Featured

ಉಡುಪಿ : ಭಯೋತ್ಪಾದನೆ ವಿಷಯದಲ್ಲಿ ಶಾಸಕ ರಘುಪತಿ ಭಟ್ ರಾಜಕೀಯ ಲಾಭದ ಪ್ರಯತ್ನ ಮಾಡಬಾರದು: ಅಮೃತ್ ಶೆಣೈ – Vishwanews24

ಭಯೋತ್ಪಾದನೆ ವಿಷಯದಲ್ಲಿ ಶಾಸಕ ರಘುಪತಿ ಭಟ್ ರಾಜಕೀಯ ಲಾಭದ ಪ್ರಯತ್ನ ಮಾಡಬಾರದು: ಅಮೃತ್ ಶೆಣೈ

ಉಡುಪಿ: ಬ್ರಹ್ಮಾವರದ ತಾಜುದ್ದೀನ್ ಎಂಬ ಕಾಂಗ್ರೆಸ್ ಪದಾಧಿಕಾರಿಯ ಮಗನನ್ನು ನಿನ್ನೆ ರಾಷ್ಟ್ರೀಯ ತನಿಖಾ ಸಂಸ್ಥೆಯವರು ನಿನ್ನೆ ಶಂಕಿತ ಭಯೋತ್ಪಾದಕ ಎಂಬ ಆರೋಪದಲ್ಲಿ ದಸ್ತಗಿರಿ ಮಾಡಿ ಕೊಂಡೊಯ್ದ ತಕ್ಷಣ ಉಡುಪಿ ಶಾಸಕರು ಬಹಳ ತರಾತುರಿಯಲ್ಲಿ ಆರೋಪಿಯ ತಂದೆಯ ಜತೆ ಕಾಂಗ್ರೆಸ್ ಮುಖಂಡರ ಫೋಟೊಗಳನ್ನು ತೋರಿಸುತ್ತಾ ಅವರ ಹೆಂಡತಿಯ ಬಗ್ಗೆಯೂ ಆರೋಪಗಳನ್ನು ಮಾಡುತ್ತಾ, ಅವರ‌ ಕುಟುಂಬ ಆರ್ಥಿಕವಾಗಿ ಇತ್ತೀಚೆಗೆ ಇಂತಹ ದುಷ್ಕೃತ್ಯಗಳಿಂದಲೇ ಸಬಲ ಆಗಿದೆ ಎಂದರು.

ಭಟ್ ರವರು ತಮ್ಮ ಸರಕಾರವನ್ನು ಒತ್ತಾಯಿಸಿ ತನಿಖೆ ಯನ್ನು ತೀವ್ರ ಗತಿಯಲ್ಲಿ ಮಾಡಿಸಿ ಅಪರಾಧ ಸಾಬೀತಾದರೆ ಅಪರಾಧಿಗಳಿಗೆ ಶಿಕ್ಷೆ ನೀಡಲಿ, ಆದರೆ ಹಿಜಾಬ್ ವಿಚಾರವನ್ನು ಉಲ್ಲೇಖ ಮಾಡುತ್ತಾ ಕರಾವಳಿಯಲ್ಲಿ ಅನೇಕ ಶಂಕಿತ ಚಟುವಟಿಕೆಗಳು ನಡೆಯುತ್ತಾ ಇವೆ ಅನ್ನುತ್ತಾ ಆರೋಪಿಯ ತಂದೆಯನ್ನು ಕಾಂಗ್ರೆಸ್ ಉಚ್ಚಾಟನೆ ಮಾಡುತ್ತಾ ಅಥವಾ ಅವರಿಗೆ ಪದೋನ್ನತಿ ನೀಡುತ್ತಾ ಎಂದು ಕೇಳಿರುವುದು ಬೇಜವಾಬ್ದಾರಿ ಹಾಗೂ ಅಸಂವೇದನೀಯ.

ಉಡುಪಿಯ ಜನರನ್ನು ಇನ್ನಷ್ಟು ಆತಂಕಿತರನ್ನಾಗಿ ಮಾಡುತ್ತಾ ಭಯೋತ್ಪಾದನೆ ಗೆ ಕಾಂಗ್ರೆಸ್ ನವರು ಮೃದು ಧೋರಣೆ ತೋರುತ್ತಾರೆ ಎಂದು ಹೇಳುತ್ತಾ ಉಡುಪಿಯ ಸೂಕ್ಷ್ಮ ಸಂವೇದನೀಯ ವಾತಾವರಣವನ್ನು ಪರಿಗಣನೆಗೆ ತಗೊಳ್ಳದೆ ಬಂಧನ ಆದ ತಕ್ಷಣ ತನಿಖಾವರದಿಯನ್ನೇ ನೀಡಿದ ಮಾದರಿಯಲ್ಲಿ ಇಡೀ ಕುಟುಂಬದ‌ ಬಗ್ಗೆ ಹಾಗೂ ಕಾಂಗ್ರೆಸ್ ಬಗ್ಗೆ ಟೀಕೆ ಮಾಡುವುದನ್ನು ಸಹಬಾಳ್ವೆ ಉಡುಪಿ ಇದರ ಅಧ್ಯಕ್ಷ ಅಮೃತ್ ‌ಶೆಣೈ ಖಂಡಿಸಿದ್ದಾರೆ.

ಭಯೋತ್ಪಾದನೆಯ ವಿರುದ್ಧ ಎಲ್ಲಾ ರಾಜಕೀಯ ಪಕ್ಷಗಳು ಪಕ್ಷ ಭೇಧ ತೊರೆದು ಒಟ್ಟಿಗೆ ಹೋರಾಟ ಮಾಡುವ ಮುತ್ಸಧ್ದಿತನ ತೋರಬೇಕಾದ ಭಟ್ ರಾಜಕೀಯ ಲಾಭದ ಪ್ರಯತ್ನ ಮಾಡಬಾರದು, ಉಡುಪಿಯಲ್ಲಿ ಸರ್ವಪಕ್ಷಗಳ ಹಾಗೂ ಎಲ್ಲಾ ಸಂಘಟನೆಗಳ ಸಭೆಯನ್ನು ಕರೆದು ಎಲ್ಲಾ ಸೇರಿ ಜನರ ಸುರಕ್ಷತೆಯನ್ನು‌ ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಸಹಬಾಳ್ವೆ ಆಗ್ರಹಿಸುತ್ತದೆ ಎಂದೂ ಶೆಣೈ ಯವರು ಮನವಿ ಮಾಡಿದ್ದಾರೆ.

Vishwa News 24

Recent Posts

ಕಟೀಲು ದೇವಿಗೆ ನೂತನ ಬ್ರಹ್ಮರಥ : 6 ಚಕ್ರಗಳ ಹೊಸ ರಥದ ನಿರ್ಮಾಣ – vishwanews24

ಎಪ್ರಿಲ್ ಜಾತ್ರೆಯಲ್ಲಿ ಭ್ರಮರಾಂಬೆಗೆ ನೂತನ ರಥದಲ್ಲಿ ಉತ್ಸವ ಐವತ್ತು ಅಡಿ ಎತ್ತರದ ಆರು ಚಕ್ರಗಳ ಹೊಸ ರಥದ ನಿರ್ಮಾಣ ಕಟೀಲು…

4 hours ago

ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ – vishwanews24

ಮಕ್ಕಳಾಗಿಲ್ಲ ಹಾಗೂ ತವರಿನಿಂದ ಹಣ ತರುವ ವಿಚಾರಕ್ಕೆ ಗಲಾಟೆ : ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ ಕಲಬುರಗಿ: ಮಕ್ಕಳಾಗಿಲ್ಲ…

5 hours ago

ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶ : 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ – vishwanews24

ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶ : 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ ಸುಪ್ರೀಂ ಕೋರ್ಟ್ ಮಹತ್ವದ ಅವಕಾಶವೊಂದನ್ನು…

5 hours ago

ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಟ ಪ್ರೇಮ್ ದಂಪತಿ – vishwanews24

ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಟ ಪ್ರೇಮ್ ದಂಪತಿ ಉಡುಪಿ: ಚಿತ್ರನಟ ಹಾಗೂ ‘ನೆನಪಿರಲಿ’ ಖ್ಯಾತಿಯ ಪ್ರೇಮ್ ಅವರು…

5 hours ago

ಸಚಿವರ ಮೇಲೆ ಖಾಸಗಿ ಸ್ಟಿಂಗ್​​ ಆಪರೇಷನ್ : ಎಚ್ಚರಿಕೆಯಿಂದ ಇರುವಂತೆ ಸಿಎಂ ಸೂಚನೆ – vishwanews24

ಸಚಿವರ ಮೇಲೆ ಖಾಸಗಿ ಸ್ಟಿಂಗ್​​ ಆಪರೇಷನ್ : ಎಚ್ಚರಿಕೆಯಿಂದ ಇರುವಂತೆ ಸಿಎಂ ಸೂಚನೆ ಬೆಂಗಳೂರು: ಸಿಎಂ ಡಿಕೆ ಶಿವಕುಮಾರ್​​ ನೇತೃತ್ವದಲ್ಲಿ…

5 hours ago

ಪ್ರಕಾಶ್‌ರಾಜ್‌ಗೆ ‘ಮಾನವ ರತ್ನ’, ಹಿದಾಯತುಲ್ಲಾ ಅಬ್ಬಾಸ್‌ಗೆ ‘ಸೇವಾ ರತ್ನ’, ಸುರೇಶ್ ಭಟ್ ಬಾಕ್ರಬೈಲ್‌ಗೆ ‘ಸೌಹಾರ್ದ ರತ್ನ’ ಪ್ರಶಸ್ತಿ – vishwanews24

ಪ್ರಕಾಶ್‌ರಾಜ್‌ಗೆ ‘ಮಾನವ ರತ್ನ’, ಹಿದಾಯತುಲ್ಲಾ ಅಬ್ಬಾಸ್‌ಗೆ ‘ಸೇವಾ ರತ್ನ’, ಸುರೇಶ್ ಭಟ್ ಬಾಕ್ರಬೈಲ್‌ಗೆ ‘ಸೌಹಾರ್ದ ರತ್ನ’ ಪ್ರಶಸ್ತಿ ಉಡುಪಿ ಜಿಲ್ಲಾ…

5 hours ago