Featured

ಉಡುಪಿ : ಶೋಭಾ ಕರಂದ್ಲಾಜೆ ಸಹಿತ ನೂತನ ಕೇಂದ್ರ ಸಚಿವರಿಗೆ ಜಿಲ್ಲಾ ಬಿಜೆಪಿ ಅಭಿನಂದನೆ : ಕುಯಿಲಾಡಿ -Vishwanews24

ಉಡುಪಿ : ಶೋಭಾ ಕರಂದ್ಲಾಜೆ ಸಹಿತ ನೂತನ ಕೇಂದ್ರ ಸಚಿವರಿಗೆ ಜಿಲ್ಲಾ ಬಿಜೆಪಿ ಅಭಿನಂದನೆ : ಕುಯಿಲಾಡಿ -Vishwanews24

ಉಡುಪಿ ಜಿಲ್ಲಾ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ರಾಜಕೀಯ ಜೀವನ ಪ್ರಾರಂಭಿಸಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಪರಿವಾರದ ಕಟ್ಟಾಳುವಾಗಿ ಸೇವೆ ಸಲ್ಲಿಸಿ, ಸುಮಾರು ೨೫ ವರ್ಷಕ್ಕೂ ಮಿಕ್ಕಿದ ರಾಜಕೀಯ ಕ್ಷೇತ್ರದ ಅನುಭವದೊಂದಿಗೆ ವಿಧಾನ ಪರಿಷತ್ ಸದಸ್ಯರಾಗಿ, ರಾಜ್ಯದ ಮಾದರಿ ಇಂಧನ ಸಚಿವೆಯಾಗಿ, ಯಶಸ್ವಿ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವೆಯಾಗಿ, ೨ ಅವಧಿಗೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕ್ರಿಯಾಶೀಲ ಸಂಸದೆಯಾಗಿ ಸಾರ್ಥಕ ಸೇವೆ ಸಲ್ಲಿಸಿರುವ ಶೋಭಾ ಕರಂದ್ಲಾಜೆ ಇಂದು ಪ್ರಧಾನಿ ನರೇಂದ್ರ ಮೋದಿ ಸಂಪುಟದ ನೂತನ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವೆಯಾಗಿ ನೇಮಕಗೊಂಡಿರುವುದು ಅತೀವ ಸಂತಸ ತಂದಿದೆ. ಇದು ಪಕ್ಷದ ನಿಷ್ಟಾವಂತ ಕಾರ್ಯಕರ್ತರಿಗೆ ಸಂದ ಗೌರವ. ತಾನು ವಹಿಸಿಕೊಂಡ ಜವಾಬ್ದಾರಿಯನ್ನು ಬದ್ಧತೆ ಮತ್ತು ನಿಷ್ಠೆಯಿಂದ ನಿಭಾಯಿಸಿಕೊಂಡು ಬಂದಿರುವ ಶೋಭಾ ಕರಂದ್ಲಾಜೆಯವರು ನೂತನ ಕೇಂದ್ರ ಸಚಿವೆ ಜವಾಬ್ದಾರಿಯನ್ನೂ ಸಮರ್ಥವಾಗಿ ನಿರ್ವಹಿಸುತ್ತಾರೆಂಬ ವಿಶ್ವಾಸವಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.

ಮೋದಿ ಸಂಪುಟದ ಒಟ್ಟು ೪೩ ನೂತನ ಸಚಿವರಲ್ಲಿ ೩೬ ಹೊಸ ಮುಖಗಳಿಗೆ ಆದ್ಯತೆ ನೀಡಿರುವುದು ಸ್ವಾಗತಾರ್ಹ. ಶೋಭಾ ಕರಂದ್ಲಾಜೆ ಜೊತೆಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವ ಎ.ನಾರಾಯಣ ಸ್ವಾಮಿ, ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ, ಎಲೆಕ್ಟಾçನಿಕ್ಸ್ ಮತ್ತು ಮಾಹಿತಿ ತಂತ್ರಜ್ನಾನ ಸಚಿವ ರಾಜೀವ್ ಚಂದ್ರಶೇಖರ್ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ, ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾಗಿ ಜವಾಬ್ದಾರಿ ಸ್ವೀಕರಿಸಿರುವ ಕರ್ನಾಟಕದ ಈ ಎಲ್ಲಾ ನಾಲ್ಕು ನೂತನ ಕೇಂದ್ರ ಸಚಿವರಿಗೆ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಹಾರ್ದಿಕ ಅಭಿನಂದನೆಗಳು. ತಮ್ಮ ಅಧಿಕಾರದ ಅವಧಿಯಲ್ಲಿ ಖಾತೆಗಳ ಯಶಸ್ವಿ ನಿರ್ವಹಣೆಯೊಂದಿಗೆ ಸಾರ್ಥಕ ಜನಸೇವೆಗೈಯುವಂತಾಗಲಿ ಎಂದು ಕುಯಿಲಾಡಿ ಹಾರೈಸಿದ್ದಾರೆ.

Vishwa News 24

Recent Posts

ಬೆಳ್ತಂಗಡಿ: ಕೆಎಸ್ಸಾರ್ಟಿಸಿ ಬಸ್‌ ಹಾಗೂ ಬೈಕ್ ಢಿಕ್ಕಿ; ಸವಾರ ಮೃತ್ಯು, ಸಹ ಸವಾರ ಗಂಭೀರ -vishwanews24

ಬೆಳ್ತಂಗಡಿ: ಕೆಎಸ್ಸಾರ್ಟಿಸಿ ಬಸ್‌ ಹಾಗೂ ಬೈಕ್ ಢಿಕ್ಕಿ; ಸವಾರ ಮೃತ್ಯು, ಸಹ ಸವಾರ ಗಂಭೀರ ಬೆಳ್ತಂಗಡಿ: ನೀರಚಿಲುಮೆಯ ತಿರುವಿನಲ್ಲಿ ಕೆಎಸ್ಸಾರ್ಟಿಸಿ…

7 hours ago

ಮೂಡುಬಿದಿರೆ: ಮನೆಯಲ್ಲಿ ಸಿಲಿಂಡರ್ ಸ್ಫೋಟ; ಮೂವರಿಗೆ ಗಾಯ, ಓರ್ವನ ಸ್ಥಿತಿ ಗಂಭೀರ -vishwanews24

ಮೂಡುಬಿದಿರೆ: ಮನೆಯಲ್ಲಿ ಸಿಲಿಂಡರ್ ಸ್ಫೋಟ; ಮೂವರಿಗೆ ಗಾಯ, ಓರ್ವನ ಸ್ಥಿತಿ ಗಂಭೀರ ಮೂಡುಬಿದಿರೆ : ಮನೆಯಲ್ಲಿನ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ…

7 hours ago

ಉಡುಪಿ : ಮರಕ್ಕೆ ಬೈಕ್ ಢಿಕ್ಕಿ ; ಯುವಕ ಮೃತ್ಯು -vishwanews24

ಉಡುಪಿ : ಮರಕ್ಕೆ ಬೈಕ್ ಢಿಕ್ಕಿ ; ಯುವಕ ಮೃತ್ಯು ಉಡುಪಿ: ಮಣಿಪಾಲದಿಂದ ಪರ್ಕಳ ಕಡೆಗೆ ತೆರಳುತ್ತಿದ್ದ ಬುಲೆಟ್ ಬೈಕ್…

7 hours ago

ಉಡುಪಿ: ಸಾಯಿರಾಜ್ ಸೊಸೈಟಿ ಸಿಇಒ ಆತ್ಮಹತ್ಯೆ ಪ್ರಕರಣ:ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಕೋಟ್ಯಂತರ ರೂಪಾಯಿ ನಷ್ಟ ;  ಡೆತ್ ನೋಟ್ ನಲ್ಲಿ ಬಹಿರಂಗ! -vishwanews24

ಉಡುಪಿ: ಸಾಯಿರಾಜ್ ಸೊಸೈಟಿ ಸಿಇಒ ಆತ್ಮಹತ್ಯೆ ಪ್ರಕರಣ.. ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಕೋಟ್ಯಂತರ ರೂಪಾಯಿ ನಷ್ಟ ;  ಡೆತ್ ನೋಟ್ ನಲ್ಲಿ…

7 hours ago

ಉಡುಪಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜೆಸಿಟಿಯು ನೇತೃತ್ವದಲ್ಲಿ ಜೈಲ್ ಭರೋ ಪ್ರತಿಭಟನೆ; ಕಾರ್ಯಕರ್ತರು ಪೊಲೀಸ್ ವಶಕ್ಕೆ – vishwanews24

ಉಡುಪಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜೆಸಿಟಿಯು ನೇತೃತ್ವದಲ್ಲಿ ಜೈಲ್ ಭರೋ ಪ್ರತಿಭಟನೆ; ಕಾರ್ಯಕರ್ತರು ಪೊಲೀಸ್ ವಶಕ್ಕೆ ಉಡುಪಿ: ಕೇಂದ್ರ…

1 day ago

ಕಾಪು: ಎಲ್ಲೂರಿನಲ್ಲಿ ಮನೆಯ ಮೇಲ್ಛಾವಣಿ ಕುಸಿತ; ಮಹಿಳೆ ಪವಾಡಸದೃಶ ಪಾರು, ಲಕ್ಷಾಂತರ ರೂ. ನಷ್ಟ – vishwanews24

ಕಾಪು: ಎಲ್ಲೂರಿನಲ್ಲಿ ಮನೆಯ ಮೇಲ್ಛಾವಣಿ ಕುಸಿತ; ಮಹಿಳೆ ಪವಾಡಸದೃಶ ಪಾರು, ಲಕ್ಷಾಂತರ ರೂ. ನಷ್ಟ ಕಾಪು,: ಎಲ್ಲೂರಿನ ರೇವತಿ ಕುಂದರ್…

1 day ago