Featured

ಉಡುಪಿ : ಶ್ರೀ ಕೃಷ್ಣ ಮಠದಲ್ಲಿ ಇಂದು ಜನ್ಮಾಷ್ಟಮಿ ಆಚರಣೆ ಇಲ್ಲ ; ಕೃಷ್ಣನಗರಿಯಲ್ಲಿ ಸೆಪ್ಟೆಂಬರ್ ನಲ್ಲಿ ಅಷ್ಟಮಿ  – vishwanews24

ಉಡುಪಿ : ಶ್ರೀ ಕೃಷ್ಣ ಮಠದಲ್ಲಿ ಇಂದು ಜನ್ಮಾಷ್ಟಮಿ ಆಚರಣೆ ಇಲ್ಲ ; ಕೃಷ್ಣನಗರಿಯಲ್ಲಿ ಸೆಪ್ಟೆಂಬರ್ ನಲ್ಲಿ ಅಷ್ಟಮಿ

ಉಡುಪಿ : ದೇಶದೆಲ್ಲೆಡೆ ಇಂದು ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮದ ವಾತಾವರಣವಿರುವಾಗ, ಅಷ್ಟಮಿಗೆ ಹೆಸರಾಗಿರುವ ಉಡುಪಿಯ ಶ್ರೀ ಕೃಷ್ಣ ಮಠ ಮಾತ್ರ ಶಾಂತವಾಗಿದೆ. ಇದರಿಂದಾಗಿ ಸಾವಿರಾರು ಭಕ್ತರು ಹಾಗೂ ಹೂವಿನ ವ್ಯಾಪಾರಿಗಳು ನಿರಾಸೆಗೊಂಡಿದ್ದಾರೆ.

ಭಕ್ತರಿಗೆ ನಿರೀಕ್ಷಿತವಾದ ಅಷ್ಟಮಿ ವೈಭವ, ಮೊಸರು ಕುಡಿಕೆ ಅಥವಾ ಬಾಲಕೃಷ್ಣ ಶೋಭಾಯಾತ್ರೆ ಎಲ್ಲವೂ ಕಾಣದೇ ಇದ್ದ ಕಾರಣ, ಈ ಬಾರಿ ಉಡುಪಿಗೆ ಆಗಮಿಸಿದವರ ಅನುಭವ ನಿರಾಸೆಯೊಂದೇ.

ಉಡುಪಿಯಲ್ಲಿ ಅಷ್ಟಮಿ ಇಂದು ಯಾಕೆ ಇಲ್ಲ?: ಇದು ಉಡುಪಿಯ ಸೌರಮಾನ ಪರಂಪರೆ. ದೇಶದ ಇತರ ಭಾಗಗಳಲ್ಲಿ ಚಾಂದ್ರಮಾನ ಪದ್ಧತಿಗೆ ಅನುಗುಣವಾಗಿ ಜನ್ಮಾಷ್ಟಮಿ ಆಚರಿಸುತ್ತಾರೆ. ಆದರೆ ಉಡುಪಿಯಲ್ಲಿ ಮಾತ್ರ ಸೌರಮಾನ ಪದ್ಧತಿಯ ಪ್ರಕಾರ ಆಚರಣೆ ನಡೆಯುತ್ತದೆ. ಈ ವರ್ಷ ಅಷ್ಟಮಿ ತಿಥಿಗೆ ರೋಹಿಣಿ ನಕ್ಷತ್ರ ಜೋಡಣೆ ಇರುವುದರಿಂದ, ಸೆಪ್ಟೆಂಬರ್ 14, 2025 ರಂದು ಶ್ರೀಕೃಷ್ಣ ಜಯಂತಿ ಉಡುಪಿಯಲ್ಲಿ ಆಚರಿಸಲಾಗುತ್ತದೆ.

ಇಂದು ಸಾಂಕೇತಿಕ ಪೂಜೆ ಮಾತ್ರ : ಭಕ್ತರಿಗೆ ನಿರಾಶೆ ಆಗದಂತೆ, ಇಂದು ಚಂದ್ರಮಾನ ಪದ್ಧತಿಯಂತೆ ಹಬ್ಬ ಆಚರಿಸುವವರಿಗಾಗಿ ಸಾಂಕೇತಿಕ ಅರ್ಘ್ಯಪ್ರದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಉತ್ಸವ ಸಂಭ್ರಮ, ರಥಬೀದಿ ವೈಭವ, ಮೊಸರು ಕುಡಿಕೆ, ಬಾಲಕೃಷ್ಣ ವೇಷಧಾರಿಗಳು ಯಾವುದೂ ಇಲ್ಲ. ಇವೆಲ್ಲವೂ ಸೆಪ್ಟೆಂಬರ್‌ನಲ್ಲಿ ನಡೆಯಲಿವೆ.

ಹೂವಿನ ವ್ಯಾಪಾರಿಗಳಿಗೆ ಭಾರೀ ನಷ್ಟ : ಉಡುಪಿಯ ಅಷ್ಟಮಿಗೆ ಹೂವಿನ ವ್ಯಾಪಾರದಲ್ಲಿ ಭಾರೀ ಲಾಭ ಇರುತ್ತದೆ. ಈ ಭಾವನೆ ಹೊಂದಿಕೊಂಡು ಹಾಸನ, ಚಿಕ್ಕಮಗಳೂರು ಸೇರಿದಂತೆ ಹಲವಾರು ಕಡೆಗಳಿಂದ ಹೂವಿನ ವ್ಯಾಪಾರಿಗಳು ಉಡುಪಿಗೆ ಆಗಮಿಸಿದ್ದರು. ಆದರೆ ಅಷ್ಟಮಿ ಆಚರಣೆ ಇಲ್ಲದ ಕಾರಣ ಹೂವಿನ ಬೇಡಿಕೆ ಕಡಿಮೆಯಾಗಿದೆ.

ಭಕ್ತರ ನಿರಾಸೆ, ಆದರೆ ಭರವಸೆಯ ಪ್ರಾರ್ಥನೆ: ಉಡುಪಿಯು ನಿತ್ಯೋತ್ಸವದ ನಾಡು. ಇಂದು ನಿರಾಸೆ ಎದುರಾದರೂ ಭಕ್ತರೂ, ವ್ಯಾಪಾರಿಗಳೂ ಒಂದೇ ಮಾತು ಹೇಳಿದರು ಇಂದು ನಷ್ಟವಾದರೂ, ಮುಂದೆ ಆಗೋ ಹಬ್ಬದಲ್ಲಿ ಕೈ ತುಂಬಾ ದುಡಿಮೆಯಾಗಲಿ ಎಂದರು.

Vishwa News 24

Recent Posts

ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ  ಶಿಳ್ಳೆ  ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್‌ ಭಟ್‌ ಗರಂ – vishwanews24

ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ  ಶಿಳ್ಳೆ  ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್‌ ಭಟ್‌ ಗರಂ ಮಂಗಳೂರು: ಯಕ್ಷಗಾನ…

24 hours ago

ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ – vishwanews24

ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…

1 day ago

SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ – vishwanews24

SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…

1 day ago

ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್ – vishwanews24

ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ  :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ  ಗೌರವ ಡಾಕ್ಟರೇಟ್ ಮಂಗಳೂರು…

1 day ago

ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ – vishwanews24

ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…

1 day ago

ಕೇಂದ್ರ ಸರ್ಕಾರ ತೈಲ ಬೆಲೆ ಏರಿಸುವ ಮೂಲಕ ನಮ್ಮನ್ನ ಕೊಲೆ ಮಾಡ್ತಿದೆ :  ಡಿಕೆಶಿ – vishwanews24

ಕೇಂದ್ರ ಸರ್ಕಾರ ತೈಲ ಬೆಲೆ ಏರಿಸುವ ಮೂಲಕ ನಮ್ಮನ್ನ ಕೊಲೆ ಮಾಡ್ತಿದೆ :  ಡಿಕೆಶಿ ಬೆಂಗಳೂರು : ಕೇಂದ್ರ ಸರ್ಕಾರ…

1 day ago