ಉಡುಪಿ: ಕರಾವಳಿಯ ಯಕ್ಷಗಾನವು ಇವತ್ತು ವಿಶ್ವ ಪ್ರಸಿದ್ಧ ಕಲೆಯಾಗಿ ಬೆಳೆದಿದೆ ಕಳೆದ ಆರು ಶತಮಾನಗಳಿಂದ ಈ ಕಲೆಯು ಬೆಳೆದು ಬಂದ ರೀತಿ ಅಚ್ಚರಿ ಹುಟ್ಟಿಸಿರುತ್ತದೆ ಆ ಕಲೆಯನ್ನು ಅತ್ಯದ್ಭುತವಾಗಿ ಸಂಘಟಿಸುವ ಮಹಾನೀಯರಿದ್ದಾರೆ ಯಕ್ಷಗಾನ ಪ್ರಸಂಗವನ್ನು ಬರೆದು ಪ್ರಸಿದ್ಧರಾದವರು ಇದ್ದಾರೆ.ಈ ಕಲೆಯಲ್ಲಿನ ಭಾಗವತರು ಚಂಡೆ ವಾದಕರು ತಮ್ಮದೇ ರೀತಿಯ ಶೈಲಿಯಲ್ಲಿ ನಿರ್ಮಿಸಿ ಕರ್ನಾಟಕ ಸಂಸ್ಕೃತಿಕ ಘನತೆಯನ್ನು ವಿಸ್ತರಿಸಿದ್ದಾರೆ ಇಂತಹ ಮಹಾನ್ ಕಲೆಯೊಂದರ ರಾಜ್ಯ ಸಮ್ಮೇಳ ನಡೆಯುವುದು ಅತ್ಯಂತ ಅವಶ್ಯಕವಾಗಿತ್ತು ಆದರೇ ಅಂತಹ ಸಮ್ಮೇಳನದಲ್ಲಿ ಹಿಂದುಳಿದ ವರ್ಗಗಳ ಆಶಾಕಿರಣವಾದ ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯವನ್ನು ಕೈ ಬಿಟ್ಟು ಇಡೀ ಹಿಂದುಳಿಗ ವರ್ಗಗಳ ಸಮಾಜದ ಕೆಂಗಣ್ಣಿಗೆ ಗುರಿಯಾದ ರೋಹಿತ್ ಚಕ್ರತೀರ್ಥನನ್ನು ಕರೆತಂದು ದಿಕ್ಸೂಚಿ ಭಾಷಣ ಮಾಡಿಸುವುದು ಕರಾವಳಿಯ ಗಂಡುಕಲೆಗೆ ಮಾಡುತ್ತಿರುವ ದೊಡ್ಡದಾದ ಅವಮಾನ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ಐರೋಡಿ ಗೋವಿಂದಪ್ಪ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅವಿಭಜಿತ ಜಿಲ್ಲೆಯಲ್ಲಿ ಯಕ್ಷಗಾನದ ಬಗ್ಗೆ ಭೂತ-ವರ್ತಮಾನ-ಭವಿಷ್ಯತ್ ವಿಚಾರದಲ್ಲಿ ಆಳವಾದ ಅಧ್ಯಯನ ನಡೆಸಿದ ನೂರಾರು ಕಲಾವಿದರು ಇದ್ದಾರೆ ಅಂತವರನ್ನು ಬಿಟ್ಟು ಯಕ್ಷಗಾನದ ಗಂಧಗಾಳಿ ಗೊತ್ತಿರದ ಈತನನ್ನು ಕರೆತರುವುದು ಬೇಸರದ ಸಂಗತಿ ಎಂದರು.
ಈ ಸಂಧರ್ಭದಲ್ಲಿ ದೀಪಕ್ ಕೋಟ್ಯಾನ್ ಇನ್ನಾ ಮಾತನಾಡುತ್ತಾ ” ನಾರಾಯಣ ಗುರುಗಳಿಗೆ ಅವಮಾನ ಮಾಡಿರುವ ರೋಹಿತ್ ನನ್ನು ಸಚಿವ ಸುನಿಲ್ ಕುಮಾರ್ ವಿಜೃಂಭಿಸುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ ಯಕ್ಷಗಾನದಲ್ಲೂ ರಾಜಕೀಯ ಮಾಡಲು ಹೊರಟಿರುವ ಸಚಿವರದ್ದು ದುರಹಂಕಾರದ ಪರಮಾವಧಿ ಎಂದರು.
ಕಟಪಾಡಿ ಯುವವಾಹಿನಿ ಅಧ್ಯಕ್ಷ ಸುನೀಲ್ ಬಂಗೇರ ಮಾತನಾಡಿ” ಹಿಂದುಳಿದ ವರ್ಗಗಳ ಆಶಾಕಿರಣವಾದ ನಾರಾಯಣ ಗುರುಗಳಿಗೆ ಅಪಮಾನ ಮಾಡಿರುವ ಚಕ್ರತೀರ್ಥನನ್ನು ಯಕ್ಷಗಾನದ ರಾಜ್ಯ ಸಮ್ಮೇಳನಕ್ಕೆ ಆಹ್ವಾನಿಸಿ ಭಾಷಣ ಮಾಡಿಸುತ್ತಿರುವುದು ಇಡೀ ಹಿಂದುಳಿದ ವರ್ಗಗಳಿಗೆ ಮಾಡಿರುವ ಅವಮಾನ ಕೂಡಲೇ ಈ ವಿಚಾರವನ್ನು ಸರ್ಕಾರ ಕೈ ಬಿಡಬೇಕು ಮತ್ತು ಸಚಿವ ಸುನಿಲ್ ಕುಮಾರ್ ಇಬ್ಬಗೆಯ ನೀತಿಯನ್ನು ಬಿಟ್ಟುಬಿಡಬೇಕು ಎಂದರು.
ಈ ಸಂಧರ್ಭದಲ್ಲಿ ನಗರಸಭಾ ಸದಸ್ಯ ರಮೇಶ್ ಕಾಂಚನ್,ದಸಂಸದ ಪ್ರಮುಖರಾದ ಗಣೇಶ್ ನೆರ್ಗಿ ಉಪಸ್ಥಿತರಿದ್ದರು.
ಸುರತ್ಕಲ್ : ಪ್ರೀತಿಸುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಂಚನೆ ಆರೋಪ: ಅಪ್ರಾಪ್ತೆ ಆತ್ಮಹತ್ಯೆ; ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು…
ರಾಜ್ಯ ಸರ್ಕಾರದಿಂದ 133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ ಶೋಕಾಸ್ ನೋಟಿಸ್ ಬೆಂಗಳೂರು: ರಾಜ್ಯ ಸರ್ಕಾರ 133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ …
ಉಡುಪಿ: ಅಸ್ವಸ್ಥಗೊಂಡ ಪ್ರಯಾಣಿಕ ; ಬಸ್‌ನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಣ ಉಳಿಸಿದ ಚಾಲಕ ಉಡುಪಿ : ಶಿವಮೊಗ್ಗದಿಂದ ಬರುತ್ತಿದ್ದ ಖಾಸಗಿ…
ಮುಂಬೈನಲ್ಲಿ ಮುಂಗಾರು: ತಗ್ಗು ಪ್ರದೇಶಗಳು ಜಲಾವೃತ, ರೈಲು ಸಂಚಾರ ವ್ಯತ್ಯಯ ಮುಂಬೈ: ಮುಂಬೈನಲ್ಲಿ ಮುಂಗಾರು ಆರಂಭವಾದ ಒಂದು ದಿನದ ನಂತರ,…
ಜೂ.25ಕ್ಕೆ ಮಂಗಳೂರಿಗೆ ಶಾರುಖ್ ಖಾನ್: ರೋಹನ್ ಕಾರ್ಪೊರೇಶನ್ ವಿಶೇಷ ಕಾರ್ಯಕ್ರಮದಲ್ಲಿ ಭಾಗಿ ಮಂಗಳೂರು: ಬಾಲಿವುಡ್ ನ ಖ್ಯಾತ ನಟ ಹಾಗೂ…
ಕರ್ತವ್ಯದ ವೇಳೆ ಹೃದಯಾಘಾತ : ಡಿಎಆರ್ ಪೊಲೀಸ್ ಕಾನ್ಸ್‌ಟೇಬಲ್ ಸಾವು ರಾಯಚೂರು: ಜಿಲ್ಲೆಯ ದೇವದುರ್ಗ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಾನ್ಸ್‌ಟೇಬಲ್…