ಉಡುಪಿ: ಇಂದು ಶ್ರಾವಣ ನಕ್ಷತ್ರದಲ್ಲಿ ಹುಣ್ಣಿಮೆ. ಈ ದಿನ (ಆ. 19) ಸೂಪರ್ ಮೂನ್. ಈ ಹುಣ್ಣಿಮೆಯಿಂದ ಮುಂದಿನ ಭಾದ್ರಪದ, ಆಶ್ವಿàಜ ಹಾಗೂ ಕಾರ್ತಿಕಗಳ ನಾಲ್ಕು ಹುಣ್ಣಿಮೆಗಳೂ ಸೂಪರ್‌ಮೂನ್‌ಗಳೇ. ಸೂಪರ್‌ಮೂನ್ ಎಂದರೆ ಹುಣ್ಣಿಮೆಯಂದು ಚಂದ್ರ ಭೂಮಿಗೆ ಸುಮಾರು 30,000 ಕಿ.ಮೀ. ಸಮೀಪಕ್ಕೆ ಬರುವುದು.
ಭೂಮಿಯಿಂದ ಸರಾಸರಿ 3.84 ಲಕ್ಷ ಕಿ.ಮೀ. ದೂರದಲ್ಲಿ ದೀರ್ಘವೃತ್ತಾಕಾರದಲ್ಲಿ ಸುತ್ತುವ ಚಂದ್ರ, 28 ದಿನಗಳಿಗೊಮ್ಮೆ 3 ಲಕ್ಷದ 56 ಸಾವಿರ ಕಿ.ಮೀ. ವರೆಗೂ ಹತ್ತಿರ ಬರುವುದುಂಟು. ಆ ದಿನ ಹುಣ್ಣಿಮೆಯಾದರೆ ಭೂಮಿಗೆ ಹತ್ತಿರ ಬಂದ ಚಂದ್ರ ಸುಮಾರು 14 ಅಂಶ ದೊಡ್ಡದಾಗಿ ಕಂಡು ಸುಮಾರು 24 ಅಂಶ ಹೆಚ್ಚಿನ ಪ್ರಭೆಯಿಂದ ಬೆಳಗುತ್ತಾನೆ. ಈ ಅಂತರ ಆ. 19ರಂದು 3,61,969 ಕಿ.ಮೀ., ಸೆ. 18ರಂದು 3,57,485 ಕಿ.ಮೀ., ಅ. 17ರಂದು 3,57,363 ಕಿ.ಮೀ., ನ. 15ರಂದು 3,61,866 ಕಿ.ಮೀ. ಆಗಿರುತ್ತದೆ.
ವರ್ಷದಲ್ಲಿ ಕೆಲವು ಹುಣ್ಣಿಮೆಗಳು ಸೂಪರ್ ಮೂನ್ ಆಗುವುದುಂಟು. ಆದರೆ ಈ ವರ್ಷ ಈ ಹುಣ್ಣಿಮೆಯಿಂದ ಸರಾಗ ನಾಲ್ಕೂ ಹುಣ್ಣಿಮೆಗಳೂ ಸೂಪರ್‌ಮೂನ್‌ಗಳೇ ಎಂದು ಖಗೋಳಶಾಸ್ತ್ರ ತಜ್ಞ ಡಾ| ಎ.ಪಿ. ಭಟ್ ತಿಳಿಸಿದ್ದಾರೆ.
ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…