Featured

ಉಡುಪಿ: ಬೆಲೆ ಏರಿಕೆಯಿಂದ ತತ್ತರಿಸಿದ ಮಹಿಳೆಯರಿಗೆ ಪ್ರಿಯಾಂಕ ಗಾಂಧಿ ಘೋಷಿಸಿದ ಗೃಹಲಕ್ಷ್ಮೀ ಯೋಜನೆ ವರದಾನ : ವೆರೋನಿಕಾ ಕರ್ನೆಲಿಯೋ – Vishwanews24

ಉಡುಪಿ: ಬೆಲೆ ಏರಿಕೆಯಿಂದ ತತ್ತರಿಸಿದ ಮಹಿಳೆಯರಿಗೆ ಪ್ರಿಯಾಂಕ ಗಾಂಧಿ ಘೋಷಿಸಿದ ಗೃಹಲಕ್ಷ್ಮೀ ಯೋಜನೆ ವರದಾನ : ವೆರೋನಿಕಾ ಕರ್ನೆಲಿಯೋ

ಉಡುಪಿ: ಬಿಜೆಪಿ ಸರಕಾರದ ಬೆಲೆ ಏರಿಕೆಯಿಂದ ಸಂಕಷ್ಠದಲ್ಲಿರುವ ಮಹಿಳೆಯರಿಗೆ ಪ್ರಿಯಾಂಕ ಗಾಂಧಿಯವರು ಕರ್ನಾಟಕದಲ್ಲಿ ಘೋಷಿಸಿದ ಗೃಹಲಕ್ಷ್ಮೀ ಯೋಜನೆ ವರದಾನವಾಗಲಿದೆ ಎಂದು ಕೆಪಿಸಿಸಿ ವಕ್ತಾರರಾದ ವೆರೋನಿಕಾ ಕರ್ನೆಲಿಯೋ ಅಭಿಪ್ರಾಯ ಪಟ್ಟಿದ್ದಾರೆ.

ಪ್ರಿಯಾಂಕ ಗಾಂಧಿಯವರು ಕರ್ನಾಟಕದಲ್ಲಿ ಘೋಷಿಸಿದ ಗ್ರಹಲಕ್ಷ್ಮಿ ಯೋಜನೆಯನ್ನು ಮಹಿಳಾ ವರ್ಗ ತುಂಬಾ ಸಂತೋಷದಿಂದ ಸ್ವಾಗತಿಸುತ್ತೇವೆ . ಬಿಜೆಪಿ ಸರ್ಕಾರದ ಆಡಳಿತದಿಂದ ಜನರ ಜನಜೀವನ ತೀರ ಸಂಕಷ್ಟದಲ್ಲಿದೆ. ದಿನನಿತ್ಯದ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೆ ತಲುಪುತ್ತಿದೆ. ಗ್ಯಾಸ್ ಸಿಲಿಂಡರ್ ನ ಬೆಲೆ ಗಗನಕ್ಕೆ ಏರಿದೆ. ನಮ್ಮ ಯುವಕ ಯುವತಿಯರು ಯಾವುದೇ ಉದ್ಯೋಗಗಳು ದೊರಕದೆ ನಿರುದ್ಯೋಗಿಗಳಾಗಿದ್ದಾರೆ. ನೋಟ್ ಬ್ಯಾನ್ ಜಿ ಎಸ್‌ಟಿ ಇಂತಹ ಅನೇಕ ಜನವಿರೋಧಿ ಕಾರ್ಯಕ್ರಮಗಳ ಮೂಲಕ ಜನರ ಬಡಸ್ತಿಕೆ ದಿನದಿಂದ ದಿನಕ್ಕೆ ಏರುತ್ತಾ ಇದೆ. ಇಂತಹ ಸಂಕಷ್ಟದ ಕಾಲಘಟ್ಟದಲ್ಲಿ ಕುಟುಂಬವನ್ನು ನಡೆಸುವುದು ಎಲ್ಲರಿಗೂ ಕಷ್ಟಕರವಾದ ಒಂದು ಪರಿಸ್ಥಿತಿ ನಿರ್ಮಾಣವಾಗಿದೆ . ಈ ಹಿನ್ನೆಲೆಯಲ್ಲಿ ಪ್ರಿಯಾಂಕ ಗಾಂಧಿಯವರು ಪ್ರತಿ ಮನೆಯ ಮಹಿಳಾ ಯಜಮಾನಿಗೆ ಮಾಸಿಕ 2,000 ಗ್ರಹಲಕ್ಷ್ಮಿ ಯೋಜನೆಯನ್ನು ನಾ ನಾಯಕಿ ಕಾರ್ಯಕ್ರಮದಲ್ಲಿ ಘೋಷಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ಕರ್ನಾಟಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಲ್ಲಿ ಈ ಯೋಜನೆ ಕಾರ್ಯಗೊಳ್ಳಲಿದೆ . ಇದರ ಜೊತೆ ನಮ್ಮೆಲ್ಲರ ನಾಯಕರಾದ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯರವರು ಮತ್ತು ಕಾಂಗ್ರೆಸಿನ ಎಲ್ಲ ನಾಯಕರು ಜೊತೆ ಸೇರಿಕೊಂಡು ಪ್ರತಿ ಕುಟುಂಬಕ್ಕೆ 200 ಯುನಿಟ್ ವಿದ್ಯುತ್ ಉಚಿತ ಕೊಡುವಂತಹ ಒಂದು ಮಹತ್ತರವಾದ ಯೋಜನೆಯನ್ನು ಕೂಡ ರೂಪಿಸಿದ್ದಾರೆ. ಈ ಎರಡು ಯೋಜನೆಗಳು ನಮ್ಮ ರಾಜ್ಯದ ಪ್ರತಿಯೊಂದು ಕುಟುಂಬಕ್ಕೂ ತುಂಬಾ ಪ್ರಯೋಜನವಾಗಲಿವೆ.

ಈ ಯೋಜನೆಯನ್ನು ಘೋಷಿಸಿದ ನಮ್ಮ ಪಕ್ಷದ ನಾಯಕರಿಗೆ ಹಾಗೂ ಪ್ರಿಯಾಂಕ ಗಾಂಧಿ ಅವರಿಗೆ ಸಮಸ್ತ ಜನತೆಯ ಪರವಾಗಿ ಕೃತಜ್ಞತೆಗಳು ಸಲ್ಲಿಸುತ್ತಿದ್ದೇನೆ. ಈ ಕಾರ್ಯಕ್ರಮಗಳು ಸಾಕಾರಗೊಳ್ಳಬೇಕಿದ್ದರೆ ನಾವೆಲ್ಲರೂ ಕೂಡ ಒಂದು ಶಕ್ತಿಯಾಗಿ ಕಾಂಗ್ರೆಸ್ ಸರಕಾರವನ್ನು ಅಧಿಕಾರಕ್ಕೆ ತರಬೇಕಾಗಿದೆ . ಈ ನಿಟ್ಟಿನಲ್ಲಿ ಮುಂದಿನ ಅವಧಿಗೆ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರುವ ಮೂಲಕ ಕಾಂಗ್ರೆಸ್ ಸರ್ಕಾರ ಜನರ ಸರ್ಕಾರ ಆಗಿ ರೂಪುಗೊಳ್ಳಲಿದೆ ಎಂಬುದಾಗಿ ಕರ್ನೆಲಿಯೊ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join our Whatsapp group by clicking the below link 👇👇

https://chat.whatsapp.com/KfUmhXQKZb114i4QHNvqEK

Vishwa News 24

Recent Posts

ಕಾಪು: ಸೆ.9ರಂದು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ 8ನೇ ಶಾಖೆ ಉದ್ಘಾಟನೆ – vishwanews24

ಕಾಪು: ಸೆ.9ರಂದು  ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ 8ನೇ ಶಾಖೆ ಉದ್ಘಾಟನೆ ಕಾಪು: ಪೆರ್ಡೂರು ಕೇಂದ್ರ ಕಚೇರಿಯನ್ನು ಹೊಂದಿರುವ…

8 hours ago

ಜೈಲಿನಲ್ಲಿ ಮೊಬೈಲ್ ಬಳಕೆ ಆರೋಪ : 2 ದಿನ ಪೊಲೀಸ್‌ ಕಸ್ಟಡಿಗೆ ಪ್ರಜ್ವಲ್‌ ರೇವಣ್ಣ – vishwanews24

ಜೈಲಿನಲ್ಲಿ ಮೊಬೈಲ್ ಬಳಕೆ ಆರೋಪ : 2 ದಿನ ಪೊಲೀಸ್‌ ಕಸ್ಟಡಿಗೆ ಪ್ರಜ್ವಲ್‌ ರೇವಣ್ಣ ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ…

9 hours ago

ಮಕ್ಕಳ ಕೈಯಲ್ಲಿ ಕೆಲಸ ಮಾಡಿಸಿದ್ರೆ ತಕ್ಷಣ ಅರೆಸ್ಟ್ ಮಾಡಿ : ಅಧಿಕಾರಿಗಳಿಗೆ ಸಿಎಂ ಖಡಕ್ ಆದೇಶ – vishwanews24

ಮಕ್ಕಳ ಕೈಯಲ್ಲಿ ಕೆಲಸ ಮಾಡಿಸಿದ್ರೆ ತಕ್ಷಣ ಅರೆಸ್ಟ್ ಮಾಡಿ : ಅಧಿಕಾರಿಗಳಿಗೆ ಸಿಎಂ ಖಡಕ್ ಆದೇಶ ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.…

9 hours ago

ರೈತರ ವಿಮೆ ಹಣ ಬ್ಯಾಂಕಿಗೆ ಪಾವತಿ ಮಾಡದ ಸೊಸೈಟಿ ಕಾರ್ಯದರ್ಶಿ ವಜಾ: ಸಿಎಂ ಡಿ.ಕೆ.ಶಿ ಸೂಚನೆ – vishwanews24

ರೈತರ ವಿಮೆ ಹಣ ಬ್ಯಾಂಕಿಗೆ ಪಾವತಿ ಮಾಡದ ಸೊಸೈಟಿ ಕಾರ್ಯದರ್ಶಿ ವಜಾಗೊಳಿಸಲು ಸಿಎಂ ಸೂಚನೆ ಬೆಂಗಳೂರು: ಕಲಬುರಗಿ ಜೇವರ್ಗಿ ತಾಲ್ಲೂಕಿನ…

10 hours ago

ಉಡುಪಿ: ನವಜಾತ ಶಿಶು ಸಾವನ್ನಪ್ಪಿದ ಪ್ರಕರಣ ; ಕಠಿಣ ಕ್ರಮಕ್ಕೆ ಆಗ್ರಹ – vishwanews24

ಉಡುಪಿ: ನವಜಾತ ಶಿಶು ಸಾವನ್ನಪ್ಪಿದ ಪ್ರಕರಣ ; ಕಠಿಣ ಕ್ರಮಕ್ಕೆ CWC ಗೆ ಎಪಿಸಿಆರ್ ನಿಂದ ದೂರು ಉಡುಪಿ: ಉಡುಪಿ…

10 hours ago

ಒಂದು ವಾರದಲ್ಲಿ 3 ಕೋಟಿ ರೂ. ಮೌಲ್ಯದ ಆಹಾರ ವಸ್ತುಗಳು, ಎಕ್ಸ್​ಪೈರಿ ಔಷಧಗಳು ವಶಕ್ಕೆ: ಸಚಿವ ಯುಟಿ ಖಾದರ್ – vishwanews24

ಒಂದು ವಾರದಲ್ಲಿ 3 ಕೋಟಿ ರೂ. ಮೌಲ್ಯದ ಆಹಾರ ವಸ್ತುಗಳು, ಎಕ್ಸ್​ಪೈರಿ ಔಷಧಗಳು ವಶಕ್ಕೆ.. ಕರ್ನಾಟಕ ಸರ್ಕಾರವು ಸಾರ್ವಜನಿಕರ ಆರೋಗ್ಯ…

11 hours ago