Featured

ಉಡುಪಿ : ಬುಡಕಟ್ಟು ಜನಾಂಗದವರು ಒಗ್ಗಟ್ಟಿನಲ್ಲಿದ್ದರೆ ಯಶಸ್ಸು : ದಿನಕರ ಬಾಬು -Vishwanews24

ಉಡುಪಿ :ಬುಡಕಟ್ಟು ಜನಾಂಗದವರು ಒಗ್ಗಟ್ಟಿನಲ್ಲಿದ್ದರೆ ಯಶಸ್ಸು : ದಿನಕರ ಬಾಬು -Vishwanews24

ಉಡುಪಿ : ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ನಡೆಯುತ್ತಿರುವ ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಮಟ್ಟದ ಕೊರಗ ಕ್ರೀಡೋತ್ಸವವು ಬುಡಕಟ್ಟು ಜನಾಂಗಗಳನ್ನು ಮುಖ್ಯವಾಹಿನಿಗೆ ತರುವ ಮುಖ್ಯ ಉದ್ಧೇಶವಾಗಿದೆ. ಯಾವುದೇ ಯಶಸ್ಸನ್ನು ಸಾಧಿಸಬೇಕಾದರೆ ಬುಡಕಟ್ಟು ಜನಾಂಗದವರು ಒಗ್ಗಟ್ಟಿನಿಂದ ಇರಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರ ದಿನಕರ ಬಾಬು ಹೇಳಿದ್ದಾರೆ.

ಅವರು, ಎಂಜಿ ಎಂ ಕಾಲೇಜು ಮೈದಾನದಲ್ಲಿ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಉಡುಪಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಕೊರಗ ಸಂಘಟನೆ ಇವರ ಸಂಯುಕ್ತ ಆಶ್ರಯದಲ್ಲಿ, ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಮಟ್ಟದ ಮೂರು ದಿನದ ಕೊರಗ ಕ್ರೀಡೋತ್ಸವ ಮತ್ತು ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದ ಪ್ರಥಮ ದಿನದ ಕ್ರಿಕೆಟ್ ಪಂದ್ಯಗಳ ಆರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ಕೊರಗ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಯಾವಾಗಲು ಸಿದ್ದವಾಗಿದೆ. ಈ ಸಮುದಾಯದ ಯುವಕರು ಉತ್ಸಾಹವನ್ನು ತೊರಿಸಬೇಕು. ಕ್ರೀಡೆಯಲ್ಲಿ ಉತ್ಸಾಹದಿಂದ ಭಾಗವಹಿಸುವ ರೀತಿಯಲ್ಲಿಯೇ, ಉತ್ತಮವಾದ ಸಮಾಜ ಕಟ್ಟುವ ಕಾರ್ಯಗಳಲ್ಲಿ ಭಾಗವಹಿಸಬೇಕು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು.

ಇಲ್ಲಿ ನಡೆಯುತ್ತಿರುವ ಕ್ರೀಡೋತ್ಸವದಲ್ಲಿ ಉತ್ತಮ ಸಾಧನೆ ತೋರುವ ಯುವ ಕ್ರೀಡಾಪಟುಗಳನ್ನು ಆಯ್ಕೆ ಮಾಡಿ, ಅವರಿಗೆ ಉತ್ತಮ ತರಬೇತಿಯನ್ನು ನೀಡಿ, ರಾಜ್ಯ ಮತ್ತು ರಾಷ್ಟçಮಟ್ಟದಲ್ಲಿ ಭಾಗವಹಿಸಲು ಬೇಕಾಗುವ ಹಣದ ಸಹಾಯವನ್ನು ಸರ್ಕಾರದಿಂದ ಅಥವಾ ಐ.ಟಿ.ಡಿ.ಪಿ. ಇಲಾಖೆ ವತಿಯಿಂದ ನೀಡಲಾಗುವುದು ಎಂದು ಡಿಸಿ ಹೇಳಿದರು.

ಉಡುಪಿ : ಹೆಚ್ಚಿನ ಸಂಖ್ಯೆಯಲ್ಲಿ ಯುವ ಮತದಾರರನ್ನು ನೊಂದಣಿ ಮಾಡಿ : ಶಂಭುಭಟ್ -Vishwanews24

ಕೊರಗ ಸಮುದಾಯದವರಲ್ಲಿ ಅಭಿವೃದ್ಧಿಯಾಗುವ ಛಲ ಕಂಡುಬರುತ್ತಿದೆ. ಕ್ರೀಡೆಯ ಜೊತೆಗೆ ತಮ್ಮ ಸಾಂಸ್ಕೃತಿಕ ಕಲೆಗಳನ್ನು ಉಳಿಸಿ ಬೆಳೆಸಬೇಕು. ಸಮಾಜದಲ್ಲಿ ಹಿಂದುಳಿದವರನ್ನು ಮುಖ್ಯವಾಹಿನಿಗೆ ಕರೆದುಕೊಂಡು ಬರಬೇಕು ಎಂದು ಉಡುಪಿ ನಗರ ಸಭೆಯ ಅಧ್ಯಕ್ಷೆ ಸುಮಿತ್ರ ನಾಯಕ್ ಹೇಳಿದರು
ಪ್ರಾಸ್ತಾವಿಕವಾಗಿ ಮಾತನಾಡಿದ ಸಮುದಾಯದ ಬಾಬು ಪಾಂಗಳ, ಕೊರಗ ಕ್ರೀಡೋತ್ಸವ ಮತ್ತು ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದ ಮುಖ್ಯ ಉದ್ದೇಶ ಕೊರಗ ಸಮುದಾಯದ ಯುವಕರನ್ನು ಮುಖ್ಯ ವಾಹಿನಿಗೆ ತರುವುದು ಮತ್ತು ಅವರನ್ನು ಅಭಿವೃದ್ಧಿಶೀಲರನ್ನಾಗಿ ಮಾಡುವುದು. ಸಮುದಾಯದವರು ಕಾಲಹರಣ ಮಾಡದೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ರಕ್ತದಾನದಂತಹ ಶಿಬಿರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಯುವಕರು ಕೇವಲ ಕ್ರೀಡೆಗಳಿಗೆ ಸೀಮಿತರಾಗದೆ ಬಹುಮುಖ ಪ್ರತಿಭೆಗಳಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ, ಕೊರಗ ಸಮುದಾಯದ ಮುಖ್ಯಸ್ಥ ಗಣೇಶ್ ಕುಂದಾಪುರ ಮತ್ತಿತರರು ಉಪಸ್ಥಿತರಿದ್ದರು. ರಾಜ್‌ಶೇಖರ್ ಉಡುಪಿ ನಿರೂಪಿಸಿ, ವಂದಿಸಿದರು.

Vishwa News 24

Recent Posts

ಕಾರ್ಕಳ: ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ – vishwanews24

ಕಾರ್ಕಳ:   ಎಣ್ಣೆಹೊಳೆ ಸೇತುವೆಯ ಕೆಳಭಾಗದ ನದಿಯಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ ಕಾರ್ಕಳ: ಮರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಣ್ಣೆಹೊಳೆ…

5 hours ago

ಕಾರ್ಕಳ:  ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ – vishwanews24

ಕಾರ್ಕಳ:  ನಾಪತ್ತೆಯಾಗಿದ್ದ ಎಣ್ಣೆಹೊಳೆ ಸೇತುವೆಯ ಕೆಳಭಾಗದ ನದಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ ಕಾರ್ಕಳ: ಮರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಣ್ಣೆಹೊಳೆ…

5 hours ago

ಕಿರುಕುಳ ಆರೋಪ : ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ – vishwanews24

ಕಿರುಕುಳ ಆರೋಪ : ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಬಳ್ಳಾರಿ: ಗಂಡನ ಕಿರುಕುಳ ತಾಳಲಾರದೆ ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು…

6 hours ago

ಮಂಗಳೂರಿನಿಂದ ಅಗತ್ತಿ ದ್ವೀಪಕ್ಕೆ ವಿಮಾನಯಾನ ಸೇವೆ : ನೂತನ ಚಳಿಗಾಲದ ವೇಳಾಪಟ್ಟಿ ಪ್ರಕಟ – vishwanews24

ಮಂಗಳೂರಿನಿಂದ ಅಗತ್ತಿ ದ್ವೀಪಕ್ಕೆ ವಿಮಾನಯಾನ ಸೇವೆ ;ನೂತನ 'ಚಳಿಗಾಲದ ವೇಳಾಪಟ್ಟಿ ಪ್ರಕಟ ಮಂಗಳೂರು : ಕರಾವಳಿಯ ಪ್ರಯಾಣಿಕರಿಗೆ ದೇಶೀಯ ಹಾಗೂ…

6 hours ago

ಕಾಂಗ್ರೆಸ್ ಸೇರ್ಪಡೆ ಕುರಿತು ಅಂತಿಮ ನಿರ್ಧಾರ ಕೈಗೊಂಡಿಲ್ಲ : ರಘುಪತಿ ಭಟ್ – vishwanews24

ಕಾಂಗ್ರೆಸ್‌ನಿಂದ ಆಹ್ವಾನ ಬಂದಿರುವುದು ನಿಜ  .. ಪಕ್ಷ ಬದಲಾವಣೆಯಂತಹ ನಿರ್ಧಾರವನ್ನು ಏಕಾಏಕಿ ತೆಗೆದುಕೊಳ್ಳಲು ಸಾಧ್ಯವಿಲ್ಲ .. 2028ರ ವಿಧಾನಸಭಾ ಚುನಾವಣೆಯಲ್ಲಿ…

10 hours ago

ಉಡುಪಿ: ಕಾಮಗಾರಿ ಹಿನ್ನೆಲೆ ; ಸಂಚಾರಕ್ಕೆ ಬದಲಿ ಮಾರ್ಗ – vishwanews24

ಉಡುಪಿ:  ಕಾಮಗಾರಿ ಹಿನ್ನೆಲೆ ಸಂಚಾರಕ್ಕೆ ಬದಲಿ ಮಾರ್ಗ    ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ತೆಂಕಪೇಟೆ ವಾರ್ಡಿನ ಬಡಗುಪೇಟೆ ರಸ್ತೆಯಲ್ಲಿ ಒಳಚರಂಡಿ…

10 hours ago