ಉಡುಪಿ : “ಉಡುಪಿ ಬಿಆರ್‌ಎಸ್ ಆಸ್ಪತ್ರೆಯ ಸಿಬ್ಬಂದಿಗಳ ವೇತನವನ್ನು ಸರ್ಕಾರದ ಮೂಲಕ ಕೊಡಿಸುವ ಜವಾಬ್ದಾರಿ ನನ್ನದು” ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.
“ಉಡುಪಿ ಬಿಆರ್‌ಎಸ್ ಆಸ್ಪತ್ರೆಯ ಸಿಬ್ಬಂದಿಗಳ ವೇತನ ವಿಳಂಬವಾಗುತ್ತಿರುವುದನ್ನು ಖಂಡಿಸಿ ಬುಧವಾರದಿಂದ ಅನಿಷ್ಟಾವಧಿವರೆಗೆ ಧರಣಿ ಕುಳಿತು ಕೊಳ್ಳವ ವಿಚಾರದ ಬಗ್ಗೆ ನಾವು ಈಗಾಗಲೇ ಸಿಬ್ಬಂದಿಗಳ ಬಳಿ ಮಾತಾಡಿದ್ದೇವೆ. ಸುವರ್ಣ ಆರೋಗ್ಯ ಟ್ರಸ್ಟ್‌ನಿಂದ ಆಯುಷ್ಮಾನ್‌ಗೆ ಹಣ ಬರಲು ಬಾಕಿ ಇದೆ . ಸುಮಾರು 90 ಲಕ್ಷ ರೂ ಜಿಲ್ಲಾಸ್ಪತ್ರೆ ಬರಲು ಬಾಕಿ ಇದೆ. ಇತ್ತೀಚೆಗೆ ಆಯುಷ್ಮಾನ್ ಸಿಇಒ ಜೊತೆ ಮಾತನಾಡಿದ್ದು, 20 ಲಕ್ಷ ಬಿಡುಗಡೆ ಮಾಡಿದೆ. ಕಳೆದ ಬಾರಿ ಬಿಡುಗಡೆ ಮಾಡಿದ ಹಣವನ್ನು ಆಡಳಿತ ಮಂಡಳಿಯವರೇ ತೆಗೆದು ಕೊಂಡರು. ಈ ಬಾರಿ ಡಿ ಗ್ರೇಡ್ ಸಿಬ್ಬಂದಿಯಿಂದ ಬಾಕಿ ವೇತನ ಕೊಡಲು ಪ್ರಾರಂಭ ಮಾಡುತ್ತೇವೆ. ಶಾಸಕನಾಗಿ ನಾನು ಭರವಸೆ ಕೊಟ್ಟಿದ್ದೇನೆ. ಆ ಸಿಬ್ಬಂದಿಗಳು ಎಲ್ಲಿವರೆಗೆ ಕೆಲಸ ಮಾಡುತ್ತಾರೋ ಸರಕಾರ ತೆಗದುಕೊಳ್ಳುವವರೆಗೆ ಸಂಪೂರ್ಣ ಸಂಬಳವನ್ನು ಸರಕಾರದ ಮೂಲಕ ಕೊಡಿಸುವ ಜವಾಬ್ದಾರಿ ನನ್ನದು” ಎಂದಿದ್ದಾರೆ.
“70 ಸರ್ಕಾರಿ ಘಟಕ ಮತ್ತು 130 ಮಂದಿ ಸಿಬ್ಬಂದಿ ಘಟಕವನ್ನು ಗುತ್ತಿಗೆ ಆಧಾರದ ಮೇಲೆ ನಡೆಸುವ ಚಿಂತನೆಯಿತ್ತು. ಹಾಗಾಗಿ ಇದಕ್ಕೆ ಧರಣಿ ಕುಳಿತು ಸರಕಾರವನ್ನು ಎಚ್ಚರಿಸುವ ಕೆಲಸ ಮಾಡಬೇಕಾಗಿಲ್ಲ. ಎಲ್ಲರಿಗೂ ಪರಿಸ್ಥಿತಿಯ ಅರಿವು ಇದೆ. ಸಿಬ್ಬಂದಿಗಳು ಧರಣಿ ಕೂತರೆ ರೋಗಿಗಳಿಗೆ ಸಮಸ್ಯೆ ಆಗುತ್ತದೆ. ಎಲ್ಲರಿಗೂ ಸ್ವರ್ಣ ಆರೋಗ್ಯದಡಿ ವೇತನ ಬಾಕಿ ಇದೆ. ನಾವೇ ಒತ್ತಾಯ ಹಾಕಿ ತೆಗೆಸಿ ಕೊಡುತ್ತಾ ಇದ್ದೇವೆ. ಸರ್ಕಾರ ಬದಲಾವಣೆ ಆದ್ದರಿಂದ ವೇತನ ವಿಳಂಬವಾಗಿದೆ ಅಷ್ಟೆ. ನಾವೂ ಇದೇ ವಿಚಾರದ ಬೆಂಬಲಿಸುತ್ತಿದ್ದೇವೆ. ಇದೇ ಗುರುವಾರ ಮುಖ್ಯಮಂತ್ರಿ, ಆರೋಗ್ಯ ಇಲಾಖೆಯ ಜೊತೆ ಚರ್ಚೆಯಡಿ ಒಂದು ತಾರ್ಕಿಕ ನಿರ್ಧಾರಕ್ಕೆ ಬರುತ್ತೇವೆ” ಎಂದು ಶಾಸಕ ಭಟ್ ಮನವಿ ಮಾಡಿಕೊಂಡರು
ಭಾರೀ ಮಳೆ ಮುನ್ಸೂಚನೆ : ನಾಳೆ(ಜುಲೈ 2)ದ.ಕ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಂಗಳೂರು: ಕರಾವಳಿ ಕರ್ನಾಟಕದಲ್ಲಿ ಭಾರೀ ಮಳೆಯಾಗುವ…
ಶಿರ್ವ : ಕಾರಿಗೆ ಡೀಸೆಲ್ ತುಂಬಿಸಿ ಹಣ ನೀಡದೆ ಪಾವತಿಸದೆ ಪರಾರಿ ; ಪ್ರಕರಣ ದಾಖಲು ಶಿರ್ವ : ಶಂಕರಪುರದ…
ಹಜ್ ಯಾತ್ರೆ - 2027 : ಅರ್ಜಿ ಸಲ್ಲಿಕೆಗೆ ಜುಲೈ 20 ಕೊನೆ ದಿನ ಬೆಂಗಳೂರು: ಮುಂದಿನ (2027ನೇ) ಸಾಲಿನಲ್ಲಿ…
ಉಡುಪಿ: ಭಾರೀ ಮಳೆಯಾಗುವ ಸಾಧ್ಯತೆ ; ಜುಲೈ 2 ಮತ್ತು 3ರಂದು ರೆಡ್ ಅಲರ್ಟ್ ಘೋಷಣೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ…
ಇಂದಿನಿಂದ ಜಾರಿಗೆ ಬರಲಿವೆ ಹೊಸ ರೂಲ್ಸ್: LPG, ಆಧಾರ್, ರೈಲ್ವೆ, ಬ್ಯಾಂಕ್ ಸೇವೆಗಳಲ್ಲಿ ಬದಲಾವಣೆ ನವದೆಹಲಿ: ಇಂದಿನಿಂದ ದೇಶಾದ್ಯಂತ ಹಲವು…
ಬ್ರಹ್ಮಾವರ :ಭೀಕರ ರಸ್ತೆ ಅಪಘಾತ: ಪ್ರಸಿದ್ಧ ಹುಲಿ ವೇಷ ಕಲಾವಿದ ಸಾವು ಬ್ರಹ್ಮಾವರ: ರಾಷ್ಟ್ರೀಯ ಹೆದ್ದಾರಿ 66ರ ಬ್ರಹ್ಮಾವರದ ಹೇರೂರು…