Featured

ಉಡುಪಿ :ಬ್ಯಾಂಕ್ ಖಾಸಗೀಕರಣ ವಿರೋಧಿಸಿ ಬೃಹತ್ ಪ್ರತಿಭಟನೆ ; ಮಾ. 15,16ಕ್ಕೆ ಬ್ಯಾಂಕ್ ಬಂದ್ -Vishwanews24

ಉಡುಪಿ :ಬ್ಯಾಂಕ್ ಖಾಸಗೀಕರಣ ವಿರೋಧಿಸಿ ಬೃಹತ್ ಪ್ರತಿಭಟನೆ ; ಮಾ. 15,16ಕ್ಕೆ ಬ್ಯಾಂಕ್ ಬಂದ್ -Vishwanews24

ಉಡುಪಿ, : ಕೇಂದ್ರ ಸರಕಾರ ಸಾರ್ವಜನಿಕ ವಲಯದ ಬ್ಯಾಂಕುಗಳ ಖಾಸಗೀಕರಣಕ್ಕೆ ಮುಂದಾಗಿರುವ ಕ್ರಮವನ್ನು ವಿರೋಧಿಸಿ ಅಖಿಲ ಭಾರತ ರಾಷ್ಟ್ರೀಕೃತ ಬ್ಯಾಂಕುಗಳ ಅಧಿಕಾರಿಗಳ ಒಕ್ಕೂಟ (ಎಐಎನ್‌ಬಿಓಎಫ್) ಮಾ.15 ಮತ್ತು 16ರಂದು ಪ್ರತಿಭಟನೆ ನಡೆಸಲು ನಿರ್ಧರಿಸಿದೆ ಎಂದು ಉಡುಪಿಯ ಕೆನರಾ ಬ್ಯಾಂಕ್ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಮಾರಿಯಾ ಮಥಾಯಸ್ ತಿಳಿಸಿದ್ದಾರೆ.

ಉಡುಪಿಯಲ್ಲಿಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಾ.15ರ ಬೆಳಗ್ಗೆ 10 ಗಂಟೆಗೆ ಕೋರ್ಟ್ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಶಾಖೆ ಎದುರು ಬ್ಯಾಂಕ್ ನೌಕರರ ಬೃಹತ್ ಪ್ರತಿಭಟನೆ ನಡೆಯಲಿದೆ. ಹೀಗಾಗಿ ಈ ಎರಡು ದಿನಗಳಂದು ದೇಶಾದ್ಯಂತ ಯಾವುದೇ ಸಾರ್ವಜನಿಕ ರಂಗದ ಯಾವುದೇ ಬ್ಯಾಂಕ್ ಶಾಖೆ ಕಾರ್ಯನಿರ್ವಹಿಸುವುದಿಲ್ಲ ಎಂದವರು ತಿಳಿಸಿದರು.

ಉಡುಪಿ : ಮುಟ್ಟುಗೋಲು ಹಾಕಿಕೊಂಡ ಪಡಿತರ ಅಕ್ಕಿ ಬಹಿರಂಗ ಹರಾಜು -Vishwanews24

ಇದರಿಂದ ಸತತ ನಾಲ್ಕು ದಿನಗಳ ಕಾಲ (ಮಾ.13ರಿಂದ 16ರವರೆಗೆ) ಬ್ಯಾಂಕ್ ಸೇವೆ ಗ್ರಾಹಕರಿಗೆ ಸಿಗುವುದಿಲ್ಲ ಎಂದರು. ಕೇಂದ್ರ ಸರಕಾರ ಎರಡು ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಖಾಸಗೀಕರಿಸಲು ಮುಂದಾಗಿದ್ದು, ಇದನ್ನು ಬ್ಯಾಂಕ್ ಅಧಿಕಾರಿಗಳ ಒಕ್ಕೂಟ ವಿರೋಧಿ ಸುತ್ತದೆ. ಇದರೊಂದಿಗೆ ತನ್ನ ಸದಸ್ಯರು ಹಾಗೂ ನಿವೃತ್ತರ ಅನುಕೂಲಕ್ಕಾಗಿ ಇತರ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆಯೂ ಒತ್ತಾಯಿಸಲಿದೆ ಎಂದರು.

ಬ್ಯಾಂಕ್ ಖಾಸಗೀಕರಣ ಪ್ರಮುಖವಾಗಿ ಸಾರ್ವಜನಿಕರ ಮೇಲೆ ಪರಿಣಾಮ ಬೀರಲಿದೆ. ಸೇವಾಶುಲ್ಕ ಹೆಚ್ಚಲಿದ್ದು, ಅದನ್ನು ಭರಿಸಬಲ್ಲ ಗ್ರಾಹಕ ರಿಗೆ ಮಾತ್ರ ಸೇವೆ ದೊರೆಯಲಿದೆ. ಈ ಮೂಲಕ ಬ್ಯಾಂಕ್ ರಾಷ್ಟ್ರೀಕರಣದ ಪ್ರಮುಖ ಉದ್ದೇಶವನ್ನು ಕೈಬಿಟ್ಟಂತಾಗುತ್ತದೆ ಎಂದರು.

ಉಡುಪಿ : ತೆಂಗಿನ ಬೆಳೆಯಲ್ಲಿ ಬಿಳಿನೊಣ ಹಾನಿಯ ನಿಯಂತ್ರಣ ಕ್ರಮಗಳು -Vishwanews24

ಒಕ್ಕೂಟ ಮುಂದಿನ ದಿನಗಳಲ್ಲಿ ಖಾಸಗೀಕರಣದ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಮೂಡಿಸಲು ಹಾಗೂ ಜನರಲ್ಲಿ ಜಾಗೃತಿ ಮೂಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಿದೆ. ಇದಕ್ಕಾಗಿ ಸಭೆ, ಗ್ರಾಹಕರ ಸಭೆ, ಪ್ರದರ್ಶನ ನಡೆಸಲಿದೆ. ಬ್ಯಾನರ್ ಪ್ರದರ್ಶನ, ಕರಪತ್ರಗಳ ವಿತರಣೆ, ಅಲ್ಲಲ್ಲಿ ಪ್ರತಿಭಟನೆ ಸಹ ನಡೆಸಲಿದೆ ಎಂದು ಮಾರಿಯಾ ಮಥಾಯಸ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಾದೇಶಿಕ ಕಾರ್ಯದರ್ಶಿ ಸಚಿನ್ ಶೆಟ್ಟಿ, ಲೋಕೇಶ್, ನರಸಿಂಹ ಮೂರ್ತಿ ಉಪಸ್ಥಿತರಿದ್ದರು.

ಉಡುಪಿ : ಯುವ ಪರಿವರ್ತಕರ ಹುದ್ದೆ : ಅರ್ಜಿ ಆಹ್ವಾನ -Vishwanews24

Vishwa News 24

Recent Posts

ಕಾಂಗ್ರೆಸ್ ಸೇರ್ಪಡೆ ಕುರಿತು ಅಂತಿಮ ನಿರ್ಧಾರ ಕೈಗೊಂಡಿಲ್ಲ : ರಘುಪತಿ ಭಟ್ – vishwanews24

ಕಾಂಗ್ರೆಸ್‌ನಿಂದ ಆಹ್ವಾನ ಬಂದಿರುವುದು ನಿಜ  .. ಪಕ್ಷ ಬದಲಾವಣೆಯಂತಹ ನಿರ್ಧಾರವನ್ನು ಏಕಾಏಕಿ ತೆಗೆದುಕೊಳ್ಳಲು ಸಾಧ್ಯವಿಲ್ಲ .. 2028ರ ವಿಧಾನಸಭಾ ಚುನಾವಣೆಯಲ್ಲಿ…

1 hour ago

ಉಡುಪಿ: ಕಾಮಗಾರಿ ಹಿನ್ನೆಲೆ ; ಸಂಚಾರಕ್ಕೆ ಬದಲಿ ಮಾರ್ಗ – vishwanews24

ಉಡುಪಿ:  ಕಾಮಗಾರಿ ಹಿನ್ನೆಲೆ ಸಂಚಾರಕ್ಕೆ ಬದಲಿ ಮಾರ್ಗ    ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ತೆಂಕಪೇಟೆ ವಾರ್ಡಿನ ಬಡಗುಪೇಟೆ ರಸ್ತೆಯಲ್ಲಿ ಒಳಚರಂಡಿ…

1 hour ago

ಉಡುಪಿ : ಒಳಚರಂಡಿ ಕಾಮಗಾರಿ; ಸಂಚಾರ ನಿಷೇಧ – vishwanews24

   ಉಡುಪಿ : ಒಳಚರಂಡಿ ಕಾಮಗಾರಿ; ಸಂಚಾರ ನಿಷೇಧ    ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಶಿರಿಬೀಡು ವಾರ್ಡಿನ ಶಾಂಭವಿ ಹೋಟೇಲ್ ಎದುರು ರಸ್ತೆಯಲ್ಲಿ…

1 hour ago

ಉಡುಪಿ : ಸರಳ ವಿವಾಹಕ್ಕೆ ಪ್ರೋತ್ಸಾಹಧನ ; ಅರ್ಜಿ ಆಹ್ವಾನ – vishwanews24

ಉಡುಪಿ : ಸರಳ ವಿವಾಹಕ್ಕೆ ಪ್ರೋತ್ಸಾಹಧನ: ಅರ್ಜಿ ಆಹ್ವಾನ ಉಡುಪಿ, : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಪ್ರಸಕ್ತ ಸಾಲಿನ ಆರ್ಥಿಕವಾಗಿ…

1 hour ago

ಅ. 18ರಂದು ರಕ್ಷಣಾಪುರ ಜವನೆರ್ ಕಾಪು ವತಿಯಿಂದ ನಾಲ್ಕನೇ ವರ್ಷದ ‘ಕಾಪು ಪಿಲಿ ಪರ್ಬ’  – vishwanews24

ಅ. 18ರಂದು ರಕ್ಷಣಾಪುರ ಜವನೆರ್ ಕಾಪು ವತಿಯಿಂದ ನಾಲ್ಕನೇ ವರ್ಷದ ‘ಕಾಪು ಪಿಲಿ ಪರ್ಬ’  ವಿನಯ್ ಕುಮಾರ್ ಸೊರಕೆ ಮಾರ್ಗದರ್ಶನದಲ್ಲಿ…

1 hour ago

ಅ.15ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದ.ಕ. ಮತ್ತು ಉಡುಪಿ ಪ್ರವಾಸ -vishwanews24

ಅ.15ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದ.ಕ. ಮತ್ತು ಉಡುಪಿ ಪ್ರವಾಸ ಮಂಗಳೂರು ಉಚ್ಚಿಲ ದಸರಾ ನವರಾತ್ರಿ ಮಹೋತ್ಸವ ದಲ್ಲಿ ಭಾಗಿ…

16 hours ago