ಉಡುಪಿ: ಆಫ್ರಿಕಾ, ಹವಾಯಿ ದ್ವೀಪ ಹಾಗೂ ಗ್ರೇಟ್ ಬ್ಯಾರಿಯಲ್ ರೀಫ್‌ಗಳಲ್ಲಿ ಹೆಚ್ಚಾಗಿ ಕಂಡುಬರುವ ರೆನಿನಾ ಪ್ರಬೇಧದ ಏಡಿ ಕರಾವಳಿಯಲ್ಲಿ ಅಪರೂಪಕ್ಕೆ ಕಾಣಿಸಿಕೊಂಡಿದೆ.
ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರ ಬಲೆಗೆ ಈ ಅಪರೂಪದ ರೆನಿನಾ ಪ್ರಬೇಧದ ಏಡಿ ಬಿದ್ದಿದೆ.
ಕಾರವಾರದ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕಡಲ ಜೀವಶಾಸ್ತ್ರದ ಪ್ರಾಧ್ಯಾಪಕ ಡಾ.ಶಿವಕುಮಾರ್ ಹರಗಿ ಈ ಬಗ್ಗೆ ಮಾತನಾಡಿ, ನೋಡಲು ರಂಗುರಂಗಾಗಿ ಕಾಣುವ ರೆನಿನಾ 2006ರಲ್ಲಿ ಪಂಬನ್ ಕಡಲತೀರದಲ್ಲಿ ಏಡಿ ದೊರಕಿದ ಮಾಹಿತಿ ಇದೆ ಎಂದು ತಿಳಿಸಿದರು.
ಸ್ಪ್ಯಾನರ್ ಕ್ರಾಬ್ ಎಂದು ಕರೆಯಲಾಗುವ ಏಡಿಯು ಕಪ್ಪೆಯ ಆಕೃತಿ ಹೊಂದಿರುವುದು ವಿಶೇಷ. ಹೆಚ್ಚಾಗಿ ರಾತ್ರಿ ವೇಳೆ ಎಚ್ಚರವಿದ್ದು, ಶೆಟ್ಲಿ, ಕಪ್ಪೆಚಿಪ್ಪು, ಸ್ಟಾರ್‌ಫಿಶ್ ಸೇರಿದಂತೆ ಇತರೆ ಜಾತಿಗಳ ಮೀನುಗಳನ್ನು ತಿನ್ನುತ್ತದೆ. ಬೆಳಗ್ಗಿನ ಹೊತ್ತು ಸಮುದ್ರದ ಮರಳಿನಾಳದಲ್ಲಿ ಜೀವಿಸುತ್ತದೆ. 7 ರಿಂದ 9 ವರ್ಷಗಳವರೆಗೆ ಜೀವಿತಾವಧಿಯಲ್ಲಿ 400 ರಿಂದ 900 ಗ್ರಾಂ ತೂಗುತ್ತದೆ. ರುಚಿಕರ ಎಂಬ ಕಾರಣಕ್ಕೆ ಆಸ್ಟ್ರೇಲಿಯಾದ ಮಾರುಕಟ್ಟೆಯಲ್ಲಿ ರೆನಿನಾಗೆ ಭಾರಿ ಬೇಡಿಕೆ ಇದೆ ಎಂದಿದ್ದಾರೆ.
ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.
ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್
8088827292
ಉಡುಪಿ: ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ - 1,52,000 ಮೌಲ್ಯದ…
ಮಂಗಳೂರು: ಎಂಡಿಎಂಎ ಮಾರಾಟ ; ರೂ.2.10 ಲಕ್ಷ ಮೌಲ್ಯದ ಮಾದಕ ವಸ್ತು ಸಹಿತ ಆರೋಪಿ ಬಂಧನ ಮಂಗಳೂರು: ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು…
ರಾಮಮಂದಿರ ದೇಣಿಗೆ ಕಳ್ಳತನ ವಿವಾದ: ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಚಂಪತ್ ರಾಯ್ ರಾಜೀನಾಮೆ ಲಕ್ನೋ: ಅಯೋಧ್ಯೆ ರಾಮಮಂದಿರದಲ್ಲಿ ದೇಣಿಗೆ…
ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಎಫ್‌ಐಆರ್ ಕಡ್ಡಾಯ: ಪೊಲೀಸರಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ಬೆಂಗಳೂರು: ಪ್ರತೀಕಾರಾತ್ಮಕ ಅಶ್ಲೀಲತೆ ಹಾಗೂ…
ರಾಮಭಕ್ತರ ಅಗ್ನಿಪರೀಕ್ಷೆ ಮಾಡಬೇಡಿ, ಭಕ್ತರು ತಮ್ಮ ನಂಬಿಕೆ ಮತ್ತು ಭಕ್ತಿಯಿಂದ ಕಾಣಿಕೆ ನೀಡುತ್ತಾರೆ : ಯೋಗಿ ಆದಿತ್ಯನಾಥ್ ಲಕ್ನೋ: ರಾಮಭಕ್ತರ…
ಶನಿವಾರ ಶಾಲಾ ಸಮಯ ಬದಲಿಸಿದ ಶಿಕ್ಷಣ ಇಲಾಖೆ ; ಇನ್ನು ಮುಂದೆ ಶನಿವಾರ ಅರ್ಧದಿನ ಮಾತ್ರ ಶಾಲೆ ಬೆಂಗಳೂರು: ಶಾಲಾ…