Featured

ಉಡುಪಿ : ಬಿಜೆಪಿ ನಾಯಕರು ಪ್ರಸಾದ್ ರಾಜ್ ಕಾಂಚನ್ ಗೆ ದೊರಕುತ್ತಿರುವ ಅಭೂತಪೂರ್ವ ಜನ ಬೆಂಬಲ ಕಂಡು ಕಂಗಲಾಗಿದ್ದಾರೆ : ರಮೇಶ್ ಕಾಂಚನ್ – Vishwanews24

ಕಾಂಚನ್ ಕುಲ ನಾಮ ತಿರುಚಿ ಸಮಾಜಕ್ಕೆ ಬಿಜೆಪಿ ಬೆಂಬಲಿಗರಿಂದ ಸಮಾಜಕ್ಕೆ  ತಪ್ಪು ಸಂದೇಶ : ರಮೇಶ್ ಕಾಂಚನ್

ಉಡುಪಿ: ಕಾಂಚನ್ ಎನ್ನುವುದು ಕರಾವಳಿ ತಡಿಯ ಉಡುಪಿಯ ಶ್ರಮ ಜೀವಿಗಳಾದ ಮೊಗವೀರ ಸಮುದಾಯದ ಹೆಮ್ಮೆಯ ಕುಲನಾಮ. ಇಲ್ಲಿ ಕಾಂಚನ್ ಮೂಲ ಸ್ಥಾನ ಕೂಡ ಹೊಂದಿದೆ. ಆದರೆ ನಮ್ಮ ಕುಲನಾಮವನ್ನು ಉಡುಪಿ ಬಿಜೆಪಿಯ ಬೆಂಬಲಿಗರು ಸೋಷಿಯಲ್ ಮೀಡಿಯಾದಲ್ಲಿ ವಿಕಾರವಾಗಿ ತಿರುಚಿ ಇಡೀ ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತಿದ್ದಾರೆ ದಯವಿಟ್ಟು ಸಮಾಜ ಭಾಂಧವರು ವಿಚಲಿತರಾಗದೇ ಶಾಂತಿಯುತ ವಾಗಿ ಇರಬೇಕೆಂದು ಇಡೀ ಸಮಾಜದ ಪರವಾಗಿ ರಮೇಶ್ ಕಾಂಚನ್ ರವರು ವಿನಂತಿಸಿ ಕೊಂಡಿದ್ದಾರೆ.

ಕೈ ಲಾಗದವರ ಕೊನೆಯ ಅಸ್ತ್ರ ಅಪಪ್ರಚಾರ. ಗೆಲ್ಲುವ ಅಮಲಿನಲ್ಲಿದ್ದ ಬಿಜೆಪಿ ನಾಯಕರು ಪ್ರಸಾದ್ ರಾಜ್ ಕಾಂಚನ್ ಗೆ ದೊರಕುತ್ತಾ ಇರುವ ಅಭೂತಪೂರ್ವ ಜನ ಬೆಂಬಲ ಕಂಡು ಕಂಗಲಾಗಿದ್ದಾರೆ. ಯಾರನ್ನೂ ಟೀಕಿಸದೇ, ಕೇವಲ ಉಡುಪಿಯ ಪ್ರಗತಿ ಬಗ್ಗೆ ಮಾತಡುತ್ತಾ, ತನ್ನಲ್ಲಿದ್ದ ದೂರದೃಷ್ಟಿತ್ವ ಯೋಜನೆಗಳಿಂದ ಜನರನ್ನು ಪ್ರಸಾದ್ ಆಕರ್ಷಣೆ ಮಾಡುವದನ್ನು ಕಂಡ ಬಿಜೆಪಿಯ ಬುಡಕ್ಕೆ ಬೆಂಕಿ ಬಿದ್ದಿದೆ.

ಮೊನ್ನೆ ಮೊನ್ನೆವರೆಗೂ ದುರ್ಬಲ ಅಭ್ಯರ್ಥಿ ಎನ್ನುತ್ತಿದ್ದವರು ಇದೀಗ ಪ್ರಸಾದ್ ರಾಜ್ ಕಾಂಚನ್ ವಿರುದ್ದ ಬೇರೆ ಬೇರೆ ರೀತಿಯಲ್ಲಿ ನಾಲಿಗೆ ಹರಿ ಬಿಡಲು ಶುರು ಮಾಡಿದ್ದಾರೆ. ಇದೀಗ ಪ್ರಸಾದ್ ರಾಜ್ ಕಾಂಚನ್ ರ ಫೋಟೋಗಳನ್ನು ತಿರುಚಿ ಫೋಟೊಗಳನ್ನು ಎಡಿಟ್ ಮಾಡೋಕೆ ಶುರು ಮಾಡಿ, ಸಾಮಾಜಿಕ ಜಾಲತಾಣ ದಲ್ಲಿ ಹಂಚಿ ಕೊಳ್ಳುತ್ತಿರುವುದನ್ನು ರಮೇಶ್ ರವರು ಕಟುವಾಗಿ ಖಂಡಿಸಿದ್ದಾರೆ

ಸರ್ವ ಧರ್ಮಗಳನ್ನು ಗೌರವಿಸುವ ಪ್ರಸಾದ್ ಕಾಂಚನ್ ಯಾರೊಬ್ಬರನ್ನು ನೋವಿಸಿಲ್ಲ ,ಯಾರ ಕುರಿತೂ ಟೀಕೆಯನ್ನೂ ಮಾಡಿಲ್ಲ.ಆದರೆ ಪ್ರಸಾದ್ ರಾಜ್ ಕಾಂಚನ್ ರನ್ನು, ಅವರ ಕುಲ ನಾಮ ವನ್ನು, ಸಮುದಾಯವನ್ನು ತೇಜೋವಧೆ ಮಾಡಲು ಮುಂದಾಗಿದ್ದಾರೆ. ಬಿಜೆಪಿಯ ಹತಾಶ ಮನೊಸ್ಥಿತಿಯಿಂದ ಇಡೀ ಕಾಂಚನ್ ಸಮುದಾಯವನ್ನೇ ಅವಮಾನ ಮಾಡಿರುವುದು ನೋವಿನ ಸಂಗತಿಯಾಗಿದೆ.

ಮೊಗವೀರ ಕುಟುಂಬದ ಕಾಂಚನ್ ಮೂಲ ಕುಟುಂಬದ ಪ್ರಸಾದ್ ರ ಫೊಟೊ ತಿರುಚಿದ್ದು ಇಡೀ ಮೊಗವೀರ ಸಮುದಾಯಕ್ಕೆ ಅವಮಾನವಾಗಿದೆ. ಉಚ್ಚಿಲ ಮಹಾಲಕ್ಷ್ಮೀ ದೇವಾಲಯದ ಅಭಿವೃದ್ದಿ ಸಮಿತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ತೆಂಕ ಬಡಾನಿಡಿಯೂರು ದೇವಾಲಯದ ನಿರ್ಮಾಣದ ಉಸ್ತುವಾರಿ ಮಾಡಿದ್ದ ಕಾಂಚನ್ ಒರ್ವ ಹನುಮ ಭಕ್ತ, ಮುಖ್ಯಪ್ರಾಣ ದೇವರ ಅರಾಧಕ.

ಒಬ್ಬ ಸಜ್ಜನ ಮೊಗವೀರ ಸಮುದಾಯದ ವ್ಯಕ್ತಿ. ರಾಜಕೀಯವಾಗಿ ಟೀಕೆಗಳನ್ನು ಸಹಿಸಿಕೊಳ್ಳಬಹುದು ಅದ್ರೆ ಮೋಗವೀರ ಸಮುದಾಯ ಕಾಂಚನ್ ಪದವನ್ನು ಅವಮಾನಿಸುವ ಮೂಲಕ ಮೋಗವೀರರ ಮನ ನೋವಿಸುವ ಕೆಲಸಕ್ಕೆ ಕೈ ಹಾಕಿದ್ದಕ್ಕೆ ಬಿಜೆಪಿ ಭಾರೀ ಬೆಲೆ ತೆರಬೇಕಾಗಿ ಬರಬಹುದು ಎಂಬ ಎಚ್ಚರಿಕೆಯನ್ನು ರಮೇಶ್ ಕಾಂಚನ್ ನೀಡಿದ್ದಾರೆ.

Vishwa News 24

Recent Posts

ದುರಸ್ತಿ ಕಾಮಗಾರಿ: ಅ.7ರಂದು ಹಂದಾಡಿ ರೈಲ್ವೆ ಗೇಟ್ ಬಂದ್ -vishwanews24

ದುರಸ್ತಿ ಕಾಮಗಾರಿ: ಅ.7ರಂದು ಹಂದಾಡಿ ರೈಲ್ವೆ ಗೇಟ್ ಬಂದ್ ಕುಂದಾಪುರ : ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್‌ನಲ್ಲಿ ಅಗತ್ಯ ದುರಸ್ತಿ…

4 hours ago

ಕಾರ್ಕಳ: ಜನವಿರೋಧಿ ನೀತಿ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ – vishwanews24

ಕಾರ್ಕಳ: ಜನವಿರೋಧಿ ನೀತಿ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ…

13 hours ago

ಎಂಆರ್‌ಪಿಎಲ್ ದುರಂತ:  ಮೃತರ ಕುಟುಂಬಕ್ಕೆ ₹1.20 ಕೋಟಿ ಪರಿಹಾರ : ಸಂಸದ ಕ್ಯಾ. ಬ್ರಿಜೇಶ್ ಚೌಟ – vishwanews24

ಎಂಆರ್‌ಪಿಎಲ್ ದುರಂತ:  ಮೃತರ ಕುಟುಂಬಕ್ಕೆ ₹1.20 ಕೋಟಿ ಪರಿಹಾರ, ಸದಸ್ಯರೊಬ್ಬರಿಗೆ ಉದ್ಯೋಗ : ಸಂಸದ ಕ್ಯಾ. ಬ್ರಿಜೇಶ್ ಚೌಟ ಮಂಗಳೂರು:…

13 hours ago

ಉಡುಪಿ: ಜೈಲು ವಾರ್ಡನ್‌ಗೆ ಕೊಲೆ ಬೆದರಿಕೆ, ಹಲ್ಲೆ ಪ್ರಕರಣ :ಆರೋಪಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ – vishwanews24

ಉಡುಪಿ: ಜೈಲು ವಾರ್ಡನ್‌ಗೆ ಕೊಲೆ ಬೆದರಿಕೆ, ಹಲ್ಲೆ ಪ್ರಕರಣ :ಆರೋಪಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ ಉಡುಪಿ: ಸುಮಾರು…

13 hours ago

ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿದು ಪ್ರಯಾಣಿಕ ಸಾವು – vishwanews24

ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿದು ಪ್ರಯಾಣಿಕ ಸಾವು ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿದು ಪ್ರಯಾಣಿಕರೊಬ್ಬರು ಮೃತಪಟ್ಟ ಘಟನೆ ಸೋಮವಾರ ಬೆಳಗ್ಗೆ…

13 hours ago

ದ. ಕ, ಉಡುಪಿಯಲ್ಲಿ ಅ. 11 ರವರೆಗೆ ಮಳೆಯಾಗುವ ನಿರೀಕ್ಷೆ:  ಹವಾಮಾನ ಇಲಾಖೆ ಮುನ್ಸೂಚನೆ – vishwanews24

ದ. ಕ, ಉಡುಪಿಯಲ್ಲಿ ಅ. 11 ರವರೆಗೆ ಮಳೆಯಾಗುವ ನಿರೀಕ್ಷೆ:  ಹವಾಮಾನ ಇಲಾಖೆ ಮುನ್ಸೂಚನೆ ಮಂಗಳೂರು/ಉಡುಪಿ:  ದಕ್ಷಿಣ ಕನ್ನಡ (ದ.ಕ)…

13 hours ago