Featured

ಉಡುಪಿ ಮಲಬಾರ್ ಗೋಲ್ಡ್ ನಲ್ಲಿ `ಆನಿಕಾ’ ವಜ್ರಾಭರಣ ಅನಾವರಣ -vishwanews24

ಉಡುಪಿ ಮಲಬಾರ್ ಗೋಲ್ಡ್ ನಲ್ಲಿ `ಆನಿಕಾ’ ವಜ್ರಾಭರಣ ಅನಾವರಣ

ಉಡುಪಿ : ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಮೈನ್ ಬ್ರಾಂಡಿನ ನೂತನ ವಜ್ರಾಭರಣ `ಆನಿಕಾ’ವನ್ನು ಸೋಮವಾರ ಅನಾವರಣಗೊಳಿಸಲಾಯಿತು.

ರೂಪದರ್ಶಿಗಳಾದ ಅನುಷಾ ಕರ್ಕೇರ ಹಾಗೂ ನಿಸರ್ಗ ಈ ವಿನೂತನ ವಜ್ರಾಭರಣ ಆನಿಕಾವನ್ನು ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಅನುಷಾ ಕರ್ಕೇರ, ಮಲಬಾರ್ ಗೋಲ್ದ್ ನಲ್ಲಿ ವಜ್ರಾಭರಣಗಳ ಸಂಗ್ರಹ ವೈವಿಧ್ಯಮಯ ಹಾಗೂ ಆಕರ್ಷಣೀಯವಾಗಿದೆ. ಇಲ್ಲಿನ ಸಿಬ್ಬಂದಿಗಳ ಸೇವೆ ಕೂಡ ಅತ್ಯುತ್ತಮವಾಗಿದೆ. ಸಾಮಾಜಿಕ ಕಾರ್ಯದಲ್ಲೂ ಈ ಸಂಸ್ಥೆ ತೊಡಗಿಸಿ ಕೊಂಡಿದ್ದು, ಇನ್ನಷ್ಟು ಎತ್ತರಕ್ಕೇರಲಿ ಎಂದು ಹಾರೈಸಿದರು.

ನಿಸರ್ಗ ಮಾತನಾಡಿ, ಕಳೆದ ೮-೧೦ವರ್ಷಗಳಿಂದ ಮಲಬಾರ್ ಗೋಲ್ಡ್ನ ಗ್ರಾಹಕನಾಗಿದ್ದೆನೆ. ನನಗೆ ಇಲ್ಲಿನ ಚಿನ್ನ ಹಾಗೂ ವಜ್ರಾಭರಣ ಗಳಲ್ಲಿ ಸಂತೃಪ್ತಿ ಇದೆ. ಈ ಹೊಸ ಉತ್ಪನ್ನ ವೈವಿಧ್ಯಮಯವಾಗಿದ್ದು, ತುಂಬಾ ಆಕರ್ಷಣೀಯವಾಗಿದೆ ಎಂದು ಹೇಳಿದರು.

ಸಿಬ್ಬಂದಿ ಹರೀಶ್ ಎಂ.ಜಿ. ಅನಿಕಾ ಬಗ್ಗೆ ಮಾಹಿತಿ ನೀಡಿ, ಈ ವಜ್ರಾಭರಣವು ನ್ಯಾಚುರಲ್ ಡೈಮಂಡ್ಸ್ ಆಗಿದ್ದು, ಇದರಲ್ಲಿ ವೈವಿಧ್ಯಮಯ ಡಿಸೈನ್‌ಗಳಿವೆ. ಸಾಕಷ್ಟು ಆಕರ್ಷಕ ರೀತಿಯ ಈ ವಜ್ರಾಭರಣವು ೧೫ಸಾವಿರ ರೂ.ನಿಂದ ೧೫ಲಕ್ಷರೂ.ವರಗೆ ಬೆಲೆಬಾಳುತ್ತದೆ. ಅನಿಕಾದ ವಿವಿಧ ವಜ್ರಾಭರಣಗಳ ಸಂಗ್ರಹವು ಮಲಬಾರ್‌ನಲ್ಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಉಡುಪಿ ಶಾಖಾ ಮುಖ್ಯಸ್ಥ ವಿಜಯ ಕುಮಾರ್ ಡಿ., ವ್ಯವಸ್ಥಾಪಕರಾದ ಪುರಂದರ ತಿಂಗಳಾಯ, ಮುಸ್ತಫಾ ಎ.ಕೆ., ಮಾರುಕಟ್ಟೆ ವ್ಯವಸ್ಥಾಪಕ ತಂಝೀಮ್ ಶಿರ್ವ ಮೊದಲಾದವರು ಉಪಸ್ಥಿತರಿದ್ದರು. ವಿಘ್ನೇಶ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Vishwa News 24

Recent Posts

ಉಡುಪಿ ಕೃಷ್ಣ ಮಠದಲ್ಲಿ ತಪ್ತಮುದ್ರಾಧಾರಣೆ – vishwanews24

ಉಡುಪಿ ಕೃಷ್ಣ ಮಠದಲ್ಲಿ ತಪ್ತಮುದ್ರಾಧಾರಣೆ ಉಡುಪಿ: ಆಷಾಢ ಶುಕ್ಲ ಪ್ರಥಮ ಏಕಾದಶಿ ಅಂಗವಾಗಿ ಉಡುಪಿ ಜಿಲ್ಲೆಯ ಪ್ರಮುಖ ಮಠಗಳಲ್ಲಿ ತಪ್ತ…

17 hours ago

ಮಂಗಳೂರು: ರೌಡಿಶೀಟರ್ ಮೇಲೆ ಮಾರಕಾಸ್ತ್ರದಿಂದ ದಾಳಿ ; ಆರೋಪಿಗಾಗಿ ಶೋಧ- vishwanews24

ಮಂಗಳೂರು: ರೌಡಿಶೀಟರ್ ಮೇಲೆ ಮಾರಕಾಸ್ತ್ರದಿಂದ ದಾಳಿ ಮಂಗಳೂರು: ರೌಡಿಶೀಟರ್ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆಸಿದ ಘಟನೆ ನಗರದ ಲಾಲ್ ಬಾಗ್ ಸಿಗ್ನಲ್ ಬಳಿ…

17 hours ago

ಆರು ದಿನಗಳ ನಂತರ ಅಮರನಾಥ ಯಾತ್ರೆ ಪುನರಾರಂಭ -vishwanews24

ಹವಾಮಾನ ವೈಪರೀತ್ಯದಿಂದಾಗಿ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಪುನರಾರಂಭ ಅಮರನಾಥ :ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಆರು ದಿನಗಳಿಂದ ನಿರಂತರ ಮಳೆ,…

18 hours ago

BREAKING NEWS : ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ – vishwanews24

 ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನವದೆಹಲಿ: ನೀಟ್ ಪರೀಕ್ಷಾ ಅಕ್ರಮಗಳ ವಿರುದ್ಧ ದೇಶಾದ್ಯಂತ ವಿದ್ಯಾರ್ಥಿಗಳ ಆಕ್ರೋಶ ಭುಗಿಲೆದ್ದ…

18 hours ago

ಕಾಮನ್‌ವೆಲ್ತ್ ಗೇಮ್ಸ್ 2026 : ಪ್ಯಾರಾ ಪವರ್‌ ಲಿಫ್ಟಿಂಗ್‌ನಲ್ಲಿ ಕಂಚು ಗೆದ್ದ ಝಂದು ಕುಮಾರ್ – vishwanews24

ಕಾಮನ್‌ವೆಲ್ತ್ ಗೇಮ್ಸ್ 2026 : ಭಾರತದ ಪದಕದ ಖಾತೆ ತೆರೆದ ಝಂದು ಕುಮಾರ್‌: ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ಕಂಚಿನ ಸಾಧನೆ ಗ್ಲಾಸ್ಕೊ…

20 hours ago

ಅಯೋಧ್ಯೆ ಶ್ರೀರಾಮ ಮಂದಿರ ಧಾರ್ಮಿಕ ಸಮಿತಿಯಲ್ಲಿ ಪೇಜಾವರ ಶ್ರೀಗಳಿಗೆ ಸ್ಥಾನ – vishwanews24

ಅಯೋಧ್ಯೆ ಶ್ರೀರಾಮ ಮಂದಿರ ಧಾರ್ಮಿಕ ಸಮಿತಿಯಲ್ಲಿ ಪೇಜಾವರ ಶ್ರೀಗಳಿಗೆ ಸ್ಥಾನ ಅಯೋಧ್ಯೆ: ಶ್ರೀ ರಾಮಮಂದಿರದ ಪೂಜಾ ವಿಧಿವಿಧಾನಗಳು ಹಾಗೂ ಧಾರ್ಮಿಕ…

20 hours ago