Featured

ಉಡುಪಿ : ಭಗವಾಧ್ವಜವನ್ನು ಹಾರಿಸಿ ಪರ್ಯಾಯ ಮೆರವಣಿಗೆಗೆ ಚಾಲನೆ ಕೊಟ್ಟಿದ್ದು ಸರಿಯಲ್ಲ : ಶ್ಯಾಮರಾಜ್ ಬಿರ್ತಿ – vishwanews24

ಯಶ್ಪಾಲ್ ಸುವರ್ಣರೇ ಉಡುಪಿ ಜಿಲ್ಲಾಧಿಕಾರಿ ನಿಮ್ಮ ಪಕ್ಷದ ಕಾರ್ಯಕರ್ತರಲ್ಲವಲ್ಲ..

ಭಗವಾಧ್ವಜವನ್ನು ಹಾರಿಸಿ ಪರ್ಯಾಯ ಮೆರವಣಿಗೆಗೆ ಚಾಲನೆ ಕೊಟ್ಟಿದ್ದು ಸರಿಯಲ್ಲ : ಶ್ಯಾಮರಾಜ್ ಬಿರ್ತಿ

ಉಡುಪಿ: ಯಶ್ಪಾಲ್ ಸುವರ್ಣರೇ ನೀವು ಬೇಕಿದ್ದರೇ ಭಗವಾಧ್ವಜವಾದರೂ ಹಾರಿಸಿ, ಮೋದಿ ಧ್ವಜವಾದರೂ ಹಾರಿಸಿಕೊಳ್ಳಿ. ನಮ್ಮದೇನೂ ಅಭ್ಯಂತರವಿಲ್ಲ. ಆದರೆ, ಉಡುಪಿ ಜಿಲ್ಲಾಧಿಕಾರಿ ನಿಮ್ಮ ಪಕ್ಷದ ಕಾರ್ಯಕರ್ತರಲ್ಲವಲ್ಲ.

ಅವರು ಉಡುಪಿಯ ಜಿಲ್ಲಾಧಿಕಾರಿಯವರು ಮತ್ತು ಜಿಲ್ಲಾ ದಂಡಾಧಿಕಾರಿಯವರು. ಒಂದು ಮಾಧ್ವ ಬ್ರಾಹ್ಮಣರ ಖಾಸಗೀ ಕಾರ್ಯಕ್ರಮದಲ್ಲಿ ಒಂದು ಕೋಮುವನ್ನು ಪ್ರತಿನಿಧಿಸುವ ಭಗವಾಧ್ವಜವನ್ನು ಸಾರ್ವಜನಿಕರ ಎದುರೇ ಹಾರಿಸಿ ಪರ್ಯಾಯವೆಂಬ ಪೂಜಾಕೈಂಕರ್ಯದ ಹಸ್ತಾಂತರ ಸಮಾರಂಭ ಮೆರವಣಿಗೆಗೆ ಚಾಲನೆ ಕೊಟ್ಟಿದ್ದು ಸರಿಯಲ್ಲ ಎಂದು ನಮ್ಮ ಕಳವಳ.

ಪಾಕಿಸ್ತಾನದಲ್ಲಿ ಮುಸ್ಲಿಂ ಧ್ವಜ ಹಾರಿಸುವುದು ತಪ್ಪಲ್ಲಾ… ಯಾಕಂದ್ರೆ ಅದು ಮುಸ್ಲಿಂ ರಾಷ್ಟ್ರ ಯಶ್ಪಾಲ್ ರವರೇ…… ನಮ್ಮ ಭಾರತ ಜಾತ್ಯತೀತ ರಾಷ್ಟ್ರ.. ಇಲ್ಲಿ ಎಲ್ಲಾ ಧರ್ಮದವರೂ ಸಮಾನರು. ಒಬ್ಬ ಮುಖ್ಯಅಧಿಕಾರಿಯಾಗಿ ಒಂದು ಕೋಮುವನ್ನು ಮಾತ್ರ ಪ್ರತಿನಿಧಿಸುವ ಕಾರ್ಯ ಮಾಡುವುದು ತಪ್ಪು ಎಂದು ನಮ್ಮ ಭಾವನೆ.

ಜಿಲ್ಲಾಧಿಕಾರಿಯವರು ಕೂತ ಕುರ್ಚಿಗೆ ಮತ್ತು ಜಿಲ್ಲಾಧಿಕಾರಿಯವರ ಹುದ್ದೆಗೆ ಇದು ಗೌರವ ತರುವಂತದಲ್ಲಾ. ಜನಪ್ರತಿನಿಧಿಯಾದ ತಾವು ಇಡೀ ಉಡುಪಿ ಕ್ಷೇತ್ರದ ಜನಪ್ರತಿನಿಧಿ. ಬರೀ ಹಿಂದುಗಳ ಪ್ರತಿನಿಧಿಯಲ್ಲ. ಇದು ತಮ್ಮ ಗಮನಕ್ಕೆ ಇರಲಿ. ಹಾಗೆಯೇ ಜಿಲ್ಲಾಧಿಕಾರಿಯವರು ಒಂದು ಸರಕಾರಿ ಮುಖ್ಯ ಹುದ್ದೆಯನ್ನು ಅಲಂಕರಿಸಿರುವ ಸರ್ವ ಧರ್ಮದವರ ಜಿಲ್ಲಾಧಿಕಾರಿ ಅವರು. ಬರೀ ಬ್ರಾಹ್ಮಣರ ಅಥವಾ ಹಿಂದುಗಳ ಜಿಲ್ಲಾಧಿಕಾರಿಯವರಲ್ಲ ಎಂಬುದು ನಮ್ಮ ಭಾವನೆ ಅಷ್ಟೇ.

ಅಷ್ಟಕ್ಕೂ ಈ ಬಾರಿ ಮಾತ್ರ ಪರ್ಯಾಯ ಯಶಸ್ವಿಯಾದುದಲ್ಲ. ಪ್ರತೀ ಎರಡು ವರ್ಷಕ್ಕೊಮ್ಮೆ ನಡೆಯುವ ಈ ಪರ್ಯಾಯವು ಮೊದಲಿನ ಎಲ್ಲಾ ಶಾಸಕರಿದ್ದಾಗಲೂ ಯಶಸ್ವಿಯಾಗಿ ನಡೆದಿದೆ. ಮೊದಲಿನ ಪರ್ಯಾಯಗಳಿಗೆ ಹೋಲಿಸಿದರೆ ಈ ಬಾರಿ ಗೊಂದಲಮಯವಾಗಿ ಕಂಡಿದ್ದು ಜಿಲ್ಲಾಧಿಕಾರಿಯವರ ನಡೆಯಿಂದ. ಹಾಗಾಗಿ ಕಾಂಗ್ರೆಸ್ ಸರಕಾರದಿಂದ ಆರು ಕೋಟಿ ರೂ. ಅನುಧಾನ ಪಡೆದೂ ಕಲ್ಸಂಕದಿಂದ ಅಂಬಾಗಿಲಿಗೆ ಹೋಗುವ ರಸ್ತೆ ರೀಪೇರಿಯನ್ನೂ ಮಾಡದೇ ಪರ್ಯಾಯ ನಡೆಸಿದ್ದು ಯಶಸ್ವಿ ಆಯಿತೆಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವುದು ಎಷ್ಟು ಸರಿ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಪ್ರಶ್ನಿಸಿದ್ದಾರೆ.

Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

2 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

2 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

2 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

2 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

2 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

2 days ago