Featured

ಉಡುಪಿ : ವಿಕ್ರಂ ಗೌಡನಿಗೂ ಇದೆ ರೀತಿ ಶರಣಾಗಲು ಅವಕಾಶ ನೀಡಬೇಕಿತ್ತು : ಸಹೋದರ ಸುರೇಶ್ ಗೌಡ – vishwanews24

ನಕ್ಸಲ್ ಶರಣಾಗತಿ : ವಿಕ್ರಂ ಗೌಡನಿಗೂ ಇದೆ ರೀತಿ ಶರಣಾಗಲು ಅವಕಾಶ ನೀಡಬೇಕಿತ್ತು : ಸಹೋದರ ಸುರೇಶ್ ಗೌಡ ಬೇಸರ

ಉಡುಪಿ: 6 ನಕ್ಸಲರ ಶರಣಾಗತಿ ವಿಚಾರ ವಾಗಿ ಮಾತನಾಡಿ, ನನ್ನ ಸಹೋದರ ವಿಕ್ರಂ ಗೌಡನಿಗೂ ಇದೆ ರೀತಿ ಶರಣಾಗಲು ಅವಕಾಶ ನೀಡಬೇಕಿತ್ತು ಎಂದು ಸಹೋದರ ಸುರೇಶ್ ಗೌಡ ಹೇಳಿಕೆ ನೀಡಿದರು.

ಹೆಬ್ರಿಯಲ್ಲಿ ಎನ್ಕೌಂಟರ್ ಗೆ ಬಲಿಯಾದ ವಿಕ್ರಂ ಗೌಡ ಸಹೋದರ ಸುರೇಶ್ ಗೌಡ ಬೇಸರ ವ್ಯಕ್ತಪಡಿಸಿದರು. ಶರಣಾಗುವ ನಕ್ಸಲರಿಗೆ ನೀಡುವ ಪರಿಹಾರ ನೀಡಿ ಎಂದು ಮನವಿ ಮಾಡಿದರು. ನವೆಂಬರ್ 18 ರಂದು ANF ಗುಂಡೇಟಿಗೆ ವಿಕ್ರಂ ಗೌಡ ಬಲಿಯಾಗಿದ್ದು, ಇದೀಗ ವಿಕ್ರಂ ಗೌಡ ತಂಡಲ್ಲಿದ್ದ ನಕ್ಸಲರು ಶರಣಾಗತಿಯಾಗಿದ್ದಾರೆ.

ಶರಣಾಗತಿ ಬಗ್ಗೆ ಎನ್ಕೌಂಟರ್ ಗೆ ಬಲಿಯಾದ ನಕ್ಸಲ್ ವಿಕ್ರಂ ಗೌಡ ಸಹೋದರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ನಕ್ಸಲ್ ಶರಣಾಗತಿ ಒಳ್ಳೆ ವಿಚಾರ ಮುಂದೆ ಉತ್ತಮ ಜೀವನ ನಡೆಸಲಿ. ನನ್ನ ಅಣ್ಣನಿಗೆಯಾದ ಪರಿಸ್ಥಿತಿ ಮುಂದೆ ಯಾರಿಗೂ ಆಗಬಾರದು. ಅವರ ಕುಟುಂಬಸ್ಥರು ನೋವು ಅನುಭವಿಸಬಾರದು. ಈ ಯೋಜನೆ ಮೊದಲೇ ಘೋಷಣೆ ಮಾಡಿದ್ರೆ ನನ್ನ ಅಣ್ಣನೂ ಶರಣಾಗುತ್ತಿದ್ದ. ಒಳ್ಳೆಯ ಜೀವನ ನಮ್ಮೊಂದಿಗೆ ನಡೆಸುತ್ತಿದ್ದ. ಸ್ವಲ್ಪ ದಿನ ಜೈಲು ವಾಸ ಅನುಭವಿಸಿ ಮುಂದೆಯಾದರೂ ಒಳ್ಳೆಯ ಜೀವನ ನಡೆಸೋ ಅವಕಾಶ ಇತ್ತು ಎಂದರು.

ಶರಣಾಗುವ ನಕ್ಸಲರಿಗೆ ನೀಡುವ ಪರಿಹಾರ ವಸತಿ ನಮಗೂ ನೀಡಿ. ನಾವು ಬಹಳ ಕಷ್ಟದಲ್ಲಿದ್ದೇವೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇವೆ. ನಮ್ಮನ್ನು ಇಲ್ಲಿಯವರೆಗೆ ಯಾವುದೇ ಸಮಿತಿ ಭೇಟಿ ಮಾಡಿಲ್ಲ. ಅಧಿಕಾರಿಗಳ ಕಿರಯಕುಳದಿಂದ ಅಣ್ಣ ನಕ್ಸಲ್ ಹೋರಾಟಕ್ಕೆ ಇಳಿದಿದ್ದ. ಅಣ್ಣನಿಗೆ ಮಾನಸಿಕ ಕಿರುಕುಳ ಅಧಿಕಾರಿಗಳು ನೀಡಿದ್ದರು. ಎನ್ಕೌಂಟರ್ ಬಗ್ಗೆಯೂ ತನಿಖೆಯಾಗಲಿ, ನಮಗೂ‌ ಪರಿಹಾರ ನೀಡಲಿ ಎಂದು ಸರ್ಕಾರಕ್ಕೆ ವಿಕ್ರಂ ಗೌಡ ಸಹೋದರ ಮನವಿ ಮಾಡಿಕೊಂಡರು.

Vishwa News 24

Recent Posts

ಉಡುಪಿ : ಬಾಲಕಿ ನಾಪತ್ತೆ -vishwanews24

ಉಡುಪಿ : ಬಾಲಕಿ ನಾಪತ್ತೆ ಉಡುಪಿ : ಉಡುಪಿ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಪ್ರೀತಿ (16) ಎಂಬ…

8 hours ago

ಮಂಗಳೂರು ವಿಮಾನ ನಿಲ್ದಾಣದಲ್ಲಿ ‘ಉಬರ್’ ಸೇವೆ ಆರಂಭ -vishwanews24

ಮಂಗಳೂರು ವಿಮಾನ ನಿಲ್ದಾಣದಲ್ಲಿ 'ಉಬರ್' ಸೇವೆ ಆರಂಭ ಪ್ರಯಾಣಿಕರಿಗೆ ವೇಗವಾದ ಮತ್ತು ಸುಲಭ ಸಾರಿಗೆ ಸೌಲಭ್ಯ ಮಂಗಳೂರು: ಮಂಗಳೂರು ಅಂತರರಾಷ್ಟ್ರೀಯ…

11 hours ago

ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಅತ್ಯಂತ ಖಂಡನೀಯ ಕೃತ್ಯ : ರೆನೋಲ್ಡ್ ಪ್ರವೀಣ್ ಕುಮಾರ್ -vishwanews24

ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಅತ್ಯಂತ ಖಂಡನೀಯ ಕೃತ್ಯ : ರೆನೋಲ್ಡ್ ಪ್ರವೀಣ್ ಕುಮಾರ್ ಉಡುಪಿ: ಜಿಲ್ಲಾ ನ್ಯಾಯಾಲಯಕ್ಕೆ…

14 hours ago

ಉಡುಪಿ : ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಸಂದೇಶ ;   ಪೊಲೀಸರು, ಶ್ವಾನ ದಳದಿಂದ ಶೋಧ ಕಾರ್ಯಾಚರಣೆ -vishwanews24

ಉಡುಪಿ : ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಸಂದೇಶ ;   ಪೊಲೀಸರು, ಶ್ವಾನ ದಳದಿಂದ ಶೋಧ ಕಾರ್ಯಾಚರಣೆ ಉಡುಪಿ: ಉಡುಪಿ…

15 hours ago

ಇಂದಿನಿಂದ ಟೆಲಿಗ್ರಾಮ್ ಮೇಲಿನ ನಿಷೇಧ ತೆರವು: ಮೆಸೇಜ್ ಎಡಿಟಿಂಗ್ ನಿರ್ಬಂಧ ಜೂ. 30ರವರೆಗೆ ಮುಂದುವರಿಕೆ -vishwanews24

ಇಂದಿನಿಂದ ಟೆಲಿಗ್ರಾಮ್ ಮೇಲಿನ ನಿಷೇಧ ತೆರವು: ಮೆಸೇಜ್ ಎಡಿಟಿಂಗ್ ನಿರ್ಬಂಧ ಜೂ. 30ರವರೆಗೆ ಮುಂದುವರಿಕೆ ನವದೆಹಲಿ : ನೀಟ್ -ಯುಜಿ…

15 hours ago

246 ಕೋಟಿ ರೂ.ಗಳ 46 ಯೋಜನೆಗಳು ರದ್ದು; ದೇವಸ್ಥಾನಗಳ ಹಣ ಬೇರೆ ಕೆಲಸಕ್ಕೆ ಬಳಸುವಂತಿಲ್ಲ: ಸಿಎಂ ವಿಜಯ್ -vishwanews24

246 ಕೋಟಿ ರೂ.ಗಳ 46 ಯೋಜನೆಗಳು ರದ್ದು; ದೇವಸ್ಥಾನಗಳ ಹಣ ಬೇರೆ ಕೆಲಸಕ್ಕೆ ಬಳಸುವಂತಿಲ್ಲ: ಸಿಎಂ ವಿಜಯ್ ಚೆನ್ನೈ: ತಮಿಳುನಾಡಿನಾದ್ಯಂತ…

15 hours ago