Featured

ಉಡುಪಿ: ಮಲ್ಪೆ ಬೀಚ್ ನಲ್ಲಿ ಯೂಟ್ಯೂಬರ್ ಉದ್ದಟತನ ಪ್ರರ್ದಶಿಸಿದ ಹಿನ್ನೆಲೆ ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆಯೇ ಹೊರತು ಯಾವುದೇ ದುರುದ್ದೇಶದಿಂದ ಅಲ್ಲ: ಬೀಚ್‌ ನಿರ್ವಾಹಕ ಸುದೇಶ್‌ ಶೆಟ್ಟಿ ಸ್ಪಷ್ಟನೆ  – Vishwanews24

ಉಡುಪಿ: ಮಲ್ಪೆ ಬೀಚ್ ನಲ್ಲಿ ಯೂಟ್ಯೂಬರ್ ಉದ್ದಟತನ ಪ್ರರ್ದಶಿಸಿದ ಹಿನ್ನೆಲೆ ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆಯೇ ಹೊರತು ಯಾವುದೇ ದುರುದ್ದೇಶದಿಂದ ಅಲ್ಲ: ಬೀಚ್‌ ನಿರ್ವಾಹಕ ಸುದೇಶ್‌ ಶೆಟ್ಟಿ ಸ್ಪಷ್ಟನೆ

ಉಡುಪಿ : ಇಲ್ಲಿನ ಸೈಂಟ್ ಮೇರಿಸ್ ದ್ವೀಪದ ಅವ್ಯವಸ್ಥೆ ವಿರುದ್ಧ ಆಕ್ರೋಶ ಹೊರ ಹಾಕಿದ ಪ್ರವಾಸಿಗರ‌ ಮೇಲೆ ಸೈಂಟ್ ಮೇರಿಸ್‌ ದ್ವೀಪದ ನಿರ್ವಹಣಾ ಸಿಬ್ಬಂದಿ ದರ್ಪ ತೋರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ಸಿಬ್ಬಂದಿಗಳು ಸ್ಪಷ್ಟನೆ ನೀಡಿದ್ದಾರೆ.

ಮಲ್ಪೆ ಬೀಚ್ ನ ಗುತ್ತಿಗೆದಾರ ಸುದೇಶ್ ಶೆಟ್ಟಿ ಸ್ಪಷ್ಟನೆ ನೀಡಿದ್ದು, ವಿಡಿಯೋ ಮಾಡುತ್ತಿದ್ದ ಯೂಟ್ಯೂಬರ್ ಉದ್ದಟತನ ಪ್ರರ್ದಶಿಸಿದ ಹಿನ್ನೆಲೆ ಸಿಬ್ಬಂದಿಗಳು ಆ ಯುಟ್ಯೂಬರ್ ನನ್ನು ತರಾಟೆಗೆ ತೆಗೆದುಕೊಂಡಿದ್ದಾನೆ ಹೊರತು, ಯಾವುದೇ ದುರುದ್ದೇಶದಿಂದ ಅಲ್ಲ.

ಪ್ರಥಮವಾಗಿ ಯುಟ್ಯೂಬರ್ ಬಳಿ ಕ್ಯಾಮೆರಾ ಶುಲ್ಕ ಪಾವತಿಸಿದ ರಶೀದಿ ಇರಲಿಲ್ಲ. ಈ ಹಿನ್ನೆಲೆ ಕ್ಯಾಮೆರಾ ಒಳಗೆ ಬಿಡಲಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಮಲ್ಪೆ ಬೀಚ್ ನಲ್ಲಿ ನಡೆಸಿದ ಪ್ರತಿ ವ್ಯವಹಾರಕ್ಕೆ ರಶೀದಿಯನ್ನು ನೀಡಲಾಗುತ್ತದೆ. ಯುಟ್ಯೂಬರ್ ಯುಪಿಐ ಪಾವತಿ ಮಾಡಲಾಗಿದೆ ಎಂದು ಹೇಳಿದರೂ, ರಶೀದಿ ಇಲ್ಲದೆ ಇರುವುದರಿಂದ ಕ್ಯಾಮೆರಾದೊಂದಿಗೆ ಒಳ ಪ್ರವೇಶಕ್ಕೆ ಅನುಮತಿ ನೀಡಿಲ್ಲ.

ಈ ದ್ವೀಪ ಎನ್ನುವುದು ಸೂಕ್ಷ್ಮ ವಲಯವಾಗಿರುವುದರಿಂದ ಬ್ಯಾಗ್ ಜೊತೆ ಒಳ ಪ್ರವೇಶಕ್ಕೆ ಅನುಮತಿ ಇಲ್ಲ. ಈ ಯೂಟ್ಯೂಬರ್ ಅನುಮತಿ ಇಲ್ಲದೆ ಒಳಪ್ರವೇಶಕ್ಕೆ ಯತ್ನಿಸಿದ್ದು, ಈ ಸಂದರ್ಭ ನಮ್ಮ ಸಿಬ್ಬಂದಿಗಳು ತಡೆದ ಬಳಿಕ ಲಗೇಜ್ ರೂಮ್ನಲ್ಲಿ ವಸ್ತುಗಳನ್ನು ಇಟ್ಟು ಒಳ ಹೋಗುವುದಕ್ಕೆ ರಾಜಿಯಾದ. ಈ ಸಂದರ್ಭ ಯುಟ್ಯೂಬರ್ ಜೊತೆಗಿದ್ದ ವ್ಯಕ್ತಿ ಸಿಬ್ಬಂದಿಯ ಅನುಮತಿ ಇಲ್ಲದೆ ಫೋಟೊ ತೆಗೆಯುವುದಕ್ಕೆ ಯತ್ನಿಸಿದ್ದು, ಇದನ್ನು ನಮ್ಮ ಸಿಬ್ಬಂದಿ ವಿರೋಧಿಸಿದ್ದಾರೆ. ಅಲ್ಲದೆ, ಯೂ ಟ್ಯೂಬರ್ ಕೂಡ ಇದನ್ನು ವಿಡಿಯೋ ಮಾಡಿ ಬೀಚ್ನ ವಿರುದ್ದ ಪ್ರಚಾರ ಮಾಡುವುದಾಗಿ ಬೆದರಿಕೆಯನ್ನು ಕೂಡ ಹಾಕಿದ್ದಾನೆ. ಈ ಕಾರಣಕ್ಕಾಗಿ ನಮ್ಮ ಸಿಬ್ಬಂದಿ ಆಕ್ಷೇಪಿಸಿದ್ದಾರೆ ಹೊರತು ಇನ್ಯಾವ ಕಾರಣದಿಂದಲ್ಲ.

ಒತ್ತಾಯಪೂರ್ವಕವಾಗಿ ನಮ್ಮ ಸಿಬ್ಬಂದಿಯ ಅನುಮತಿ ಇಲ್ಲದೆ ಫೋಟೋ ತೆಗೆಯುವುದಕ್ಕೆ ಹೋಗಿದ್ದು, ಈ ಹಿನ್ನೆಲೆ ನಮ್ಮ ಸಿಬ್ಬಂದಿಗಳು ವಿರೋಧಿಸಿದ್ದಾರೆ ಹೊರತು ಬೇರಾವ ಕಾರಣದಿಂದ ಅಲ್ಲ. ಸಾಮಾಜಿಕ ಜಾಲತಾಣದಲ್ಲಿ ಪ್ರಸರಣಗೊಂಡ ದೃಶ್ಯಾವಳಿಯನ್ನು ತಿರುಚಲಾಗಿದ್ದು, ನಮ್ಮ ಸಿಬ್ಬಂದಿ ವಿರೋಧ ವ್ಯಕ್ತಪಡಿಸಿರುವ ದೃಶ್ಯಗಳನ್ನು ಮಾತ್ರ ಪ್ರಕಟಿಸಲಾಗಿದೆ. ಯೂಟ್ಯೂಬರ್ ಮತ್ತು ಜತೆಗಿದ್ದ ವ್ಯಕ್ತಿ ನಮ್ಮ ಸಿಬ್ಬಂದಿಯನ್ನು ಅನಗತ್ಯ ನಿಂದಿಸಿದ ವಿಡಿಯೋವನ್ನು ಅವರು ಪ್ರಕಟಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಇಲ್ಲಿ ಪ್ರವಾಸಿಗರ ಅನುಚಿತ ವರ್ತನೆಯನ್ನು ನಿಯಂತ್ರಿಸುವುದು ನಮ್ಮ ಸಿಬ್ಬಂದಿಗಳ ಹೊಣೆಯಾಗಿದೆ. ಅಲ್ಲದೆ ಸರಕಾರದ ಸ್ಪಷ್ಟ ಸೂಚನೆ ಇರುವುದರಿಂದ ಪರಿಸರ ಸ್ನೇಹಿ ವಸ್ತುಗಳಿಂದ ಸೈಂಟ್ ಮೇರಿಸ್ ದ್ವೀಪವನ್ನು ಅಭಿವೃದ್ಧಿ ಪಡಿಸಲಾಗಿದೆ. ಅಭಿವೃದ್ಧಿ ಸಂದರ್ಭ ಪ್ರವಾಸಿಗರ ಸುರಕ್ಷತೆಗೆ ಕೂಡ ಅಷ್ಟೇ ಮುತುವರ್ಜಿ ವಹಿಸಲಾಗಿದೆ ಎಂದಿದ್ದಾರೆ.

Join our Whatsapp group by clicking the below link 👇👇

https://chat.whatsapp.com/KfUmhXQKZb114i4QHNvqEK 

Vishwa News 24

Recent Posts

ಉಡುಪಿ: ಆಸ್ತಿಯನ್ನು ಬಲವಂತವಾಗಿ ತನ್ನ ಹೆಸರಿಗೆ ವರ್ಗಾಯಿಸಿಕೊಂಡು ವೃದ್ಧ ಪೋಷಕರನ್ನು ಮನೆಯಿಂದ ಹೊರಹಾಕಿದ ಮಗ – vishwanews24

ಉಡುಪಿ: ಆಸ್ತಿಯನ್ನು ಬಲವಂತವಾಗಿ ತನ್ನ ಹೆಸರಿಗೆ ವರ್ಗಾಯಿಸಿಕೊಂಡು ವೃದ್ಧ ಪೋಷಕರನ್ನು ಮನೆಯಿಂದ ಹೊರಹಾಕಿದ ಮಗ ಉಡುಪಿ: ತಾಯಿಯ ಹೆಸರಿನಲ್ಲಿದ್ದ ಆಸ್ತಿಯನ್ನು…

3 hours ago

ವಿಟ್ಲ : ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ ಹಾಗೂ ವಿದ್ಯುತ್ ಕಂಬ: ದಂಪತಿ ಅಪಾಯದಿಂದ ಪಾರು – vishwanews24

ವಿಟ್ಲ : ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ ಹಾಗೂ ವಿದ್ಯುತ್ ಕಂಬ: ದಂಪತಿ ಅಪಾಯದಿಂದ ಪಾರು ವಿಟ್ಲ: ಮರ ಹಾಗೂ…

4 hours ago

ಮಂಗಳೂರು: ಉದ್ಯಮಿಯ ಕಾರು ಅಡ್ಡಗಟ್ಟಿ ಕಾರು ಸಹಿತ ಚಿನ್ನಾಭರಣ ದರೋಡೆ – vishwanews24

ಮಂಗಳೂರು: ಉದ್ಯಮಿಯ ಕಾರು ಅಡ್ಡಗಟ್ಟಿ ಕಾರು ಸಹಿತ ಚಿನ್ನಾಭರಣ ದರೋಡೆ ಮಂಗಳೂರು: ಕೇರಳ ಮೂಲದ ಉದ್ಯಮಿಯೊಬ್ಬರ ಕಾರನ್ನು ಅಡ್ಡಗಟ್ಟಿ ಕಾರು…

5 hours ago

ವಯೋವಂದನ ಯೋಜನೆ : ವೇದಿಕೆಯ ನೇತೃತ್ವಕ್ಕೆ ಸಮಾಜದ ಸಹಭಾಗಿತ್ವ ಅಗತ್ಯ : ಸಿ ಎಂ ಗುಜ್ಜಾಡಿ ಪ್ರಭಾಕರ್ ನಾಯಕ್ – vishwanews24

ವಯೋವಂದನ ಯೋಜನೆ : ವೇದಿಕೆಯ ನೇತೃತ್ವಕ್ಕೆ ಸಮಾಜದ ಸಹಭಾಗಿತ್ವ ಅಗತ್ಯ : ಸಿ ಎಂ ಗುಜ್ಜಾಡಿ ಪ್ರಭಾಕರ್ ನಾಯಕ್ ಜಿ…

5 hours ago

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ‘ನುವಾ’ ವಜ್ರಾಭರಣ ಅನಾವರಣ – vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ‘ನುವಾ’ ವಜ್ರಾಭರಣ ಅನಾವರಣ ಉಡುಪಿ: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಮೈನ್ ಬ್ರಾಂಡಿನ…

5 hours ago

ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ ವಿರುದ್ಧ ಅವಹೇಳನಕಾರಿ ಹೇಳಿಕೆ: ವಿಠಲ ಗೌಡ ವಿರುದ್ಧ ಅರೆಸ್ಟ್​​​​​​ ವಾರಂಟ್ – vishwanews24

ಧರ್ಮಸ್ಥಳ ಪ್ರಕರಣ : ವಿಠಲ್‌ ಗೌಡ ವಿರುದ್ಧ ಅರೆಸ್ಟ್‌ ವಾರಂಟ್:‌ ಪೊಲೀಸರಿಂದ ಹುಡುಕಾಟ ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ…

2 days ago