ಉಡುಪಿ: ಬ್ರಹ್ಮಾವರದ ತಾಜುದ್ದೀನ್ ಎಂಬ ಕಾಂಗ್ರೆಸ್ ಪದಾಧಿಕಾರಿಯ ಮಗನನ್ನು ನಿನ್ನೆ ರಾಷ್ಟ್ರೀಯ ತನಿಖಾ ಸಂಸ್ಥೆಯವರು ನಿನ್ನೆ ಶಂಕಿತ ಭಯೋತ್ಪಾದಕ ಎಂಬ ಆರೋಪದಲ್ಲಿ ದಸ್ತಗಿರಿ ಮಾಡಿ ಕೊಂಡೊಯ್ದ ತಕ್ಷಣ ಉಡುಪಿ ಶಾಸಕರು ಬಹಳ ತರಾತುರಿಯಲ್ಲಿ ಆರೋಪಿಯ ತಂದೆಯ ಜತೆ ಕಾಂಗ್ರೆಸ್ ಮುಖಂಡರ ಫೋಟೊಗಳನ್ನು ತೋರಿಸುತ್ತಾ ಅವರ ಹೆಂಡತಿಯ ಬಗ್ಗೆಯೂ ಆರೋಪಗಳನ್ನು ಮಾಡುತ್ತಾ, ಅವರ ಕುಟುಂಬ ಆರ್ಥಿಕವಾಗಿ ಇತ್ತೀಚೆಗೆ ಇಂತಹ ದುಷ್ಕೃತ್ಯಗಳಿಂದಲೇ ಸಬಲ ಆಗಿದೆ ಎಂದರು.
ಭಟ್ ರವರು ತಮ್ಮ ಸರಕಾರವನ್ನು ಒತ್ತಾಯಿಸಿ ತನಿಖೆ ಯನ್ನು ತೀವ್ರ ಗತಿಯಲ್ಲಿ ಮಾಡಿಸಿ ಅಪರಾಧ ಸಾಬೀತಾದರೆ ಅಪರಾಧಿಗಳಿಗೆ ಶಿಕ್ಷೆ ನೀಡಲಿ, ಆದರೆ ಹಿಜಾಬ್ ವಿಚಾರವನ್ನು ಉಲ್ಲೇಖ ಮಾಡುತ್ತಾ ಕರಾವಳಿಯಲ್ಲಿ ಅನೇಕ ಶಂಕಿತ ಚಟುವಟಿಕೆಗಳು ನಡೆಯುತ್ತಾ ಇವೆ ಅನ್ನುತ್ತಾ ಆರೋಪಿಯ ತಂದೆಯನ್ನು ಕಾಂಗ್ರೆಸ್ ಉಚ್ಚಾಟನೆ ಮಾಡುತ್ತಾ ಅಥವಾ ಅವರಿಗೆ ಪದೋನ್ನತಿ ನೀಡುತ್ತಾ ಎಂದು ಕೇಳಿರುವುದು ಬೇಜವಾಬ್ದಾರಿ ಹಾಗೂ ಅಸಂವೇದನೀಯ.
ಉಡುಪಿಯ ಜನರನ್ನು ಇನ್ನಷ್ಟು ಆತಂಕಿತರನ್ನಾಗಿ ಮಾಡುತ್ತಾ ಭಯೋತ್ಪಾದನೆ ಗೆ ಕಾಂಗ್ರೆಸ್ ನವರು ಮೃದು ಧೋರಣೆ ತೋರುತ್ತಾರೆ ಎಂದು ಹೇಳುತ್ತಾ ಉಡುಪಿಯ ಸೂಕ್ಷ್ಮ ಸಂವೇದನೀಯ ವಾತಾವರಣವನ್ನು ಪರಿಗಣನೆಗೆ ತಗೊಳ್ಳದೆ ಬಂಧನ ಆದ ತಕ್ಷಣ ತನಿಖಾವರದಿಯನ್ನೇ ನೀಡಿದ ಮಾದರಿಯಲ್ಲಿ ಇಡೀ ಕುಟುಂಬದ ಬಗ್ಗೆ ಹಾಗೂ ಕಾಂಗ್ರೆಸ್ ಬಗ್ಗೆ ಟೀಕೆ ಮಾಡುವುದನ್ನು ಸಹಬಾಳ್ವೆ ಉಡುಪಿ ಇದರ ಅಧ್ಯಕ್ಷ ಅಮೃತ್ ಶೆಣೈ ಖಂಡಿಸಿದ್ದಾರೆ.
ಭಯೋತ್ಪಾದನೆಯ ವಿರುದ್ಧ ಎಲ್ಲಾ ರಾಜಕೀಯ ಪಕ್ಷಗಳು ಪಕ್ಷ ಭೇಧ ತೊರೆದು ಒಟ್ಟಿಗೆ ಹೋರಾಟ ಮಾಡುವ ಮುತ್ಸಧ್ದಿತನ ತೋರಬೇಕಾದ ಭಟ್ ರಾಜಕೀಯ ಲಾಭದ ಪ್ರಯತ್ನ ಮಾಡಬಾರದು, ಉಡುಪಿಯಲ್ಲಿ ಸರ್ವಪಕ್ಷಗಳ ಹಾಗೂ ಎಲ್ಲಾ ಸಂಘಟನೆಗಳ ಸಭೆಯನ್ನು ಕರೆದು ಎಲ್ಲಾ ಸೇರಿ ಜನರ ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಸಹಬಾಳ್ವೆ ಆಗ್ರಹಿಸುತ್ತದೆ ಎಂದೂ ಶೆಣೈ ಯವರು ಮನವಿ ಮಾಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ ನಟ ದರ್ಶನ್ ರೇಣುಕಾ…
ಗೃಹ ಜ್ಯೋತಿ ಪರಿಶೀಲನೆ: ಪ್ರವರ್ಗ ಮಾಹಿತಿ (ಜಾತಿ ಪ್ರಮಾಣಪತ್ರ) ಕಡ್ಡಾಯವಲ್ಲ ಬೆಂಗಳೂರು: ರಾಜ್ಯಾದ್ಯಂತ ಜುಲೈ 1 ರಿಂದ ಆರಂಭಗೊಂಡಿರುವ ಗೃಹ ಜ್ಯೋತಿ…
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ : ಸಮಗ್ರ ತನಿಖೆಗೆ ಪ್ರಲ್ಹಾದ ಜೋಶಿ ಆಗ್ರಹ ನವದೆಹಲಿ: ರಾಮನಗರ ಜಿಲ್ಲೆಯಲ್ಲಿ ನಡೆದ ಮತದಾರರ…
ಅಕ್ರಮ ಎಸ್‌ಐಆರ್ ಪ್ರಕ್ರಿಯೆ : 2028ರ ಚುನಾವಣೆ ಗೆಲ್ಲಲು ಬಾಂಗ್ಲಾದೇಶಿಯರ ಸಕ್ರಮಕ್ಕೆ ಕಾಂಗ್ರೆಸ್ ಸಂಚು : ಶೋಭಾ ಕರಂದ್ಲಾಜೆ ಗಂಭೀರ…
ಮೂಲ ನೆಲದಿಂದ ಬೇರ್ಪಡಿಸಿ ಕರಾವಳಿಯ ಮಣ್ಣಿನ ಸಂಸ್ಕೃತಿಯ ಪಾವಿತ್ರ್ಯಕ್ಕೆ ಧಕ್ಕೆ ತರಬೇಡಿ .. ಕರಾವಳಿ ಕಂಬಳವು ತನ್ನದೇ ಆದ ಆಳವಾದ ಸಾಂಪ್ರದಾಯಿಕ…
ಮಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ಸೆಲಿನಾ ಟ್ರಾವೆಲ್ಸ್ ವಿರುದ್ಧ ಹರಿದಾಡಿದ ಕರಪತ್ರ : ಪೊಲೀಸ್ ಇಲಾಖೆ ಸ್ಪಷ್ಟನೆ ಮಂಗಳೂರು: ಖಾಸಗಿ ಸಾರಿಗೆ ಸಂಸ್ಥೆಯಾದ…