Featured

ಉಡುಪಿ:  ಯಶ್ಪಾಲ್‌ ಸುವರ್ಣಗೆ ನಿರಂತರ ಕೊಲೆ ಬೆದರಿಕೆ ಹಿನ್ನಲೆ : ಪೊಲೀಸ್‌ ಇಲಾಖೆಯಿಂದ ಗನ್‌ ಮ್ಯಾನ್‌ ಭದ್ರತೆ – Vishwnaews24

ಉಡುಪಿ:  ಯಶ್ಪಾಲ್‌ ಸುವರ್ಣಗೆ ನಿರಂತರ ಕೊಲೆ ಬೆದರಿಕೆ ಹಿನ್ನಲೆ : ಪೊಲೀಸ್‌ ಇಲಾಖೆಯಿಂದ ಗನ್‌ ಮ್ಯಾನ್‌ ಭದ್ರತೆ – Vishwnaews24

ಉಡುಪಿ: ಸಾಮಾಜಿಕ ಜಾಲತಾಣಗಳ ಮೂಲಕ ನಿರಂತರವಾಗಿ ಕೊಲೆ ಬೆದರಿಕೆ ಬರುತ್ತಿರುವ ಹಿನ್ನಲೆಯಲ್ಲಿ ಬಿಜೆಪಿ ಮುಖಂಡ ಹಾಗೂ ಉಡುಪಿ ಸರಕಾರಿ ಮಹಿಳಾ ಪಿಯು ಕಾಲೇಜು ಉಪಾಧ್ಯಕ್ಷ ಯಶ್ಪಾಲ್ ಸುವರ್ಣ ಅವರಿಗೆ ಜಿಲ್ಲಾ ಪೊಲೀಸ್‌ ಇಲಾಖೆ ಗನ್‌ ಮ್ಯಾನ್‌ ಭದ್ರತೆಯನ್ನು ಒದಗಿಸಿದೆ.

ನಿರಂತರವಾಗಿ ಕೊಲೆ ಬೆದರಿಕೆ ಬರುತ್ತಿರುವ ಹಿನ್ನಲೆಯಲ್ಲಿ ಇಲಾಖೆ ನೀಡಿರುವ ಗನ್‌ ಮ್ಯಾನ್‌ ಭದ್ರತೆಯನ್ನು ಪಡೆದುಕೊಳ್ಳುವಂತೆ ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌ ವಿಷ್ಣುವರ್ಧನ್‌ ಅವರು ಯಶ್ಪಾಲ್‌ ಅವರಿಗೆ ಸಲಹೆ ನೀಡಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಯಶ್ಪಾಲ್‌ ಸುವರ್ಣ ಅವರು ಪೊಲೀಸ್‌ ಇಲಾಖೆ ಗುರುವಾರ ಗನ್‌ ಮ್ಯಾನ್‌ ಕಳುಹಿಸಿಕೊಟ್ಟಿದ್ದು, ನಾನು ಗನ್‌ ಮ್ಯಾನ್‌ ಸಂಸ್ಕೃತಿಯಲ್ಲಿ ಬೆಳೆದವನಲ್ಲ. ಉಡುಪಿಯಲ್ಲಿ ಓಡಾಡುವಾಗ ಗನ್‌ ಮ್ಯಾನ್‌ ಬೇಡ ಎಂದಿದ್ದೇನೆ ಆದರೂ ಈ ಬಗ್ಗೆ ಪಕ್ಷದ ಹಿರಿಯರ ಅಭಿಪ್ರಾಯ ಪಡೆಯುತ್ತೇನೆ. ಪೊಲೀಸ್‌ ಇಲಾಖೆ ಗನ್‌ ಮ್ಯಾನ್‌ ಪಡೆಯಲೇ ಬೇಕು ಎಂದು ಹೇಳಿದ್ದು ಇಲಾಖೆ ತನ್ನ ಚೌಕಟ್ಟಿನಲ್ಲಿ ಕೆಲಸ ನಿರ್ವಹಿಸಬೇಕಾಗಿದೆ. ನಮಗೆಲ್ಲಾ ಭದ್ರತೆ ನೀಡುತ್ತಾ ಹೋದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂದರು.

ಮಾರಿಗುಡಿ-6 ಎಂಬ ಇನ್ಟಾಗ್ರಾಂ ಪೇಜ್‌ ನಲ್ಲಿ ಎರಡನೇ ಬಾರಿ ತನಗೆ ಕೊಲೆ ಬೆದರಿಕೆ ಹಾಕಿ ಪೋಸ್ಟ್‌ ಹಾಕಿದ್ದು ಶೃದ್ಧಾಂಜಲಿ ಬ್ಯಾನರ್‌ ರೆಡಿ ಮಾಡಲು ಹೇಳಿದ್ದಾರೆ ಆದರೆ ಇಂತಹ ಬೆದರಿಕೆಗಳಿಗೆ ನಾನು ಹೆದರುವುದಿಲ್ಲ. ಬೆದರಿಕೆ ಹಾಕುವವರ ಬಗ್ಗೆ ಪೊಲೀಸರು ಸೂಕ್ತ ತನಿಖೆ ನಡೆಸಬೇಕು. ಬೆದರಿಕೆ ಹಾಕಿದರವು ಸರಿಯಾದ ದಾರಿಯಲ್ಲಿ ಬದುಕಲು ಕಲಿಯಿರಿ ಅಡ್ಡದಾರಿ ಹಿಡಿದರೆ ಇಲಾಖೆ, ನಮ್ಮ ಕಾರ್ಯಕರ್ತರು ಪಾಠ ಕಲಿಸುತ್ತಾರೆ. ಸ್ಥಳೀಯರು ಯಾರೋ ಹೊರದೇಶದವರ ಮೂಲಕ ಬೆದರಿಕೆ ಹಾಕಿಸುತ್ತಿದ್ದಾರೆ ಸ್ಥಳೀಯ ಭಾಷೆಯನ್ನು ಕಾಮೆಂಟ್ನಲ್ಲಿ ಬಳಸುತ್ತಿದ್ದಾರೆ ಇವರುಗಳು ಮೂಳೂರು, ಉಚ್ಚಿಲ ಭಾಗದವರು ಎಂಬ ಮಾಹಿತಿ ಇದ್ದು ಇಲಾಖೆ ಸೂಕ್ತ ತನಿಖೆ ನಡೆಸಬೇಕು ಎಂದರು.

Vishwa News 24

Recent Posts

ದೋಣಿ ಮುಗುಚಿ ಇಬ್ಬರು ಯುವಕರು ನೀರುಪಾಲು : ಓರ್ವನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಶೋಧ – vishwanews24

ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು  ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…

18 hours ago

ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು : ಸಿದ್ದರಾಮಯ್ಯ – vishwanews24

 ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…

18 hours ago

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ – vishwanews24

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…

19 hours ago

ರೈಲು ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಬುಕ್ಕಿಂಗ್ ಮತ್ತು ರದ್ದತಿ  ನಿಯಮದಲ್ಲಿ ಭಾರಿ ಬದಲಾವಣೆ ; ಇಲ್ಲಿದೆ ಪೂರ್ಣ ಮಾಹಿತಿ – vishwanews24

ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…

22 hours ago

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ – vishwanews24

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…

22 hours ago

ಉಡುಪಿ ಜಿಲ್ಲೆಯ ಐದು ಗ್ರಾಮ ಪಂಚಾಯತ್‌ಗಳು ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ – vishwanews24

ಉಡುಪಿ ಜಿಲ್ಲೆಯ ಐದು ಗ್ರಾಮ ಪಂಚಾಯತ್‌ಗಳು ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಉಡುಪಿ: ಕೇಂದ್ರ ಸರ್ಕಾರದ ವಿವಿಧ ವಿಭಾಗಗಳ ಅಡಿಯಲ್ಲಿ ನೀಡಲಾಗುವ…

22 hours ago