Featured

ಉಡುಪಿ: ‘ಶಿರೂರು ಶ್ರೀಗಳಿಗೆ ವಿಷಪ್ರಾಶನವಾಗಿಲ್ಲ’ ; ಶ್ರೀಗಳದ್ದು ಸಹಜ ಸಾವು ,ಅನುಮಾನಗಳಿಗೆ ತೆರೆ ಎಳೆದ ಎಫ್ಎಸ್ಎಲ್ ವರದಿ

ಉಡುಪಿ,: ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ನಿಗೂಢ ಸಾವಿನ ಕುರಿತ ಎಫ್ಎಸ್ಎಲ್ ವರದಿ ಹೊರಬಿದ್ದಿದೆ. ಶ್ರೀಗಳು ಅನಾರೋಗ್ಯದಿಂದ ಸಾವನ್ನಪ್ಪಿದ್ದು ಯಾವುದೇ ವಿಷ ಪ್ರಾಶನವಾಗಿಲ್ಲ ಎನ್ನುವ ಮಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯ ನೀಡಿದ ವರದಿ ಕೊನೆಗೂ ಪೊಲೀಸರ ಕೈ ಸೇರಿದೆ. ಶ್ರೀ ಲಕ್ಷ್ಮೀವರ ಸ್ಚ್ವಾಮೀಜಿ ಲಿವರ್ ನ(ಯಕೃತ್) ಸಿರೋಸಿಸ್ ಕಾಯಿಲೆ ಉಲ್ಬಣಿಸಿ ಸಾವನ್ನಪ್ಪಿದ್ದಾರೆ ಎನ್ನುವ ಸಾರಾಂಶ ಈ ವರದಿಯಲ್ಲಿದೆ. ಈ ವರದಿ ಸ್ವಾಮೀಜಿಯ ಸಾವಿನ ಬಳಿಕ ಎದ್ದಿರುವ ಅನೇಕ ಸಂಶಯಗಳಿಗೆ ತೆರೆ ಎಳೆಯುವ ಸಾಧ್ಯತೆ ಇದೆ.

ವಿಧಿ ವಿಜ್ಞಾನ ಪ್ರಯೋಗಾಲಯ ವರದಿಯನ್ನು, ಮರಣೋತ್ತರ ಪರೀಕ್ಷೆಯ ವರದಿಯೊಂದಿಗೆ ತಾಳೆ ಹಾಕಿ ಸ್ವಾಮೀಜಿ ಲಿವರ್ ಸಂಬಂಧಿತ ಸಿರೋಸಿಸ್ ಕಾಯಿಲೆಯಿಂದಲೇ, ಮೃತಪಟ್ಟಿದ್ದಾರೆ ಎಂದು ವೈದ್ಯರು ಧೃಡಪಡಿಸಿದ್ದಾರೆ. ಈ ವರದಿಯಲ್ಲಿ ಎಲ್ಲಿಯೂ ಕೂಡಾ ‘ವಿಷ ‘ದ ಕುರಿತು ಉಲ್ಲೇಖವಾಗಿಲ್ಲ. ಅಂತಿಮ ವರದಿ ಬಂದ ನಂತರವೂ ಪೊಲೀಸರು ಕೆಲವು ವಿಚಾರಗಳಲ್ಲಿ ಸ್ಪಷ್ಟತೆ ಬಯಸಿ ಕೆಎಂಸಿ ಆಸ್ಪತ್ರೆಗೆ ಪ್ರಶ್ನಾವಳಿಯೊಂದನ್ನು ತಯಾರಿಸಿ ಉತ್ತರಿಸುವಂತೆ ತಿಳಿಸಿದ್ದಾರೆ. ಜುಲೈ 19 ರಂದು ಸ್ವಾಮೀಜಿ ಮೃತಪಟ್ಟಿದ್ದ ಸಂದರ್ಭದಲ್ಲಿ ಸ್ವಾಮೀಜಿಗಳಿಗೆ ಚಿಕಿತ್ಸೆ ನೀಡಿದ್ದ ವೈದ್ಯರು ಮಾಧ್ಯಮಗಳೊಂದಿಗೆ ಮಾತನಾಡುತ್ತ, ಸ್ವಾಮೀಜಿ ದೇಹದಲ್ಲಿ ವಿಷ ಕಂಡುಬಂದಿದ್ದು, ವಿಷಪ್ರಾಶನದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತಪಡಿಸಿದ್ದರು. ನಂತರ ಮರಣೋತ್ತರ ಪರೀಕ್ಷೆಗೆ ಆದೇಶಿಸಲಾಗಿತ್ತು. ಈಗ ವರದಿಯಲ್ಲಿ ವಿಷದ ಅಂಶವಿಲ್ಲದಿರುವುದು ಸ್ಪಷ್ಟವಾದ ಹಿನ್ನೆಲೆಯಲ್ಲಿ ಪೊಲೀಸರು ಸ್ಪಷ್ಟತೆ ಬಯಸಿದ್ದಾರೆ. ಹೀಗಾಗಿ ಆಗಸ್ಟ್ 24 ರ ಒಳಗೆ ಆಸ್ಪತ್ರೆಯಿಂದ ಉತ್ತರವನ್ನು ಪೊಲೀಸರು ಬಯಸಿದ್ದು, ಹೀಗಾಗಿ ಈ ವಾರದಲ್ಲಿ ಪ್ರಕರಣಕ್ಕೆ ಅಂತಿಮ ತೆರೆ ಎಳೆಯುವ ಸಾಧ್ಯತೆಗಳಿವೆ.

ಶಿರೂರು ಶ್ರೀ ಸಾವಿನ ಪ್ರಕರಣದ ಕುರಿತು ಪೊಲೀಸ್ ಇಲಾಖೆ ಮಠದ ಸಿಬ್ಬಂದಿಗಳು,ಕುಟುಂಬ ದವರು, ಮಿತ್ರರು, ಆರ್ಥಿಕ ವ್ಯವಹಾರವಿದ್ದವರು, ಮದ್ಯ ಸರಬರಾಜು ಮಾಡುತ್ತಿದ್ದ ವ್ಯಕ್ತಿ ಸೇರಿ 80ಕ್ಕೂ ಹೆಚ್ಚು ಮಂದಿ ಯನ್ನು ವಿಚಾರಣೆಗೆ ಒಳಪಡಿಸಿದ್ದರು.

Vishwa News 24

Recent Posts

ಪತ್ನಿಯನ್ನು ಕೊಡಲಿಯಿಂದ ಹೊಡೆದು ಕೊಂದು ಪೊಲೀಸರಿಗೆ ಶರಣಾದ ಪತಿ – vishwanews24

ಕೌಟುಂಬಿಕ ಕಲಹ : ಕೊಲೆಯಲ್ಲಿ  ಅಂತ್ಯ - ಪತ್ನಿಯನ್ನು ಕೊಡಲಿಯಿಂದ ಹೊಡೆದು ಕೊಂದು ಪೊಲೀಸರಿಗೆ ಶರಣಾದ ಪತಿ ಮೈಸೂರು: ಸಣ್ಣ…

26 minutes ago

ಲಡಾಖ್‌ನಲ್ಲಿ 4.1 ತೀವ್ರತೆಯ ಭೂಕಂಪ – vishwanews24

ಲಡಾಖ್‌ನಲ್ಲಿ 4.1 ತೀವ್ರತೆಯ ಭೂಕಂಪ ಲೇಹ್: ಗುರುವಾರ ಮುಂಜಾನೆ ಲಡಾಖ್‌ನಲ್ಲಿ4.1 ತೀವ್ರತೆಯ ಭೂಕಂಪ  ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ…

1 hour ago

ಬೆಂಗಳೂರಲ್ಲಿ ವರುಣನ ಆರ್ಭಟ : ಮೇ 1ರವರೆಗೂ ಮಳೆ ಮುನ್ಸೂಚನೆ – vishwanews24

ಬೆಂಗಳೂರಲ್ಲಿ ವರುಣನ ಆರ್ಭಟ : ಮೇ 1ರವರೆಗೂ ಮಳೆ ಮುನ್ಸೂಚನೆ ಬೆಂಗಳೂರು: ಬುಧವಾರ ಬೆಂಗಳೂರಿನಾದ್ಯಂತ ಸುರಿದ ಆಲಿಕಲ್ಲು ಮಳೆಗೆ 10…

1 hour ago

ಹಾಸನ: ಪ್ರೀ ವೆಡ್ಡಿಂಗ್ ಫೋಟೋ ಶೂಟ್‌ಗೆ ವಧು ಕರೆತರಲು  ತೆರಳುತ್ತಿದ್ದ ವೇಳೆ ಅಪಘಾತ ; ವರ ಸಾವು – vishwanews24

ಹಾಸನ: ಪ್ರೀ ವೆಡ್ಡಿಂಗ್ ಫೋಟೋ ಶೂಟ್‌ಗೆ ವಧು ಕರೆತರಲು  ತೆರಳುತ್ತಿದ್ದ ವೇಳೆ ಅಪಘಾತ ; ವರ ಸಾವು ಹಾಸನ: ಕೆಲವೇ…

1 hour ago

ಪುತ್ತೂರು: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸವಾರ ಸಾವು, ಯುವತಿಗೆ ಗಂಭೀರ ಗಾಯ – vishwanews24

ಪುತ್ತೂರು: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸವಾರ ಸಾವು, ಯುವತಿಗೆ ಗಂಭೀರ ಗಾಯ ಪುತ್ತೂರು: ಉಪ್ಪಿನಂಗಡಿಯ ಬಜತ್ತೂರು ಗ್ರಾಮದ ನೀರಕಟ್ಟೆ…

1 hour ago

ಸುದೀಪ್‌ ಶೆಟ್ಟಿ ಆತ್ಮಹತ್ಯೆ ಪ್ರಕರಣ : ಪತ್ನಿ ಸೌಮ್ಯ ಶೆಟ್ಟಿಗೆ ಜಾಮೀನು ನಿರಾಕರಣೆ – vishwanews24

ಸುದೀಪ್‌ ಶೆಟ್ಟಿ ಆತ್ಮಹತ್ಯೆ ಪ್ರಕರಣ : ಪತ್ನಿ ಸೌಮ್ಯ ಶೆಟ್ಟಿಗೆ ಜಾಮೀನು ನಿರಾಕರಣೆ ಉಡುಪಿ : ಸುದೀಪ್‌ ಶೆಟ್ಟಿ ಆತ್ಮಹತ್ಯೆ…

2 hours ago