ಉಡುಪಿ: ಪರ್ಸಿನ್ ಬೋಟ್‌ನಿಂದ ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದ ಮೀನುಗಾರ 14 ಗಂಟೆಗಳ ಕಾಲ ನೀರಿನಲ್ಲಿದ್ದು, ಬಳಿಕ ರಕ್ಷಣೆಗೊಳಗಾದ ಘಟನೆ ಮಲ್ಪೆಯಲ್ಲಿ ನಡೆದಿದೆ.
ಆಂಧ್ರಪ್ರದೇಶ ಮೂಲದ ಪುಕಾಲು ಕಮೇಯ (32) ರಕ್ಷಣೆಗೊಳಗಾದವರು.
ಘಟನೆ ವಿವರ: ಸುಮಾರು 35 ಮಂದಿ ಮೀನುಗಾರರ ತಂಡ ಪರ್ಸಿನ್ ಬೋಟ್‌ನಲ್ಲಿ ಮೀನುಗಾರಿಕೆಗೆ ತೆರಳಿ ಹಿಂತಿರುಗುತ್ತಿದ್ದಾಗ ಹಿಂದುಗಡೆ ಇದ್ದ ಪುಕಾಲು ಕಮೇಯ ಆಕಸ್ಮಿಕವಾಗಿ ಕಡಲಿಗೆ ಬಿದ್ದರು. ಈ ವಿಚಾರ ಸ್ವಲ್ಪ ದೂರು ಕ್ರಮಿಸಿದ ಬಳಿಕ ಇತರ ಮೀನುಗಾರರಿಗೆ ತಿಳಿಯಿತು. ಕೂಡಲೇ ಹಿಂದಕ್ಕೆ ತೆರಳಿ ಹುಡುಕಾಟ ನಡೆಸಿದರೂ ಯಾವುದೇ ಉಪಯೋಗವಾಗಲಿಲ್ಲ.
ಬಳಿಕ ಮೀನುಗಾರರು ಜೀವರಕ್ಷಕರಿಗೆ ಮಾಹಿತಿ ನೀಡಿದರು. ನೀರಿಗೆ ಬಿದ್ದ ವ್ಯಕ್ತಿ ಸ್ವಲ್ಪ ಸಮಯ ಈಜಾಡಿದಾಗ ಅಂಜಲ್ ಮೀನಿಗೆ ಹಾಕಿದ್ದ ಬೀಡಿನ ಬಲೆ ಕಂಡುಬಂತು. ಅದರಲ್ಲಿ ಅಳವಡಿಸಿದ್ದ ಬಾವುಟವನ್ನು ಹಿಡಿದು ಬಲೆಯನ್ನೇ ಆಸರೆಯಾಗಿಸಿಕೊಂಡು ಅಲ್ಲಿಯೇ ನಿಂತುಕೊಂಡರು. ಆ ಬಲೆಯನ್ನು ಎ. 17ರಂದು ಸಂಜೆ 6ರ ಸುಮಾರಿಗೆ ಹಾಕಿದ್ದು, ಬೆಳಗ್ಗೆ 3 ಗಂಟೆಗೆ ತೆಗೆಯುತ್ತಾ ಬರುವಾಗ ಕೊನೆಯಲ್ಲಿ ನಿಂತಿದ್ದ ಇವರು ಕಂಡುಬಂದರು. ತತ್‌ಕ್ಷಣ ನೀರಿನಿಂದ ಮೇಲೆತ್ತಿ ರಕ್ಷಿಸಿ ದಡಕ್ಕೆ ತರಲಾಯಿತು. ಆರೋಗ್ಯದಲ್ಲಿ ಏರುಪೇರಾಗಿದ್ದ ಕಾರಣ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಆಪತಾºಂಧವ ಈಶ್ವರ ಮಲ್ಪೆ ಅವರು ದಾಖಲಿಸಿದರು. ಈಗ ಚೇತರಿಸಿಕೊಂಡಿದ್ದು,ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಕಳೆದ 5 ವರ್ಷಗಳಿಂದ ಮಲ್ಪೆಯಲ್ಲಿ ಬೋಟ್‌ನ ನಿರ್ವಹಣೆ ಸಹಿತ ವಿವಿಧ ಕೆಲಸ ಮಾಡಿಕೊಂಡಿದ್ದೇನೆ. ನಾನು ನೀರಿಗೆ ಬಿದ್ದ ಬಳಿಕ ಬೋಟ್ ಮರಳಿ ಬಂತು. ನಾನು ಸಂಜ್ಞೆ ಮಾಡಿದೆ. ಆದರೆ ಅವರಿಗೆ ತಿಳಿಯಲಿಲ್ಲ. ಬಳಿಕ ಸಮುದ್ರದಲ್ಲಿ ಲಭಿಸಿದ್ದ ಕೆಲವು ಪ್ಲಾಸ್ಟಿಕ್ ಬಾಟಲಿಗಳನ್ನು ಹೊಟ್ಟೆಯ ಅಡಿಗೆ ಇರಿಸಿಕೊಂಡು ಮೀನಿಗೆ ಹಾಕಲಾಗಿದ್ದ ಬಲೆಯ ಆಶ್ರಯ ಪಡೆದು ಜೀವ ರಕ್ಷಿಸಿಕೊಂಡೆ.
– ಪುಕಾಲು ಕಮೇಯ, ಮೀನುಗಾರ
ಮೈಸೂರು: ಕಾಲೇಜು ಕ್ಯಾಂಪಸ್‌ನಲ್ಲೇ ಹೃದಯಾಘಾತ ; ಕುಸಿದುಬಿದ್ದು ವಿದ್ಯಾರ್ಥಿ ಸಾವು ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಖ್ಯಾತ ಮರಿಮಲ್ಲಪ್ಪ ಕಾಲೇಜು…
ಅಡ್ಡ ಮತದಾನ ಮೂಲಕ ಪಕ್ಷಕ್ಕೆ ಹಾಗೂ ಮೈತ್ರಿಗೆ ದ್ರೋಹ ಬಗೆದವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ : ವಿಜಯೇಂದ್ರ ಆಕ್ರೋಶ ಬೆಂಗಳೂರು:…
ಭಟ್ಕಳ ಲವ್ ಜಿಹಾದ್ ಆರೋಪ : ಯುವಕ ಅರೆಸ್ಟ್ ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಕಿಚ್ಚು ಹಚ್ಚಿದ ಹಿಂದೂ,…
ಪರಿಷತ್ ಚುನಾವಣೆಯಲ್ಲಿ ನಮಗೆ ಮತ ನೀಡಿದ ಬೇರೆ ಪಕ್ಷದ ವಿಶ್ವಾಸವನ್ನುನಾವು ಉಳಿಸಿಕೊಳ್ಳುತ್ತೇವೆ: ಡಿ.ಕೆ.ಶಿವಕುಮಾರ್ ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ…
ವಚನಾನಂದ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ: ಜೂ. 30ಕ್ಕೆ ಮುಂದೂಡಿಕೆ ದಾವಣಗೆರೆ: ಹರಿಹರದ ವಚನಾನಂದ ಸ್ವಾಮೀಜಿ ಪೋಕ್ಸೋ ಪ್ರಕರಣ ಆದೇಶವನ್ನು…
ವಿಟ್ಲ : ಲಾರಿಯಲ್ಲಿ ತಾಂತ್ರಿಕ ವೈಫಲ್ಯ - ಸರಿಪಡಿಸುವ ವೇಳೆ ಚಕ್ರಗಳ ಅಡಿಗೆ ಸಿಲುಕಿ ಚಾಲಕ ಸ್ಥಳದಲ್ಲೇ ಮೃತ್ಯು ವಿಟ್ಲ:…