ಉಡುಪಿ : 1997 ಡಿಸೆಂಬರ್ 15ರಂದು ಪ್ರತಿಷ್ಠಿತ ಲಯನ್ಸ್ ಕ್ಲಬ್ (ಉಡುಪಿಯ ಪ್ರಾಯೋಜಕತ್ವದಲ್ಲಿ ಲಯನ್ಸ್ ಕ್ಲಬ್, ಮೂಡಬೆಳ್ಳೆ ಆರಂಭವಾಯಿತು, ನಿವೃತ್ತ ನೌಕಾದಳದ ಅಧಿಕಾರಿ ಲ ಕಮೋಡರ್ ಕಸ್ತಲಿನೋ ಅಧ್ಯಕ್ಷರಾಗಿ ದೇವದಾಸ್, ಹೆಬ್ಬಾರ್ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ ನಂತರದ ದಿನಗಳಲ್ಲಿ ಲಯನ್ಸ್ ಮೂಡುಬೆಳ್ಳೆಗೆ ಸ್ವಂತ ನೆಲೆ ಬೇಕೆಂಬ ಉದ್ದೇಶದಿಂದ ಕ್ಲಬ್ ನ ವಿಸ್ತರಣಾಧಿಕಾರಿ ಲ|ವಿಲ್ಫ್ರೆಡ್ ಡಿಸೋಜರು ದಾನವಾಗಿ ಸುಮಾರು 20 ಸೆಂಟ್ಸ್ ಸ್ಥಳವನ್ನು ನೀಡಿದರು. 2002ರಲ್ಲಿ ಸಂತ ಕಟ್ಟಡವನ್ನು ಈ ಸ್ಥಳದಲ್ಲಿ ನಿರ್ಮಿಸಲಾಯಿತು.
ತನ್ನ 25 ವರ್ಷಗಳ ಸೇವಾ ಪಯಣದಲ್ಲಿ ಹಲವಾರು ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ, ಕೆ. ಎಂ ಸಿ. ಮಣಿಪಾಲದ ಸಹಕಾರದಿಂದ ದಂತ ಚಿಕಿತ್ಸಾ ಕೇಂದ್ರ, ಉಡುಪಿಯ ಪ್ರಸಾದ್ ನೇತ್ರಾಲಯದ ಸಹಯೋಗದೊಂದಿಗೆ ಉಚಿತ ನೇತ್ರ ಚಿಕಿತ್ಸಾ ಶಿಬಿರಗಳು, ವೈದ್ಯಕೀಯ ಶಿಬಿರಗಳು, ರಕ್ತದಾನ ಶಿಬಿರಗಳು ಇತ್ಯಾದಿ ಆರೋಗ್ಯ ಸಂಬಂದಿ ಕಾರ್ಯಕ್ರಮಗಳನ್ನು ನಡೆಸಿದೆ, ಪದ್ಮ ವಿಭೂಷಣ ಡಾ| ಬಿ. ಎಂ. ಹೆಗ್ಡೆಯವರು ಕೊಡಮಾಡಿದ ಸುಮಾರು 5 ಲಕ್ಷ ರೂಪಾಯಿ ವೆಚ್ಚದಲ್ಲಿ ಮೂಡುಬೆಳ್ಳೆ ಪರಿಸರದ ಸುಮಾರು 120 ಕುಟುಂಬಗಳಿಗೆ ಉಚಿತ ಶೌಚಾಲಯವನ್ನು ಲಯನ್ಸ್ ಕ್ಲಬ್ ಮೂಡುಬೆಳ್ಳೆ ಮೂಲಕ ನಿರ್ಮಿಸಿದೆ. ಮನೆ ಇಲ್ಲದವರಿಗೆ ಮನೆ ಕಾರ್ಯಕ್ರಮ ಮೂಲಕ ಬೆಳ್ಳೆ ಸುತ್ತಮುತ್ತ ಸುಮಾರು 14 ಮನೆ ನಿರ್ಮಾಣ ಮತ್ತು ದುರಸ್ತಿ ಮಾಡಿ ಜನರಿಗೆ ನೀಡಿದೆ. 10 ಬಸ್ಸು ತಂಗುದಾಣ, ಟ್ರಾಫಿಕ್ ಕನ್ನಡಿಗಳು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಿರಂತರ ಸಹಾಯಧನ, ಶಾಲಾ ಬಿಸಿಯೂಟದ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ ಮಳೆನೀರು ಕೊಯ್ದು ಮುಂತಾದ ಜನಪರ ಕಾಠ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸ್ಥಳೀಯ ಶಿಕ್ಷಣ ಸಂಸ್ಥೆಗೆ 25 ಸೀಟುಗಳ ಶಾಲಾ ವಾಹನ ಮತ್ತು ಮಾರುತಿ ವ್ಯಾನ್‌ನ್ನು 2010ರಲ್ಲಿ ಸುಮಾರು 12 ಲಕ್ಷ ರೂಪಾಯಿ ವೆಚ್ಚದಲ್ಲಿ ನೀಡಲಾಗಿತ್ತು. ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ 40 ಸೀಟುಗಳ ಶಾಲಾವಾಹನವನ್ನು ಸಂತ ಲಾರೆನ್ಸ್ ಶಿಕ್ಷಣ ಸಂಸ್ಥೆಗೆ ನೀಡುತ್ತಿದ್ದೇವೆ ಎಂದು ಕಾರ್ಯದರ್ಶಿ ದೇವದಾಸ್ ಹೆಬ್ಬಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬೆಳ್ಳಿ ಹಬ್ಬದ ಸಂಭ್ರಮದ ಕಾರ್ಯಕ್ರಮ ಡಿಸೆಂಬರ್ 15 ರಂದು ಗುರುವಾರ ಸಂಜೆ ಆರು ಗಂಟೆಗೆ ಮೂಡಬೆಳ್ಳೆಯ ಲಯನ್ಸ್ ಸೇವಾಭವನದಲ್ಲಿ ಜರಗಲಿದೆ ಎಂದರು. ಕಾರ್ಯಕ್ರಮದಲ್ಲಿ ಲಯನ್ಸ್ವಜಿಲ್ಲೆ 1317c ಗವರ್ನರ್ ಆದ ಲಯನ್ ಡಾ| ಎಂ ಕೆ ಭಟ್,ಉಡುಪಿ ಧರ್ಮಪ್ರಾಂತ್ಯದ ಬಿಷಪ್‌ರಾದ ಆತಿ ವಂದನೀಯ ಜೆರಾಲ್ಡ್ ಐಸಾಕ್ ಲೋಬೋ, ಚಿಕಾಗೊ, ಯು.ಎಸ್, ಎ. ಇದರ ಲಯನ್ಸ್ ಜಿಲ್ಲೆ 1A. ಇದರ ಶ್ರೀ ಆಸ್ಟಿನ್ ಪ್ರಭುವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಉಪಜಿಲ್ಲಾ ಗವರ್ನರುಗಳಾದ ನೇರಿ ಕರ್ನೇಲಿಯೋ, ಲ ಮಹಮ್ಮದ್ ಹನೀಫ್ ಉಪಸ್ಥಿತರಿರುವರು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಸಂಧರ್ಭದಲ್ಲಿ ಅಧ್ಯಕ್ಷರಾದ ಕಮಾಂಡರ್ ಕೆಸ್ಟಿಲಿನೋ,ಡಾ ಎವಜಿನ್ ಡಿಸೋಜ, ಡಾ ಎಲಿಯಟ್ ಡಿಸೋಜ ಉಪಸ್ಥಿತರಿದ್ದರು.
ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ ನಟ ದರ್ಶನ್ ರೇಣುಕಾ…
ಗೃಹ ಜ್ಯೋತಿ ಪರಿಶೀಲನೆ: ಪ್ರವರ್ಗ ಮಾಹಿತಿ (ಜಾತಿ ಪ್ರಮಾಣಪತ್ರ) ಕಡ್ಡಾಯವಲ್ಲ ಬೆಂಗಳೂರು: ರಾಜ್ಯಾದ್ಯಂತ ಜುಲೈ 1 ರಿಂದ ಆರಂಭಗೊಂಡಿರುವ ಗೃಹ ಜ್ಯೋತಿ…
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ : ಸಮಗ್ರ ತನಿಖೆಗೆ ಪ್ರಲ್ಹಾದ ಜೋಶಿ ಆಗ್ರಹ ನವದೆಹಲಿ: ರಾಮನಗರ ಜಿಲ್ಲೆಯಲ್ಲಿ ನಡೆದ ಮತದಾರರ…
ಅಕ್ರಮ ಎಸ್‌ಐಆರ್ ಪ್ರಕ್ರಿಯೆ : 2028ರ ಚುನಾವಣೆ ಗೆಲ್ಲಲು ಬಾಂಗ್ಲಾದೇಶಿಯರ ಸಕ್ರಮಕ್ಕೆ ಕಾಂಗ್ರೆಸ್ ಸಂಚು : ಶೋಭಾ ಕರಂದ್ಲಾಜೆ ಗಂಭೀರ…
ಮೂಲ ನೆಲದಿಂದ ಬೇರ್ಪಡಿಸಿ ಕರಾವಳಿಯ ಮಣ್ಣಿನ ಸಂಸ್ಕೃತಿಯ ಪಾವಿತ್ರ್ಯಕ್ಕೆ ಧಕ್ಕೆ ತರಬೇಡಿ .. ಕರಾವಳಿ ಕಂಬಳವು ತನ್ನದೇ ಆದ ಆಳವಾದ ಸಾಂಪ್ರದಾಯಿಕ…
ಮಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ಸೆಲಿನಾ ಟ್ರಾವೆಲ್ಸ್ ವಿರುದ್ಧ ಹರಿದಾಡಿದ ಕರಪತ್ರ : ಪೊಲೀಸ್ ಇಲಾಖೆ ಸ್ಪಷ್ಟನೆ ಮಂಗಳೂರು: ಖಾಸಗಿ ಸಾರಿಗೆ ಸಂಸ್ಥೆಯಾದ…