Featured

ಉಡುಪಿ: ಶ್ರಾವಣ ಹುಣ್ಣಿಮೆ – ಇಂದು ಸೂಪರ್ ಮೂನ್‌ ದರ್ಶನ – vishwanews24

ಉಡುಪಿ: ಶ್ರಾವಣ ಹುಣ್ಣಿಮೆ – ಇಂದು ಸೂಪರ್ ಮೂನ್‌ನ ದರ್ಶನ

ಉಡುಪಿ: ಇಂದು ಶ್ರಾವಣ ನಕ್ಷತ್ರದಲ್ಲಿ ಹುಣ್ಣಿಮೆ. ಈ ದಿನ (ಆ. 19) ಸೂಪರ್‌ ಮೂನ್‌. ಈ ಹುಣ್ಣಿಮೆಯಿಂದ ಮುಂದಿನ ಭಾದ್ರಪದ, ಆಶ್ವಿ‌àಜ ಹಾಗೂ ಕಾರ್ತಿಕಗಳ ನಾಲ್ಕು ಹುಣ್ಣಿಮೆಗಳೂ ಸೂಪರ್‌ಮೂನ್‌ಗಳೇ. ಸೂಪರ್‌ಮೂನ್‌ ಎಂದರೆ ಹುಣ್ಣಿಮೆಯಂದು ಚಂದ್ರ ಭೂಮಿಗೆ ಸುಮಾರು 30,000 ಕಿ.ಮೀ. ಸಮೀಪಕ್ಕೆ ಬರುವುದು.

ಭೂಮಿಯಿಂದ ಸರಾಸರಿ 3.84 ಲಕ್ಷ ಕಿ.ಮೀ. ದೂರದಲ್ಲಿ ದೀರ್ಘ‌ವೃತ್ತಾಕಾರದಲ್ಲಿ ಸುತ್ತುವ ಚಂದ್ರ, 28 ದಿನಗಳಿಗೊಮ್ಮೆ 3 ಲಕ್ಷದ 56 ಸಾವಿರ ಕಿ.ಮೀ. ವರೆಗೂ ಹತ್ತಿರ ಬರುವುದುಂಟು. ಆ ದಿನ ಹುಣ್ಣಿಮೆಯಾದರೆ ಭೂಮಿಗೆ ಹತ್ತಿರ ಬಂದ ಚಂದ್ರ ಸುಮಾರು 14 ಅಂಶ ದೊಡ್ಡದಾಗಿ ಕಂಡು ಸುಮಾರು 24 ಅಂಶ ಹೆಚ್ಚಿನ ಪ್ರಭೆಯಿಂದ ಬೆಳಗುತ್ತಾನೆ. ಈ ಅಂತರ ಆ. 19ರಂದು 3,61,969 ಕಿ.ಮೀ., ಸೆ. 18ರಂದು 3,57,485 ಕಿ.ಮೀ., ಅ. 17ರಂದು 3,57,363 ಕಿ.ಮೀ., ನ. 15ರಂದು 3,61,866 ಕಿ.ಮೀ. ಆಗಿರುತ್ತದೆ.

ವರ್ಷದಲ್ಲಿ ಕೆಲವು ಹುಣ್ಣಿಮೆಗಳು ಸೂಪರ್‌ ಮೂನ್‌ ಆಗುವುದುಂಟು. ಆದರೆ ಈ ವರ್ಷ ಈ ಹುಣ್ಣಿಮೆಯಿಂದ ಸರಾಗ ನಾಲ್ಕೂ ಹುಣ್ಣಿಮೆಗಳೂ ಸೂಪರ್‌ಮೂನ್‌ಗಳೇ ಎಂದು ಖಗೋಳಶಾಸ್ತ್ರ ತಜ್ಞ ಡಾ| ಎ.ಪಿ. ಭಟ್‌ ತಿಳಿಸಿದ್ದಾರೆ.

Vishwa News 24

Recent Posts

ಸೌಜನ್ಯಾ ಪ್ರಕರಣದ ಮರುತನಿಖೆ: ಮಂಗಳೂರಿಗೆ ಆಗಮಿಸಿದ ನೂತನ ಎಸ್ಐಟಿ ತಂಡ  -vishwanews24

ಸೌಜನ್ಯಾ ಪ್ರಕರಣದ ಮರುತನಿಖೆ: ಮಂಗಳೂರಿಗೆ ಆಗಮಿಸಿದ ನೂತನ ಎಸ್ಐಟಿ ತಂಡ  ಮಂಗಳೂರು : ಸೌಜನ್ಯಾ ಅತ್ಯಾಚಾರ, ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ…

18 minutes ago

ಪರಪ್ಪನ ಆಗ್ರಹಾರ ಕಾರಾಗೃಹದಲ್ಲಿ ಮತ್ತೆ ಮೊಬೈಲ್ ಫೋನ್, ಸಿಮ್ಕಾರ್ಡ್ ಗಳು ಪತ್ತೆ -vishwanews24

ಪರಪ್ಪನ ಆಗ್ರಹಾರ ಕಾರಾಗೃಹದಲ್ಲಿ ಮತ್ತೆ ಮೊಬೈಲ್ ಫೋನ್, ಸಿಮ್ಕಾರ್ಡ್ ಗಳು ಪತ್ತೆ ಬೆಂಗಳೂರು: ಪರಪ್ಪನ ಆಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮೊಬೈಲ್…

3 hours ago

ಎಂಆರ್‌ಪಿಎಲ್ ಕಾರ್ಮಿಕರ ಮುಷ್ಕರ: ಮೃತ ಮನೀಶ್ ಕಾರ್ಕಡಗೆ ಶ್ರದ್ಧಾಂಜಲಿ, ಪರಿಹಾರಕ್ಕೆ ಆಗ್ರಹ -vishwanews24

ಎಂಆರ್‌ಪಿಎಲ್ ಕಾರ್ಮಿಕರ ಮುಷ್ಕರ: ಮೃತ ಮನೀಶ್ ಕಾರ್ಕಡಗೆ ಶ್ರದ್ಧಾಂಜಲಿ, ಪರಿಹಾರಕ್ಕೆ ಆಗ್ರಹ ಮಂಗಳೂರು: ಎಂಆರ್‌ಪಿಎಲ್‌ನಲ್ಲಿ ನಿನ್ನೆ (ಸೆ.30ರ ಬುಧವಾರ) ನಡೆದ…

3 hours ago

ಎಂಆರ್‌ಪಿಎಲ್‌ ಸ್ಫೋಟ ಪ್ರಕರಣ: ಮೃತರ ಕುಟುಂಬಕ್ಕೆ ಗರಿಷ್ಠ ಪರಿಹಾರ : ಭರತ್‌ ಶೆಟ್ಟಿ ಆಗ್ರಹ -vishwanews24

ಎಂಆರ್‌ಪಿಎಲ್‌ ಸ್ಫೋಟ ಪ್ರಕರಣ: ಮೃತರ ಕುಟುಂಬಕ್ಕೆ ಗರಿಷ್ಠ ಪರಿಹಾರ : ಭರತ್‌ ಶೆಟ್ಟಿ ಆಗ್ರಹ ಮಂಗಳೂರು: ಸ್ಫೋಟದ ನಿಖರ ಕಾರಣ…

3 hours ago

ಮಡ್‌ಗಾಂವ್‌ – ಮಂಗಳೂರು ‘ವಂದೇ ಭಾರತ್‌’ ರೈಲು ಬೆಂಗಳೂರಿಗೆ ವಿಸ್ತರಣೆ -vishwanews24

ಮಡ್‌ಗಾಂವ್‌ - ಮಂಗಳೂರು 'ವಂದೇ ಭಾರತ್‌' ರೈಲು ಬೆಂಗಳೂರಿಗೆ ವಿಸ್ತರಣೆ ಮಂಗಳೂರು/ಉಡುಪಿ: ಈ ಹಿಂದೆ ಮಂಗಳೂರು ಸೆಂಟ್ರಲ್‌-ಮಡ್‌ಗಾಂವ್‌ ನಡುವೆ ಓಡುತ್ತಿದ್ದ…

4 hours ago

ಅಕ್ಟೋಬರ್ 11ರಿಂದ 20ರ ವರೆಗೆ KSRTC ಯಿಂದ ವಿಶೇಷ ಪ್ಯಾಕೇಜ್ ಪ್ರವಾಸ -vishwanews24

ಅಕ್ಟೋಬರ್ 11ರಿಂದ 20ರ ವರೆಗೆ KSRTC ಯಿಂದ ವಿಶೇಷ ಪ್ಯಾಕೇಜ್ ಪ್ರವಾಸ ಉಡುಪಿ: ಕ.ರಾ.ರ.ಸಾ.ನಿಗಮ ಮಂಗಳೂರು ವಿಭಾಗವು ದಸರಾ ಪ್ರಯುಕ್ತ…

5 hours ago