Featured

ಉಡುಪಿ : ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ವತಿಯಿಂದ ಮಹಿಳಾ ಸಾಧಕರಿಗೆ ಸನ್ಮಾನ – Vishwanews24

ಉಡುಪಿ : ಮಲಬಾರ್ ಗೋಲ್ಡ್‌ನಿಂದ ಮಹಿಳಾ ಸಾಧಕರಿಗೆ ಸನ್ಮಾನ

ಉಡುಪಿ: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಶುಕ್ರವಾರ ಉಡುಪಿ ಮಳಿಗೆಯಲ್ಲಿ ಜರಗಿತು.

ವಿವಿಧ ಕ್ಷೇತ್ರಗಳ ಸಾಧಕರಾದ ಡಾ.ವೀಣಾ ಕುಮಾರಿ(ವೈದ್ಯಕೀಯ), ಅಸ್ಮಾ ಬಾನು(ಕೃಷಿ), ಸಂಧ್ಯಾ ಉದಯ್(ಸಂಘಟಕಿ), ಯಶೋಧಾ ಕೇಶವ್ (ಮಾಧ್ಯಮ) ಅವರನ್ನು ಕುಂದಾಪುರ ವಿಭಾಗದ ಸಹಾಯಕ ಆಯುಕ್ತೆ ರಶ್ಮಿ ಎಸ್.ಆರ್. ಸನ್ಮಾನಿಸಿದರು.

ಬಳಿಕ ಮಾತನಾಡಿದ ಸಹಾಯಕ ಆಯುಕ್ತೆ ರಶ್ಮಿ ಎಸ್.ಆರ್., ಮಹಿಳೆಯರಿಗೆ ತಮ್ಮಲ್ಲಿರುವ ಸಾಮರ್ಥ್ಯದ ಅರಿವು ಇರುವುದಿಲ್ಲ. ಅದಕ್ಕೆ ಪ್ರೋತ್ಸಾಹ ದೊರೆತರೆ ಮಹಿಳೆ ಯಾವುದೇ ಕ್ಷೇತ್ರದಲ್ಲೂ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.

ಮುಖ್ಯ ಅತಿಥಿಗಳಾಗಿ ಹಾಸ್ಯ ಭಾಷಣಕಾರ್ತಿ ಸಂಧ್ಯಾ ಶೆಣೈ, ಕೈಮಗ್ಗ ಸೀರೆಯ ರೂಪದರ್ಶಿ ವಿದ್ಯಾ ಸರಸ್ವತಿ ಮಾತನಾಡಿದರು. ಉಡುಪಿ ಶಾಖೆಯ ಮುಖ್ಯಸ್ಥ ಹಫೀಝ್ ರೆಮಹನ್, ಸ್ಟೋರ್ ಮೆನೇಜರ್ ಪುರಂದರ ತಿಂಗಳಾಯ, ಜಿಆರ್‌ಎಂ ರಾಘವೇಂದ್ರ ನಾಯಕ್, ಮಾರ್ಕೆಟಿಂಗ್ ಮೆನೇಜರ್ ತಂಝೀಮ್ ಶಿರ್ವ ಮೊದಲಾದವರು ಉಪಸ್ಥಿತರಿದ್ದರು. ವಿಘ್ನೇಶ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Vishwa News 24

Recent Posts

ಉಡುಪಿ ನಗರಸಭೆ ವ್ಯಾಪ್ತಿಯ ಮೂಲ ಸೌಕರ್ಯ ಅಭಿವೃದ್ಧಿಗೆ ರೂ. 30 ಕೋಟಿ ಅನುದಾನ ಮಂಜೂರು ಮಾಡುವಂತೆ  ಶಾಸಕ ಯಶ್ ಪಾಲ್ ಮನವಿ – vishwanews24

ಉಡುಪಿ ನಗರಸಭೆ ಮೂಲ ಸೌಕರ್ಯ ಅಭಿವೃದ್ಧಿಗೆ ರೂ. 30 ಕೋಟಿ ವಿಶೇಷ ಅನುದಾನ ಮಂಜೂರು ಮಾಡುವಂತೆ ನಗರಾಭಿವೃದ್ಧಿ ಸಚಿವ ಯತೀಂದ್ರ…

1 hour ago

ಮಂಗಳೂರು: ಮುಂದಿನ ಏಷ್ಯನ್ ಗೇಮ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಚಿನ್ನ ಗೆಲ್ಲುವೆ : ಪೂವಮ್ಮ – vishwanews24

ಮಂಗಳೂರು: ಮುಂದಿನ ಏಷ್ಯನ್ ಗೇಮ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಚಿನ್ನ ಗೆಲ್ಲುವೆ : ಪೂವಮ್ಮ ಮಂಗಳೂರು: ಬದುಕಿನಲ್ಲಿ ಅನೇಕ ಏಳು…

1 hour ago

ಉಡುಪಿ ಜಿಲ್ಲೆಯಲ್ಲಿ ತಾತ್ಕಾಲಿಕ ಸುಡುಮದ್ದು ಮಾರಾಟಕ್ಕೆ ಲೈಸನ್ಸ್ : ಅರ್ಜಿ ಸಲ್ಲಿಸಲು ಅ.26 ಕೊನೆಯ ದಿನ – vishwanews24

ಉಡುಪಿ :ಜಿಲ್ಲೆಯಲ್ಲಿ ತಾತ್ಕಾಲಿಕ ಸುಡುಮದ್ದು ಮಾರಾಟ ; ಲೈಸನ್ಸ್‌ಗಾಗಿ ಅರ್ಜಿ ಸಲ್ಲಿಸಲು ಅ. 26 ಕೊನೆಯ ದಿನ ಉಡುಪಿ: ದೀಪಾವಳಿ…

2 hours ago

ಉಡುಪಿ : ಯಕ್ಷಗಾನವನ್ನು ‘ಕರ್ನಾಟಕ ರಾಜ್ಯ ಕಲೆ’ ಎಂದು ಘೋಷಿಸಿ : ಮುಖ್ಯಮಂತ್ರಿಗಳಿಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಮನವಿ – vishwanews24

ಉಡುಪಿ : ಯಕ್ಷಗಾನವನ್ನು ‘ಕರ್ನಾಟಕ ರಾಜ್ಯ ಕಲೆ’ ಎಂದು ಘೋಷಿಸಿ : ಮುಖ್ಯಮಂತ್ರಿಗಳಿಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಮನವಿ ಉಡುಪಿ…

2 hours ago

ರಾಜ್ಯಕ್ಕೆ 3705.30 ಕೋಟಿ ರೂ. ಬರ ಪರಿಹಾರ ನೀಡಿ: ಸಿಎಂ ಡಿ.ಕೆ.ಶಿವಕುಮಾರ್ ಮನವಿ – vishwanews24

ರಾಜ್ಯಕ್ಕೆ 3705.30 ಕೋಟಿ ರೂ. ಬರ ಪರಿಹಾರ ನೀಡಿ: ಸಿಎಂ ಡಿ.ಕೆ.ಶಿವಕುಮಾರ್ ಮನವಿ ಕೇಂದ್ರ ಬರ ಅಧ್ಯಯನ ತಂಡದೊಂದಿಗೆ ಸಿಎಂ…

2 hours ago

ಮಣಿಪಾಲ: ಕ್ಯು ಆರ್ ಕೋಡ್ ಬದಲಿಸಿ 12 ಲಕ್ಷ ರೂಪಾಯಿ ವಂಚನೆ – vishwanews24

ಮಣಿಪಾಲ: ಕ್ಯು ಆರ್ ಕೋಡ್ ಬದಲಿಸಿ 12 ಲಕ್ಷ ರೂಪಾಯಿ ವಂಚನೆ ಮಣಿಪಾಲ: ಕಂಪೆನಿ ಕ್ಯು ಆರ್‌ಕೋಡ್ ಬಳಸದೆ ಮರ್ಚೆಂಟ್…

2 hours ago