ಉಡುಪಿ: ಹಿಜಾಬ್ ಧರಿಸದೆ ಬರಲು ಸಿದ್ಧವಿಲ್ಲ ಎಂದಾದರೆ ಅಂತಹ ವಿದ್ಯಾರ್ಥಿನಿಯರು ನಾಳೆಯಿಂದ (ಫೆ.1) ಕಾಲೇಜ್ ಆವರಣಕ್ಕೆ ಬರಬೇಡಿ ಯಾರು ಶಿಸ್ತನ್ನು ಪಾಲಿಸುತ್ತಾರೆ ಅವರು ಮಾತ್ರ ಬರಬಹುದು ಎಂದು ಉಡುಪಿ ಶಾಸಕ ಹಾಗೂ ಸರಕಾರಿ ಬಾಲಕಿಯರ ಪಿಯು ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರಘುಪತಿ ಭಟ್ ತಿಳಿಸಿದ್ದಾರೆ.
ಅವರು ಸೋಮವಾರ ಸರಕಾರಿ ಬಾಲಕಿಯರ ಪಿಯು ಕಾಲೇಜಿನ ಹಿಜಾಬ್ ಕುರಿತು ನಡೆದ ಅಭಿವೃದ್ಧಿ ಸಮಿತಿ, ಪೋಷಕರು ಹಾಗೂ ವಿದ್ಯಾರ್ಥಿನಿಯರು, ಉಪನ್ಯಾಸಕರು ಹಾಗೂ ಮುಸ್ಲಿಂ ಮುಖಂಡರ ಸಭೆಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಈ ಹಂತದಲ್ಲಿ ನಮಗೆ ಯಾವುದೇ ನಿರ್ಧಾರ ಪ್ರಕಟಿಸಲು ಸಾಧ್ಯವಿಲ್ಲ ಸರ್ಕಾರದ ಸಮಿತಿ ಯಾವ ನಿರ್ಧಾರವನ್ನು ಕೈಗೊಳ್ಳುತ್ತೆ ಅದುವರೆಗೆ ಕಾಯಬೇಕು ಎಂದು ವಿದ್ಯಾರ್ಥಿನಿಯರಿಗೆ ಮತ್ತು ಅವರ ಪೋಷಕರಿಗೆ ತಿಳಿಸಲಾಗಿದೆ. ಅಷ್ಟರವರೆಗೆ ಹಿಂದೆ ಬರುತ್ತಿದ್ದ ರೀತಿಯಲ್ಲಿ ಕಂಪೌಂಡ್ ಒಳಗೆ ತನಕ ಹಿಜಾಬ್ ಹಾಕಿಕೊಂಡು ಬಂದು ತರಗತಿಯಲ್ಲಿ ಹಿಜಾಬ್ ಇಲ್ಲದೆ ಕುಳಿತು ಪಾಠ ಕೇಳಬೇಕು ಎಂದು ಸೂಚಿಸಲಾಗಿದೆ.
ಇದನ್ನೂ ಓದಿ :
ನಾಳೆಯಿಂದ ವಿದ್ಯಾರ್ಥಿನಿಯರು ಅವರ ನಿರ್ಧಾರ ಇದ್ದರೆ ಮಾತ್ರ ತರಗತಿಗೆ ಬರಬಹುದು ತರಗತಿಯಲ್ಲಿ ಹಿಜಾಬ್ ಧರಿಸದೆ ಬರುತ್ತೇವೆ ಎಂಬ ನಿರ್ಧಾರ ಮಾಡಿದ್ದರೆ ಮಾತ್ರ ಕಾಲೇಜಿಗೆ ಬನ್ನಿ ಇಲ್ಲವಾದರೆ ದಯವಿಟ್ಟು ಬರಬೇಡಿ ಇಲ್ಲಿ ಬಂದು ಕಾಲೇಜಿನ ಶೈಕ್ಷಣಿಕ ವಾತಾವರಣವನ್ನು ಹಾಳು ಮಾಡಬೇಡಿ ಎಂದರು.
ಪೊಲೀಸ್ ಇಲಾಖೆಗೆ ಕೂಡ ಈ ಬಗ್ಗೆ ಮಾಹಿತಿ ನೀಡಿದ್ದು ನಾಳೆಯಿಂದ ಕಾಲೇಜು ಆವರಣದಲ್ಲಿ ಹಿಜಾಬ್ ವಿಚಾರ ಎತ್ತಿಕೊಂಡು ಬೇರೆ ಬೇರೆ ಸಂಘಟನೆಗಳು, ಮಾಧ್ಯಮದವರಿಗೆ ಕಾಲೇಜಿಗೆ ಪ್ರವೇಶ ನೀಡಕೂಡದು ಎಂದು ಸೂಚಿಸಲಾಗಿದೆ. ಈ ಕುರಿತು ಕಾಲೇಜು ಅಭಿವೃದ್ಧಿ ಸಮಿತಿ ಸ್ಪಷ್ಟ ನಿರ್ಣಯ ಕೈಗೊಂಡಿದೆ. ಯಾರಿಗಾದರೂ ಏನೇ ಮನವಿ ಹಾಗೂ ಇನ್ನಿತರ ವಿಚಾರಗಳಿದ್ದರೆ ನೇರವಾಗಿ ಜಿಲ್ಲಾಧಿಕಾರಿಗಳಿಗೆ ನೀಡಲಿ ಬದಲು ಕಾಲೇಜು ಆವರಣಕ್ಕೆ ಈ ವಿಚಾರದಲ್ಲಿ ಪ್ರವೇಶ ಇಲ್ಲ. ನಾಳೆಯಿಂದ ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲ ಯಾರು ಶಿಸ್ತನ್ನು ಪಾಲಿಸುತ್ತಾರೆ ಅವರು ಬರಬಹುದು ಎಂದು ತಿಳಿಸಿದರು.
ಇದನ್ನೂ ಓದಿ :
ಕಡಬ: ಚಿನ್ನದ ತೂಕ ಹೆಚ್ಚಿಸಿ ಬ್ಯಾಂಕ್ ಗೆ ವಂಚನೆಗೆ ಯತ್ನ: ಇಬ್ಬರ ಬಂಧನ ಕಡಬ: ಚಿನ್ನಾಭರಣದ ತೂಕವನ್ನು ಕೃತಕವಾಗಿ ಹೆಚ್ಚಿಸಿ…
ಮಹಾರಾಷ್ಟ್ರ : ಮಳೆ ಅಬ್ಬರ - ಕುಸಿದು ಬಿದ್ದ ರತ್ನಗಿರಿ ರೈಲು ನಿಲ್ದಾಣದ ಛಾವಣಿ ; ತಪ್ಪಿದ ದೊಡ್ಡ ದುರಂತ…
ಶಿವಮೊಗ್ಗ: ಬಸ್ ನಿಲ್ದಾಣದಲ್ಲಿ ಚೀಲದೊಳಗೆ ನವಜಾತ ಹೆಣ್ಣು ಮಗು ಪತ್ತೆ ಶಿವಮೊಗ್ಗ: ನವಜಾತ ಹೆಣ್ಣು ಶಿಶುವೊಂದನ್ನು ಬಸ್ ನಿಲ್ದಾಣದಲ್ಲಿ ಅನಾಥವಾಗಿ…
ಪಡುಬಿದ್ರಿ : ನಡಿಪಟ್ಟಣದಲ್ಲಿ ಕಡಲು ಕೊರೆತಕ್ಕೆ ತಡೆಗೋಡೆ ನಿರ್ಮಾಣಕ್ಕೆ ಸಚಿವ ಖಾದರ್ ಗೆ ವಿಶ್ವಾಸ್ ಅಮೀನ್ ಮನವಿ ಪಡುಬಿದ್ರಿ: ಉಡುಪಿ…
ಬಂಟ್ವಾಳ : ಬಸ್ಸಿಗೆ ಕಾಯುತ್ತಿದ್ದ ವಿದ್ಯಾರ್ಥಿಗೆ ಚೂರಿ ಇರಿತ ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇರಾ…
ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ ನಟ ದರ್ಶನ್ ರೇಣುಕಾ…