Featured

ಉಡುಪಿ ಬಿಜೆಪಿಯ  ದೇವ ದುರ್ಲಭ ಕಾರ್ಯಕರ್ತರ ಮನೆ ಬಿಟ್ಟು ಸಿಎಂ ಚಾ ಕುಡಿಯಲು ಹೋದದ್ದು ಮಾಜಿ ಕಾಂಗ್ರೇಸ್ ನಾಯಕನ ಮನೆಗೆ ವಿಪರ್ಯಾಸವೇ-ಹೊಂದಾಣಿಕೆಯೇ..??

ಉಡುಪಿ ಬಿಜೆಪಿಯ  ದೇವ ದುರ್ಲಭ ಕಾರ್ಯಕರ್ತರ ಮನೆ ಬಿಟ್ಟು ಸಿಎಂ ಚಾ ಕುಡಿಯಲು

ಹೋದದ್ದು ಮಾಜಿ ಕಾಂಗ್ರೇಸ್ ನಾಯಕನ ಮನೆಗೆ ವಿಪರ್ಯಾಸವೇ-ಹೊಂದಾಣಿಕೆಯೇ..??

ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಅಧಿಕಾರ ತಂದುಕೊಟ್ಟ ಉಡುಪಿಯಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಬರವೇ..???

ಓದಿ ಈ ಪೊಲಿಟಿಕಲ್ ಅಂಕಣ

ಉಡುಪಿ ಜಿಲ್ಲೆ ಕರಾವಳಿ ಭಾಗವನ್ನು ಬಾಚಿಕೊಂಡು ತನ್ನ ಮಡಿಳಲ್ಲಿ ಸಾಕುತ್ತಿರುವ ಪ್ಯಾಂಪರ್ ಬೇಬಿ- ಹಿಂದುತ್ವ-ಸಂಘ-ಸಂಘಟನೆಗೆ ಪರ್ಯಾಯ ಹೆಸರು ಉಡುಪಿ ಎಂದರೂ ತಪ್ಪಾಗಲಾರದು -ಪೊಡವಿಗೊಡೆಯನ ಪುಣ್ಯ ಭೂಮಿ ಅಂತನೂ ಜನ ಮಾತನಾಡುವ ಈ ಜಿಲ್ಲೆ ಭಾಜಪಕ್ಕೆ ಮಾತ್ರ ಅಧಿಕಾರದ ಪೊಲ್ಸ್(ಬೋನಿ) ಮಾಡಿಕೊಟ್ಟಿತ್ತು ತದನಂತರದ ದಿನಗಳಲ್ಲಿ ದೇಶದ ಮೂಲೆ-ಮೂಲೆಯಲ್ಲೂ ಕೇಸರಿ ಅರಳಿತು ಪ್ರಸ್ತುತ ಎಲ್ಲಿ ನೋಡಿದರು ಬಿಜೆಪಿ, ಕಾರ್ಯಕರ್ತರಿಗೆ ಪೆಟ್ಟು-ನೋವು-ತಿನ್ನಿಸಿದ ಕಾಂಗ್ರೇಸ್ ನಾಯಕರು ವೇದಿಕೆಯಲ್ಲಿ ಪಕ್ಷ ಬೆಳೆಸಲು ಸರ್ವಸ್ವ ಕಳೆದುಕೊಂಡ ದೇವ ದುರ್ಲಭ ಕಾರ್ಯಕರ್ತರು ಮೂಲೆಯಲ್ಲಿ ಸದ್ಯದ ವಾಸ್ತವ.


ಹೀಗೆ ಇಡೀ ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಬಿಜೆಪಿಗೆ ಅಧಿಕಾರ ಎಂದರೇ ಏನು -ಹೇಗೆ ಎಂದು ತೋರಿಸಿಕೊಟ್ಟ ಬಲಿಷ್ಠ ಕಾರ್ಯಕರ್ತರ ಪಡೆಯಿರುವ ಉಡುಪಿಯಲ್ಲಿ ಒಬ್ಬ ಈ ರಾಜ್ಯದ ದೊರೆಗೆ ಉಪಹಾರ ಕೊಡಿಸುವಷ್ಟು ತಾಕತ್ತಿಲ್ಲವೇ ಅಥಾವ ಅವರಿಗೆ ಮನಸಿರಲಿಲ್ಲವೇ ಎಂಬುದೇ ಈ ಅಂಕಣದ ಸಾರಾಂಶ.

ಹೌದು ಮಲ್ಪೆಯ ಮತ್ಸ್ಯೋದ್ಯಮಿ-ಶಾಸಕ-ಸಚಿವ ಪ್ರಮೋದ್ ಮಧ್ವರಾಜರ ಮನೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗೆ ಬೆಳಗ್ಗಿನ ಉಪಹಾರ ನಾಮಕವಸ್ಥೆಗೆ ಗೋಶಾಲೆ ಭೇಟಿ ಕಾರ್ಯಕ್ರಮ ರಾಜ್ಯದ ದೊರೆಯ ಹಿಂದೆ ಅಂದು ಪ್ರಮೋದ್ ಮದ್ವರಾಜರ ಬಿಜೆಪಿ ಎಂಟ್ರಿಗೆ ಗೇಟ್‍ಗೆ ಬೀಗ ಹಾಕಿ ಕೀಲಿಕೈಯನ್ನು ಅಡಗಿಸಿಟ್ಟ ಧುರೀಣ ನಾಯಕರು ಸ್ಸಾರಿ ಸೋ ಕಾಲ್ಡ್ ನಾಯಕರು.

ಉಡುಪಿ ಜಿಲ್ಲೆಗೆ ಹತ್ತು ಹಲವು ಬಾರಿ ಎಂಟ್ರಿಕೊಟ್ಟ ರಾಜ್ಯದ ಮುಖ್ಯಮಂತ್ರಿಯ ರಾತ್ರಿಯ ತಂಗುದಾಣ ಹಾಲಿ ಶಾಸಕರ ಐಷರಾಮಿ ಹೋಟೆಲ್ ನೋ ಪ್ರಾಬ್ಲಂ ಆದರೇ ಬೆಳ್ಳಗ್ಗಿನ ಉಪಹಾರವನ್ನಾದರೂ ದೇವ ದುಲರ್ಭ ಕಾರ್ಯಕರ್ತರ ಮನೆಯಲ್ಲಿ ಮಾಡಿಸುವ ತಾಕತ್ತು ಇಲ್ಲಿನ ನಾಯಕರಿಗಿಲ್ಲವಾಗಿ ಹೋಯಿತೇ..?

ಮೊನ್ನೆ ಮೊನ್ನೆಯವರೆಗೆ ಭಾಜಪದ ನಾಯಕ ನರೇಂದ್ರ ಮೋದಿಯನ್ನು ಹೀಯಾಲಿಸಿ-ಹಿಂದೂ ದೇವರ ಬಗ್ಗೆ ಅವಹೇಳನವಾಗಿ ಹೇಳಿಕೆ ನೀಡಿ ಅದೆಷ್ಟೋ ವರ್ಷಗಳಿಂದ ದೇವರಂತೆ ಪಕ್ಷವನ್ನು ಪೂಜಿಸಿ ಪ್ರೀತಿಸುವ ಕಾರ್ಯಕರ್ತರಿಗೆ ಘಾಸಿಯನ್ನುಂಟು ಮಾಡಿದ್ದ ಪ್ರಮೋದ್ ರ ಮನೆಯಲ್ಲಿ ಉಪಹಾರದ ವ್ಯವಸ್ಥೆಯನ್ನು ಆಯೋಜನೆ ಮಾಡುವ ಮಟ್ಟಿಗೆ ಬಿಜೆಪಿ ಇಳಿದು ಬಿಟ್ಟಿದೆ ಅಂದರೆ ಸಾಮಾನ್ಯ ಕಾರ್ಯಕರ್ತರನನ್ನು ಎಷ್ಟರ ಮಟ್ಟಿಗೆ ಕೀಳು ಮಟ್ಟಕ್ಕೆ ತಂದಿರ ಬಹುದು ಊಹಿಸಬಹುದೇ..??

 

ಉಡುಪಿಯಲ್ಲಿ ಅವಲಕ್ಕಿ ನೀರು ಕುಡಿದು ಪಕ್ಷ ಕಟ್ಟಿದ ಅದೇಷ್ಟೋ ನಾಯಕ ಮನೆ ನಗರ ಭಾಗದಲ್ಲಿಯೇ ಅಂಟಿಕೊಂಡಿದೆ ಅಂತಹ ಕಾರ್ಯಕರ್ತರ ಮನೆಯ ಉಪಹಾರ ಮುಖ್ಯಮಂತ್ರಿಗೆ ಸೇರುವುದಿಲ್ಲವೋ ಗೊತ್ತಿಲ್ಲ! ಆದರೇ ಗೇಟ್ ಗೆ ಬೀಗ ಹಾಕಿದ್ದ ನಾಯಕರು ಮಾತ್ರ ಅವತ್ತೂ ಮಾಜಿ ಸಚಿವನ ಗೇಟ್ ಕೀಪರ್ ಆಗಿ ಕಾಯ್ತ ಇದ್ದದ್ದು ವಿಪರ್ಯಾಸವಲ್ಲವೇ..??

ಹಾಗದರೇ ದೇವದುರ್ಲಭ ಕಾರ್ಯಕರ್ತರು ಪಕ್ಷದ ಮುಖಂಡರಿಗೆ ಜೈಕಾರ ಹಾಕಲು, ಬ್ಯಾನರ್ ಕಟ್ಟಲು,ವೇದಿಕೆಯಲ್ಲಿ ಮುಖಸ್ತುತಿಯ ಮಾತಿಗೆ ಮಾತ್ರ ಸೀಮಿತವಾದರೇ ಅದರಲ್ಲೂ ಪಕ್ಕಾ ಬಿಜೆಪಿ ಹಿಂದುತ್ವದ ಕಾರ್ಯಕರ್ತರಿಗೆ ನೋವು ಕೊಟ್ಟಿದ್ದ ಕಾಂಗ್ರೇಸ್ ನಾಯಕನ ಮನೆಯ ಉಪಹಾರ ಭಾಜಪದ ಮುಖಂಡರಿಗೆ ತೃಪ್ತಿಕೊಟ್ಟಿತೋ ಗೊತ್ತಿಲ್ಲ ಆದರೇ ನೈಜ ಕ್ರೈಡರ್ ಬೇಸಿಸ್ ಕಾರ್ಯಕರ್ತರ ಮನಸ್ಸನ್ನು ನುಚ್ಚುನೂರು ಮಾಡಿಬಿಟ್ಟಿದೆ.

ಇನ್ನೊಂದು ಲೆಕ್ಕಾಚಾರದ ಪ್ರಕಾರ ಪ್ರಮೋದರನ್ನು ಈ ಸಲ ಬಿಜೆಪಿಯಲ್ಲಿ ಟಿಕೆಟ್ ನೀಡಿ ಶಾಸಕ ಮಾಡಬೇಕೆಂದು ಹೊರಟ ಜಿಲ್ಲೆಯ ಒಂದಿಷ್ಟು ಎಡಬಿಡಂಗಿ ನಾಯಕರ ಪಡೆಯಿದೆ ಆದರೇ ಕಾರ್ಯಕರ್ತರಿಗೆ ಅದೂ ಚೂರು ಇಷ್ಟವಾಗಲ್ಲ ಎಂಬುದು ಗೊತ್ತಿದ್ದರು ಅಂತಹಾ ದುಸ್ಸಾಹಸಕ್ಕೆ ಕೈ ಹಾಕಿ- ಕೈ-ಮೈ ಸುಟ್ಟು ಕೊಳ್ಳುವ ಸಾಧ್ಯತೇ ಜಾಸ್ತಿಯೇ ಇದೆ.

ಪ್ರೋಟೊಕಾಲ್ ಪ್ರಕಾರ ಕಾಪುವಿನ ಜನಸಂಕಲ್ಪ ಸಮಾವೇಶದ ವೇದಿಕೆಯಲ್ಲಿ ಪ್ರಮೋದರಿಗೆ ಎಂಟ್ರಿಯಿಲ್ಲ ಆದರೇ ಎರಡನೇ ಸಾಲಿನಲ್ಲಿ ಹಿಂದು ದೇವರನ್ನು ಅವಹೇಳನ ಮಾಡಿದ ಇವರಿಗೆ ಸೀಟ್ ಕೊಡುವಷ್ಟು ಉಡುಪಿಯ ಜಿಲ್ಲಾ ಬಿಜೆಪಿ ಬೆಳೆದುಬಿಟ್ಟಿದೆ ಅಂದರೇ ಕಾರ್ಯಕರ್ತರೂ ಯಾವತ್ತಿದ್ದರೂ ನಮ್ಮವರೇ ಅಲ್ವಾ ಎಂಬ ಅಸಡ್ಡೆ ಭಾವನೆಯೇ..?ಅಥಾವ ದುಡ್ಡಿನ ಮುಂದೆ ಎಲ್ಲವೂ ಗೌನವೇ ಎಂಬುದು ಕಾರ್ಯಕರ್ತರಲ್ಲಿ ಎದ್ದಿರುವ ಪ್ರಶ್ನೆಯಾಗಿದೆ.

ಪ್ರಮೋದ್ ಮಧ್ವರಾಜ್ ಬಿಜೆಪಿ ಎಂಟ್ರಿಯಾಗುವ ಸಮಯದಲ್ಲೇ ಸಾವಿರಾರು ಬಿಜೆಪಿ ಕಾರ್ಯಕರ್ತರಿಗೆ ನೋವಿತ್ತು ಅಸಾಮಧಾನ ಹೊರಹಾಕಿದ್ದರು ಯಾವುದನ್ನು ಕ್ಯಾರೇ ಮಾಡದೇ ಪಕ್ಷಕ್ಕೆ ಬರ ಮಾಡಿಕೊಂಡ ಬಿಜೆಪಿ ನಾಯಕರು ಮೊನ್ನೆಯ ದಿನ ಅವರ ಮನೆಯಲ್ಲಿಯೇ ಉಪಹಾರ ಸೇವಿಸುವ ಮುಖೇನ ಉರಿಯುವ ಬೆಂಕಿಗೆ ತುಪ್ಪ ಸುರಿದಂಗಾಯಿತು ಅನ್ನುತ್ತಾರೆ ಹಿರಿಯ ಬಿಜೆಪಿ ಮುಖಂಡರು.

ಇನ್ನು ಹಿಂದು ವಿರೋಧಿ-ಮೋದಿ ವಿರೋದಿ ಹೇಳಿಕೆ ಕೊಡುವ ಯಾವುದೇ ಪಕ್ಷದ ನಾಯಕರಿಗೆ ಬಿಜೆಪಿನ ಕರೆದು ಮಣೆ ಹಾಕುವ ಪ್ರಸಂಗ ಇತ್ತಿಚಿನ ದಿನಗಳಲ್ಲಿ ಜಾಸ್ತಿಯಾಗಿಯೇ ಇದೆ ಅದರಲ್ಲೂ ರಾಮ-ಕೃಷ್ಣ ಮಾಂಸಹಾರಿಗಳು ಎಂದವರಿಗೆ ಟಿಕೆಟ್ ಕೊಡಲು ಮುಂದಾಗಿದೇಯೆ ಬಿಜೆಪಿ ಎಂಬುದು ಸದ್ಯವಿರುವ ಪ್ರಶ್ನೆ ಅಂತಹ ಕಾರ್ಯಕ್ಕೆನ್ನಾದರು ಈ ಸಲದ ಮಟ್ಟಿದೆ ಪ್ರಯತ್ನ ಪಟ್ಟರೇ ದೇವದುರ್ಲಭ ಕಾರ್ಯಕರ್ತರು ಸುಮ್ಮನಿರುವರೇ ಅದೂ ಕೂಡ ಕೃಷ್ಣಾ ನಗರಿ ಉಡುಪಿಯಲ್ಲಿ ನೋ ಚಾನ್ಸ್ ಎಟ್ ಆಲ್.

ಸದ್ಯ ಸೋಶಿಯಲ್ ಮೀಡಿಯಾ ಸೇರಿದಂತೆ ಹತ್ತು ಹಲವಾರು ಫ್ಲ್ಯಾಟ್‍ಫಾರ್ಮ್‍ಗಳಲ್ಲಿ ಬಿಸಿಬಿಸಿ ಸುದ್ದಿ ಹರಿದಾಡುತ್ತಿದೆ ದುಡಿಯಲು ,ಕೇಸ್ ಹಾಕಿಸಿಕೊಳ್ಳಲು, ಲಾಠಿ ಏಟಿಗೆ , ಜೈಲೂಟಕ್ಕೆ ದೇವದುರ್ಲಭ ಕಾರ್ಯಕರ್ತರು ಬೇಕು ಆದರೇ ಬಿಜೆಪಿಯ ರಾಜ್ಯದ ನಾಯಕರಿಗೆ ಚಾಹ ಕುಡಿಯಲು ಮಾಜಿ ಕಾಂಗ್ರೇಸ್ ನಾಯಕನ ಮನೆ ಬೇಕು ಇದೆಲ್ಲವನ್ನೂ ನೋಡಿಯೂ ಬಿಜೆಪಿಯ ಕಾರ್ಯಕರ್ತರು ಪಕ್ಷ ಕಟ್ಟಿದ ಹಿರಿಯರು ಸುಮ್ಮನಿರಬೇಕು ಎಂಬುದು ಇದರ ಅರ್ಥವೇ ಅಥಾವ ಬಿಜೆಪಿಗಾಗಿ ದುಡಿಯುವ ನಾಯಕರಿಗಿಂತ ಕಾಂಗ್ರೇಸ್ ನಿಂದ ಬಂದ ನಾಯಕರು ಬಿಜೆಪಿಗೆ ಅನಿವಾರ್ಯವೇ ಎಂಬುದು ಸದ್ಯವಿರುವ ಪ್ರಶ್ನೆ.
ಪೊಲಿಟಿಕಲ್ ಬ್ಯುರೋ-ಪುರುಷೋತ್ತಮ ಸಾಲಿಯಾನ್
ವಿಶ್ವನ್ಯೂಸ್24

Vishwa News 24

Recent Posts

ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ – vishwanews24

 ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ ನಟ ದರ್ಶನ್ ರೇಣುಕಾ…

1 day ago

ಗೃಹ ಜ್ಯೋತಿ ಪರಿಶೀಲನೆ: ಪ್ರವರ್ಗ ಮಾಹಿತಿ (ಜಾತಿ ಪ್ರಮಾಣಪತ್ರ) ಕಡ್ಡಾಯವಲ್ಲ : ಬೆಸ್ಕಾಂ ಸ್ಪಷ್ಟನೆ – vishwanews24

ಗೃಹ ಜ್ಯೋತಿ ಪರಿಶೀಲನೆ: ಪ್ರವರ್ಗ ಮಾಹಿತಿ (ಜಾತಿ ಪ್ರಮಾಣಪತ್ರ) ಕಡ್ಡಾಯವಲ್ಲ ಬೆಂಗಳೂರು: ರಾಜ್ಯಾದ್ಯಂತ ಜುಲೈ 1 ರಿಂದ ಆರಂಭಗೊಂಡಿರುವ ಗೃಹ ಜ್ಯೋತಿ…

2 days ago

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ : ಸಮಗ್ರ ತನಿಖೆಗೆ ಪ್ರಲ್ಹಾದ ಜೋಶಿ ಆಗ್ರಹ – vishwanews24

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ : ಸಮಗ್ರ ತನಿಖೆಗೆ ಪ್ರಲ್ಹಾದ ಜೋಶಿ ಆಗ್ರಹ ನವದೆಹಲಿ: ರಾಮನಗರ ಜಿಲ್ಲೆಯಲ್ಲಿ ನಡೆದ ಮತದಾರರ…

2 days ago

ಅಕ್ರಮ ಎಸ್‌ಐಆರ್‌ ಪ್ರಕ್ರಿಯೆ : 2028ರ ಚುನಾವಣೆ ಗೆಲ್ಲಲು ಬಾಂಗ್ಲಾದೇಶಿಯರ ಸಕ್ರಮಕ್ಕೆ ಕಾಂಗ್ರೆಸ್‌ ಸಂಚು : ಶೋಭಾ ಕರಂದ್ಲಾಜೆ ಆರೋಪ – vishwanews24

ಅಕ್ರಮ ಎಸ್‌ಐಆರ್‌ ಪ್ರಕ್ರಿಯೆ : 2028ರ ಚುನಾವಣೆ ಗೆಲ್ಲಲು ಬಾಂಗ್ಲಾದೇಶಿಯರ ಸಕ್ರಮಕ್ಕೆ ಕಾಂಗ್ರೆಸ್‌ ಸಂಚು : ಶೋಭಾ ಕರಂದ್ಲಾಜೆ ಗಂಭೀರ…

2 days ago

ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ: ಸಂಸದ ಯದುವೀರ್ ಒಡೆಯರ್ ಆಕ್ಷೇಪ – vishwanews24

ಮೂಲ ನೆಲದಿಂದ ಬೇರ್ಪಡಿಸಿ ಕರಾವಳಿಯ ಮಣ್ಣಿನ ಸಂಸ್ಕೃತಿಯ ಪಾವಿತ್ರ್ಯಕ್ಕೆ ಧಕ್ಕೆ ತರಬೇಡಿ .. ಕರಾವಳಿ ಕಂಬಳವು ತನ್ನದೇ ಆದ ಆಳವಾದ ಸಾಂಪ್ರದಾಯಿಕ…

2 days ago

ಮಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ಸೆಲಿನಾ ಟ್ರಾವೆಲ್ಸ್ ವಿರುದ್ಧ ಹರಿದಾಡಿದ ಕರಪತ್ರ : ಪೊಲೀಸ್ ಇಲಾಖೆ ಸ್ಪಷ್ಟನೆ – vishwanews24

ಮಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ಸೆಲಿನಾ ಟ್ರಾವೆಲ್ಸ್ ವಿರುದ್ಧ ಹರಿದಾಡಿದ ಕರಪತ್ರ : ಪೊಲೀಸ್ ಇಲಾಖೆ ಸ್ಪಷ್ಟನೆ ಮಂಗಳೂರು: ಖಾಸಗಿ ಸಾರಿಗೆ ಸಂಸ್ಥೆಯಾದ…

2 days ago