ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ, ಶ್ರೀಕೃಷ್ಣ ಮಠ ಹಾಗೂ ತುಳು ಶಿವಳ್ಳಿ ಮಾಧ್ವಬ್ರಾಹ್ಮಣ ಮಹಾಮಂಡಲದ ಸಹಯೋಗದಲ್ಲಿ ಶ್ರೀಮಧ್ವನವಮಿ ಉತ್ಸವವು ಜ.30ರಂದು ಆರಂಭಗೊಂಡಿದ್ದು, ಫೆ.6ರ ವರೆಗೆ ನಡೆಯಲಿದೆ ಎಂದು ಪರ್ಯಾಯ ಶ್ರೀ ಪುತ್ತಿಗೆ ಮಠದ ದಿವಾನರಾದ ನಾಗರಾಜ ಆಚಾರ್ಯ ಹಾಗೂ ಪುತ್ತಿಗೆ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಅವರು ಶ್ರೀಕೃಷ್ಣ ಮಠದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಫೆ.4ರಂದು ಶ್ರೀ ಅನಂತೇಶ್ವರ ದೇವಸ್ಥಾನದಲ್ಲಿ ವಿದ್ವಾಂಸರಿಂದ ಆಚಾರ್ಯ ಮಧ್ವ ವಿರಚಿತ ಸರ್ವಮೂಲಗ್ರಂಥಗಳ ಪಾರಾಯಣ, ಫೆ.6ರಂದು ಬೆಳಗ್ಗೆ 8.30ಕ್ಕೆ ಶ್ರೀ ಅನಂತೇಶ್ವರ ದೇವಸ್ಥಾನದಲ್ಲಿ ಬೆಂಗಳೂರಿನ ಭಕ್ತರಿಂದ ಶ್ರೀನಾರಾಯಣ ಪಂಡಿತಾಚಾರ್ಯ ವಿರಚಿತ ಶ್ರೀ ಮಧ್ವ ವಿಜಯ ಪಾರಾಯಣ, 324 ವಿಪ್ರರಿಂದ ತ್ರಿವಿಕ್ರಮ ಪಂಡಿತಾಚಾರ್ಯ ವಿರಚಿತ ವಾಯುಸ್ತುತಿ ಪಾರಾಯಣ ಪೂರ್ವಕ ಪರ್ಯಾಯ ಶ್ರೀಪಾದರಿಂದ ಮಧು ಅಭಿಷೇಕ ನಡೆಯಲಿದೆ ಎಂದರು.
ಶ್ರೀಕೃಷ್ಣ ಮಠ ಹಾಗೂ ಶ್ರೀ ಅನಂತೇಶ್ವರ ಸನ್ನಿಧಿಯಲ್ಲಿ ಡಾ| ಅರಳುಮಲ್ಲಿಗೆ ಪಾರ್ಥಸಾರಥಿಯವರ ಶಿಷ್ಯ ವೃಂದದಿಂದ ವಿಷ್ಣುಸಹಸ್ರನಾಮ ಹಾಗೂ ವಾಯುಸ್ತುತಿ ಪಾರಾಯಣ ಜರಗಲಿದೆ. ಆಕ್ಸ್‌ಫರ್ಡ್ ವಿವಿಯಲ್ಲಿದ್ದ ಸುಮಾರು 600 ವರ್ಷಗಳಿಗೂ ಹಿಂದಿನ ನೇವಾರಿ ಲಿಪಿಯ ಲಿಖೀತ ಭಗವದ್ಗೀತೆ ವೇಫರ್‌ಫಿಚೆ ಪ್ರತಿಯನ್ನು ತಾರಾ ಪ್ರಕಾಶನ ಸಂಸ್ಥೆಯು ಮಧ್ವನವಮಿಯ ಸಂದರ್ಭದಲ್ಲಿ ರಾಜಾಂಗಣದಲ್ಲಿ ಪರ್ಯಾಯ ಶ್ರೀಪಾದರು ಬಿಡುಗಡೆಗೊಳಿಸಲಿದ್ದಾರೆ.
ವಿವಿಧ ಕ್ಷೇತ್ರಗಳ ಪ್ರತಿನಿಧಿಗಳಿಗೆ ಶ್ರೀಕೃಷ್ಣಗೀತಾನುಗ್ರಹ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದರು.
ಪ್ರತಿದಿನ ಸಂಜೆ 7ರಿಂದ 9ರ ವರೆಗೆ ರಾಜಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಜ.31ರಂದು ಯಕ್ಷಗಾನ, ಫೆ.1ರಂದು ಭರತನಾಟ್ಯ, ಫೆ.2ರಂದು ನೃತ್ಯಸಂಭ್ರಮ, ಫೆ.3ರಂದು ಭರತನಾಟ್ಯ, ಫೆ.4ರಂದು ನಾಟಕ-ಸದಾಚಾರಸ್ಮತಿ, ಫೆ.5ರಂದು ಯಕ್ಷಗಾನ- ಹಂಸಾನ್ವಯ ದಿಗ್ವಿಜಯ, ಫೆ.6ರಂದು ದಾಸಲಹರಿ, ಫೆ.7ರಂದು ಭರತನಾಟ್ಯ ನಡೆಯಲಿದೆ.
ಪ್ರತಿದಿನ ಸಂಜೆ 5.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮಧ್ವಾಚಾರ್ಯರು ನಡೆದಾಡಿದ ಕ್ಷೇತ್ರಗಳ ಅರ್ಚಕರಿಗೆ ಸಮ್ಮಾನ ಹಾಗೂ ಡಾ| ವ್ಯಾಸನಕೆರೆ ಪ್ರಭಂಜನಾಚಾರ್ಯ ಅವರಿಂದ ಶ್ರೀಮಧ್ವವಿಜಯದಲ್ಲಿ ಗೀತಾಚಿಂತನೆ ಉಪನ್ಯಾಸ ನಡೆಯಲಿದೆ ಎಂದು ಪುತ್ತಿಗೆ ಮಠದ ರಮೇಶ್ ಭಟ್ ತಿಳಿಸಿದರು.
ಮಹಿತೋಷ್ ಆಚಾರ್ಯ, ಉದ್ಯಮಿ ವಿಜಯರಾಘವ ರಾವ್ ಉಪಸ್ಥಿತರಿದ್ದರು.
ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ ರಂಗಸ್ಥಳದಲ್ಲೇ ತರಾಟೆ: ಉಜಿರೆ ಅಶೋಕ್ ಭಟ್ ಸಮರ್ಥನೆ ಬೆಳ್ತಂಗಡಿ: ಕಲೆಯ ಪ್ರದರ್ಶನದಲ್ಲಿ ಕೆಲವೊಮ್ಮೆ ಪ್ರೇಕ್ಷಕರ ವರ್ತನೆ…
ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ ಶಿಳ್ಳೆ ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್ ಭಟ್ ಗರಂ ಮಂಗಳೂರು: ಯಕ್ಷಗಾನ…
ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…
SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…
ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಗೌರವ ಡಾಕ್ಟರೇಟ್ ಮಂಗಳೂರು…
ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…