ಉಡುಪಿ: ಉಡುಪಿ ಜಿಲ್ಲಾ ಬಿಜೆಪಿಗೆ ನೂತನ ಅಧ್ಯಕ್ಷ ಆಯ್ಕೆಯ ನಂತರ ದಿನದಿಂದ ದಿನಕ್ಕೆ ಗೊಂದಲ ಹಾಗೂ ಅಸಮಾಧಾನ ಕೇಳಿ ಬರುತ್ತಿದ್ದು ಈ ನಡುವೆ ಇಂದು ಮತ್ತೊಂದು ಬೇಸರದ ಸಂಗತಿ ಹೊರಬಿದ್ದಿದೆ.
ಸೋಮವಾರ ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸದಸ್ಯತ್ವ ಅಭಿಯಾನದ ಬಗ್ಗೆ ಕೇಂದ್ರದ ಮಾಜಿ ಸಚಿವ ಭಗವಂತ ಖುಬಾ ಅವರ ಉಪಸ್ಥಿತಿಯಲ್ಲಿ ಸಭೆ ನಡೆದಿತ್ತು.
ಸಭೆ ಆರಂಭಿಸುವ ಮುನ್ನಾ ಕನಿಷ್ಠಪಕ್ಷ ಉಡುಪಿ ಜಿಲ್ಲಾ ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷರು ಹಾಗೂ ಮಾಜಿ ಶಾಸಕರು ಆಗಿದ್ದ ಕೀರ್ತಿಶೇಷ ಕೆ .ಲಕ್ಷ್ಮೀನಾರಾಯಣ ಅವರಿಗೆ ಮೌನ ಪ್ರಾರ್ಥನೆ ಸಲ್ಲಿಸುವ ಸೌಜನ್ಯ ತೋರದಿರುವ ಬಗ್ಗೆ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿದೆ.
ಶುಕ್ರವಾರದಂದು ದಿವಂಗತರಾಗಿದ್ದ ಮಾಜಿ ಶಾಸಕ ಕೆ .ಲಕ್ಷ್ಮಿ ನಾರಾಯಣ ಅವರಿಗೆ ಶ್ರದ್ಧಾಂಜಲಿ ಸಲ್ಲಿಸದೆ ಜಿಲ್ಲಾ ಸಭೆ ನಡೆಸಿದ ಜಿಲ್ಲಾಧ್ಯಕ್ಷರ ನಡೆಯ ಬಗ್ಗೆ ಸಭೆಯಲ್ಲಿದ್ದ ಹಲವರು ಅಸಮಾಧಾನ ವ್ಯಕ್ತಪಡಿಸಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ “ಹಿರಿಯ ನಾಯಕ:- ಸದ್ಯದ ಪರಿಸ್ಥಿತಿಯಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಅನ್ಯ ಪಕ್ಷದವರಿಂದ ನಡೆಸಲ್ಪಡುತ್ತಿದೆ ಅನ್ನಿಸತೊಡಗಿದೆ.ಪಕ್ಷಕ್ಕಾಗಿ ದುಡಿದ ಕೆ.ಲಕ್ಷ್ಮೀನಾರಾಯಣ ಅವರಿಗೆ ಶೃದ್ದಾಂಜಲಿ ಸಭೆ ಕೂಡ ಮಾಡಿಲ್ಲ ಕನಿಷ್ಠ ಪಕ್ಷ ಮೌನ ಪ್ರಾರ್ಥನೆ ಮಾಡಿಯಾದರೂ ಸಭೆ ಆರಂಭಿಸುವುದು ಸೌಜನ್ಯ ಅದು ನಡೆಸಿಲ್ಲ ಅಂದರೆ ವಿಪರ್ಯಾಸವೆಂದರು.
ಉದ್ಯಾವರ : ಪಾಪನಾಶಿನಿ ಹೊಳೆಯ ಸೇತುವೆಯ ಮೇಲೆ ಸ್ಕೂಟರ್ ಪತ್ತೆ ; ವ್ಯಕ್ತಿ ಹೊಳೆಗೆ ಹಾರಿರುವ ಶಂಕೆ ಉಡುಪಿ: ಉದ್ಯಾವರ…
ಮಂಗಳೂರು: ಕಾಂಗ್ರೆಸ್ ಗಾಗಿ ಕೆಲಸ ಮಾಡದವರು ಪಕ್ಷದ ಬಗ್ಗೆ ಮಾತನಾಡುವುದು ಬೇಡ: ಸಚಿವ ಯು.ಟಿ.ಖಾದರ್ ಮಂಗಳೂರು: ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ…
ಉಡುಪಿ: ನೀಟ್ ಪರೀಕ್ಷೆಗೆ ತಡವಾಗಿ ಬಂದ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ ಶಾಸಕ ಯಶ್‌ಪಾಲ್ ಸುವರ್ಣಗೆ ವ್ಯಾಪಕ ಶ್ಲಾಘನೆ…
ಕಾರ್ಕಳ :ಯಕ್ಷರಂಗಾಯಣ ದ ಹೆಸರು ಬದಲಾವಣೆಗೆ ಶಾಸಕ ಸುನಿಲ್ ಕುಮಾರ್ ಆಕ್ರೋಶ ಮೂಲ ಹೆಸರನ್ನೇ ಉಳಿಸಿಕೊಳ್ಳಲು ಸರಕಾರಕ್ಕೆ ಆಗ್ರಹ ಕಾರ್ಕಳ:…
ಟಿಎಂಸಿ ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ವಜಾ ಕೋಲ್ಕತ್ತಾ : ಪಶ್ಚಿಮ ಬಂಗಾಳದ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರನ್ನು…
ಉಡುಪಿ : ಹೆಣ್ಣು ಮಗುವಿನ ಅಕ್ರಮ ಮಾರಾಟ ಪ್ರಕರಣ ; ವೈದ್ಯ ಸಹಿತ ನಾಲ್ವರು ಆರೋಪಿಗಳ ಬಂಧನ ಉಡುಪಿ :…