೆ ಸುರೇಶ್ ಆಣೆ ಪ್ರಮಾಣ.. ನಾನು ಯಾವುದೇ ತಪ್ಪು ಮಾಡಿಲ್ಲ, ಅಡ್ಡಮತದಾನದಲ್ಲಿ ಭಾಗಿಯಾಗಿಲ್ಲ.. ನಾನು…

19 hours ago

ಉಡುಪಿ ಜಿಲ್ಲೆಯ ನಗರ ಪೊಲೀಸ್ ಠಾಣೆಯ ಶಿವಕುಮಾರ್ ಹೆಚ್ ಎಂ ಅವರಿಗೆ 2026 ನೇ ಸಾಲಿನ ಡಿಜಿ ಪದಕ -vishwanews24

ಉಡುಪಿ ಜಿಲ್ಲೆಯ ನಗರ ಪೊಲೀಸ್ ಠಾಣೆಯ ಶಿವಕುಮಾರ್ ಹೆಚ್ ಎಂ ಅವರಿಗೆ 2026 ನೇ ಸಾಲಿನ ಡಿಜಿ ಪದಕ ಉಡುಪಿ:…

19 hours ago

ಜುಲೈ 1 ರಿಂದ ಕಮರ್ಶಿಯಲ್, ಇಂಡಸ್ಟ್ರಿಯಲ್ ಗ್ಯಾಸ್ ಸಿಲಿಂಡರ್ ದರ ಏರಿಕೆ -vishwanews24

ಜುಲೈ 1 ರಿಂದ ಕಮರ್ಶಿಯಲ್, ಇಂಡಸ್ಟ್ರಿಯಲ್ ಗ್ಯಾಸ್ ಸಿಲಿಂಡರ್ ದರ ಏರಿಕೆ ನವದೆಹಲಿ: ಜುಲೈ 1 ರಿಂದ ಕಮರ್ಶಿಯಲ್ ಹಾಗೂ…

20 hours ago

ರಾಮ ಮಂದಿರ ದೇಣಿಗೆ ಹಗರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ: ಪ್ರಿಯಾಂಕ್ ಖರ್ಗೆ ಆರೋಪ -vishwanews24

ರಾಮ ಮಂದಿರ ದೇಣಿಗೆ ಹಗರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ: ಪ್ರಿಯಾಂಕ್ ಖರ್ಗೆ ಆರೋಪ ಬೆಂಗಳೂರು: ರಾಮ ಮಂದಿರ ದೇಣಿಗೆ…

20 hours ago

ನಂದಿನಿ ಮಿಲ್ಕ್ ಪಾರ್ಲರ್‌ನಲ್ಲಿ  ಅಗ್ನಿ ಅವಘಡ : ಶಾಕ್‌ನಿಂದ ಮಾಲೀಕ ಹೃದಯಾಘಾತಕ್ಕೆ ಬಲಿ -vishwanews24

ನಂದಿನಿ ಮಿಲ್ಕ್ ಪಾರ್ಲರ್‌ನಲ್ಲಿ  ಅಗ್ನಿ ಅವಘಡ : ಶಾಕ್‌ನಿಂದ ಮಾಲೀಕ ಹೃದಯಾಘಾತಕ್ಕೆ ಬಲಿ ಚಿಕ್ಕಬಳ್ಳಾಪುರ: ನಗರದ ಪಶುವೈದ್ಯ ಇಲಾಖೆ ಕಚೇರಿ ಸಮೀಪ…

20 hours ago

ಮಂಗಳೂರು: ಮೀನುಗಾರಿಕಾ ಬೋಟ್ ಮುಳುಗಡೆ; ಆರು ಮಂದಿ ಮೀನುಗಾರರ ರಕ್ಷಣೆ -vishwanews24

ಮಂಗಳೂರು: ಮೀನುಗಾರಿಕಾ ಬೋಟ್ ಮುಳುಗಡೆ; ಆರು ಮಂದಿ ಮೀನುಗಾರರ ರಕ್ಷಣೆ ಮಂಗಳೂರು : ಮಂಗಳೂರಿನ ಬಳಿ ಅರಬ್ಬಿ ಸಮುದ್ರದಲ್ಲಿ ಪ್ರಕ್ಷುಬ್ಧ…

20 hours ago