ಮಣಿಪಾಲ : ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಬ್ಯಾಗ್ ನಿಂದ 6. 76 ಲಕ್ಷ ರೂ. ಮೌಲ್ಯದ 169 ಗ್ರಾಂ ಚಿನ್ನಾಭರಣ ಕಳ್ಳತನ ನಡೆದಿರುವ ಬಗ್ಗೆ ಮಣಿಪಾಲ ಠಾಣೆಯಲ್ಲಿ ದೂರು ದಾಖಲಾಗಿದೆ.
ದೂರುದಾರದ ಕಾಪು , ಶಿರ್ವದ ನಿವಾಸಿ ತುಕಾರಾಮ ಭಟ್ (65) ಅವರು, ತಮ್ಮ ಪತ್ನಿ ಮತ್ತು ಮಗಳೊಂದಿಗೆ, ಮಹಾರಾಷ್ಟ್ರದ ಥಾಣೆ ರೈಲ್ವೇ ಸ್ಟೇಷನ್ ನಿಂದ – ಉಡುಪಿಗೆ ಮಗಳ 169 ಗ್ರಾಂ ಚಿನ್ನದ ಆಭರಣ ಬ್ಯಾಗ್ ನಲ್ಲಿ ಬಟ್ಟೆಗಳ ನಡುವೆ ಇಟ್ಟು ಪ್ರಯಾಣಿಸಿದ್ದರು.
ಜು.೧೦ ರಂದು ರಾತ್ರಿ 10:45 ಗಂಟೆಗೆ ರೈಲು ಹೊರಟಿದ್ದು, ರೈಲು ಪ್ರಯಾಣದ ವೇಳೆಯಲ್ಲಿ ಪಕ್ಕದ ಸೀಟಿನಲ್ಲಿ ಇಬ್ಬರು ವ್ಯಕ್ತಿಗಳು ಕುಳಿತುಕೊಂಡಿದ್ದರು. ರೈಲು ಕರ್ನಾಟಕದ ಕುಮಟಾ ಬಳಿ ಬರುತ್ತಿದ್ದಾಗ ಜೋರಾಗಿ ಮಳೆ ಸುರಿಯಲು ಪ್ರಾರಂಭಿಸಿದ್ದು, ಇದೇ ವೇಳೆ ಸಹ ಪ್ರಯಾಣಿಕನಾಗಿದ್ದ ವ್ಯಕ್ತಿಯೂ ನಿಮ್ಮ ಬ್ಯಾಗ್ ಗೆ ಮಳೆ ನೀರು ಬೀಳುತ್ತದೆ ಎಂದು ಬ್ಯಾಗ್ ನ್ನು ಮೇಲಿರಿಸಿದ್ದ. ತನ್ನೊಂದಿಗಿದ್ದ ಇನ್ನೊಬ್ಬ ಮಡ್ ಗಾಂ ನಲ್ಲಿ ಇಳಿದಿದ್ದಾನೆ ಎಂದು ತಿಳಿಸಿದ್ದು ನಂತರ ಆತನು ಭಟ್ಕಳ ರೈಲ್ವೇ ಸ್ಟೇಷನ್ ನಲ್ಲಿ ಇಳಿದಿದ್ದಹೋಗಿದ್ದ . ಆದರೆ ಬಳಿಕ ಈ ವ್ಯಕ್ತಿಗಳ ನಡವಳಿಕೆ ಕಂಡು ಸಂಶಯಗೊಂಡು ಬ್ಯಾಗ್ ಪರಿಶೀಲಿಸಿದಾಗ ಚಿನ್ನಾಭರಣ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ರೈಲು ಚಲನೆಯಲ್ಲಿ ಇದ್ದ ಕಾರಣ ಪ್ರಯಾಣ ಮುಂದುವರೆಸಿ ಮನೆಗೆ ತೆರಳಿರುವುದಾಗಿ ದೂರಿನಲ್ಲಿ ತುಕಾರಾಮ ಭಟ್ ವಿವರಿಸಿದ್ದಾರೆ.
ಬೆಂಗಳೂರು : ಮಟನ್ ಶಾಪ್‌ನಲ್ಲಿ ಎಂಡಿಎಂಎ ಮಾರಾಟ : ಇಬ್ಬರ ಬಂಧನ ಬೆಂಗಳೂರು: ಮಟನ್ ಶಾಪ್ ನಲ್ಲಿ ಎಂಡಿಎಂಎ ಮಾದಕ…
ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ ಕಾರ್ಕಳ : ಮನೆ ವಿಚಾರದಲ್ಲಿ ತಂದೆಯೊಬ್ಬ ತನ್ನ…
ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ ಮಂಗಳೂರು: ಮೈಸೂರು ದಸರಾ 2026ರ ಅಂಗವಾಗಿ ಮೊದಲ ಬಾರಿಗೆ ಅದ್ದೂರಿಯಾಗಿ ಆಯೋಜಿಸಲಾಗುತ್ತಿರುವ…
ಸೌಜನ್ಯಾ ಪ್ರಕರಣ: ಎಸ್‌ಐಟಿ ತಂಡದ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್ ಅಸಮಾಧಾನ ಬಂಟ್ವಾಳ: ಸೌಜನ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರುತನಿಖೆಗೆ…
ನವರಾತ್ರಿ ವೇಳೆಗೆ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ ಬೆಂಗಳೂರು: ನವರಾತ್ರಿ ಹಬ್ಬದ ಸಂದರ್ಭದಲ್ಲಿ ರಾಜ್ಯದ ‘ಗೃಹಲಕ್ಷ್ಮಿ’…
ಬಂಟ್ವಾಳ: ಬೆಂಗಳೂರು–ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಬಂಟ್ವಾಳ : ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು…