Featured

ಉಡುಪಿ : ನನ್ನನ್ನು ಮನೆಮಗಳು ತರ ನೋಡಿದ್ದೀರಿ, ಇದಕ್ಕಿಂತ ಹೆಚ್ಚೇನು ಬೇಕು : ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಿದ ರಕ್ಷಿತಾ ಶೆಟ್ಟಿ – vishwanews24

ಉಡುಪಿ : ನನ್ನನ್ನು ಮನೆಮಗಳು ತರ ನೋಡಿದ್ದೀರಿ, ಇದಕ್ಕಿಂತ ಹೆಚ್ಚೇನು ಬೇಕು : ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಿದ ರಕ್ಷಿತಾ ಶೆಟ್ಟಿ

ಉಡುಪಿ: ಕನ್ನಡ ಮತ್ತು ತುಳು ಮಿಶ್ರಿತ ಯುಟ್ಯೂಬ್ ನಲ್ಲಿ ಮಿಂಚುತ್ತಿದ್ದ ರಕ್ಷಿತಾ ಶೆಟ್ಟಿ ಇದೀಗ ಬಿಗ್‌ಬಾಸ್ ಕನ್ನಡ ಸೀಸನ್ 12ರ ರನ್ನರ್ ಅಪ್ ಆಗಿದ್ದಾರೆ. ತಮ್ಮ ಗೆಲುವಿಗೆ ಕಾರಣರಾದ ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಿರುವ ರಕ್ಷಿತಾ ಶೆಟ್ಟಿ ನನ್ನನ್ನು ಮನೆಮಗಳು ತರ ನೋಡಿದ್ದೀರಿ, ಇದಕ್ಕಿಂತ ಹೆಚ್ಚೇನು ಬೇಕು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಧನ್ಯವಾದ ತಿಳಿಸಿದ್ದಾರೆ. ನಾನು ಈ ಸ್ಥಾನಕ್ಕೆ ಬರಲು ಕರ್ನಾಟಕವೇ ಕಾರಣ. ತುಂಬಾ ಪ್ರೀತಿಕೊಟ್ಟು ಕನ್ನಡಿಗರು ನನ್ನನ್ನು ಗೆಲ್ಲಿಸಿದ್ದಾರೆ. ನನ್ನನ್ನು ಮನೆಮಗಳು ತರ ನೋಡಿದ್ದೀರಿ, ಇದಕ್ಕಿಂದ ಹೆಚ್ಚೇನು ಬೇಕಿಲ್ಲ ಎಂದಿದ್ದಾರೆ. ಅಭಿಮಾನಿಗಳು ಕಾಮೆಂಟ್ ಮಾಡಿ ನೀವೇ ವಿನ್ನರ್ ಎಂದು ಬರೆದುಕೊಂಡಿದ್ದಾರೆ.

ಬಿಗ್‌ಬಾಸ್‌ ಮನೆಯಲ್ಲಿರುವಾಗ ನೀವೆಲ್ಲ ಇಷ್ಟು ಪ್ರೀತಿ, ಸಪೋರ್ಟ್ ಮಾಡ್ತಿದೀರಾ ಅಂತ ಗೊತ್ತಿರಲಿಲ್ಲ. ನಾನು ಅಂದುಕೊಂಡೂ ಇರಲಿಲ್ಲ. ಮನೆಯಿಂದ ಆಚೆ ಬಂದಮೇಲೆ ಇದನ್ನೆಲ್ಲ ನೋಡಿದರೆ ಕನಸಾ? ಅಥವಾ ಸತ್ಯಾನಾ? ಅಂತ ಅನಿಸುತ್ತೆ. ಅಷ್ಟು ಪ್ರೀತಿ ನೀವೆಲ್ಲ ಕೊಟ್ಟಿದೀರಿ. ನಿಮ್ಮ ಆಶೀರ್ವಾದ, ಪ್ರೀತಿಯಿಂದ ನಾನು ರನ್ನರ್ ಅಪ್ ಆಗಿದೀನಿ. ನನಗೋಸ್ಕರ ಸಮಯ ಕೊಟ್ಟು ಇಷ್ಟೊಂದು ವೋಟ್ ಹಾಕಿದ್ದಕ್ಕೆ ತುಂಬು ಹೃದಯದ ಧನ್ಯವಾದ. ಎಲ್ಲ ಕನ್ನಡಿಗರಿಗೂ, ಬೇರೆ ರಾಜ್ಯದಲ್ಲಿರುವ, ಮುಂಬೈನಲ್ಲಿರುವ, ಬೇರೆ ದೇಶದಲ್ಲಿರುವ ಎಲ್ಲ ಕನ್ನಡಿಗರಿಗೂ ಥ್ಯಾಂಕ್ಯೂ ಎಂದು ಧನ್ಯವಾದ ತಿಳಿಸಿದ್ದಾರೆ.

ಈ ಮೊದಲು ನಾನು ವಿಡಿಯೋ ಮಾಡಿದಾಗ ನನ್ನ ಬಗ್ಗೆ ತುಂಬಾ ನೆಗೆಟಿವ್ ಕಾಮೆಂಟ್‌ ಬರುತ್ತಿತ್ತು. ತುಂಬಾ ಟ್ರೋಲ್ ಮಾಡ್ತಾ ಇದ್ರು, ಆದರೆ ಈಗ ನನ್ನ ಬಗ್ಗೆ ಒಂದೇ ಒಂದು ನೆಗೆಟಿವ್ ಕಾಮೆಂಟ್‌ ನೋಡಲೇ ಇಲ್ಲ, ಎಲ್ಲರೂ ನನಗೆ ಕೇವಲ ಪ್ರೀತಿಯನ್ನೇ ಕೊಡ್ತಾ ಇದ್ದಾರೆ. ಟ್ರೋಲ್, ಟ್ರೋಲ್ ಮೀಮ್ಸ್ ಮಾಡಿದವರಿಗೆ ಥ್ಯಾಂಕ್ಸ್, ಎಲ್ಲ ಯೂಟ್ಯುಬರ್ಸ್, ಇನ್‌ಫ್ಲೂಯೆನ್ಸರ್ಸ್‌ ಎಲ್ಲರೂ ತುಂಬಾ ಸಪೋರ್ಟ್ ಮಾಡಿದ್ದಾರೆ. ಇಲ್ಲಿ ತನಕ ಬರುವವರೆಗೂ ನನ್ನ ಶ್ರಮ ಎಷ್ಟಿತ್ತೋ, ನಿಮ್ಮದು ಕೂಡ ಅಷ್ಟೇ ಶ್ರಮ ಇದೆ ಎಂದಿದ್ದಾರೆ.

ನನ್ನ ಗೆಲುವಿಗೆ ಇಡೀ ಕರ್ನಾಟಕ ಕಾರಣ. ನಾನು ಸಾಯುವವರೆಗೂ ಮರೆಯಲ್ಲ. ನಾನು ಎಲ್ಲವನ್ನೂ ಪದಗಳಲ್ಲಿ ಹೇಳೋಕೆ ಆಗಲ್ಲ. ಇಷ್ಟು ದಿನ ವಿಡಿಯೋ ಮಾಡೋಕೆ ಆಗಲಿಲ್ಲ. ಈ ಮೂಲಕ ನಿಮ್ಮ ಜೊತೆ ಮಾತನಾಡುವ ಅವಕಾಶ ಸಿಕ್ಕಿತು, ಹೀಗೆ ಪ್ರೀತಿ ಮಾಡ್ತಾ ಇರಿ. ಮನೆಮಗಳು ತರ ನೋಡಿದ್ದೀರಿ, ಇದಕ್ಕಿಂತ ದೊಡ್ಡದೇನು ಬೇಕಿಲ್ಲ ಎಂದು ತಿಳಿಸಿದ್ದಾರೆ

Vishwa News 24

Recent Posts

ಎಸ್‌ಟಿಪಿಯನ್ನು ಮೂಳೂರಿನಿಂದ ಬೆಳಪು ಪ್ರದೇಶಕ್ಕೆ ಸ್ಥಳಾಂತರ ಮಾಡಿದರೆ ಕಾಪು ಪುರಸಭೆಗೆ ಸಂಪೂರ್ಣ ಸ್ವಾಗತ : ದೇವಿಪ್ರಸಾದ್ ಶೆಟ್ಟಿ – vishwanews24

ಬೆಳಪು ಪ್ರದೇಶದಲ್ಲಿ ಎಲ್ಲಾ ಅಗತ್ಯ ಸೌಲಭ್ಯಗಳೊಂದಿಗೆ ಘಟಕ ನಿರ್ಮಿಸಿದರೆ ನಮ್ಮಿಂದ ಯಾವುದೇ ವಿರೋಧ ಇರುವುದಿಲ್ಲ : ದೇವಿಪ್ರಸಾದ್ ಶೆಟ್ಟಿ ಮೂಳೂರು…

21 hours ago

ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ – vishwanews24

ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಬೆಳಗಾವಿ: ಪ್ರಿಯಕರನ ಜೊತೆ…

1 day ago

ಬಿಜೆಪಿ ನಡೆಸಿರುವ ಅಪವಿತ್ರ ಮೈತ್ರಿ ಇತಿಹಾಸವನ್ನು ದೇಶ ಮರೆತಿಲ್ಲ : ಬಿ.ಕೆ.ಹರಿಪ್ರಸಾದ್ – vishwanews24

ದೇಶದ ಜಾತ್ಯತೀತ ಮೌಲ್ಯಗಳನ್ನು ರಕ್ಷಿಸಲು ಕಾಂಗ್ರೆಸ್ ಪಕ್ಷ ಸದಾ ಸಮಾನ ಚಿಂತನೆಯ ಪಕ್ಷಗಳೊಂದಿಗೆ ಕೈಜೋಡಿಸಿದೆ : ಬಿ.ಕೆ.ಹರಿಪ್ರಸಾದ್ ಬೆಂಗಳೂರು: ‘ಬಿಜೆಪಿ…

1 day ago

ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ – vishwanews24

ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ ಪಡುಬಿದ್ರಿ: ಸನಾತನ ಫೌಂಡೇಶನ್‌ನ ಅಧ್ಯಕ್ಷ,…

1 day ago

ವಿವಾಹಿತ ಮಹಿಳೆ  ಜತೆ ಲಿವ್ ಇನ್ ರಿಲೇಶನ್‌ ಶಿಪ್‌ನಲ್ಲಿದ್ದ ಯುವಕ ಶವವಾಗಿ ಪತ್ತೆ  – vishwanews24

ವಿವಾಹಿತ ಮಹಿಳೆ ಜತೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವಕ ಶವವಾಗಿ ಪತ್ತೆ  ಬೆಂಗಳೂರು: ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವಕ ನೇಣುಬಿಗಿದ…

1 day ago

ಬಿಜೆಪಿ ನಾಯಕ ಸುವೇಂದು ಅಧಿಕಾರಿ ಬಂಗಾಳದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ – vishwanews24

ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಪರ್ವ.. ಬಿಜೆಪಿ ಮೊದಲ ಸಿಎಂ ಆಗಿ ಪ್ರಮಾಣ ಸ್ವೀಕಾರ.. ಐತಿಹಾಸಿಕ ಕ್ಷಣಕ್ಕೆ ಮೋದಿ,…

1 day ago