Featured

ಉಡುಪಿ: ಯುವನಿಧಿ – ವಿಶೇಷ ನೋಂದಣಿ ಅಭಿಯಾನ – vishwanews24

ಉಡುಪಿ: ಯುವನಿಧಿ – ವಿಶೇಷ ನೋಂದಣಿ ಅಭಿಯಾನ

    ಉಡುಪಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಯುವನಿಧಿ ಯೋಜನೆಯಲ್ಲಿ 2022-23 ಹಾಗೂ 2023-24 ರಲ್ಲಿ ಉತ್ತೀರ್ಣರಾದ ಪದವಿ, ಸ್ನಾತಕೋತರ ಪದವಿ ಮತ್ತು ಡಿಪ್ಲೋಮಾಗಳ ವಿಧ್ಯಾರ್ಥಿಗಳು ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಜನವರಿ 6 ರಿಂದ 20 ರವರೆಗೆ ವಿಶೇಷ ನೋಂದಣಿ ಅಭಿಯಾನವನ್ನು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಸಂಕೀರ್ಣದ ಬಿ ಬ್ಲಾಕ್, ರೂ.ನಂ. 201 ರ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಇಲ್ಲಿ ಅಯೋಜಿಸಲಾಗಿದೆ. 

  ಜಿಲ್ಲೆಯ ಎಲ್ಲಾ ಪದವಿ ಕಾಲೇಜುಗಳು ಹಾಗೂ ಡಿಪ್ಲೋಮಾ ಕಾಲೇಜುಗಳಲ್ಲಿಯೂ ವಿಶೇಷ ನೋಂದಣಿ ಅಭಿಯಾನವನ್ನು ಆಯೋಜಿಸಲಾಗಿದ್ದು, ಆಯಾ ತಾಲೂಕಿನ ಅಭ್ಯರ್ಥಿಗಳು ಇದರ ಉಪಯೋಗವನ್ನು ಪಡೆದುಕೊಳ್ಳಬಹುದು. ಪ್ರತಿ ತಿಂಗಳು ಪದವಿಧರರಿಗೆ 3,000 ರೂ. ಹಾಗೂ ಡಿಪ್ಲೋಮಾದಾರರಿಗೆ 1,500 ರೂ. ಗಳನ್ನು ನಿರುದ್ಯೋಗ ಭತ್ಯೆಯ ಮೂಲಕ ನೀಡಲಾಗುವುದು. ಫಲಿತಾಂಶದ ನಂತರ ನಿರುದ್ಯೋಗಿಗಳಾಗಿ 180 ದಿವಸಗಳು ಪೊರೈಸಿದ ಅಭ್ಯರ್ಥಿಗಳು ಕೂಡ ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. 

  ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳು: 2024-25 ರಲ್ಲಿ ಪದವಿ/ಡಿಪ್ಲೋಮಾ ಹಾಗೂ ಸ್ನಾತಕೋತರ ಉತ್ತಿರ್ಣರಾದ ವಿಧ್ಯಾರ್ಥಿಗಳು, ಪದವಿ/ಡಿಪ್ಲೋಮಾ ನಂತರ ಕನಿಷ್ಠ 6 ತಿಂಗಳ ಅವಧಿಯೊಳಗೆ ಸರ್ಕಾರಿ/ಖಾಸಗಿ ಉದ್ಯೋಗ ಹೊಂದಿಲ್ಲದವರು, ಸ್ವಯಂ ಉದ್ಯೋಗ ಹೊಂದಿಲ್ಲದವರು, ಉನ್ನತ ವಿಧ್ಯಾಭ್ಯಾಸ ಮುಂದುವರೆಸದೆ ಇರುವವರು ಹಾಗೂ ಕರ್ನಾಟಕದಲ್ಲಿ ವಾಸವಿರುವರು (ಕನಿಷ್ಠ 6 ವರ್ಷಗಳ ವರೆಗೆ ಪದವಿ/ಡಿಪ್ಲೋಮಾ ದವರೆಗೆ ಅಧ್ಯಯನ ಮಾಡಿದವರು) ಈ ಯೋಜನೆಯಡಿ ಅರ್ಜಿ ಸಲ್ಲಿಸಬಹುದಾಗಿದೆ.

  ಅಭ್ಯರ್ಥಿಗಳು ಪ್ರತಿ ತಿಂಗಳು ಈ ಪ್ರಯೋಜನ ಪಡೆಯಬೇಕಿದ್ದರೆ, ಪ್ರತಿ ತಿಂಗಳಲ್ಲಿ ತಾನು ನಿರುದ್ಯೋಗಿಯೆಂದು, ವ್ಯಾಸಂಗ ಮುಂದುವರೆಸುತ್ತಿಲ್ಲವೆAದು ಹಾಗೂ ಸ್ವಯಂ ಉದ್ಯೋಗಿಯಲ್ಲ ವೆಂದು ಸ್ವಯಂ ಘೋಷಣೆ ಮಾಡಬೇಕಾಗಿರುತ್ತದೆ. ಪ್ರಸಕ್ತ ಪ್ರತೀ ಗ್ರಾಮದಲ್ಲಿ ಗ್ರಾಮ ಒನ್, ಕರ್ನಾಟಕ ಒನ್ ಹಾಗೂ ಬಾಪೂಜಿ ಸೇವಾ ಕೇಂದ್ರ ಲಭ್ಯವಿದ್ದು, ಅಭ್ಯರ್ಥಿಗಳು ನೋಂದಣಿಯನ್ನು ಮಾಡಿಕೊಳ್ಳಬಹುದು ಹಾಗೂ ಸ್ವಯಂ ಘೋಷಣೆಯನ್ನು ಪ್ರತೀ ತಿಂಗಳು 25ನೇ ತಾರೀಕಿನ ಒಳಗಾಗಿ ಸಲ್ಲಿಸಬೇಕು. ಪ್ರಯೋಜನ ಪಡೆಯುತ್ತಿರುವ ಅಭ್ಯರ್ಥಿಗಳು ಪ್ರತೀ ತಿಂಗಳು ಸ್ವಯಂ ಘೋಷಣೆ ಮಾಡದಿದ್ದಲ್ಲಿ ಅಂತಹ ಅಭ್ಯರ್ಥಿಗಳಿಗೆ ನೇರ ನಗದು ವರ್ಗಾವಣೆ ಮಾಡಲಾಗುವುದಿಲ್ಲ. ಪ್ರತೀ  ತಿಂಗಳು ಪ್ರಯೋಜನ ಪಡೆದುಕೊಳ್ಳಲು ಸ್ವಯಂ ಘೋಷಣೆ ಮಾಡಬೇಕಾಗಿರುವ ಕುರಿತು ಎಸ್.ಎಂ.ಎಸ್ ಸಂದೇಶ ಅಭ್ಯರ್ಥಿಗಳಿಗೆ ರವಾನಿಸಲಾಗಿರುತ್ತದೆ. ಅಭ್ಯರ್ಥಿಗಳು ಕಡ್ಡಾಯವಾಗಿ ಆಧಾರ್ ಸೀಡೆಡ್ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. 

   ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ hಣಣಠಿs://sevಚಿsiಟಿಜhugs.ಞಚಿಡಿಟಿಚಿಣಚಿಞಚಿ.gov.iಟಿ, ಯುವನಿಧಿ ಯೋಜನೆಯ ಟೋಲ್ ಪ್ರೀ ಸಹಾಯವಾಣಿ ಸಂಖ್ಯೆ 18005999918 ಅಥವಾ 18005997154 ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಉಡುಪಿ ಮೊ.ನಂ: 9945856670, 8105774936 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾ ಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

3 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

3 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

3 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

3 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

3 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

3 days ago