Featured

ಉಡುಪಿ : ಮತಾಂತರ ನಿಷೇಧ ಕಾಯಿದೆ ವಿರೋಧಿಸಿ ಡಿ.17 ರಂದು ಬೆಳಗಾವಿಯಲ್ಲಿ ಉಪವಾಸ ಸತ್ಯಾಗ್ರಹ : ಭಾರತೀಯ ಕ್ರೈಸ್ತ ಒಕ್ಕೂಟ – Vishwanews24

ಉಡುಪಿ : ಮತಾಂತರ ನಿಷೇಧ ಕಾಯಿದೆ ವಿರೋಧಿಸಿ ಡಿ.17 ರಂದು ಬೆಳಗಾವಿಯಲ್ಲಿ ಉಪವಾಸ ಸತ್ಯಾಗ್ರಹ ..

ಇವತ್ತು ಆಗುತ್ತಿರುವುದು ಮತಾಂತರ ಅಲ್ಲ ಅದೊಂದು ಧಾರ್ಮಿಕ ನಂಬಿಕೆಯ ಬದಲಾವಣೆ ಅಷ್ಟೇ..

ಬಲವಂತದ ಮತಾಂತರ‌ ನಡೆದಿರುವುದು ತಿಳಿದುಬಂದರೆ ನಾವೇ ಇದರ ವಿರುದ್ದ ದೂರು ನೀಡುತ್ತೆವೆ..

ಒಂದು ವೇಳೆ ಕಾನೂನು ಜಾರಿಗೆ ಬಂದರೆ ನಮ್ಮ ಧಾರ್ಮಿಕ ಸ್ವಾತಂತ್ರ್ಯ ಕಸಿದಂತಾಗುತ್ತದೆ..

ಭಾರತೀಯ ಕ್ರೈಸ್ತ ಒಕ್ಕೂಟ – Vishwanews24

ಉಡುಪಿ: ಮತಾಂತರ ನಿಷೇಧ ಕಾಯಿದೆ ಜಾರಿಯನ್ನು ‌ ತೀವ್ರವಾಗಿ‌ ಖಂಡಿಸಿರುವ ಭಾರತೀಯ ಕ್ರೈಸ್ತ ಒಕ್ಕೂಟ, ” ಮತಾಂತರ ನಿಷೇಧ ಕಾಯಿದೆಯಲ್ಲಿ ಸರಕಾರದ ಮಟ್ಟದಲ್ಲಿ ಯಾವುದೇ ದಾಖಲೆ ಇಲ್ಲದೆ ಒಂದು ಸಮಾಜವನ್ನು ಗುರಿಯಾಗಿಸಿಕೊಂಡು ಕಾಯಿದೆಯನ್ನು ಮಾಡಲು ಹೊರಟಿದ್ದು, ತರಾತುರಿಯಲ್ಲಿ ಸರಕಾರ ಮತಾಂತರ ನಿಷೇಧ ಕಾಯಿದೆಯನ್ನು ಜಾರಿಗೆ ತರುವುದು ಸರಿಯಲ್ಲ. ಹೀಗಾಗಿ ರಾಜ್ಯ ಸರ್ಕಾರದ ವಿರುದ್ದ ಡಿಸೆಂಬರ್ 17 ರಂದು ಬೆಳಗಾವಿಯಲ್ಲಿ ಒಕ್ಕೂಟದ ವತಿಯಿಂದ ಒಂದು ದಿನದ ಸಾಂಕೇತಿಕ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಿದೆ” ಎಂದು ಹೇಳಿದೆ.

ಈ ಬಗ್ಗೆಸೋಮವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಭಾರತೀಯ ಕ್ರೈಸ್ತ ಒಕ್ಕೂಟದ ರಾಜ್ಯ ಅಧ್ಯಕ್ಷ ಪ್ರಶಾಂತ್ ಜತ್ತನ್ನ, ಮತಾಂತರ ನಿಷೇಧ ಬಗ್ಗೆ‌ ಸಂವಿಧಾನದಲ್ಲಿ ಸಾಕಷ್ಟು ಮಾಹಿತಿ ಇದ್ದು ಇದಲ್ಲದೆ ಕಾನೂನು, ಕೋರ್ಟ್‌ ಇದೆ‌ ಅದರ ಪ್ರಕಾರ ಕ್ರಮ ಕೈಗೊಳ್ಳಿ, ಅದು ಬಿಟ್ಟು ಶಾಸಕ ಗೂಳಿಹಟ್ಟಿ ಶೇಖರ ಅವರ ಹೇಳಿಕೆಯ ನಂತರ ಮತಾಂತರ ನಿಷೇಧ ಕಾಯಿದೆ ಜಾರಿಗೊಳಿಸಲು ಹೊರಟಿರುವುದು ಸರಿಯಲ್ಲ ಎಂದು ಹೇಳಿದರು.

ಇಂತಹ ಕಟ್ಟುನಿಟ್ಟಿನ ಕಾಯ್ದೆಯಿಂದ ಜನಸಾಮಾನ್ಯರ ಮೇಲೆ ಪರಿಣಾಮ ಏನಾಗಬಹುದು ಎಂದು ಸರ್ಕಾರ ಊಹಿಸಬೇಕು. ಕರ್ನಾಟಕದಲ್ಲಿ ಈವರೆಗೆ ಮತಾಂತರದ ಒಂದೇ ಒಂದು ಪ್ರಕರಣ ಕೂಡಾ ಪ್ರೂವ್ ಆಗಿಲ್ಲ.ಕೆಲವು ಸಂಘಟನೆಗಳು ಮಾತ್ರ ಈ ಕಾನೂನನ್ನು ಬೆಂಬಲಿಸುತ್ತಾರೆ. ಈ ಕಾನೂನು ಮೂಲಕ ಕೇವಲ ಒಂದು ಧರ್ಮದವರನ್ನು ಟಾರ್ಗೆಟ್ ಮಾಡಲಾಗಿದೆ.ಪೋಲಿಸ್ ಇಲಾಖೆ ಬಳಿ ಬಲವಂತದ ಮತಾಂತರ ಪ್ರೂವ್ ಆದ ಒಂದೇ ಒಂದು ಪ್ರಕರಣ ಇಲ್ಲ ಎಂದು ಹೇಳಿದರು.

ಸಂವಿಧಾನವನ್ನು ಪ್ರೀತಿಸುವ ಜನರು ಈ ದೇಶದಲ್ಲಿ ಇದ್ದಾರೆ. ಅವರು ಯಾರು ಕೂಡಾ ಮತಾಂತರ ನಿಷೇಧ ಕಾಯಿದೆಯನ್ನು ‌ಬೆಂಬಲಿಸುವುದಿಲ್ಲ. ಇವತ್ತು ಆಗುತ್ತಿರುವುದು ಮತಾಂತರ ಅಲ್ಲ ಅದೊಂದು ಧಾರ್ಮಿಕ ನಂಬಿಕೆಯ ಬದಲಾವಣೆ ಅಷ್ಟೇ. ಬಲವಂತದ ಮತಾಂತರ‌ ನಡೆದಿರುವುದು ತಿಳಿದುಬಂದರೆ ನಾವೇ ಇದರ ವಿರುದ್ದ ದೂರು ನೀಡುತ್ತೆವೆ.ಒಂದು ವೇಳೆ ಕಾನೂನು ಜಾರಿಗೆ ಬಂದರೆ ನಮ್ಮ ಧಾರ್ಮಿಕ ಸ್ವಾತಂತ್ರ್ಯ ಕಸಿದಂತಾಗುತ್ತದೆ. ಈ ಕಾನೂನಿನ ದುರುಪಯೋಗ ಆಗುವ ಸಾಧ್ಯತೆ‌ ಇದೆ ಎಂದು ತಿಳಿಸಿದರು.

ಈ ವೇಳೆ ಇಫ್ಕಾ ಜಿಲ್ಲಾಧ್ಯಕ್ಷ ಡಾ.‌ನೇರಿ ಕರ್ನೆಲಿಯೋ, ಕಾರ್ಯದರ್ಶಿ ರಿಚ್ಚಾರ್ಡ್ ಡಯಾಸ್, ಕಾನೂನು ಸಲಹೆಗಾರ ನೊಯೆಲ್ ಪ್ರಶಾಂತ್ ಕರ್ಕಡ, ಭಾರತೀಯ ಕ್ರೈಸ್ತ ಒಕ್ಕೂಟದ ರಾಜ್ಯ ಸಂಚಾಲಕ ಗ್ಲ್ಯಾಡ್ಸನ್ ಕರ್ಕಡ ಉಪಸ್ಥಿತರಿದ್ದರು.

Vishwa News 24

Recent Posts

ಸುರತ್ಕಲ್ : ಪ್ರೀತಿಸುವುದಾಗಿ ನಂಬಿಸಿ ವಂಚನೆ ಆರೋಪ: ಅಪ್ರಾಪ್ತೆ ಆತ್ಮಹತ್ಯೆ; ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು – vishwanews24

ಸುರತ್ಕಲ್ : ಪ್ರೀತಿಸುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಂಚನೆ ಆರೋಪ: ಅಪ್ರಾಪ್ತೆ ಆತ್ಮಹತ್ಯೆ; ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು…

1 hour ago

ರಾಜ್ಯ ಸರ್ಕಾರದಿಂದ  133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ ಶೋಕಾಸ್ ನೋಟಿಸ್ – vishwanews24

ರಾಜ್ಯ ಸರ್ಕಾರದಿಂದ  133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ ಶೋಕಾಸ್ ನೋಟಿಸ್ ಬೆಂಗಳೂರು: ರಾಜ್ಯ ಸರ್ಕಾರ 133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ …

2 hours ago

ಉಡುಪಿ: ಅಸ್ವಸ್ಥಗೊಂಡ ಪ್ರಯಾಣಿಕ ; ಬಸ್‌ನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಣ ಉಳಿಸಿದ ಚಾಲಕ – vishwanews24

ಉಡುಪಿ: ಅಸ್ವಸ್ಥಗೊಂಡ ಪ್ರಯಾಣಿಕ ; ಬಸ್‌ನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಣ ಉಳಿಸಿದ ಚಾಲಕ ಉಡುಪಿ : ಶಿವಮೊಗ್ಗದಿಂದ ಬರುತ್ತಿದ್ದ ಖಾಸಗಿ…

2 hours ago

ಮುಂಬೈನಲ್ಲಿ ಮುಂಗಾರು: ರೈಲು ನಿಲ್ದಾಣ ಸೇರಿದಂತೆ ಹಲವು ಪ್ರದೇಶಗಳು ಜಲಾವೃತ – vishwanews24

ಮುಂಬೈನಲ್ಲಿ ಮುಂಗಾರು: ತಗ್ಗು ಪ್ರದೇಶಗಳು ಜಲಾವೃತ, ರೈಲು ಸಂಚಾರ ವ್ಯತ್ಯಯ ಮುಂಬೈ: ಮುಂಬೈನಲ್ಲಿ ಮುಂಗಾರು ಆರಂಭವಾದ ಒಂದು ದಿನದ ನಂತರ,…

5 hours ago

ಜೂ.25 ರಂದು ಮಂಗಳೂರಿಗೆ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ – vishwanews24

ಜೂ.25ಕ್ಕೆ ಮಂಗಳೂರಿಗೆ ಶಾರುಖ್ ಖಾನ್: ರೋಹನ್ ಕಾರ್ಪೊರೇಶನ್ ವಿಶೇಷ ಕಾರ್ಯಕ್ರಮದಲ್ಲಿ ಭಾಗಿ ಮಂಗಳೂರು: ಬಾಲಿವುಡ್ ನ ಖ್ಯಾತ ನಟ ಹಾಗೂ…

5 hours ago

ಕರ್ತವ್ಯದ ವೇಳೆ ಹೃದಯಾಘಾತ : ಡಿಎಆರ್ ಪೊಲೀಸ್ ಕಾನ್ಸ್‌ಟೇಬಲ್ ಸಾವು – vishwanews24

ಕರ್ತವ್ಯದ ವೇಳೆ ಹೃದಯಾಘಾತ : ಡಿಎಆರ್ ಪೊಲೀಸ್ ಕಾನ್ಸ್‌ಟೇಬಲ್ ಸಾವು ರಾಯಚೂರು: ಜಿಲ್ಲೆಯ ದೇವದುರ್ಗ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಾನ್ಸ್‌ಟೇಬಲ್…

5 hours ago