ಉಡುಪಿ: ಕನ್ನಡ ಮತ್ತು ತುಳು ಮಿಶ್ರಿತ ಯುಟ್ಯೂಬ್ ನಲ್ಲಿ ಮಿಂಚುತ್ತಿದ್ದ ರಕ್ಷಿತಾ ಶೆಟ್ಟಿ ಇದೀಗ ಬಿಗ್‌ಬಾಸ್ ಕನ್ನಡ ಸೀಸನ್ 12ರ ರನ್ನರ್ ಅಪ್ ಆಗಿದ್ದಾರೆ. ತಮ್ಮ ಗೆಲುವಿಗೆ ಕಾರಣರಾದ ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಿರುವ ರಕ್ಷಿತಾ ಶೆಟ್ಟಿ ನನ್ನನ್ನು ಮನೆಮಗಳು ತರ ನೋಡಿದ್ದೀರಿ, ಇದಕ್ಕಿಂತ ಹೆಚ್ಚೇನು ಬೇಕು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಧನ್ಯವಾದ ತಿಳಿಸಿದ್ದಾರೆ. ನಾನು ಈ ಸ್ಥಾನಕ್ಕೆ ಬರಲು ಕರ್ನಾಟಕವೇ ಕಾರಣ. ತುಂಬಾ ಪ್ರೀತಿಕೊಟ್ಟು ಕನ್ನಡಿಗರು ನನ್ನನ್ನು ಗೆಲ್ಲಿಸಿದ್ದಾರೆ. ನನ್ನನ್ನು ಮನೆಮಗಳು ತರ ನೋಡಿದ್ದೀರಿ, ಇದಕ್ಕಿಂದ ಹೆಚ್ಚೇನು ಬೇಕಿಲ್ಲ ಎಂದಿದ್ದಾರೆ. ಅಭಿಮಾನಿಗಳು ಕಾಮೆಂಟ್ ಮಾಡಿ ನೀವೇ ವಿನ್ನರ್ ಎಂದು ಬರೆದುಕೊಂಡಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿರುವಾಗ ನೀವೆಲ್ಲ ಇಷ್ಟು ಪ್ರೀತಿ, ಸಪೋರ್ಟ್ ಮಾಡ್ತಿದೀರಾ ಅಂತ ಗೊತ್ತಿರಲಿಲ್ಲ. ನಾನು ಅಂದುಕೊಂಡೂ ಇರಲಿಲ್ಲ. ಮನೆಯಿಂದ ಆಚೆ ಬಂದಮೇಲೆ ಇದನ್ನೆಲ್ಲ ನೋಡಿದರೆ ಕನಸಾ? ಅಥವಾ ಸತ್ಯಾನಾ? ಅಂತ ಅನಿಸುತ್ತೆ. ಅಷ್ಟು ಪ್ರೀತಿ ನೀವೆಲ್ಲ ಕೊಟ್ಟಿದೀರಿ. ನಿಮ್ಮ ಆಶೀರ್ವಾದ, ಪ್ರೀತಿಯಿಂದ ನಾನು ರನ್ನರ್ ಅಪ್ ಆಗಿದೀನಿ. ನನಗೋಸ್ಕರ ಸಮಯ ಕೊಟ್ಟು ಇಷ್ಟೊಂದು ವೋಟ್ ಹಾಕಿದ್ದಕ್ಕೆ ತುಂಬು ಹೃದಯದ ಧನ್ಯವಾದ. ಎಲ್ಲ ಕನ್ನಡಿಗರಿಗೂ, ಬೇರೆ ರಾಜ್ಯದಲ್ಲಿರುವ, ಮುಂಬೈನಲ್ಲಿರುವ, ಬೇರೆ ದೇಶದಲ್ಲಿರುವ ಎಲ್ಲ ಕನ್ನಡಿಗರಿಗೂ ಥ್ಯಾಂಕ್ಯೂ ಎಂದು ಧನ್ಯವಾದ ತಿಳಿಸಿದ್ದಾರೆ.
ಈ ಮೊದಲು ನಾನು ವಿಡಿಯೋ ಮಾಡಿದಾಗ ನನ್ನ ಬಗ್ಗೆ ತುಂಬಾ ನೆಗೆಟಿವ್ ಕಾಮೆಂಟ್ ಬರುತ್ತಿತ್ತು. ತುಂಬಾ ಟ್ರೋಲ್ ಮಾಡ್ತಾ ಇದ್ರು, ಆದರೆ ಈಗ ನನ್ನ ಬಗ್ಗೆ ಒಂದೇ ಒಂದು ನೆಗೆಟಿವ್ ಕಾಮೆಂಟ್ ನೋಡಲೇ ಇಲ್ಲ, ಎಲ್ಲರೂ ನನಗೆ ಕೇವಲ ಪ್ರೀತಿಯನ್ನೇ ಕೊಡ್ತಾ ಇದ್ದಾರೆ. ಟ್ರೋಲ್, ಟ್ರೋಲ್ ಮೀಮ್ಸ್ ಮಾಡಿದವರಿಗೆ ಥ್ಯಾಂಕ್ಸ್, ಎಲ್ಲ ಯೂಟ್ಯುಬರ್ಸ್, ಇನ್‌ಫ್ಲೂಯೆನ್ಸರ್ಸ್ ಎಲ್ಲರೂ ತುಂಬಾ ಸಪೋರ್ಟ್ ಮಾಡಿದ್ದಾರೆ. ಇಲ್ಲಿ ತನಕ ಬರುವವರೆಗೂ ನನ್ನ ಶ್ರಮ ಎಷ್ಟಿತ್ತೋ, ನಿಮ್ಮದು ಕೂಡ ಅಷ್ಟೇ ಶ್ರಮ ಇದೆ ಎಂದಿದ್ದಾರೆ.
ನನ್ನ ಗೆಲುವಿಗೆ ಇಡೀ ಕರ್ನಾಟಕ ಕಾರಣ. ನಾನು ಸಾಯುವವರೆಗೂ ಮರೆಯಲ್ಲ. ನಾನು ಎಲ್ಲವನ್ನೂ ಪದಗಳಲ್ಲಿ ಹೇಳೋಕೆ ಆಗಲ್ಲ. ಇಷ್ಟು ದಿನ ವಿಡಿಯೋ ಮಾಡೋಕೆ ಆಗಲಿಲ್ಲ. ಈ ಮೂಲಕ ನಿಮ್ಮ ಜೊತೆ ಮಾತನಾಡುವ ಅವಕಾಶ ಸಿಕ್ಕಿತು, ಹೀಗೆ ಪ್ರೀತಿ ಮಾಡ್ತಾ ಇರಿ. ಮನೆಮಗಳು ತರ ನೋಡಿದ್ದೀರಿ, ಇದಕ್ಕಿಂತ ದೊಡ್ಡದೇನು ಬೇಕಿಲ್ಲ ಎಂದು ತಿಳಿಸಿದ್ದಾರೆ
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…