Featured

ಉಡುಪಿ: ಮಲ್ಪೆ ಪಡುಕೆರೆ ಸೇತುವೆ ಬಳಿ ನೀರಿಗೆ ಬಿದ್ದು ನಾಪತ್ತೆ ನಾಟಕವಾಡಿದ್ದ ಯುವಕ ದಾವಣಗೆರೆಯಲ್ಲಿ ಪತ್ತೆ – Vishwanews24

ಉಡುಪಿ: ಮಲ್ಪೆ ಪಡುಕೆರೆ ಸೇತುವೆ ಬಳಿ ನೀರಿಗೆ ಬಿದ್ದು ನಾಪತ್ತೆ : ಯುವಕ ದಾವಣಗೆರೆಯಲ್ಲಿ ಪತ್ತೆ..

ಪತ್ನಿಯನ್ನು ಬಿಟ್ಟು ಅನ್ಯ ಯುವತಿಯೊಂದಿಗೆ ಸಂಸಾರ ನಡೆಸುವ ಉದ್ದೇಶದಿಂದ ನೀರಿನಲ್ಲಿ ಮುಳುಗಿ ನಾಪತ್ತೆ ನಾಟಕವಾಡಿದ್ದ ಯುವಕ..

ಉಡುಪಿ : ಬೈಕ್‌, ಚಪ್ಪಲಿಯನ್ನು ಮಲ್ಪೆ ಪಡುಕೆರೆ ಸೇತುವೆ ಬಳಿ ಇರಿಸಿ ನೀರಿಗೆ ಬಿದ್ದು ನಾಪತ್ತೆಯಾದ ರೀತಿಯಲ್ಲಿ ನಾಟಕವಾಡಿದ ದಾವಣಗೆರೆ ಮೂಲದ ಯುವಕನೋರ್ವ ಆತನ ತವರು ಜಿಲ್ಲೆ ದಾವಣಗೆರೆಯಲ್ಲೇ ಸೋಮವಾರ ಪತ್ತೆಯಾಗಿದ್ದಾನೆ.

ಶಿವಪ್ಪ ನಾಯ್ಕ ನಾಪತ್ತೆ ನಾಟಕವಾಡಿ ಸಿಕ್ಕಿ ಬಿದ್ದಾತ. ಪತ್ನಿಯನ್ನು ಬಿಟ್ಟು, ಅನ್ಯ ಯುವತಿಯೊಂದಿಗೆ ಸಂಸಾರ ನಡೆಸುವ ಉದ್ದೇಶದಿಂದ ಆತ ನೀರಿನಲ್ಲಿ ಮುಳುಗಿ ನಾಪತ್ತೆಯಾದ ನಾಟಕವಾಡಿದ್ದ. ಪೊಲೀಸರ ಹಾದಿ ತಪ್ಪಿಸುವ ಉದ್ದೇಶ ಅವನದಾಗಿತ್ತು. ಆದರೆ ಆತನ ನಾಟಕದ ನೈಜತೆ ಇದೀಗ ಬಯಲಾಗಿದ್ದು, ದಾವಣಗೆರೆಯಲ್ಲಿ ಸೋಮವಾರ ಪತ್ತೆಯಾಗಿದ್ದಾನೆ. ಮಲ್ಪೆ ಪೊಲೀಸರು ಆತನನ್ನು ಠಾಣೆಗೆ ಕರೆ ತಂದಿದ್ದಾರೆ.

ಶಿವಪ್ಪ ನಾಯ್ಕ ಆರು ತಿಂಗಳ ಹಿಂದೆ ದಾವಣಗೆರೆ ಉತ್ಕಟಿ ತಾಂಡ ಮೂಲದ ಆಶಾ ಎಂಬಾಕೆಯನ್ನು ಪ್ರೀತಿಸಿ ವರಿಸಿದ್ದ. ಬಳಿಕ ಮಲ್ಪೆ ಕೊಳದಲ್ಲಿ ದಂಪತಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಮೀನುಗಾರಿಕೆ ಬಂದರಿನಲ್ಲಿ ಮೀನು ಹೊರುವ ಕೆಲಸ ನಿರ್ವಹಿಸುತ್ತಿದ್ದ. ಈ ನಡುವೆ ಮೀನುಗಾರಿಕಾ ಬಂದರಿನಲ್ಲಿ ಕೆಲಸ ಮಾಡುತ್ತಿದ್ದ ಹೊಸಪೇಟೆ ಹರಪ್ಪನಹಳ್ಳಿಯ ಕಮಲಿ ಎಂಬಾಕೆಯೊಂದಿಗೆ ಆತನ ಸಂಪರ್ಕ ಹೊಂದಿದ್ದ. ಬಳಿಕ ಆಕೆಯನ್ನು ಪಡೆಯುವ ಉದ್ದೇಶದಿಂದ ಪತ್ನಿಯೊಂದಿಗೆ ಗಲಾಟೆ ಮಾಡುತ್ತಿದ್ದ. ಸೆ. 23ರಂದು ಆತನ ಬೈಕ್ ಮತ್ತು ಚಪ್ಪಲಿ ಪಡುಕೆರೆ ಸೇತುವೆಯಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ಆತ ಸೇತುವೆಯಿಂದ ನದಿಗೆ ಬಿದ್ದಿದ್ದಾನೆಂದು ಶಂಕಿಸಿ ನಾಪತ್ತೆ ದೂರು ದಾಖಲಿಸಲಾಗಿತ್ತು. ಬಳಿಕ ಪೊಲೀಸರ ಮನವಿ ಮೇರೆಗೆ ಮುಳುಗು ತಜ್ಞ ಈಶ್ವರ ಮಲ್ಪೆ ಅವರು ನದಿಯಲ್ಲಿ ಹುಡುಕಾಟ ನಡೆಸಿದ್ದರು. ಆದರೆ ಶಿವಪ್ಪ ಪತ್ತೆಯಾಗಿರಲಿಲ್ಲ.

ಸುರತ್ಕಲ್: ಭಾರ್ಗವಿ ಫೈನಾನ್ಸ್‌ ಮತ್ತು ಚಿಟ್ ಫಂಡ್ ಹೆಸರಲ್ಲಿ ವಂಚನೆ ಪ್ರಕರಣ : ಆರೋಪಿಗಳ ಸೆರೆ – Vishwanews24

ಬಳಿಕ ಆತನ ಮೊಬೈಲ್ ಪರಿಶೀಲಿಸಿದ ಪೊಲೀಸರಿಗೆ ಬ್ಯಾಂಕಿನಿಂದ 24 ಸಾವಿರ ರೂ. ಹಣ ಡ್ರಾ ಮಾಡಿರುವ ಮೆಸೇಜ್ ಬಂದಿರುವುದು ಗೊತ್ತಾಯಿತು. ಇದರಿಂದಾಗಿ ಆತ ಜೀವಂತ ಇರುವುದನ್ನು ಕಂಡುಕೊಂಡ ಪೊಲೀಸರು, ಸಂಬಂಧಿಕರ ಮೂಲಕ ಮಾಹಿತಿ ಪಡೆದುಕೊಂಡು ಆತನನ್ನು ಮಲ್ಪೆಗೆ ಕರೆಸಿಕೊಂಡಿದ್ದಾರೆ.

ವಿಚಾರಣೆ ವೇಳೆ ತನ್ನ ನಾಟಕವನ್ನು ಪೊಲೀಸರೆದುರು ಬಾಯ್ಬಿಟ್ಟಿದ್ದಾನೆ. ಬೈಕ್ ಬ್ರೇಕ್‌ ಒತ್ತಿ, ಎಕ್ಸಲೇಟರ್ ಜಾಸ್ತಿ ಮಾಡಿದಾಗ ಸೇತುವೆ ತಡೆಗೋಡೆಗೆ ತಾಗಿ ಆತ ನದಿಗೆ ಎಸೆಯಲ್ಪಟ್ಟಿದ್ದಾನೆ ಎಂದು ಬಿಂಬಿಸುವುದು ಆತನ ಉದ್ದೇಶವಾಗಿದೆ. ಅಲ್ಲದೆ ಕೋಳಿ ಕೊಯ್ದು ಅದರ ರಕ್ತವನ್ನು ರಸ್ತೆ ಮೇಲೆ ಹರಿಸಿದ್ದ. ಇದು ಆತನಿಗೆ ಅಪಘಾತದಲ್ಲಿ ಗಾಯವಾಗಿತ್ತು ಎಂದು ಬಿಂಬಿಸುವ ನಾಟಕವಾಗಿತ್ತು. ಒಂದು ಚಪ್ಪಲಿ ಮತ್ತು ಮೊಬೈಲ್‌ನ್ನು ಅಲ್ಲೇ ಬಿಟ್ಟ ಆತನ ಉಡುಪಿ ಲಾಡ್ಜ್‌ನಲ್ಲಿ ಉಳಿದು ಮರುದಿನ ಸಂಬಂಧಿಕರ ಮನೆಗೆ ಹೋಗಿದ್ದಾನೆ. ಪತ್ನಿ ಬಿಟ್ಟು ಅನ್ಯ ಯುವತಿಯೊಂದಿಗೆ ಸಂಸಾರ ನಡೆಸುವ ಉದ್ದೇಶದಿಂದ ಹೀಗೆ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾನೆ. ಬಳಿಕ ಪತ್ನಿಯೊಂದಿಗೆ ಸಂಸಾರ ಮಾಡುವಂತೆ ಬುದ್ದಿವಾದ ಹೇಳಿ ಪೊಲೀಸರು ಆತನನ್ನು ಕಳುಹಿಸಿಕೊಟ್ಟಿದ್ದಾರೆ.

ಸಂಸದೆಯೊಂದಿಗೆ ಸೆಲ್ಫಿ ಮಿಥುನ್ ರೈ ಹೇಳಿಕೆಗೆ ಯಶ್ ಪಾಲ್ ಸುವರ್ಣ ತಿರುಗೇಟು

Vishwa News 24

Recent Posts

ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ‘ನರೇಂದ್ರ ಮೋದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಮರುನಾಮಕರಣ: ಯೋಗಿ ಆದಿತ್ಯನಾಥ್ ಘೋಷಣೆ – vishwanews24

ನೊಯ್ಡಾ ವಿಮಾನ ನಿಲ್ದಾಣಕ್ಕೆ ನರೇಂದ್ರ ಮೋದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಮರುನಾಮಕರಣ ನವದೆಹಲಿ: ಉತ್ತರ ಪ್ರದೇಶದ ಜೆವಾರ್‌ನಲ್ಲಿರುವ ನೋಯ್ಡಾ…

9 hours ago

ಮಂಗಳೂರು: MRPL ಅಪಘಾತದಲ್ಲಿ ಮೃತಪಟ್ಟ ಮನೀಶ್ ಕರ್ಕಡ ಕುಟುಂಬಕ್ಕೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸಿದ EPFO – vishwanews24

ಮಂಗಳೂರು: MRPL ಅಪಘಾತದಲ್ಲಿ ಮೃತಪಟ್ಟ ಮನೀಶ್ ಕರ್ಕಡ ಕುಟುಂಬಕ್ಕೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸಿದ EPFO ಮಂಗಳೂರು: ರಿಫೈನರಿ &…

9 hours ago

ಗೃಹಲಕ್ಷ್ಮಿ ಯೋಜನೆ ಮರುಪರಿಶೀಲನೆ : ಹೊಸ ಅರ್ಜಿ, ಹೊಸ ಷರತ್ತುಗಳು ; ಈ ದಾಖಲೆಗಳು ಕಡ್ಡಾಯ – vishwanews24

ಗೃಹಲಕ್ಷ್ಮಿ ಯೋಜನೆ ಮರುಪರಿಶೀಲನೆ : ಹೊಸ ಅರ್ಜಿ, ಹೊಸ ಷರತ್ತುಗಳು ; ಈ ದಾಖಲೆಗಳು ಕಡ್ಡಾಯ  ಬೆಂಗಳೂರು: ಕರ್ನಾಟಕ ಸರ್ಕಾರದ…

9 hours ago

ಉಡುಪಿ: ಉದ್ಯೋಗಕ್ಕಾಗಿ ಅಲೆದಾಡುವ ಯುವಜನರ ಬಳಿಗೇ ಉದ್ಯೋಗಾವಕಾಶ : ಡಾ. ಕೆ. ಪ್ರಕಾಶ್ ಶೆಟ್ಟಿ – vishwanews24

ಉಡುಪಿ: ಉದ್ಯೋಗಕ್ಕಾಗಿ ಅಲೆದಾಡುವ ಯುವಜನರ ಬಳಿಗೇ ಉದ್ಯೋಗಾವಕಾಶ : ಡಾ. ಕೆ. ಪ್ರಕಾಶ್ ಶೆಟ್ಟಿ ಉಡುಪಿ: ಯುವಜನರು ನಿರಂತರ ಪ್ರಯತ್ನದ…

10 hours ago

ಮಂಗಳೂರು:ಕೋರಿಯರ್ ಮೂಲಕ ಎಂಡಿಎಂಎ ಸಾಗಾಟದ ಜಾಲ ಪತ್ತೆ: ₹1.58 ಕೋಟಿ ಮೌಲ್ಯದ ಮಾದಕವಸ್ತು ವಶ – vishwanews24

ಕೋರಿಯರ್ ಮೂಲಕ ವಾಟರ್ ಪ್ಯೂರಿಫೈಯರ್‌ನಲ್ಲಿ ಎಂಡಿಎಂಎ ಸಾಗಾಟ.. ಮಂಗಳೂರು ಸಿಸಿಬಿ ಬಲೆಗೆ ಮೂವರು ಆರೋಪಿಗಳು; ₹1.58 ಕೋಟಿ ಮೌಲ್ಯದ ಸೊತ್ತು…

10 hours ago

ಮಂಗಳೂರು:  ಅನುಮಾನಾಸ್ಪದ ಸಾವು ಪ್ರಕರಣ ; ಎರಡು ತಿಂಗಳ ಬಳಿಕ ಸಮಾಧಿಯಿಂದ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ – vishwanews24

ಮಂಗಳೂರು:  ಅನುಮಾನಾಸ್ಪದ ಸಾವು ಪ್ರಕರಣ ; ಎರಡು ತಿಂಗಳ ಬಳಿಕ ಸಮಾಧಿಯಿಂದ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ಮಂಗಳೂರು: ಅನುಮಾನಾಸ್ಪದ…

10 hours ago