Featured

ಉಡುಪಿ : ಮಾ.2ರಿಂದ ರಂಜಾನ್ ಉಪವಾಸ ಆರಂಭ  – vishwanews24

ಉಡುಪಿ : ರಾಜ್ಯಾದ್ಯಂತ  ಮಾ.2ರಿಂದ ರಂಜಾನ್ ಉಪವಾಸ ವ್ರತ ಆರಂಭ

ಉಡುಪಿ : ಪವಿತ್ರ ರಮಝಾನ್ ಮಾಸದ ಚಂದ್ರ ದರ್ಶನವು ಶುಕ್ರವಾರ ಗೋಚರಿಸದೆ ಇರುವುದರಿಂದ ಮಾರ್ಚ್ 2ರಿಂದ ರಾಜ್ಯಾದ್ಯಂತ ಉಪವಾಸ ವ್ರತ ಆಚರಣೆ ನಡೆಸಲು ನಿರ್ಧರಿಸಲಾಗಿದೆ ಎಂದು ರಾಜ್ಯ ಚಂದ್ರ ದರ್ಶನ ಸಮಿತಿಯ ಸಂಚಾಲಕ ಮೌಲಾನಾ ಮನ್ಸೂದ್ ಇಮ್ರಾನ್ ರಶಾದಿ ಹೇಳಿದ್ದಾರೆ.

ಶುಕ್ರವಾರ ಸಂಜೆ ರಾಜ್ಯ ವಕ್ಸ್ ಬೋರ್ಡ್‌ನ ಕೇಂದ್ರ ಕಚೇರಿ(ದಾರುಲ್ ಔಕಾಫ್)ಯಲ್ಲಿ ಅಮೀರೆ ಶರೀಅತ್ ಮೌಲಾನಾ ಸಗೀರ್ ಅಹ್ಮದ್ ಖಾನ್ ರಶಾದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯ ಹಾಗೂ ದೇಶದ ವಿವಿಧ ರಾಜ್ಯಗಳಲ್ಲಿ ಚಂದ್ರ ದರ್ಶನದ ಬಗ್ಗೆ ಲಭ್ಯವಾದ ಮಾಹಿತಿ ಕುರಿತು ಚರ್ಚೆ ನಡೆಸಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಆಂಧ್ರಪ್ರದೇಶ, ಬಿಹಾರ, ಉತ್ತರಪ್ರದೇಶ, ತಮಿಳುನಾಡು, ಉತ್ತರಾಖಂಡ, ದಿಲ್ಲಿ ಸೇರಿದಂತೆ ವಿವಿಧ ರಾಜ್ಯಗಳು ಹಾಗೂ ನಮ್ಮ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಮಾಹಿತಿಗಳನ್ನು ತರಿಸಿಕೊಳ್ಳಲಾಗಿತ್ತು. ಎಲ್ಲಿಯೂ ಚಂದ್ರದರ್ಶನವಾದ ಮಾಹಿತಿ ಇಲ್ಲ. ಆದುದರಿಂದ, ಶನಿವಾರದಿಂದ ತರಾವೀಹ್ ನಮಾಝ್ ಹಾಗೂ ರವಿವಾರ ಮೊದಲ ಉಪವಾಸ ಆಚರಿಸಲಾಗುವುದು ಎಂದು ಮನ್ಸೂದ್ ಇಮ್ರಾನ್ ತಿಳಿಸಿದರು.

Vishwa News 24

Recent Posts

ಕುಂದಾಪುರ: ಪತ್ನಿಗೆ ವಿಷ ನೀಡಿ ಕೊಲೆ ಯತ್ನ ಪ್ರಕರಣ; ಪತಿ, ಸ್ನೇಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ -vishwanews24

ಕುಂದಾಪುರ: ಪತ್ನಿಗೆ ವಿಷ ನೀಡಿ ಕೊಲೆ ಯತ್ನ ಪ್ರಕರಣ; ಪತಿ, ಸ್ನೇಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಕುಂದಾಪುರ : ಪತ್ನಿಗೆ…

5 minutes ago

ಕಾಪು: ಆಟೋ-ಟೆಂಪೋ ನಡುವೆ ಭೀಕರ ಡಿಕ್ಕಿ; ಚಿಕಿತ್ಸೆ ಫಲಿಸದೇ ಮಗು ಸಾವು -vishwanews24

ಕಾಪು: ಆಟೋ-ಟೆಂಪೋ ನಡುವೆ ಭೀಕರ ಡಿಕ್ಕಿ; ಚಿಕಿತ್ಸೆ ಫಲಿಸದೇ ಮಗು ಸಾವು ಕಾಪು : ಕಾಪು ಫ್ಲೈಓವರ್ ಬಳಿ ಶನಿವಾರ…

10 minutes ago

ಬೆಂಗಳೂರು : ಮಟನ್ ಶಾಪ್‌ನಲ್ಲಿ ಎಂಡಿಎಂಎ ಮಾರಾಟ : ಇಬ್ಬರ ಬಂಧನ -vishwanews24

ಬೆಂಗಳೂರು : ಮಟನ್ ಶಾಪ್‌ನಲ್ಲಿ ಎಂಡಿಎಂಎ ಮಾರಾಟ : ಇಬ್ಬರ ಬಂಧನ ಬೆಂಗಳೂರು: ಮಟನ್ ಶಾಪ್ ನಲ್ಲಿ ಎಂಡಿಎಂಎ ಮಾದಕ…

20 hours ago

ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ -vishwanews24

ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ ಕಾರ್ಕಳ : ಮನೆ ವಿಚಾರದಲ್ಲಿ ತಂದೆಯೊಬ್ಬ ತನ್ನ…

22 hours ago

ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ -vishwanews24

ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ ಮಂಗಳೂರು: ಮೈಸೂರು ದಸರಾ 2026ರ ಅಂಗವಾಗಿ ಮೊದಲ ಬಾರಿಗೆ ಅದ್ದೂರಿಯಾಗಿ ಆಯೋಜಿಸಲಾಗುತ್ತಿರುವ…

22 hours ago

ಸೌಜನ್ಯಾ ಪ್ರಕರಣ: ಎಸ್‌ಐಟಿಯಲ್ಲಿರುವ ಎಲ್ಲ ಅಧಿಕಾರಿಗಳು ಪರಿಪೂರ್ಣರಾಗಿಲ್ಲ ಎಂಬ ಸಂಶಯವಿದೆ : ಕಲ್ಲಡ್ಕ ಪ್ರಭಾಕರ ಭಟ್‌ -vishwanews24

ಸೌಜನ್ಯಾ ಪ್ರಕರಣ: ಎಸ್‌ಐಟಿ ತಂಡದ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್‌ ಅಸಮಾಧಾನ ಬಂಟ್ವಾಳ: ಸೌಜನ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರುತನಿಖೆಗೆ…

22 hours ago