ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆ-2024 ರ ಮತ ಎಣಿಕಾ ಕಾರ್ಯವು ಜೂನ್ 4 ರಂದು ಉಡುಪಿಯ ಅಜ್ಜರಕಾಡು ಸೈಂಟ್ ಸಿಸಿಲಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಲಿರುವ ಹಿನ್ನೆಲೆ, ಅಂದು ಬೆಳಗ್ಗೆ 5 ಗಂಟೆಯಿAದ ಮತ ಎಣಿಕೆ ಮುಗಿಯುವ ವರೆಗೆ ಸದ್ರಿ ರಸ್ತೆಯಲ್ಲಿ ಸಾರ್ವಜನಿಕ ಸಂಚಾರ ವ್ಯವಸ್ಥೆಯಲ್ಲಿ ಈ ಕೆಳಗಿನಂತೆ ಮಾರ್ಪಾಡುಗಳನ್ನು ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಆದೇಶಿಸಿರುತ್ತಾರೆ.
ಜೂನ್ 4 ರಂದು ಬ್ರಹ್ಮಗಿರಿ ಜಂಕ್ಷನ್‌ನಿoದ ನಾಯಕ್ ಕ್ಯಾಂಟೀನ್ ವರೆಗಿನ ಮತ್ತು ಅಜ್ಜರಕಾಡು ಜಂಕ್ಷನ್‌ನಿoದ ಸುದರ್ಶನ್ ರೆಸಿಡೆನ್ಸಿ ವರೆಗಿನ ರಸ್ತೆಯಲ್ಲಿ ಸಂಚಾರ ನಿಷೇಧಿಸಿದ್ದು, ಬದಲಿ ಮಾರ್ಗದಲ್ಲಿ ಸಂಚರಿಸಬೇಕು.
ಮತ ಎಣಿಕೆಯ ಸಂಬoಧ ಸರಕಾರಿ ಅಧಿಕಾರಿಗಳ ವಾಹನಗಳ ಪಾರ್ಕಿಂಗ್ ದೃಷ್ಠಿಯಿಂದ ಜೂನ್ 4 ರಂದು ಬ್ರಹ್ಮಗಿರಿ ಜಂಕ್ಷನ್‌ನಿoದ ಅಜ್ಜರಕಾಡು ಜಂಕ್ಷನ್ ವರೆಗಿನ ರಸ್ತೆಯಲ್ಲಿ ಸಂಚಾರ ನಿಷೇಧಿಸಲಾಗಿದೆ ಹಾಗೂ ಅಜ್ಜರಕಾಡು ಜಂಕ್ಷನ್‌ನಿoದ ಬ್ರಹ್ಮಗಿರಿ ಜಂಕ್ಷನ್ ವರೆಗಿನ ರಸ್ತೆಯನ್ನು ಏಕಮುಖ ರಸ್ತೆಯನ್ನಾಗಿ ಬದಲಾಯಿಸಿದೆ.
ಈ ಅಧಿಸೂಚನೆಯನ್ನು ಮೋಟಾರು ವಾಹನ ಕಾಯ್ದೆ 1988 ರ ಕಲಂ 115 ಹಾಗೂ ಕರ್ನಾಟಕ ಮೋಟಾರು ನಿಯಮ 1989 ರ ನಿಯಮ 221 (5)(ಎ) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಈ ಆದೇಶವನ್ನು ಹೊರಡಿಸಿರುತ್ತಾರೆ.
ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ಶಾಖೆ ವತಿಯಿಂದ ಗಾಂಧಿ ಜಯಂತಿ ಆಚರಣೆ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ…
ಮಂಗಳೂರು : ಅ.2ರಂದು ಜಿಲ್ಲಾ ಯುವ ಕಾಂಗ್ರೆಸ್‌ನಿಂದ ‘ಸದ್ಭಾವನಾ ನಡಿಗೆ’ ಮಂಗಳೂರು: ಗಾಂಧಿ ಜಯಂತಿ ಪ್ರಯುಕ್ತ ದ.ಕ.ಜಿಲ್ಲಾ ಯುವ ಕಾಂಗ್ರೆಸ್…
ಶಂಕರಪುರ ದ್ವಾರಕಾಮಾಯಿ ಮಠದಲ್ಲಿ ‘ಪಂಚಾಶತ್ ಜನ್ಮ ವೈಭವ’ ಅ.3ರಿಂದ ಧಾರ್ಮಿಕ ಕಾರ್ಯಕ್ರಮಗಳ ಚಾಲನೆ.. ವರ್ಷಪೂರ್ತಿ ಗೋಸೇವೆ, ಅನ್ನದಾನ, ಆರೋಗ್ಯ–ಶಿಕ್ಷಣ ಸೇವೆ…
ಸೌಜನ್ಯಾ ಪ್ರಕರಣದ ಮರುತನಿಖೆ: ಮಂಗಳೂರಿಗೆ ಆಗಮಿಸಿದ ನೂತನ ಎಸ್ಐಟಿ ತಂಡ ಮಂಗಳೂರು : ಸೌಜನ್ಯಾ ಅತ್ಯಾಚಾರ, ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ…
ಪರಪ್ಪನ ಆಗ್ರಹಾರ ಕಾರಾಗೃಹದಲ್ಲಿ ಮತ್ತೆ ಮೊಬೈಲ್ ಫೋನ್, ಸಿಮ್ಕಾರ್ಡ್ ಗಳು ಪತ್ತೆ ಬೆಂಗಳೂರು: ಪರಪ್ಪನ ಆಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮೊಬೈಲ್…
ಎಂಆರ್‌ಪಿಎಲ್ ಕಾರ್ಮಿಕರ ಮುಷ್ಕರ: ಮೃತ ಮನೀಶ್ ಕಾರ್ಕಡಗೆ ಶ್ರದ್ಧಾಂಜಲಿ, ಪರಿಹಾರಕ್ಕೆ ಆಗ್ರಹ ಮಂಗಳೂರು: ಎಂಆರ್‌ಪಿಎಲ್‌ನಲ್ಲಿ ನಿನ್ನೆ (ಸೆ.30ರ ಬುಧವಾರ) ನಡೆದ…