ಉಡುಪಿ: ಹೆಬ್ರಿ ತಾಲೂಕಿನ ನಾಡಾಲು ಗ್ರಾಮದ ತಿಂಗಳೆಯಲ್ಲಿ, ತಿಂಗಳೆ ಪ್ರತಿಷ್ಠಾನದಿಂದ ವರ್ಷಂಪ್ರತಿ ಜರಗುವ ಸಾಹಿತ್ಯೋತ್ಸಕ್ಕೆ ಈ ಬಾರಿ ಮಾರ್ಚ್ 8ರಂದು ಸಂಜೆ ಸಾವಂತವಾಡಿ ಸಿಂಧೂದುರ್ಗಾ ಸಂಸ್ಥಾನದ ಘನವೆತ್ತ ರಾಜ ಬಹದ್ದೂರು ಕೇಮ್ ಸಾವಂತ್ ಭೋಸ್ಥೆಯವರು ಭಾಗವಹಿಸಲಿದ್ದಾರೆ
ಅಂದು ಸಂಜೆ 6.00 ರಿಂದ ನಡೆಯುವ 64ನೇಯ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕದ ಅಪ್ರತಿಮ ಚಿಂತಕಿ ಖ್ಯಾತ ವಾಗ್ನಿಗಳಾದ ಡಾ। ವೀಣಾ ಬನ್ನಂಜೆಯವರು ಅನುಭವ ಮಂಟಪ ಎನ್ನುವ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಯುವ ವಾಗ್ನಿಗಳಾದ ಶ್ರೀಕಾಂತ ಶೆಟ್ಟಿ ಕಾರ್ಕಳ ಇವರು ಇತಿಹಾಸದ ಪುಟಗಳಲ್ಲಿ ಸಾವಂತವಾಡಿ ಎನ್ನುವ ವಿಚಾರದ ಬಗ್ಗೆ ಮಾತನಾಡಲಿದ್ದಾರೆ.
ತಿಂಗಳೆ ಪ್ರತಿಷ್ಠಾನದಿಂದ ನೀಡಲ್ಪಡುವ ಪ್ರತಿಷ್ಠಿತ ತಿಂಗಳೆ ಪ್ರಶಸ್ತಿಯನ್ನು ಈ ಬಾರಿ ಖ್ಯಾತ ನೇತ್ರ ತಜ್ಞ ಸಮಾಜ ಸೇವಕ ಡಾ| ಕೃಷ್ಣ ಪ್ರಸಾದ್ ಕೂಡ್ಲು, ಪ್ರಸಾದ್ ನೇತ್ರಾಲಯ, ಉಡುಪಿ ಇವರಿಗೆ ನೀಡಲಾಗುವುದು ಎಂದು ಪ್ರತಿಷ್ಠಾನನ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ| ಹಾಲಾಡಿ ಶ್ರೀನಿವಾಸ ಶೆಟ್ಟಿ, ಕುದ್ರುಮನೆ ಹಾಗೂ ಶ್ರೀ ವಿಜಯ ಪಾತ್ರೆಪಕರ್, ಮುಂಬೈ ಇವರು ಉಪಸ್ಥಿತರಿರುವರು.
ಕಾರ್ಯಕ್ರಮದಲ್ಲಿ ಗುರು ಬನ್ನಂಜೆ ಸಂಜೀವ ಸುವರ್ಣರ ನಿರ್ದೇಶನದಲ್ಲಿ ‘ಚಕ್ರವ್ಯೂಹ’ ಯಕ್ಷಗಾನವನ್ನು ಅವರ ಶಿಷ್ಯರು ಪ್ರಸ್ತುತ ಪಡಿಸಲಿದ್ದಾರೆ. ಮಾರ್ಚ್ 6, 7 ಮತ್ತು 8 ರಂದು ತಿಂಗಳೆಯ ಧರ್ಮದೇವತೆಗಳ ನೇಮೋತ್ಸವ ನೆರವೇರಲಿದೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕಿರಣ್ ಕುಮಾರ್ ಬೈಲೂರು,ಮುರಳಿ ಕಡೆಕಾರ್, ಬನ್ನಂಜೆ ಸಂಜೀವ ಸುವರ್ಣ,ಡಾ.ಪ್ರಶಾಂತ್ ಉಪಸ್ಥಿತರಿದ್ದರು.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…