Featured

ಉಡುಪಿ : ಯು.ಎ.ಇ 2023 ಯೂತ್ ಐಕಾನ್ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಫಾರೂಕ್ ಚಂದ್ರನಗರ ಆಯ್ಕೆ – vishwanews24

ಉಡುಪಿ : ಯು.ಎ.ಇ 2023 ಯೂತ್ ಐಕಾನ್ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಫಾರೂಕ್ ಚಂದ್ರನಗರ ಆಯ್ಕೆ

ಉಡುಪಿ: ಕಳತ್ತೂರು ಬಟರ್ ಫ್ಲೈ ಗೆಸ್ಟ್ ಹೌಸ್ ಮತ್ತು ಪಾರ್ಟಿ ಹಾಲ್ ಚಂದ್ರನಗರ ಇದರ ಮ್ಹಾಲಕರು ರೋಟರಿ ಕ್ಲಬ್ ಶಿರ್ವ ಇದರ ಅಧ್ಯಕ್ಷರು ಯುವ ನಾಯಕರು ಉದ್ಯಮಿಯಾದ ಮೊಹಮ್ಮದ್ ಫಾರೂಕ್ ಚಂದ್ರನಗರ ಅವರು ಯು.ಎ.ಇ 2023 ಯೂತ್ ಐಕಾನ್ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಡಿಸೆಂಬರ್ 10 ದುಬೈ ಅಲ್ ಖುಷಿಸ್ ಉಡ್ಲಮ್ ಪಾರ್ಕ್ ದುಬೈ ಶಾಲಾ ಸಭಾಂಗಣದಲ್ಲಿ ನಡೆಯುವ ಗಡಿನಾಡ ಉತ್ಸವ ಕಾರ್ಯಕ್ರಮದಲ್ಲಿ ಹಲವಾರು ದೇಶ ಹಾಗೂ ವಿದೇಶದ ಗಣ್ಯತಿಗಣ್ಯರ ಸಮ್ಮುಖದಲ್ಲಿ 2023 ರ ಪ್ರತಿಷ್ಠಿತ ಅಂತಾರಾಷ್ಟ್ರೀಯ ಪ್ರಶಸ್ತಿ ಯೂತ್ ಐಕಾನ್ ಪಡೆಯಲಿದ್ದಾರೆಂದು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ(ರಿ) ದುಬೈ ಘಟಕದ ಅಧ್ಯಕ್ಷರಾದ ನ್ಯಾಯವಾದಿ ಇಬ್ರಾಹಿಂ ಖಲೀಲ್ ಅರಿಮಲೆ,ಕಾರ್ಯದರ್ಶಿ ಅಮರದೀಪ ಕಲ್ಲುರಾಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 25 ವರ್ಷಗಳಿಂದ ಸಮಾಜ ಸೇವೆಯಲ್ಲಿ ಎಲ್ಲಾ ಜಾತಿಯವರೊಂದಿಗೆ ಉತ್ತಮ ಬಾಂದವ್ಯ ಹೊಂದಿದ್ದು ಗ್ರಾಮ ಮಟ್ಟದ ಜನರಿಗೆ ತನ್ನಿಂದ ಆಗುವ ಸಹಾಯ ಮಾಡುತ್ತ ಕುಡಿಯುವ ನೀರು,ರಸ್ತೆ ನಿರ್ಮಾಣ,ಕೊರೋಣ ದಂತ ಮಹಾಮಾರಿ ಬಂದಾಗ ಸಂತ್ರಸ್ತರಿಗೆ ಕಾಪು ಸಮಾಜ ಸೇವಾ ವೇದಿಕೆ ಅಧ್ಯಕ್ಷರಾಗಿ ಅದರ ಮುಖಾಂತರ ಸುಮಾರು 6000 ಕ್ಕೂ ಮಿಕ್ಕಿ ಮನೆಗೆ ಅಕ್ಕಿ ಪಡಿತರ ಕಿಟ್ ನೀಡಿದ್ದು ,ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಇಲಾಖೆ ,ಪೊಲೀಸ್ ಇಲಾಖೆಯವರ ಸಹಕಾರದಿಂದ ಹಲವಾರು ಮೆಡಿಕಲ್ ಕ್ಯಾಂಪ್, ಬ್ಲಡ್ ಕ್ಯಾಂಪ್,ವಿದ್ಯಾರ್ಥಿ ವೇತನದಂತ ನೂರಾರು ಸಾಮಾಜಿಕ ಕಾರ್ಯಕ್ರಮದಲ್ಲಿ ತನ್ನನ್ನು ತಾನು ತೊಡಗಿಸಿ ಸರಕಾರದಿಂದ ಸಿಗುವ ಸವಲತ್ತುಗಳನ್ನು ಜನರಿಗೆ ಸುಲಭ ರೀತಿಯಲ್ಲಿ ಸಿಗಲು ಹಲವಾರು ಮಾಹಿತಿ ಕಾರ್ಯಕ್ರಮ ಮಾಡಿರುತ್ತಾರೆ ಹೀಗೆ ಹತ್ತಾರು ಸಾಮಾಜಿಕ ಸಂಘಟನೆಯಲ್ಲಿ ಮುಂಚೂಣಿಯಲ್ಲಿ ಗುರುತಿಸಿ ಕರ್ನಾಟಕ ಸರಕಾರದ ಪ್ರತಿಷ್ಠಿತ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಏಷ್ಯಾ ಫೇಷಿಫಿಕ್ ಗೋಲ್ಡ್ ಸ್ಟಾರ್ ಅವಾರ್ಡ್ ದೆಹಲಿ, ಜನಸೇವಾ ಸದ್ಭಾವನ್ ಪುರಸ್ಕಾರ್ ಅವಾರ್ಡ್ ಗೋವಾ,ಕೈರಲಿ ಪ್ರಕಾಶನ ಕೊಡಲ್ಪಟ್ಟ ಸಮಾಜ ರತ್ನ ಕೇರಳ ,ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ಸಾಧಕ ರತ್ನ ಪ್ರಶಸ್ತಿ, ಕರ್ನಾಟಕ ರಾಷ್ಟ್ರ ಸಮಿತಿ ಉಡುಪಿ ವತಿಯಿಂದ ಸಮಾಜ ರತ್ನ ಪ್ರಶಸ್ತಿ ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಹಲವಾರು ಪ್ರಶಸ್ತಿ ಪಡೆದು ನೂರಾರು ಸಂಘ ಸಂಸ್ಥೆಗಳಿಂದ ಸನ್ಮಾನ ಅಭಿನಂದನೆ ಪಡೆದಿರುತ್ತಾರೆ.

Vishwa News 24

Recent Posts

ತಾಂತ್ರಿಕ ದೋಷ: ಹುಬ್ಬಳ್ಳಿಯಲ್ಲಿ ಇಳಿಯಬೇಕಿದ್ದ ವಿಮಾನ ಬೆಂಗಳೂರಿನಲ್ಲಿ ಲ್ಯಾಂಡಿಂಗ್ – vishwanews24

ತಪ್ಪಿದ ಭಾರಿ ದುರಂತ: 4 ಗಂಟೆಗಳ ಕಾಲ ಆಗಸದಲ್ಲೇ ಸುತ್ತಾಟ ; ಹುಬ್ಬಳ್ಳಿ ತಲುಪಬೇಕಿದ್ದ ವಿಮಾನ ಬೆಂಗಳೂರಲ್ಲಿ ಲ್ಯಾಂಡ್ ಹುಬ್ಬಳ್ಳಿ:…

14 hours ago

ಮುಂದಿನ ತಿಂಗಳು ಒಳ್ಳೆಯ ಮುಹೂರ್ತ ನೋಡಿ ಹೊಸ ರಾಜಕೀಯ ಪ್ರಾರಂಭ ಮಾಡ್ತೇನೆ: ಯತ್ನಾಳ್ – vishwanews24

ಮುಂದಿನ ತಿಂಗಳು ಒಳ್ಳೆಯ ಮುಹೂರ್ತ ನೋಡಿ ಹೊಸ ರಾಜಕೀಯ ಪ್ರಾರಂಭ ಮಾಡ್ತೇನೆ: ಯತ್ನಾಳ್ ವಿಜಯಪುರ: ಮುಂದಿನ ತಿಂಗಳು ಒಳ್ಳೆಯ ಮುಹೂರ್ತ…

14 hours ago

ನಾವು ಮಹಿಳಾ ಮೀಸಲಾತಿ ಪರ ಇದ್ದೇವೆ; ಆದರೆ ಮೋದಿ ಅವರ ಹೇಳಿಕೆಯನ್ನ ವಿರೋಧಿಸುತ್ತೇವೆ : ಖರ್ಗೆ – vishwanews24

ನಾವು ಮಹಿಳಾ ಮೀಸಲಾತಿ ಪರ ಇದ್ದೇವೆ; ಆದರೆ ಮೋದಿ ಅವರ ಹೇಳಿಕೆಯನ್ನ ವಿರೋಧಿಸುತ್ತೇವೆ : ಖರ್ಗೆ ಬೆಂಗಳೂರು: ನಾವು ಮಹಿಳಾ…

14 hours ago

ಉಡುಪಿ: ಪೆರ್ಡೂರು ಅನಂತಪದ್ಮನಾಭ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾಗಿ ಕೆ. ಶಾಂತಾರಾಮ ಸೂಡ ಆಯ್ಕೆ – vishwanews24

ಉಡುಪಿ: ಪೆರ್ಡೂರು ಅನಂತಪದ್ಮನಾಭ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾಗಿ ಕೆ. ಶಾಂತಾರಾಮ ಸೂಡ ಆಯ್ಕೆ ಉಡುಪಿ: ಮಹತೋಭಾರ ಪೆರ್ಡೂರು ಅನಂತಪದ್ಮನಾಭ…

14 hours ago

ಎರ್ಮಾಳು: ಗೂಡ್ಸ್ ವಾಹನಕ್ಕೆ ರಾಂಗ್ ಸೈಡ್‌ನಿಂದ ಬಂದ ಸ್ಕೂಟಿ ಢಿಕ್ಕಿ ; ಸವಾರ ಸಾವು – vishwanews24

ಎರ್ಮಾಳು: ಗೂಡ್ಸ್ ವಾಹನಕ್ಕೆ ರಾಂಗ್ ಸೈಡ್‌ನಿಂದ ಬಂದ ಸ್ಕೂಟಿ ಢಿಕ್ಕಿ ; ಸವಾರ ಸಾವು ಪಡುಬಿದ್ರಿ : ರಾಂಗ್ ಸೈಡ್‌ನಿಂದ…

16 hours ago

ಪುತ್ತೂರು: ಡಿವೈಡರ್‌ ಗೆ ಬೈಕ್‌ ಡಿಕ್ಕಿ ;  ಸವಾರ ಸ್ಥಳದಲ್ಲೇ ಮೃತ್ಯು – vishwanews24

ಪುತ್ತೂರು: ಡಿವೈಡರ್‌ ಗೆ ಬೈಕ್‌ ಡಿಕ್ಕಿ ;  ಸವಾರ ಸ್ಥಳದಲ್ಲೇ ಮೃತ್ಯು ಪುತ್ತೂರು: ನಗರದ ಪಡೀಲ್ ಬಳಿ ಎರಡು ಬೈಕ್‌ಗಳ…

2 days ago