ಉಡುಪಿ: ಯಾಂತ್ರೀಕೃತ ಮೀನುಗಾರಿಕೆ ದೋಣಿಗಳಿಗೆ ಕರರಹಿತ 25000 ಕಿಲೋ ಲೀಟರ್ ಡೀಸೆಲ್ 2022-23ನೇ ಸಾಲಿಗೆ ಹೆಚ್ಚುವರಿಯಾಗಿ ವಿತರಿಸಲು ಸರ್ಕಾರ ಆದೇಶ ಹೊರಡಿಸಿದೆ.
ಈ ಹಿಂದೆ ಸರ್ಕಾರವು ಕರರಹಿತ ಡೀಸೆಲ್ ಅನ್ನು ಡೆಲಿವರಿ ಪಾಯಿಂಟ್ ನಲ್ಲಿ ವಿತರಿಸಲು ಆದೇಶಿಸಿದ್ದು, 2022 – 23ನೇ ಸಾಲಿಗೆ ಆರ್ಥಿಕ ವರ್ಷ ಏಪ್ರಿಲ್ ಮಾಹೆಯಿಂದ ಅನ್ವಯವಾಗುವಂತೆ ದೋಣಿಗಳಿಗೆ ವಾರ್ಷಿಕ ಕರರಹಿತ ಡೀಸೆಲ್ ಮಿತಿಯನ್ನು 1.50 ಲಕ್ಷ ಕಿಲೋ ಲೀಟರ್ ನಿಗದಿಪಡಿಸಿದೆ. ಯಾಂತ್ರಿಕ ದೋಣಿಗಳಿಗೆ ನೀಡುತ್ತಿರುವ ಕರರಹಿತ ಡೀಸೆಲ್ ಕೋಟಾ ಡಿಸೆಂಬರ್ ಗೆ ಮುಗಿದಿದ್ದು, ಈ ಕೋಟಾ ಸಾಕಾಗುತ್ತಿಲ್ಲವಾದ್ದರಿಂದ ಪ್ರಸ್ತುತ ನಿಗದಿಯಾಗಿರುವ ವಾರ್ಷಿಕ ಮಿತಿಯನ್ನು 1.50 ಲಕ್ಷ ಕಿಲೋ ಲೀಟರ್ 2.00 ಲಕ್ಷ ಕಿಲೋ ಲೀಟರ್ ಗೆ ಹೆಚ್ಚಿಸಲು ಮನವಿ ಮಾಡಲಾಗಿತ್ತು. ಅಲ್ಲದೆ ಪ್ರತಿ ಮಾಹೆಗೆ ಸರಾಸರಿ 17500 ಕಿಲೋ ಲೀಟರ್ ಪ್ರಮಾಣ ಬೇಕಾಗಿದ್ದು, ಅದರಂತೆ ಫೆಬ್ರವರಿ ತಿಂಗಳಿನಿಂದ ಮಾರ್ಚ್ ವರೆಗೆ 2 ತಿಂಗಳಿಗೆ ಕನಿಷ್ಠ 35000 ಕಿಲೋ ಲೀಟರ್ ಪ್ರಮಾಣ ಬೇಕಾಗಿರುವುದರಿಂದ 25,000 ಕಿಲೋ ಲೀಟರ್ ಹೆಚ್ಚುವರಿಯಾಗಿ ಕರರಹಿತ ಡೀಸೆಲ್ ವಿತರಿಸಲು ಮನವಿ ಮಾಡಲಾಗಿತ್ತು.
ಮೀನುಗಾರರ ಈ ಪ್ರಮುಖ ಬೇಡಿಕೆಯನ್ನು ಈಡೇರಿಸಿದ ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಹಾಗೂ ಇದಕ್ಕಾಗಿ ಶ್ರಮಿಸಿದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅವರಿಗೆ ಹಾಗೂ ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವರಾದ ಎಸ್. ಅಂಗಾರ ಅವರಿಗೆ ಶಾಸಕ ಕೆ ರಘುಪತಿ ಭಟ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಉಡುಪಿ ಮಲಬಾರ್ ಗೋಲ್ಡ್ನಲ್ಲಿ ಹಫೀಝ್ ರೆಹಮಾನ್ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…