Featured

ಉಡುಪಿ :ವಿದ್ಯಾರ್ಥಿಗಳ ಹಿಜಾಬ್ ಧಾರಣೆ ಅಶಿಸ್ತು ಎಂಬ ಶಿಕ್ಷಣ ಸಚಿವರ ಹೇಳಿಕೆ ಖಂಡನಾರ್ಹ :  ಜಿಲ್ಲಾ ಮುಸ್ಲಿಮ್ ಒಕ್ಕೂಟ – Vishwanews24

ಉಡುಪಿ :ವಿದ್ಯಾರ್ಥಿಗಳ ಹಿಜಾಬ್ ಧಾರಣೆ ಅಶಿಸ್ತು ಎಂಬ ಶಿಕ್ಷಣ ಸಚಿವರ ಹೇಳಿಕೆ ಖಂಡನಾರ್ಹ :  ಜಿಲ್ಲಾ ಮುಸ್ಲಿಮ್ ಒಕ್ಕೂಟ – Vishwanews24

ಉಡುಪಿ: ‌ಹಿಜಾಬ್ ಧರಿಸುವುದು ಅಶಿಸ್ತು, ಶಾಲೆ ಧರ್ಮವನ್ನು ಆಚರಿಸುವ ಸ್ಥಳವಲ್ಲ ಎಂಬ ಶಿಕ್ಷಣ ಸಚಿವ ನಾಗೇಶ್’ರವರ ಹೇಳಿಕೆ ಖಂಡನಾರ್ಹ ಎಂದು ಮುಸ್ಲಿಮ್ ಒಕ್ಕೂಟ ಹೇಳಿದೆ.

ಸಚಿವರ ಈ ಹೇಳಿಕೆ ಅಲ್ಪಸಂಖ್ಯಾತರ ಹಕ್ಕುಗಳನ್ನು ನಿರಾಕರಿಸುತದೆ. ಭಾರತ ವಿವಿಧ ಧರ್ಮ, ಭಾಷೆ, ಸಂಸೃತಿ, ಆಚರಣೆಗಳ ವೈವಿಧ್ಯಮಯ ದೇಶ. ಈ ವೈವಿಧ್ಯತೆಗಳ ಸಹಕರಣ ಮತ್ತು ದೇಶದ ಪ್ರಜೆಗಳಾದ ಸಹಜೀವಿಗಳ ಪರಸ್ಪರ ಧರ್ಮ, ಆಚರಣೆ, ನಂಬಿಕೆ, ಸಂಸೃತಿ, ಭಾಷೆಗಳೊಂದಿಗೆ ಸಹಿಷ್ಣುತೆಯಿಂದ ಮುನ್ನಡೆಯುವಿಕೆ ಈ ದೇಶದ ಶಕ್ತಿ. ಇಲ್ಲದಿದ್ದಲ್ಲಿ ಸಚಿವರು ಯಾವ ವಿಧ್ಯಾರ್ಥಿಗಳ ಹಿಜಾಬ್ ಧರಿಸುವಿಕೆ ಅಶಿಸ್ತು ಎನ್ನುತ್ತಿದ್ದಾರೊ ಅದೇ ವಿಧ್ಯಾರ್ಥಿಗಳಿಗೆ ಅವರದೇ ಪಠ್ಯಗಳಲ್ಲಿ “ಭಾರತ ವಿವಿಧತೆಯಲ್ಲಿ ಏಕತೆಯ ದೇಶ” ಕಲಿಸುತ್ತಿರುವುದರ ಅರ್ಥವೇನು ? ದೇಶದ ಪ್ರತಿಯೊಂದು ಹಳ್ಳಿ ಪಟ್ಟಣಗಳಲ್ಲಿ ದೇಶದ ಪ್ರಜೆಗಳು ಧರ್ಮ, ನಂಬಿಕೆ,ಸಂಸ್ಕೃತಿ, ಭಾಷೆ, ಆಚರಣೆ ಇತ್ಯಾದಿಗಳನ್ನು ವೈವಿಧ್ಯಮಯವಾಗಿ ರೂಢಿಸಿಕೊಂಡು ಬರುತ್ತಿರುವಾಗ ಶಾಲೆಗಳಲ್ಲಿ ವಿಧ್ಯಾರ್ಥಿಗಳು “ಸಮವಸ್ತ್ರದ ಪಾಲನೆಯೊಂದಿಗೆ” ತಮ್ಮ ಧಾರ್ಮಿಕ ಬೇಡಿಕೆಯನ್ನು ಪೂರೈಸಿದರೆ ಸಮಸ್ಯೆಯಾಗುವುದು ಹೇಗೆ ? ಎಂದು ಮುಸ್ಲಿಮ್ ಒಕ್ಕೂಟ ಪ್ರಶ್ನಿಸಿದೆ.

ಹಿಜಾಬ್ ರಾಜಕೀಯಗೊಳಿಸಲಾಗುತ್ತಿದೆ, ವಿಧ್ಯಾರ್ಥಿಗಳು ಈಗ ಏಕೆ ಸಾಂವಿಧಾನಿಕ ಹಕ್ಕುಗಳ ಬಗ್ಗೆ ಹೇಳುತ್ತಿದ್ದಾರೆ ಎಂದು ಕೂಡಾ ಸಚಿವರು ಪ್ರಶ್ನಿಸಿದ್ದಾರೆ. ವಾಸ್ತವದಲ್ಲಿ ಸಚಿವರು ತಾವು ಪ್ರತಿನಿಧಿಸುತ್ತಿರುವ ರಾಜಕೀಯ ಕನ್ನಡಿಯಿಂದ ಸಮಸ್ಯೆಯನ್ನು ನೋಡುತ್ತಿದ್ದಾರೆ. ವಿಧ್ಯಾರ್ಥಿಗಳು ಸ್ಕಾರ್ಫ್ ಹಾಕುದನ್ನು ತಡೆಯುದರಿಂದ ಸಿಗುವ ರಾಜಕೀಯ ಲಾಭನಷ್ಟಗಳ ಲೆಕ್ಕಾಚಾರದಿಂದ ಈಚೆಗೆ ಬಂದು ಒರ್ವ ಸರಕಾರದ ಪ್ರತಿನಿಧಿಯಾಗಿ ನಿರ್ಣಾಯ ಕೈಗೊಳ್ಳಬೇಕಾಗಿದೆ.

ಸರಕಾರ ಎಂಬುದು ಎಲ್ಲರ ಸರಕಾರ ಆ ಎಲ್ಲರಲ್ಲಿ ಸ್ಕಾರ್ಫ್ ಧರಿಸುವ ತಮ್ಮ ಹಕ್ಕಿನ ಬೇಡಿಕೆ ಇಡುತ್ತಿರುವ ವಿಧ್ಯಾರ್ಥಿಗಳು ಸೇರಿದ್ದಾರೆ. ಅವರ ಹಕ್ಕಿನ ರಕ್ಷಣೆಯೂ ಸರಕಾರದ ಹೊಣೆಗಾರಿಕೆ. ಯಾರೋ ರಾಜಕೀಯ ಮಾಡುತ್ತಿದ್ದಾರೆ ಎಂಬ ಗುಮಾನಿಯನ್ನು ಇಟ್ಟುಕೊಂಡು ಜನರ ಹಕ್ಕುಗಳನ್ನು ಕಸಿಯುವುದು ಸರಿಯೇ ? ಸಂವಿಧಾನ ನೀಡಿದ ಹಕ್ಕುಗಳನ್ನು ರಕ್ಷಿಸುವುದು ಸರಕಾರದ ಜವಾಬ್ದಾರಿಯೇ ಹೊರತು ಸಂವಿಧಾನಾತ್ಮಕವಾಗಿ ದೊರೆತ ಸ್ಥಾನದಲ್ಲಿ ಇದ್ದುಕೊಂಡು ಸಾಂವಿಧಾನಿಕ ಹಕ್ಕುಗಳ ಬಗ್ಗೆ ಈಗೇಕೆ ಕೇಳುತ್ತೀರಿ ಎಂದು ಪ್ರಶ್ನಿಸುದಲ್ಲ. ಯಾರೇ ತಮ್ಮ ಹಕ್ಕುಗಳಿಗೆ ಚ್ಯುತಿ ಬಂದಾಗಲೇ ತಮ್ಮ ಸಾಂವಿಧಾನಿಕ ಹಕ್ಕುಗಳ ಬಗ್ಗೆ ಪ್ರಶ್ನಿಸುವುದು ಎಂದು ಒಕ್ಕೂಟವು ಹೇಳಿದೆ.

ಶಾಲೆಗಳು ಧರ್ಮ ಅಚರಣೆ ಸ್ಥಳವಲ್ಲ ಎಂದು ಅವರು ಹೇಳುದಾದರೆ ಅವರ ದೃಷ್ಟಿಯಲ್ಲಿ ಶಾಲೆಗಳು ಧರ್ಮ ನಿರಾಕರಣೆಯ ಸ್ಥಳಗಳೇ ಅದನ್ನು ಅವರು ಸ್ಪಷ್ಟಪಡಿಸಲಿ. ಧರ್ಮವನ್ನು ಅಥವಾ ಯಾವುದೇ ಭಿನ್ನ ವೈಚಾರಿಕತೆಯನ್ನು ಅವರಿಗೆ ಒಪ್ಪಿಗೆ ಆದಾಗ ಪಾಲಿಸುಲು ಆರಂಭಿಸುವುದು ಯಾ ಬಿಡುವುದು ಅವರವರ ಆಯ್ಕೆ. ಆಗೇಕೆ ಮಾಡಿಲ್ಲ ಈಗೇಕೆ ಮಾಡುತ್ತೀರಿ ಎಂದು ಯಾರದೇ ವೈಯಕ್ತಿಕ ಜೀವನವನ್ನು ಪ್ರಶ್ನಿಸುವ ಹಕ್ಕು ಯಾರಿಗೂ ನಮ್ಮ ಸಂವಿಧಾನ ನೀಡಿಲ್ಲ. ಸಾರ್ವಭೌಮ ಭಾರತ ದೇಶ ಎಂದರೆ ಈ ದೇಶದ ಸಾರ್ವಭೌಮ ಪ್ರಜೆಗಳು ಎಂದು ಘೋಷಿಸಿ ಕೊಂಡ ದೇಶವಿದು ಎಂದು ಒಕ್ಕೂಟ ನೆನಪಿಸಿದೆ.

Vishwa News 24

Recent Posts

ದೋಣಿ ಮುಗುಚಿ ಇಬ್ಬರು ಯುವಕರು ನೀರುಪಾಲು : ಓರ್ವನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಶೋಧ – vishwanews24

ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು  ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…

13 hours ago

ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು : ಸಿದ್ದರಾಮಯ್ಯ – vishwanews24

 ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…

13 hours ago

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ – vishwanews24

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…

13 hours ago

ರೈಲು ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಬುಕ್ಕಿಂಗ್ ಮತ್ತು ರದ್ದತಿ  ನಿಯಮದಲ್ಲಿ ಭಾರಿ ಬದಲಾವಣೆ ; ಇಲ್ಲಿದೆ ಪೂರ್ಣ ಮಾಹಿತಿ – vishwanews24

ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…

16 hours ago

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ – vishwanews24

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…

16 hours ago

ಉಡುಪಿ ಜಿಲ್ಲೆಯ ಐದು ಗ್ರಾಮ ಪಂಚಾಯತ್‌ಗಳು ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ – vishwanews24

ಉಡುಪಿ ಜಿಲ್ಲೆಯ ಐದು ಗ್ರಾಮ ಪಂಚಾಯತ್‌ಗಳು ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಉಡುಪಿ: ಕೇಂದ್ರ ಸರ್ಕಾರದ ವಿವಿಧ ವಿಭಾಗಗಳ ಅಡಿಯಲ್ಲಿ ನೀಡಲಾಗುವ…

17 hours ago