ಉಡುಪಿ, : ಉಡುಪಿಯ ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಚಿತ್ರ ವಿಚಿತ್ರ ವೇಷ ಹಾಕಿ ಜನರನ್ನು ಮನರಂಜಿಸುವ ರವಿ ಕಟಪಾಡಿಯವರು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ವೇಷ ಹಾಕಿ ಜನರನ್ನು ಮನರಂಜಿಸುತ್ತಿದ್ದಾರೆ. ಈ ಬಾರಿ “ಡ್ರ್ಯಾಗನ್” (ರಾಕ್ಷಸ) ವೇಷ ಭೂಷಣ ತೊಟ್ಟು ಉಡುಪಿಯೆಲ್ಲೆಡೆ ತಿರುಗಿ ಕೊರೊನಾದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ವೃತ್ತಿಯಲ್ಲಿ ಗಾರೆ ಕೆಲಸ ಮಾಡಿ ಕೊಂಡಿದ್ದರುವ ಅವರು, ಬಡವರ ಸಂಕಷ್ಟಕ್ಕೆ ತಾವು ನೆರವಾಗಬೇಕೆನ್ನುವ ದೃಷ್ಟಿಯಲ್ಲಿ ಅಷ್ಟಮಿಯಂದು ಆಕರ್ಷಣೀಯ ವೇಷ ಹಾಕಿ ಉಡುಪಿ ನಗರ ಅಲ್ಲದೆ, ಕಾಪು, ಕಟಪಾಡಿ, ಮಲ್ಪೆ ಸಾರ್ವಜನಿಕರಿಂದ ನಿಧಿ ಸಂಗ್ರಹ ಮಾಡುತ್ತಿದ್ದಾರೆ. ಒಟ್ಟು ಮೊತ್ತವನ್ನು ಮೊದಲೇ ನಿರ್ಧರಿಸಿದ ಅನಾರೋಗ್ಯ ಪೀಡಿತ ಮಕ್ಕಳಿಗೆ ಚಿಕಿತ್ಸೆಗೆ ನೀಡುವ ಮೂಲಕ ತಮ್ಮಲ್ಲಾದ ನೆರವು ಮಾಡುತ್ತಾರೆ.
ಆದರೆ ಕೊರೊನಾದಿಂದ ಈಗ ಎಲ್ಲ ವಿಚಾರದಲ್ಲೂ ಸಮಸ್ಯೆಯಾಗಿದ್ದು, ಇವರ ಸಾಮಾಜಿಕ ಕಳಕಳಿಗೆ ಜಿಲ್ಲಾಡಳಿತದಿಂದ ಅನುಮತಿ ಸಿಗದ ಕಾರಣ ಅಲ್ಲಲ್ಲಿ ಹೋಗಿ ಕೊರೊನಾ ಬಗ್ಗೆ ಜಾಗ್ರತಿ ಮೂಡಿಸಲಿದ್ದಾರೆ.
ಕಲಾವಿದ ಅಜಯ್ ಪಿತ್ರೋಡಿಯ ನೇತೃತ್ವದಲ್ಲಿ ಧನರಾಜ್, ಧರೇಶ್, ಅಕ್ಷಯ್ ವೇಷ ಭೂಷಣ ತಯಾರು ಮಾಡಿದ್ದಾರೆ. ಈ ವೇಷಕ್ಕೆ ಸುಮಾರು ರೂ 40,000 ಯಷ್ಟು ವೆಚ್ಚ ತಗುಲಿದೆ.
ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಹೊಸದಿಲ್ಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಟೆನಿಸ್ ಆಟಗಾರ…
ಬೀದರ್ : ಮಳೆ ಆರ್ಭಟ - ಸಿಡಿಲು ಬಡಿದು ಯುವಕ ಸಾವು ಬೀದರ್: ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟ ಘಟನೆ ಔರಾದ್…
ಬೆಳ್ತಂಗಡಿ: ಏಕಾಏಕಿ ತೆರೆಯಲ್ಪಟ್ಟ ಬಸ್ಸಿನ ಬಾಗಿಲು ; ನಿಯಂತ್ರಣ ತಪ್ಪಿ ರಸ್ತೆಗೆ ಎಸೆಯಲ್ಪಟ್ಟು ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯ ಬೆಳ್ತಂಗಡಿ: ಚಲಿಸುತ್ತಿದ್ದ ಬಸ್ಸಿನಿಂದ…
ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿಯಲು ಯತ್ನ; ಯುವಕನ ರಕ್ಷಣೆ ಉಡುಪಿ: ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಯುವಕನೊಬ್ಬ ರೈಲಿನಿಂದ ಜಿಗಿಯಲು ಯತ್ನಿಸುತ್ತಿದ್ದ…
ಕಾಸರಗೋಡು : ಕೆಟ್ಟು ನಿಂತಿದ್ದ ಪಿಕಪ್ ವ್ಯಾನ್ ಗೆ ಬೈಕ್ ಢಿಕ್ಕಿ: ಸವಾರ ಮೃತ್ಯು ಕಾಸರಗೋಡು : ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ…
ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ ; ಆನ್‌ಲೈನ್‌ನಲ್ಲಿ ವೀಕ್ಷಿಸುವುದು ಹೇಗೆ? ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು…