Featured

ಉಡುಪಿ :ಲವ್‌ ಜಿಹಾದ್‌‌‌‌ ಪ್ರಕರಣದಲ್ಲಿ ಹೆಚ್ಚು ಬ್ರಾಹ್ಮಣ ಹೆಣ್ಣು ಮಕ್ಕಳೇ ಒಳಗಾಗಿದ್ದಾರೆ ; ಹಿಂದುತ್ವ ಉಳಿಯಬೇಕಾದರೆ ಸಮಸ್ತ ಬ್ರಾಹ್ಮಣರು ಒಗ್ಗಟ್ಟಾಗಬೇಕು : ಸಚ್ಚಿದಾನಂದ ಮೂರ್ತಿ -Vishwanews24

ಉಡುಪಿ :ಲವ್‌ ಜಿಹಾದ್‌‌‌‌ ಪ್ರಕರಣದಲ್ಲಿ ಹೆಚ್ಚು ಬ್ರಾಹ್ಮಣ ಹೆಣ್ಣು ಮಕ್ಕಳೇ ಒಳಗಾಗಿದ್ದಾರೆ ; ಹಿಂದುತ್ವ ಉಳಿಯಬೇಕಾದರೆ ಸಮಸ್ತ ಬ್ರಾಹ್ಮಣರು ಒಗ್ಗಟ್ಟಾಗಬೇಕು : ಸಚ್ಚಿದಾನಂದ ಮೂರ್ತಿ -Vishwanews24

ಉಡುಪಿ : “ಹಿಂದುತ್ವ ಉಳಿಯಬೇಕಾದರೆ ಸಮಸ್ತ ಬ್ರಾಹ್ಮಣರು ಒಗ್ಗಟ್ಟಾಗಬೇಕು. ಲವ್‌ ಜಿಹಾದ್‌‌‌‌ ಪ್ರಕರಣದಲ್ಲಿ ಹೆಚ್ಚು ಬ್ರಾಹ್ಮಣ ಹೆಣ್ಣು ಮಕ್ಕಳೇ ಒಳಗಾಗಿದ್ದಾರೆ” ಎಂದು ರಾಜ್ಯ ಬ್ರಾಹ್ಮಣ ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಹೇಳಿದ್ದಾರೆ.

ಫೆ.28ರ ರವಿವಾರ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್‌‌ ವತಿಯಿಂದ ಗುಂಡಿಬೈಲು ಹೊಸಬಾಕ್ಯಾರ್‌‌‌ ನಾಗಬನದ ಬಳಿ ನಡೆದ ಬ್ರಾಹ್ಮೀ ಸಭಾಭವನದ ಸಮರ್ಪಣೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಮಂಗಳೂರು: “ಮೊಗವೀರ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರ್ಪಡೆಗೊಳಿಸಿ” :ನಳಿನ್ ಕುಮಾರ್ ಗೆ ಮನವಿ -Vishwanews24

“ಸುಮಾರು 10,800 ಲವ್‌ ಜಿಹಾದ್‌ ಪ್ರಕರಣಗಳ ಪೈಕಿ 3,000ಕ್ಕೂ ಅಧಿಕ ಪ್ರಕರಣಗಳಲ್ಲಿ ಬ್ರಾಹ್ಮಣ ಹೆಣ್ಣುಮಕ್ಕಳೇ ಒಳಗಾಗಿದ್ದಾರೆ. ಈ ಪೈಕಿ ಹೆಚ್ಚಿನವು ಶಿರಸಿ ಹಾಘೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ನಡೆದಿವೆ. ಬ್ರಾಹ್ಮಣರಲ್ಲಿ 44 ಉಪಜಾತಿಗಳಿವೆ. ಇವರೆಲ್ಲರೂ ಒಗ್ಗೂಡಬೇಕಾಗಿದೆ. ಸಮಾಜದಲ್ಲಿ ಬ್ರಾಹ್ಮಣರ ಅವಹೇಳನ ಆಗಾಗ ನಡೆಯುತ್ತಿದ್ದು, ನಾವು ಇದರ ವಿರುದ್ದ ಸಂಘಟಿತರಾಗಬೇಕು. ನಮ್ಮ ಸಮುದಾಯವು, ಸಾಹಿತ್ಯ, ಸಿನೆಮಾ, ಸಾಮಾಜಿಕ ಮಾಧ್ಯಮಗಳ ಮೂಲಕ ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದರೆ ನಾವು ಸಹಿಸುವುದಿಲ್ಲ. ಈ ರೀತಿಯಾಗುತ್ತಿರುವ ಸಂದರ್ಭ ನಾವು ಸುಮ್ಮನೆ ಕೂರುವುದಿಲ್ಲ” ಎಂದಿದ್ದಾರೆ.

“ಬ್ರಾಹ್ಮಣ ಅಭಿವೃದ್ದಿ ಮಂಡಳಿಗೆ 347 ಕೋಟಿ ರೂ.ಗಳ ಅನುದಾನವನ್ನು ಹಂಚಿಕೆ ಮಾಡುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದೆ” ಎಂದು ಹೇಳಿದ್ದಾರೆ.

ಮಂಗಳೂರು : ಅಪ್ಪನ ಸಾವಿನಲ್ಲೂ ಎರಡು ಜೀವ ಉಳಿಸಿ ಅಪರೂಪದ ಕರ್ತವ್ಯನಿಷ್ಠೆ ಮೆರೆದ KMC ಯ ಡಾ.ಪದ್ಮನಾಭ ಕಾಮತ್‌ -Vishwanews24

ಕೃಷ್ಣಪುರ ಮಠದ ಶ್ರೀವಿದ್ಯಾಸಾಗರ ತೀರ್ಥರು ಆಶೀರ್ವಚನ ನೀಡಿ, “ಬ್ರಾಹ್ಮಣತ್ವ ಉಳಿಯಲು ಅನುಷ್ಠಾನಗಳು ಮುಖ್ಯ. ನಿಸ್ವಾರ್ಥದಿಂದ ಕೆಲಸ ಮಾಡಿದರೆ ಆತ್ಮಬಲ ವೃದ್ದಿಯಾಗುತ್ತದೆ. ಇದರೊಂದಿಗೆ ಸ್ವಾಭಾವಿಕ ಬಲವೂ ಕೂಡಾ ಗಟ್ಟಿಯಾಗಲಿದೆ” ಎಂದಿದ್ದಾರೆ.

ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥರು ಹಾಗೂ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥರು ಮಾತನಾಡಿದರು. ಶಾಸಕ ಕೆ ರಘುಪತಿ ಭಟ್‌ ಅವರು ಅಧ್ಯಕ್ಷತೆ ವಹಿಸಿದ್ದರು.

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಮಿಳು ಸಂಸ್ಕೃತಿಯನ್ನು ಗೌರವಿಸುವುದಿಲ್ಲ : ರಾಹುಲ್ ಗಾಂಧಿ -Vishwanews24

ಕರ್ನಾಟಕ ಬ್ಯಾಂಕ್‌ ಸಿಇಒ ಹಾಗೂ ಎಂಡಿ ಎಂ.ಎಸ್‌‌ ಮಹಾಬಲೇಶ್ವರ, ಉದ್ಯಮಿ ವಿದ್ಯಾಪ್ರಸಾದ್‌, ಕೆ.ಆರ್‌. ದಿನೇಶ್‌‌, ಬೆಂಗಳೂರಿನ ಹರಿಕೃಷ್ಣ, ಉದ್ಯಮಿ ಶ್ರೀಕಾಂತ ಭಟ್‌ ಕೆಮ್ತೂರು, ಮೂಡುಬಿದಿರೆ ಶ್ರೀಪತಿ ಭಟ್‌, ಡಾ.ವಿ. ಅಶೋಕ್‌ ಕುಮಾರ್‌, ಪ್ರಸನ್ನ ಕುಮಾರ್‌ ರಾವ್‌ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

2 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

2 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

2 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

2 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

2 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

2 days ago