ಉಡುಪಿ: ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕಳ್ಳರು ಮನೆಯೊಳಗೆ ನುಗ್ಗಿ ಕಳ್ಳತನ ಮಾಡಿ ಸುಮಾರು ನಗದು, ಚಿನ್ನಾಭರಣ ಸಹಿತ ಸುಮಾರು 18.35 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಎಗರಿಸಿದ ಘಟನೆ ಅಂಬಲ್ಪಾಡಿ ಗ್ರಾಮದ ಸಿಪಿಸಿ ಲೇಔಟ್‌ನ ಜಯಗಣೇಶ ಬೀಡು ಎಂಬವರ ಮನೆಯಲ್ಲಿ ನಡೆದಿದೆ.
ನ.6 ರ ಸಂಜೆ 6.15 ರ ನ.7 ರ ಬೆಳಿಗ್ಗೆ 10:45 ಗಂಟೆ ನಡುವೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಯಾರೋ ಕಳ್ಳರು ಮನೆಯ ಹಿಂಬಾಗಿಲಿನ ಕಿರು ಬಾಗಿಲನ್ನು ಯಾವುದೋ ಆಯುಧದಿಂದ ಮೀಟಿ ಮುರಿದು ಒಳ ಪ್ರವೇಶಿಸಿ, ಒಳಗಿನ ಬಾಗಿಲಿನ ಚಿಲಕದ ಬದಿ ಮುರಿದು ಮಾಸ್ಟರ್ ಬೆಡ್‌ರೂಮಿನ ಕೀ ತೆಗೆದು ಒಳಪ್ರವೇಶಿಸಿ, ಕಪಾಟನ್ನು ಹಾಗೂ ಲಾಕರ್‌ನ್ನು ಬಲಾತ್ಕಾರವಾಗಿ ಮೀಟಿ ತೆಗೆದು ಕಳ್ಳತನವೆಸಗಿದ್ದಾರೆ ಎಂದು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಳೆಗಳು, ಮುತ್ತಿನ ಸರ, ಉಂಗುರ, ವಜ್ರದ ಕಿವಿ ಓಲೆ, ನೆಕ್ಲೇಸ್ ಮುಂತಾದ ರೂ. 14 ಲಕ್ಷ ಮೌಲ್ಯದ 332 ಗ್ರಾಂ ತೂಕ ಚಿನ್ನಾಭರಣಗಳು ಹಾಗೂ ಗೆಸ್ಟ್ ರೂಮಿನ ಕಪಾಟಿನ ಲಾಕರ್ ಒಡೆದು ಅದರಲ್ಲಿದ್ದ ರೂಪಾಯಿ. 3,00,000 ಹಣವನ್ನು ಮತ್ತು ಸುಮಾರು 1,35,000 ಮೌಲ್ಯದ 45 ಹಳೆಯ ಬೆಳ್ಳಿಯ ನಾಣ್ಯಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ ರೂಪಾಯಿ 18,35,000 ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಉಡುಪಿ : ಯುವತಿ ನಾಪತ್ತೆ ಉಡುಪಿ : ಉಡುಪಿ ಸವೀಸ್ ಬಸ್ ನಿಲ್ದಾಣದ ಬಳಿ ಇರುವ ಹೊಲಿಗೆ ತರಬೇತಿ ಕೇಂದ್ರದಲ್ಲಿ…
ಪಡುಬಿದ್ರಿ : ವ್ಯಕ್ತಿ ನಾಪತ್ತೆ ಉಡುಪಿ: ಎಲ್ಲೂರು ಗ್ರಾಮ ಅದಮಾರು ಅಂಚೆ ಅಂಬೇಡ್ಕರ್ ರೋಡ್ ಆಶಿರ್ವಾದ ಹೌಸ್ ನಿವಾಸಿ ಹರ್ಷಲ್…
ತುಳು ಭಾಷೆಯ ಮಾನ್ಯತೆ ಕೇವಲ ಉಡುಪಿ-ದ.ಕ. ಜಿಲ್ಲೆಗಳಿಗೆ ಸೀಮಿತಗೊಳಿಸುವುದು ಸರಿಯಲ್ಲ : ಪ್ರಮೋದ್ ಮಧ್ವರಾಜ್ ಉಡುಪಿ: ತುಳು ಭಾಷೆಗೆ ಅಧಿಕೃತ…
ಉಡುಪಿ ಜಿಲ್ಲಾಸ್ಪತ್ರೆ ಶೀಘ್ರ ಲೋಕಾರ್ಪಣೆಗೆ ಖಾದರ್ ಗೆ ಉಡುಪಿ ಶಾಸಕರ ಮನವಿ ಉಡುಪಿ: ನೂತನ ಜಿಲ್ಲಾಸ್ಪತ್ರೆಯನ್ನು ಸಾರ್ವಜನಿಕರ ಸೇವೆಗೆ ಶೀಘ್ರ…
ದುಬೈಯ ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯ ಅಮಾನವೀಯ ಕೊಲೆ : ಪತ್ನಿ , ಪುತ್ರ ನಾಪತ್ತೆ ; ಪ್ರಕರಣ ದಾಖಲು…
ಮಂಗಳೂರು : ಅಕ್ರಮವಾಗಿ ಜಾನುವಾರು ಸಾಗಾಟ: ಓರ್ವ ಬಂಧನ, ಮತ್ತೋರ್ವ ಪರಾರಿ ಮಂಗಳೂರು: ಅಕ್ರಮವಾಗಿ ಹಾಗೂ ಹಿಂಸಾತ್ಮಕ ರೀತಿಯಲ್ಲಿ ಜಾನುವಾರುಗಳನ್ನು…