ಉಡುಪಿ

ಉಡುಪಿ, ಬೈಂದೂರಿನಲ್ಲಿ ಬೆಟ್ಟಿಂಗ್ ಹವಾ : ಕೃಷ್ಣನಗರಿಯಲ್ಲಿ ಗೆಲುವು ಯಾರಿಗೆ ??

ಉಡುಪಿ, : ಸಾಮಾನ್ಯವಾಗಿ ಬೇಸಿಗೆ ರಜೆ ಬಂತು ಅಂದ್ರೆ ಐಪಿಎಲ್ ಬೆಟ್ಟಿಂಗ್ ಶುರುವಾಗುತ್ತೆ. ಆದ್ರೆ ಈ ಬಾರಿ ಐಪಿಎಲ್ ಜೊತೆಗೆ ವಿಧಾನಸಭೆ ಚುನಾವಣೆಯೂ ಬಂದಿದೆ. ಫಲಿತಾಂಶಕ್ಕೆ ಕ್ಷಣಗಣನೆ ಪ್ರಾರಂಭಗೊಂಡಿದ್ದು , ಅಭ್ಯರ್ಥಿಗಳ ಎದೆ ಢವಢವ ಅಂತಿದೆ. ಇನ್ನೊಂದೆಡೆ ,ಕಾರ್ಯಕರ್ತರು ತಮ್ಮ ಫೇವರಿಟ್ ಅಭ್ಯರ್ಥಿಯ ಪರ ಬೆಟ್ಟಿಂಗ್ ಕಟ್ಟುತ್ತಿದ್ದಾರೆ. ಉಡುಪಿ ಜಿಲ್ಲೆಯ ಮಟ್ಟಿಗೆ ಹೇಳೋದಾದ್ರೆ ,ಉಡುಪಿ ವಿಧಾನಸಭೆ ಕ್ಷೇತ್ರ ಮತ್ತು ಬೈಂದೂರು ವಿಧಾನಸಭೆ ಕ್ಷೇತ್ರ ಬೆಟ್ಟಿಂಗ್ ವಿಷಯದಲ್ಲಿ ಮುಂಚೂಣಿಯಲ್ಲಿದೆ.

ಪ್ರಮೋದ್ ಮಧ್ವರಾಜ್ ಗೆ ವರ್ಚಸ್ಸಿಲ್ಲ : ಉಡುಪಿ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿರುವುದು ಸಚಿವ ಪ್ರಮೋದ್ ಮದ್ವರಾಜ್. ರಾಜ್ಯದಲ್ಲೇ ಅತಿ ಹೆಚ್ಚು ಮತಗಳ ಲೀಡ್ ನಿಂದ ಗೆಲುವು ಸಾಧಿಸ್ತೇನೆ ಅಂತ ಹೇಳುತ್ತಿದ್ದ ಪ್ರಮೋದ್ ಮಧ್ವರಾಜ್ ವರ್ಚಸ್ಸು ಈಗ ಮೊದಲಿನಂತಿಲ್ಲ. ಚುನಾವಣೆ ತನಕ ಪ್ರಮೋದ್ ಪರ ಬೆಟ್ಟಿಂಗ್ ಮೌಲ್ಯ ತುಂಬ ಹೆಚ್ಚಿತ್ತು. ಆದ್ರೆ ಚುನಾವಣೆ ಮುಗಿದ ಬಳಿಕ ಪ್ರಮೋದ್ ಮೌಲ್ಯ ಕಡಿಮೆಯಾಗಿದೆ. ಬೆಟ್ಟಿಂಗ್ ಕಟ್ಟುವ ಜನ ಬಿಜೆಪಿ ಅಭ್ಯರ್ಥಿ ರಘುಪತಿ ಭಟ್ ಪರವೂ ಒಲವು ತೋರಿಸ್ತಿರೋದು ಉಡುಪಿ ಕ್ಷೇತ್ರದ ಲೇಟೆಸ್ಟ್ ಟ್ರೆಂಡ್.

ಕಳೆದ ಐದು ವರ್ಷದಲ್ಲಿ ಪ್ರಮೋದ್ ಮಧ್ವರಾಜ್ ಪರವಾಗಿಲ್ಲ ಎಂಬಷ್ಟು ಜನಸೇವೆ ಮಾಡಿದ್ದರೂ ಚುನಾವಣೆ ಹೊತ್ತಿಗೆ ಅಪ್ಪಳಿಸಿದ ಬಿಜೆಪಿ ಸೇರ್ಪಡೆ ವದಂತಿ ಸಚಿವರಿಗೆ ತುಸು ಹಿನ್ನಡೆ ತಂದು ಕೊಡುವ ಸಾಧ್ಯತೆಗಳಿವೆ. ಮುಖ್ಯವಾಗಿ ಅಲ್ಪಸಂಖ್ಯಾತ ಸಮುದಾಯದ ಮತದಾರರು ಪ್ರಮೋದ್ ಇಂದಲ್ಲ ನಾಳೆ ಕಾಂಗ್ರೆಸ್ ಗೆ ಕೈ ಕೊಡ್ತಾರೆ. ಹೀಗಾಗಿ ಅವರಿಗೆ ಮತ ಹಾಕೋದು ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎಂಬ ಮಾತುಗಳು ಕೇಳಿ ಬರ್ತಿವೆ. ಒಂದು ವೇಳೆ ಇದು ನಿಜವೇ ಆದ್ರೆ ಪ್ರಮೋದ್ ಗೆಲುವು ಪ್ರಯಾಸವಾಗಬಹುದು. ಹೀಗಾಗಿ ಪ್ರಮೋದ್ ಪರ ತೀವ್ರವಾಗಿ ಏರಿದ್ದ ಬೆಟ್ಟಿಂಗ್ ಮೌಲ್ಯ ಈಗ ಕುಸಿತ ಖಂಡಿದೆ.

ಮಲ್ಪೆಯಲ್ಲಿದ್ದಾರೆ ನಿರ್ಣಾಯಕ ಮತದಾರರು :
ಮುಖ್ಯವಾಗಿ ಉಡುಪಿ ಕ್ಷೇತ್ರದಲ್ಲಿ ನಿರ್ಣಾಯಕ ಮತದಾರರಿರುವುದು ಮಲ್ಪೆಯಲ್ಲಿ. ಮೀನುಗಾರ ಸಮುದಾಯ ಯಾವ ಕಡೆ ಹೊರಳುತ್ತದೋ ಆ ಪಕ್ಷ ಗೆಲ್ಲುತ್ತದೆ ಎಂಬುದು ಉಡುಪಿ ಕ್ಷೇತ್ರದ ನಂಬಿಕೆ. ಹೀಗಾಗಿ ಮಲ್ಪೆಯ ಬೆಟ್ಟಿಂಗ್ ವೀರರು ಪ್ರಮೋದ್ ಮಧ್ವರಾಜ್ ಮತ್ತು ರಘುಪತಿ ಭಟ್ ಇಬ್ಬರ ಪರವೂ ಬಾಜಿ ಕಟ್ಟುತ್ತಿದ್ದಾರೆ. ಈ ಇಬ್ಬರು ಅಭ್ಯರ್ಥಿಗಳ ಸದ್ಯದ ಬೆಟ್ಟಿಂಗ್ ಮೌಲ್ಯ 70:30 ಚುನಾವಣೆಗೆ ನಾಲ್ಕಾರು ತಿಂಗಳ ಮೊದಲು ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿಗೆ ಸೇರ್ಪಡೆಯಾಗ್ತಾರೆ ಎಂಬ ವದಂತಿ ಅಪ್ಪಳಿಸಿತ್ತು. ಬಳಿಕ ಸಚಿವರು ಇದರಿಂದ ಹೊರಬರಲು ಸಾಕಷ್ಟು ಒದ್ದಾಡಬೇಕಾಯಿತು. ಆದ್ರೆ ಈ ಅಂಶ ರಘುಪತಿ ಭಟ್ ಗೆ ಪ್ಲಸ್ ಆಗಲಿದೆ ಎಂದೇ ಹೇಳಲಾಗ್ತಿದೆ.

ಬೈಂದೂರು ವಿಧಾನಸಭಾ ಕ್ಷೇತ್ರ :ಇಲ್ಲಿ ಕಾಂಗ್ರೆಸ್ ನ ಗೋಪಾಲ್ ಪೂಜಾರಿ ಶಾಸಕರಾಗಿದ್ದಾರೆ. 2008 ರಲ್ಲಿ ಬಿಜೆಪಿಯ ಲಕ್ಷ್ಮೀನಾರಾಯಣ ಗೆದ್ದದ್ದು ಬಿಟ್ಟರೆ , ಐದು ಅವಧಿಗೆ ಇಲ್ಲಿ ಶಾಸಕರಾಗಿದ್ದವರು ಗೋಪಾಲ್ ಪೂಜಾರಿ. ಹೀಗಾಗಿ ಗೋಪಾಲ್ ಪೂಜಾರಿಯವರಿಗೆ ಈ ಕ್ಷೇತ್ರದ ಜನರ ನಾಡಿಮಿಡಿತ ಗೊತ್ತಿದೆ. ಆದ್ರೆ ಇತ್ತೀಚೆಗೆ ಅವರು ಕ್ಷೇತ್ರದ ಜನರ ಕೈಗೆ ಸಿಗುತ್ತಿಲ್ಲ. ಸದಾ ಬೆಂಗಳೂರಿನಲ್ಲಿರ್ತಾರೆ ಎಂಬ ಆರೋಪವೂ ಇದೆ. ಕಳೆದ ಬಾರಿ ಬಿಜೆಪಿಯ ಸುಕುಮಾರ್ ಇಲ್ಲಿ ಸೋತಿದ್ದರು. ಬೈಂದೂರು ವಿಧಾನಸಭೆ ಕ್ಷೇತ್ರ ಉಡುಪಿ ಜಿಲ್ಲೆಯಲ್ಲಿದ್ದರೂ ಮಾಜಿ ಸಿಎಂ ಬಿಎಸ್ ವೈ ಅವರ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಒಳಪಡುತ್ತದೆ ಅನ್ನೋದು ವಿಶೇಷ.

 

Vishwa News 24

Recent Posts

ಕುಂದಾಪುರ: ನಿಂತ ಲಾರಿಗಳಿಗೆ ಬಸ್ ಢಿಕ್ಕಿ: ಎರಡು ಸಾವು, ಹಲವರಿಗೆ ಗಾಯ – vishwanews24

ಕುಂದಾಪುರ: ನಿಂತ ಲಾರಿಗಳಿಗೆ ಬಸ್ ಢಿಕ್ಕಿ: ಎರಡು ಸಾವು, ಹಲವರಿಗೆ ಗಾಯ ಕುಂದಾಪುರ: ಮರವಂತೆ ಸಮುದ್ರ ಕಿನಾರೆಯ ಎದುರಿನ‌ ರಾಷ್ಟ್ರೀಯ…

14 hours ago

ರೇಣುಕಾಸ್ವಾಮಿ ಹತ್ಯೆ ಪ್ರಕರಣ : ಜಾಮೀನಿಗಾಗಿ ಸುಪ್ರೀಂ ಕೋರ್ಟ್‌ ಮೊರೆ ಹೋದ ದರ್ಶನ್‌ – vishwanews24

ರೇಣುಕಾಸ್ವಾಮಿ ಹತ್ಯೆ ಪ್ರಕರಣ : ಜಾಮೀನಿಗಾಗಿ ಸುಪ್ರೀಂ ಕೋರ್ಟ್‌ ಮೊರೆ ಹೋದ ದರ್ಶನ್‌ ನವದೆಹಲಿ : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು…

14 hours ago

ದ. ಕ, ಉಡುಪಿ ಸೇರಿದಂತೆ  5 ದಿನಗಳ ಕಾಲ ಭಾರೀ ಮಳೆಯ ಮುನ್ಸೂಚನೆ ; 25 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ – vishwanews24

ದ. ಕ, ಉಡುಪಿ ಸೇರಿದಂತೆ  5 ದಿನಗಳ ಕಾಲ ಭಾರೀ ಮಳೆಯ ಮುನ್ಸೂಚನೆ ; 25 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ …

14 hours ago

ಉಡುಪಿ ಶ್ರೀಕೃಷ್ಣ ದರ್ಶನಕ್ಕೆ ನೂತನ ಸರತಿ ಸಾಲು ಹಾಗೂ ಐಡಿ ಆಧಾರಿತ ಪ್ರವೇಶ ವ್ಯವಸ್ಥೆ ಉದ್ಘಾಟನೆ – vishwanews24

ಉಡುಪಿ ಶ್ರೀಕೃಷ್ಣ ದರ್ಶನಕ್ಕೆ ನೂತನ ಸರತಿ ಸಾಲು ಹಾಗೂ ಐಡಿ ಆಧಾರಿತ ಪ್ರವೇಶ ವ್ಯವಸ್ಥೆ ಉದ್ಘಾಟನೆ ಉಡುಪಿ : ಶ್ರೀ…

17 hours ago

ಮಂಗಳೂರು: ಸ್ಕೂಟರ್‌ ಸವಾರನಿಗೆ ಖಾರದ ಪುಡಿ ಎರಚಿ ದರೋಡೆ; ಪ್ರಕರಣ ದಾಖಲು – vishwanews24

ಮಂಗಳೂರು: ಸ್ಕೂಟರ್‌ ಸವಾರನಿಗೆ ಖಾರದ ಪುಡಿ ಎರಚಿ ದರೋಡೆ; ಪ್ರಕರಣ ದಾಖಲು ಮಂಗಳೂರು: ಗುರುಪುರ ಬಂಗ್ಲಗುಡ್ಡೆ ಬಳಿ ಸ್ಕೂಟರ್ ಸವಾರರೊಬ್ಬರಿಗೆ…

17 hours ago

ಪಿಯು ವಿದ್ಯಾರ್ಥಿನಿಯರ ನಾಪತ್ತೆ ಪ್ರಕರಣ: ಸಿಐಡಿ ತನಿಖೆಗೆ ಆದೇಶ – vishwanews24

ಪಿಯು ವಿದ್ಯಾರ್ಥಿನಿಯರ ನಾಪತ್ತೆ ಪ್ರಕರಣ: ಸಿಐಡಿ ತನಿಖೆಗೆ ಆದೇಶ 8 ತಿಂಗಳ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿಗಳು ಬೆಂಗಳೂರು: ನಗರದ ವಿದ್ಯಾರಣ್ಯಪುರ…

18 hours ago