ಉಡುಪಿ

ಉಡುಪಿ ಮರಳು ಸಮಸ್ಯೆ ನಿವಾರಣೆ : ಬಹುದಿನಗಳ ಹೋರಾಟ, ಶ್ರಮ ಸಾರ್ಥಕವಾಯಿತು : ಕೋಟ ಶ್ರೀನಿವಾಸ ಪೂಜಾರಿ -Vishwanews24

ಉಡುಪಿ: ಜಿಲ್ಲೆಯ ಕರಾವಳಿ ನಿಯಂತ್ರಣ ವಲಯದ ನದಿ ಪಾತ್ರಗಳಲ್ಲಿ ಗುರುತಿಸಿರುವ 8 ಮರಳು ದಿಬ್ಬಗಳನ್ನು ತೆರವುಗೊಳಿಸುವ ಕಾರ್ಯ ಪ್ರಾರಂಭವಾಗಿದ್ದು, ಶುಕ್ರವಾರ ಸುಮಾರು 85 ಮೆಟ್ರಿಕ್ ಟನ್ ಮರಳು ಸಾಗಾಟ ಮಾಡಲಾಗಿದೆ.

ಜಿಲ್ಲಾ ಮರಳು ಉಸ್ತುವಾರಿ ಸಮಿತಿ 158 ಮಂದಿ ಸಾಂಪ್ರದಾಯಿಕ ಪರವಾನಗಿದಾರರನ್ನು ಗುರುತಿಸಿದ್ದು, ಸ್ವೀಕೃತ ಅರ್ಜಿಗಳಲ್ಲಿ 42 ಮಂದಿಗೆ ಪರವಾನಗಿ ನೀಡಿದೆ. ಗುರುವಾರ 16 ಮಂದಿ ಐಎಲ್‌ಎಂಎಸ್‌ನಲ್ಲಿ ನೋಂದಣಿ ಮಾಡಿ ಟ್ರಿಪ್‌ಶೀಟ್ ಪಡೆದಿದ್ದು, ಶುಕ್ರವಾರ ಮರಳು ಸಾಗಾಟ ಆರಂಭಿಸಿದ್ದಾರೆ. ಸ್ವರ್ಣಾ ನದಿಯಲ್ಲಿ ಮೂಡತೋನ್ಸೆ, ಉಪ್ಪೂರು, ಕುದ್ರುಬೆಟ್ಟು ವಲಯದಲ್ಲಿ ಮರಳು ದಿಬ್ಬ ತೆರವು ಮಾಡಲಾಗುತ್ತಿದೆ.

‘ಮರಳು ಸಮಸ್ಯೆ ಹಲವು ವರ್ಷದಿಂದ ಪರಿಹಾರ ಕಾಣದ ಪರಿಣಾಮ ಕರಾವಳಿಯ ಆರ್ಥಿಕತೆಗೆ ಹೊಡೆತ ನೀಡಿದೆ. ಈಗ ಮರಳು ದಿಬ್ಬ ತೆರವು ಕಾರ್ಯ ಆರಂಭವಾಗಿದ್ದು, ಸಾವಿರಾರು ಕೂಲಿ ಕಾರ್ಮಿಕರು ನೆಮ್ಮದಿ ಕಾಣಲಿದ್ದಾರೆ. ಕೈಗೆಟುಕುವ ಬೆಲೆಯಲ್ಲಿ ಮರಳು ಜನರಿಗೆ ಲಭ್ಯವಾಗಲಿದೆ’ ಎಂದು ಶಾಸಕ ಕೆ.ರಘುಪತಿ ಭಟ್ ಪ್ರತಿಕ್ರಿಯಿಸಿದ್ದಾರೆ.

ಕಳೆದ ಬಾರಿ ಮರಳು ದಿಬ್ಬಗಳನ್ನು ಗುರುತಿಸುವಾಗ ಮೀನುಗಾರಿಕೆ ನಡೆಸುವ ಕೆಲವೊಂದು ಪ್ರದೇಶ ಗಳಲ್ಲಿ ಮರಳಿನ ದಿಬ್ಬಗಳನ್ನು ಗುರುತಿಸಲಾಗಿತ್ತು. ಇಂತಹ ಕಡೆಗಳಲ್ಲಿ ಅಲ್ಲಿನ ಮೀನುಗಾರರೊಂದಿಗೆ ಮತನಾಡಿ ಅವರ ಬೋಟಿನ ಸಂಚಾರಕ್ಕೆ ಮರಳು ಅಡ್ಡಿಯಾಗುತಿದ್ದಲ್ಲಿ ಅಲ್ಲಿ ಮರಳು ತೆಗೆಯಲು ಅನುಮತಿ ನೀಡುತ್ತೇವೆ ಇಲ್ಲದಿದ್ದಲ್ಲಿ ಬೇರೆ ಪ್ರದೇಶಗಳಲ್ಲಿ ದಿಬ್ಬಗಳನ್ನು ಗುರುತಿಸಲಾಗುವುದು. ನಾನ್ ಸಿಆರ್ ಝಡ್ ಪ್ರದೇಶದಲ್ಲಿ 24 ಕಡೆಗಳಲ್ಲಿ ಮರಳು ತೆಗೆಯಲು ಟೆಂಡರ್ ಕರೆಯಲಾಗಿತ್ತು ಆದರೆ ಕೇವಲ ಇಬ್ಬರು ಟೆಂಡರ್ ಮಾತ್ರ ಆಸಕ್ತಿ ತೋರಿಸಿದ್ದಾರೆ ಅವರಿಗೆ ವರ್ಕ್ ಆಡರ್ರ್ ನೀಡಿದ್ದು ಟೆಂಡರ್ ನಿಯಮಗಳನ್ನು ಸರಳೀಕರಿಸಿ ಮತ್ತೆ ಟೆಂಡರ್ ಕರೆಯಲಾಗುವುದು ಎಂದವರು ತಿಳಿಸಿದರು.

ಕಳೆದ ಹಲವು ಸಮಯಗಳಿಂದ ಜಿಲ್ಲೆಯಲ್ಲಿ ಮರಳಿನ ಸಮಸ್ಯೆ ಇದ್ದುರಿಂದಾಗಿ ಈಗ ಪ್ರಯೋಗಿಕವಾಗಿ ಮರಳನ್ನು ಆಪ್ ಮುಖಾಂತರ ನೀಡಲಾಗುವುದಿಲ್ಲ. ಆದರೆ ಬಜೆಯಲ್ಲಿನ ಹೂಳನ್ನು ತೆಗೆಯಲು ಈಗಾಗಲೇ ವರ್ಕ್ ಆರ್ಡರ್ ನೀಡಿದ್ದು ಇಲ್ಲಿ ಪ್ರಯಾಗಿಕವಾಗಿ ಆಪ್ ನ್ನು ಬಳಸಿ ಮರಳು ವಿತರಿಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.

ಬಹುದಿನಗಳ ಹೋರಾಟ, ಶ್ರಮ ಸಾರ್ಥಕವಾಯಿತು. ಉಡುಪಿ ಜಿಲ್ಲೆಯಲ್ಲಿ ಮರಳು ದಿಬ್ಬ ತೆರವುಗೊಳಿಸಲು 158ಕ್ಕೂ ಹೆಚ್ಚು ಪರವಾನಗಿ ನೀಡಲಾಗುತ್ತಿದೆ. ದುಡಿದುಣ್ಣುವ ಕಾರ್ಮಿಕರು ಮತ್ತು ಬಡವರ ಮನೆ, ನಿಂತು ಹೋಗಿರುವ ವಿವಿಧ ಕಾಮಗಾರಿಗಳಿಗೆ ಮರಳು ಸಿಗುವ ಮೂಲಕ ಚಾಲನೆ ಸಿಕ್ಕರೆ ನನಗದು ಖುಷಿ ಮತ್ತು ಸಮಾಧಾನ. ದುಡಿಯುವವರ ಮುಖದಲ್ಲಿ ನಗು ಮೂಡಲಿ.

– ಕೋಟ ಶ್ರೀನಿವಾಸ ಪೂಜಾರಿ, ಸಚಿವ

Vishwa News 24

Recent Posts

ಮೈಸೂರು: ಕಾಲೇಜು ಕ್ಯಾಂಪಸ್‌ನಲ್ಲೇ ಹೃದಯಾಘಾತ ; ಕುಸಿದುಬಿದ್ದು ವಿದ್ಯಾರ್ಥಿ ಸಾವು – vishwanews24

ಮೈಸೂರು: ಕಾಲೇಜು ಕ್ಯಾಂಪಸ್‌ನಲ್ಲೇ ಹೃದಯಾಘಾತ ; ಕುಸಿದುಬಿದ್ದು ವಿದ್ಯಾರ್ಥಿ ಸಾವು ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಖ್ಯಾತ ಮರಿಮಲ್ಲಪ್ಪ ಕಾಲೇಜು…

3 days ago

ಅಡ್ಡ ಮತದಾನ ಮೂಲಕ ಪಕ್ಷಕ್ಕೆ ಹಾಗೂ ಮೈತ್ರಿಗೆ ದ್ರೋಹ ಬಗೆದವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ : ವಿಜಯೇಂದ್ರ ಆಕ್ರೋಶ – vishwanews24

ಅಡ್ಡ ಮತದಾನ ಮೂಲಕ ಪಕ್ಷಕ್ಕೆ ಹಾಗೂ ಮೈತ್ರಿಗೆ ದ್ರೋಹ ಬಗೆದವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ : ವಿಜಯೇಂದ್ರ ಆಕ್ರೋಶ ಬೆಂಗಳೂರು:…

3 days ago

ಭಟ್ಕಳ ಲವ್ ಜಿಹಾದ್ ಆರೋಪ : ಯುವಕ ಅರೆಸ್ಟ್‌ – vishwanews24

ಭಟ್ಕಳ ಲವ್ ಜಿಹಾದ್ ಆರೋಪ : ಯುವಕ ಅರೆಸ್ಟ್‌ ಕಾರವಾರ: ಉತ್ತರ ಕನ್ನಡ  ಜಿಲ್ಲೆಯ ಭಟ್ಕಳದಲ್ಲಿ ಕಿಚ್ಚು ಹಚ್ಚಿದ ಹಿಂದೂ,…

3 days ago

ಪರಿಷತ್ ಚುನಾವಣೆಯಲ್ಲಿ ನಮಗೆ ಮತ ನೀಡಿದ ಬೇರೆ ಪಕ್ಷದ ವಿಶ್ವಾಸವನ್ನುನಾವು ಉಳಿಸಿಕೊಳ್ಳುತ್ತೇವೆ: ಡಿ.ಕೆ.ಶಿವಕುಮಾರ್‌ – vishwanews24

ಪರಿಷತ್ ಚುನಾವಣೆಯಲ್ಲಿ ನಮಗೆ ಮತ ನೀಡಿದ ಬೇರೆ ಪಕ್ಷದ ವಿಶ್ವಾಸವನ್ನುನಾವು ಉಳಿಸಿಕೊಳ್ಳುತ್ತೇವೆ: ಡಿ.ಕೆ.ಶಿವಕುಮಾರ್‌ ಬೆಂಗಳೂರು: ವಿಧಾನ ಪರಿಷತ್‌ ಚುನಾವಣೆಯಲ್ಲಿ ನಮ್ಮ…

3 days ago

ವಚನಾನಂದ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ: ಜೂ. 30ಕ್ಕೆ ಮುಂದೂಡಿಕೆ – vishwanews24

ವಚನಾನಂದ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ: ಜೂ. 30ಕ್ಕೆ ಮುಂದೂಡಿಕೆ ದಾವಣಗೆರೆ: ಹರಿಹರದ  ವಚನಾನಂದ ಸ್ವಾಮೀಜಿ ಪೋಕ್ಸೋ ಪ್ರಕರಣ ಆದೇಶವನ್ನು…

4 days ago

ವಿಟ್ಲ : ಲಾರಿಯಲ್ಲಿ ತಾಂತ್ರಿಕ ವೈಫಲ್ಯ – ಸರಿಪಡಿಸುವ ವೇಳೆ ಚಕ್ರಗಳ ಅಡಿಗೆ ಸಿಲುಕಿ ಚಾಲಕ ಸ್ಥಳದಲ್ಲೇ ಮೃತ್ಯು – vishwanews24

ವಿಟ್ಲ : ಲಾರಿಯಲ್ಲಿ ತಾಂತ್ರಿಕ ವೈಫಲ್ಯ - ಸರಿಪಡಿಸುವ ವೇಳೆ ಚಕ್ರಗಳ ಅಡಿಗೆ ಸಿಲುಕಿ ಚಾಲಕ ಸ್ಥಳದಲ್ಲೇ ಮೃತ್ಯು ವಿಟ್ಲ:…

4 days ago