Featured

ಉಡುಪಿ: ಬಾರ್ಜ್ ಮೂಲಕ ಕಸ ಸಂಗ್ರಹಣೆಗೆ ಹೊರಟ ಸ್ವಚ್ಛವಾಹಿನಿ – Vishwanews24

ಉಡುಪಿ: ಬಾರ್ಜ್ ಮೂಲಕ ಕಸ ಸಂಗ್ರಹಣೆಗೆ ಹೊರಟ ಸ್ವಚ್ಛವಾಹಿನಿ

ಉಡುಪಿ: ವ್ಯವಸ್ಥಿತ ರೀತಿಯಲ್ಲಿ ಘನ ಮತ್ತು ದ್ರವ ತ್ಯಾಜ್ಯ ಸಂಗ್ರಹಣೆ ಮತ್ತು ಅವುಗಳ ವೈಜ್ಞಾನಿಕ ವಿಲೇವಾರಿಯಲ್ಲಿ ರಾಜ್ಯದಲ್ಲೇ ಮಾದರಿ ಜಿಲ್ಲೆಯಾಗಿ ಗುರುತಿಸಿಕೊಂಡಿರುವ ಉಡುಪಿ ಜಿಲ್ಲೆಯಲ್ಲಿನ ಎಲ್ಲಾ 155 ಗ್ರಾಮ ಪಂಚಾಯತ್ ಗಳಲ್ಲಿ ಕಸ ಸಂಗ್ರಹಣೆಗಾಗಿ ಸ್ವಚ್ಛವಾಹಿನಿ ಹೆಸರಿನ ಕಸ ಸಂಗ್ರಹಣೆಯ ವಾಹನಗಳು ಕಾರ್ಯನಿರ್ವಹಿಸುತ್ತಿದ್ದು, ಬ್ರಹ್ಮಾವರ ತಾಲೂಕಿನ ಕೋಡಿ ಗ್ರಾಮ ಪಂಚಾಯತ್ ವತಿಯಿಂದ ಕೋಡಿಬೆಂಗ್ರೆ ಗ್ರಾಮಕ್ಕೆ ಬಾರ್ಜ್ ಮೂಲಕ ವಾಹನ ತೆರಳಿ ಒಣತ್ಯಾಜ್ಯ ಸಂಗ್ರಹ ಮಾಡುವುದರ ಮೂಲಕ ಯಾವುದೇ ಸಂದರ್ಭದಲ್ಲಿ, ಯಾವುದೇ ಗ್ರಾಮ ಕಸದ ಸಮಸ್ಯೆಗೆ ಒಳಗಾಗದಂತೆ ಸ್ವಚ್ಛ ಗ್ರಾಮವಾಗಿ ರೂಪುಗೊಳ್ಳಲು ವಿಶೇಷ ಪ್ರಯತ್ನ ಕೈಗೊಳ್ಳಲಾಗಿದೆ.

ಬ್ರಹ್ಮಾವರ ತಾಲೂಕಿನ ಕೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಡಿಬೆಂಗ್ರೆ ಗ್ರಾಮಕ್ಕೆ ಸಂತೆಕಟ್ಟೆ ರಸ್ತೆ ಮೂಲಕ 35 ಕಿಮೀ ಕ್ರಮಿಸಬೇಕಿದ್ದು, ಒಂದು ಗ್ರಾಮದ ತ್ಯಾಜ್ಯ ಸಂಗ್ರಹಣೆಗೆ ಇಷ್ಟು ದೂರ ಕ್ರಮಿಸುವುದು ಪಂಚಾಯತ್ ನ ಎಸ್.ಎಲ್.ಆರ್.ಎಂ ಘಟಕದ ಸಿಬ್ಬಂದಿ ಹಾಗೂ ವಾಹನಕ್ಕೆ ನಷ್ಠವಾಗುತ್ತಿದ್ದು, ಗ್ರಾಮ ಪಂಚಾಯತ್ ಹಸಿ ಕಸವನ್ನು ಮೂಲದಲ್ಲಿಯೇ ವಿಲೇವಾರಿ ಮಾಡುವ ಬಗ್ಗೆ ಗ್ರಾಮಸ್ಥರಿಗೆ ಅರಿವು ಮೂಡಿಸಿದ್ದು, ಒಣಕಸ ಸಂಗ್ರಹಣೆಯನ್ನು 15 ದಿನಕ್ಕೊಮ್ಮೆ ಮಾಡಲಾಗುತ್ತಿತ್ತು.

ಪ್ರಸ್ತುತ ಕೋಡಿಬೆಂಗ್ರೆ ಗ್ರಾಮಕ್ಕೆ ಬಾರ್ಜ್ ಸೇವೆ ಆರಂಭಗೊಂಡಿರುವುದರಿಂದ ಈ ಗ್ರಾಮದಲ್ಲಿಯೂ ಒಣ ಕಸ ಸಂಗ್ರಹವನ್ನು ಎಲ್ಲಾ ಗ್ರಾಮಗಳಂತೆಯೇ ಈಗ ನಿರಂತರವಾಗಿ ಸಂಗ್ರಹಿಸುತ್ತಿದ್ದು, ವಾರಕೊಮ್ಮೆ ಸುಮಾರು 1 ಟನ್ ಗೂ ಅಧಿಕ ಒಣ ಕಸ ಸಂಗ್ರಹ ಮಾಡಲಾಗುತ್ತಿದೆ. ಇದಕ್ಕಾಗಿ ಪಂಚಾಯತ್‌ನ ಸ್ವಚ್ಚ ವಾಹಿನಿ ವಾಹನದೊಂದಿಗೆ,ಚಾಲಕ ಹಾಗು ಕಸ ಸಂಗ್ರಹ ಸಿಬ್ಬಂದಿ ಬಾರ್ಜ್ ನಲ್ಲಿಯೇ ತೆರಳಿ ಸಂಗ್ರಹ ಮಾಡುವ ಮೂಲಕ ಎಸ್.ಎಲ್.ಆರ್.ಎಂ ಘಟಕದ ಸಿಬ್ಬಂದಿಗಳು ಯಾವುದೇ ಸಂದರ್ಭದಲ್ಲೂ ಎಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಕಸ ಸಂಗ್ರಹಣೆಗೆ ನಾವು ಬದ್ದ ಎಂದು ಸಾರಿದ್ದಾರೆ.

ಕೋಡಿಬೆಂಗ್ರೆ ಗ್ರಾಮದಲ್ಲಿ 300 ಕ್ಕೂ ಹೆಚ್ಚು ಮನೆಗಳಿದ್ದು, ಕೋಡಿ ಗ್ರಾಮ ಪಂಚಾಯತ್ ನಿಂದ ರಸ್ತೆ ಮೂಲಕ 35 ಕಿಮೀ ದೂರವಿದ್ದು, ದೂರದ ಕಾರಣ ಹಿಂದೆ 15 ದಿನಕ್ಕೊಮ್ಮೆ ಒಣಕಸ ಸಂಗ್ರಹ ಮಾಡುತ್ತಿದ್ದು, ಈಗ ಬಾರ್ಜ್ ಮೂಲಕ ಕಸ ಸಂಗ್ರಹಣಾ ವಾಹನವನ್ನು ತೆಗೆದುಕೊಂಡು ಹೋಗಿ ವಾರಕ್ಕೊಮ್ಮೆ ಕಸ ಸಂಗ್ರಹ ಮಾಡಲಾಗುತ್ತಿದೆ. ಗ್ರಾಮಕ್ಕೆ ಬಾರ್ಜ್ ಮೂಲಕ ಕೇವಲ 10 ಕಿಮೀ ಆಗಲಿದ್ದು, ಇದರಿಂದ ಕಸ ಸಂಗ್ರಹಣಾ ವಾಹನದ ವೆಚ್ಚ ಮತ್ತು ಸಿಬ್ಬಂದಿಗಳ ಸಮಯ ಉಳಿತಾಯವಾಗುತ್ತಿದೆ. ಪ್ರಸ್ತುತ ಕೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಸ ಸಂಗ್ರಹಣೆ ಶುಲ್ಕದ ಶೇ.100 ರಷ್ಟು ಮೊತ್ತ ಸಂಗ್ರಹವಾಗುತ್ತಿದ್ದು, ಎಸ್.ಎಲ್.ಆರ್.ಎಂ. ಘಟಕವು ಈ ಮೊತ್ತದಲ್ಲಿ ಸಂಪೂರ್ಣ ಸ್ವಾವಲಂಬನೆ ಸಾಧಿಸಿದ್ದು, ಘಟಕದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಮತ್ತು ವಾಹನದ ಇಂಧನ ಸೇರಿದಂತೆ ಯಾವುದೇ ಹಣಕಾಸಿನ ನೆರವನ್ನು ಪಂಚಾಯತ್ ನಿಂದ ಕೋರುತ್ತಿಲ್ಲ ಎನ್ನುತ್ತಾರೆ ಕೋಡಿ ಗ್ರಾಮ ಪಂಚಾಯತ್ ಅಭಿವೃಧ್ದಿ ಅಧಿಕಾರಿ ರವೀಂದ್ರ.

Vishwa News 24

Recent Posts

ಕಿರುತೆರೆ ನಟ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನ -vishwanews24

ಕಿರುತೆರೆ ನಟ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನ ಹಿಟ್ಲರ್ ಕಲ್ಯಾಣ’ ಧಾರವಾಹಿ ಖ್ಯಾತಿಯ ನಟ ದಿಲೀಪ್ ರಾಜ್ ಇಂದು ಬೆಳಗಿನ…

16 hours ago

ಉಡುಪಿ : ಮಲಬಾರ್ ಗೋಲ್ಡ್‌ನಿಂದ 518 ವಿದ್ಯಾರ್ಥಿನಿಯರಿಗೆ 42 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ  -vishwanews24

ಉಡುಪಿ : ಮಲಬಾರ್ ಗೋಲ್ಡ್‌ನಿಂದ 518 ವಿದ್ಯಾರ್ಥಿನಿಯರಿಗೆ 42 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ  ಉಡುಪಿ : ಮಲಬಾರ್…

1 day ago

ಸುವೇಂದು ಆಪ್ತ ಚಂದ್ರನಾಥ್ ಹತ್ಯೆ ಪ್ರಕರಣ : ಸಿಬಿಐಗೆ ಹಸ್ತಾಂತರ – vishwanews24

ಸುವೇಂದು ಆಪ್ತ ಚಂದ್ರನಾಥ್ ಹತ್ಯೆ ಪ್ರಕರಣ : ಸಿಬಿಐಗೆ ಹಸ್ತಾಂತರ ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ  ಬಿಜೆಪಿ ನಾಯಕ, ನೂತನ ಮುಖ್ಯಮಂತ್ರಿ…

2 days ago

ಭಸ್ಮಾಸುರ ಆಗಿರುವ ನರೇಂದ್ರ ಮೋದಿ ಅವರು ಪ್ರಜಾಪ್ರಭುತ್ವ ಸಂವಿಧಾನದ ಮೇಲೆ ಕೈ ಇಡದಿದ್ದರೆ ಸಾಕು : ಬಿ.ಕೆ ಹರಿಪ್ರಸಾದ್ ವಾಗ್ದಾಳಿ – vishwanews24

ಪ್ರಧಾನಿ  ಮೋದಿಯವರು ತಮ್ಮ ಕುರ್ಚಿ ಗಟ್ಟಿಯಾಗಿದೆಯೇ ನೋಡಿಕೊಳ್ಳಲಿ  .. ಪಂಚಾಯತಿ ಮೇಂಬರ್ ರೀತಿ ರಾಜಕಾರಣ ಮಾಡೋದು ಬಿಡಬೇಕು.. ಇಂದಿರಾ ಗಾಂಧಿ…

2 days ago

ಮಂಗಳೂರು : ಪ್ರಧಾನಿ ಮೋದಿ ಹೇಳಿಕೆ ಬಾಲಿಶತನದ್ದು, ಇಂತಹ ಹೇಳಿಕೆಯನ್ನು ಈ ದೇಶದ ಜನತೆ ಯಾವತ್ತೂ ನಿರೀಕ್ಷೆ ಮಾಡಲ್ಲ: ಮಂಜುನಾಥ ಭಂಡಾರಿ – vishwanews24

ಪ್ರಧಾನಿ ಮೋದಿ ಹೇಳಿಕೆ ಬಾಲಿಶತನದ್ದು, ಇಂತಹ ಹೇಳಿಕೆಯನ್ನು ಈ ದೇಶದ ಜನತೆ ಯಾವತ್ತೂ ನಿರೀಕ್ಷೆ ಮಾಡಲ್ಲ: ಮಂಜುನಾಥ ಭಂಡಾರಿ ಮಂಗಳೂರು…

2 days ago

ಮೂಳೂರು ಪರಿಸರದಲ್ಲಿ ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಿಸದಂತೆ ಅಧಿಕಾರಿಗಳಿಗೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮನವಿ – vishwanews24

ಮೂಳೂರು: ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಾಣ ವಿರೋಧಿಸಿ ಪ್ರತಿಭಟನೆ.. STP ತಕ್ಷಣವೇ ಬೇರೆ ಕಡೆಗೆ ಸ್ಥಳಾಂತರಿಸುವಂತೆ ಸಂಬಂದಿಸಿದ ಅಧಿಕಾರಿಗಳಿಗೆ…

2 days ago