ಉಡುಪಿ: ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳ ಘೋಷಣೆಯ ಮೂಲಕ ಅಧಿಕಾರಕ್ಕೆ ಬಂದು ತಾನು ಘೋಷಿಸಿದ 5 ಗ್ಯಾರಂಟಿಗಳು ಕೂಡ ಸಂಪೂರ್ಣವಾಗಿ ವಿಫಲವಾಗಿ ರಾಜ್ಯ ಜನತೆ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.ಮನೆಯ ಯಜಮಾನಿಗೆ ಪ್ರತಿ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ ಬಾರದ ನಾಲ್ಕು ತಿಂಗಳಾಗಿದೆ. ಅನ್ನಭಾಗ್ಯದ ಅಕ್ಕಿಯು ಇಲ್ಲ, ಅದರ ಹಣವು ಪಾವತಿ ಆಗಿಲ್ಲ. ಗೃಹ ಜ್ಯೋತಿ ಭಾಗ್ಯವು ನೆನೆಗುದಿಗೆ ಬಿದ್ದಿದ್ದು ವಿದ್ಯುತ್ ಬಿಲ್ ಏರಿಕೆಯಿಂದ ರಾಜ್ಯದ ಜನರಿಗೆ ಶಾಕ್ ನೀಡಿದೆ.ಯುವ ನಿಧಿಯ ಯೋಜನೆ ಹಳ್ಳ ಹಿಡಿದಿದೆ.ಈ ಎಲ್ಲ ಯೋಜನೆಯನ್ನು ರಾಜ್ಯ ಜನತೆ ತಾವಾಗಿ ಸರ್ಕಾರವನ್ನು ಕೇಳಿದ್ದಲ್ಲ. ಸರ್ಕಾರವೇ ಅವೈಜ್ಞಾನಿಕವಾಗಿ ಘೋಷಣೆ ಮಾಡಿ ಇದೀಗ ರಾಜ್ಯ ಜನತೆಗೆ ಮೋಸ ಮಾಡಿದೆ. ಎಂದು ಉಡುಪಿ ಶಾಸಕ ಯಶ್ನಾಲ್ ಸುವರ್ಣ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ರಾಜ್ಯದ ಸಣ್ಣ ರೈತರು ಕೂಲಿ ಕಾರ್ಮಿಕರು ಮತ್ತು ಕಡುಬಡವರ ಬಿ.ಪಿ.ಎಲ್. ಕಾರ್ಡ್ ಅನ್ನು ರದ್ದುಗೊಳಿಸುವ ಸರ್ಕಾರದ ಆರನೇ ಗ್ಯಾರಂಟಿಯ ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸುವ ಹಂತದಲ್ಲಿದೆ .ಇದಕ್ಕೆ ಪೂರಕವಾಗಿ ಸರ್ಕಾರ ಪ್ರತಿ ಗ್ರಾಮದ 400 ಕ್ಕಿಂತಲೂ ಹೆಚ್ಚು ಕುಟುಂಬಗಳ ಬಿ.ಪಿ.ಎಲ್. ಕಾರ್ಡುಗಳ ಪಟ್ಟಿಯನ್ನು ಪರಿಶೀಲನೆಗೆ ಸ್ಥಳೀಯ ರೇಷನ್ ಅಂಗಡಿಗೆ ಕಳಿಸಿದ್ದು ಈ ಪ್ರಕ್ರಿಯೆ ಹಿಂದೆ ಬಡ ಜನರ ಬಿ.ಪಿ.ಎಲ್. ಕಾರ್ಡ್ ರದ್ದಾಗುವ ಭೀತಿ ಎದುರಾಗಿದೆ.
ಯಾವುದೇ ಸಮೀಕ್ಷೆ ನಡೆಸದೆ ಗ್ಯಾರಂಟಿ ಯೋಜನೆಯನ್ನು ನೀಡಲು ಕಷ್ಟವಾಗುತ್ತದೆ ಎಂಬ ಒಂದೇ ಕಾರಣಕ್ಕೆ ಬಿ.ಪಿ.ಎಲ್. ಕಾರ್ಡ್ ರದ್ದುಪಡಿಸಿದರೆ ಬಿಜೆಪಿ ಜನಪತಿನಿಧಿಗಳು ಮತ್ತು ಸೌಲಭ್ಯ ವಂಚಿತ ಫಲಾನುಭವಿಗಳೊಂದಿಗೆ ಉಗ್ರ ಪ್ರತಿಭಟನೆ ಮಾಡಿ ಬಡವರಿಗೆ ನ್ಯಾಯಕೊಡಲು ಸಿದ್ಧ. ಸರ್ಕಾರ ಏಕಾಏಕಿ ಬಿ.ಪಿ.ಎಲ್. ಕಾರ್ಡ್ ರದ್ದು ಪಡಿಸಿದರೆ ಬಿಜೆಪಿ ರಾಜ್ಯ ವ್ಯಾಪಿ ಹೋರಾಟ ನಡೆಸಲಿದೆ ಎಂದು ಶಾಸಕ ಯಶ್‌ಪಾಲ್ ಎ. ಸುವರ್ಣ ಸರ್ಕಾರವನ್ನು ಎಚ್ಚರಿಸಿದ್ದಾರೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…