ಉಡುಪಿ: ಈ ಹಿಂದಿನ ಆದೇಶದಂತೆ ಶುಕ್ರವಾರ ಇಳಿ ಸಂಜೆ ಏಳು ಗಂಟೆಯಿಂದ ಸೋಮವಾರ ಬೆಳಿಗ್ಗೆ ಐದು ಗಂಟೆ ತನಕ ವೀಕೆಂಡ್ ಕರ್ಪ್ಯೂ ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ ಅಗತ್ಯ ವಸ್ತುಗಳ ಖರೀದಿ ಮತ್ತು ಸೇವೆ ಹೊರತುಪಡಿಸಿ ಉಳಿದ ಎಲ್ಲ ಚಟುವಟಿಕೆ ಸ್ಥಗಿತಗೊಳ್ಳಲಿವೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಡಿ.ಸಿ., ನಾಳೆ ಬೆಳಿಗ್ಗೆ 6ರಿಂದ 2 ಗಂಟೆ ತನಕ ಅಗತ್ಯ ವಸ್ತು, ಹಾಲು ಮತ್ತಿತರ ಅಂಗಡಿಗಳು ತೆರೆಯಲಿವೆ. ಆಸ್ಪತ್ರೆ, ಮೆಡಿಕಲ್ ಎಂದಿನಂತೆ ಓಪನ್ ಇರಲಿವೆ. ಪೂರ್ವ ನಿಗದಿತ ಮದುವೆಗಳಿಗೆ 40 ಜನರಿಗೆ ಮಾತ್ರ ಅವಕಾಶವಿದೆ. ಅಂತ್ಯಸಂಸ್ಕಾರದಲ್ಲಿ ಐವರು ಭಾಗವಹಿಸಬಹುದು. ಉಳಿದಂತೆ ಹೋಟೆಲ್ ಗಳಲ್ಲಿ ಪಾರ್ಸೆಲ್ ಕೊಡಬಹುದು, ಹೋಮ್ ಡೆಲಿವರಿಗೂ ಅವಕಾಶವಿದೆ. ದೂರದೂರುಗಳಿಂದ ಟ್ರೈನ್, ಬಸ್ ಗಳಲ್ಲಿ ಬರುವವರಿಗೆ ಮನೆಗಳಿಗೆ ಹೋಗಲು ಅವಕಾಶವಿದೆ. ಆದರೆ, ಈ ಹಿಂದಿನ ಆದೇಶದಂತೆ ಫ್ಯಾಕ್ಟರಿ, ಕಾರ್ಖಾನೆಗಳು ಎರಡು ದಿನ ಮುಚ್ಚಲಿವೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು : ಮಟನ್ ಶಾಪ್‌ನಲ್ಲಿ ಎಂಡಿಎಂಎ ಮಾರಾಟ : ಇಬ್ಬರ ಬಂಧನ ಬೆಂಗಳೂರು: ಮಟನ್ ಶಾಪ್ ನಲ್ಲಿ ಎಂಡಿಎಂಎ ಮಾದಕ…
ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ ಕಾರ್ಕಳ : ಮನೆ ವಿಚಾರದಲ್ಲಿ ತಂದೆಯೊಬ್ಬ ತನ್ನ…
ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ ಮಂಗಳೂರು: ಮೈಸೂರು ದಸರಾ 2026ರ ಅಂಗವಾಗಿ ಮೊದಲ ಬಾರಿಗೆ ಅದ್ದೂರಿಯಾಗಿ ಆಯೋಜಿಸಲಾಗುತ್ತಿರುವ…
ಸೌಜನ್ಯಾ ಪ್ರಕರಣ: ಎಸ್‌ಐಟಿ ತಂಡದ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್ ಅಸಮಾಧಾನ ಬಂಟ್ವಾಳ: ಸೌಜನ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರುತನಿಖೆಗೆ…
ನವರಾತ್ರಿ ವೇಳೆಗೆ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ ಬೆಂಗಳೂರು: ನವರಾತ್ರಿ ಹಬ್ಬದ ಸಂದರ್ಭದಲ್ಲಿ ರಾಜ್ಯದ ‘ಗೃಹಲಕ್ಷ್ಮಿ’…
ಬಂಟ್ವಾಳ: ಬೆಂಗಳೂರು–ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಬಂಟ್ವಾಳ : ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು…